IPL 2023: RCB ಆಟಗಾರರ ರಿಪೋರ್ಟ್​ ಕಾರ್ಡ್: ಪ್ರತಿ ಪ್ಲೇಯರ್​ಗಳ​ ಪ್ರದರ್ಶನದ ಮಾಹಿತಿ ಇಲ್ಲಿದೆ

IPL 2023: ಆರ್​ಸಿಬಿ ತಂಡದ ಐಪಿಎಲ್ ಅಭಿಯಾನ ಅಂತ್ಯಗೊಂಡಿದೆ. ಕಳೆದ ಮೂರು ಸೀಸನ್​ಗಳಲ್ಲಿ ಪ್ಲೇಆಫ್ ಪ್ರವೇಶಿಸಿದ್ದ ಆರ್​ಸಿಬಿ ತಂಡವು ಈ ಬಾರಿ ಲೀಗ್​ ಹಂತದಿಂದಲೇ ಹೊರಬಿದ್ದಿದೆ. ಈ ಬಾರಿ ಆಡಿದ 14 ಪಂದ್ಯಗಳಲ್ಲಿ ಆರ್​ಸಿಬಿ ತಂಡವು 7 ರಲ್ಲಿ ಜಯ ಸಾಧಿಸಿದರೆ, 7 ಪಂದ್ಯಗಳಲ್ಲಿ ಸೋಲನುಭವಿಸಿತ್ತು. ಇನ್ನು ಈ 14 ಪಂದ್ಯಗಳಲ್ಲಿ ಆರ್​ಸಿಬಿ ಪರ ಒಟ್ಟು 21 ಆಟಗಾರರು ಕಣಕ್ಕಿಳಿದಿದ್ದರು. ಈ ಆಟಗಾರರ ಪ್ರದರ್ಶನದ ಸಂಪೂರ್ಣ ಮಾಹಿತಿ ಇಲ್ಲಿದೆ.1- ಫಾಫ್ ಡುಪ್ಲೆಸಿಸ್: 14 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದ ಡುಪ್ಲೆಸಿಸ್ 8 ಅರ್ಧಶತಕಗಳೊಂದಿಗೆ ಒಟ್ಟು 730 ರನ್​ ಕಲೆಹಾಕಿ ಮಿಂಚಿದ್ದಾರೆ.2- ವಿರಾಟ್ ಕೊಹ್ಲಿ: 14 ಇನಿಂಗ್ಸ್ ಆಡಿರುವ ಕಿಂಗ್ ಕೊಹ್ಲಿ 2 ಭರ್ಜರಿ ಶತಕದೊಂದಿಗೆ ಒಟ್ಟು 639 ರನ್​ ಕಲೆಹಾಕಿದ್ದಾರೆ.3- ಗ್ಲೆನ್ ಮ್ಯಾಕ್ಸ್​ವೆಲ್: 14 ಪಂದ್ಯಗಳಲ್ಲಿ ಬ್ಯಾಟ್ ಬೀಸಿರುವ ಮ್ಯಾಕ್ಸಿ ಒಟ್ಟು 400 ರನ್​ ಗಳಿಸಿದ್ದಾರೆ. ಅಲ್ಲದೆ 3 ವಿಕೆಟ್​ಗಳನ್ನು ಕೂಡ ಕಬಳಿಸಿದ್ದಾರೆ.4- ದಿನೇಶ್ ಕಾರ್ತಿಕ್: 13 ಇನಿಂಗ್ಸ್​ಗಳಲ್ಲಿ ಬ್ಯಾಟಿಂಗ್ ಮಾಡಿರುವ ದಿನೇಶ್ ಕಾರ್ತಿಕ್ ಕಲೆಹಾಕಿರುವುದು ಕೇವಲ 140 ರನ್ ಮಾತ್ರ.5- ಮಹಿಪಾಲ್ ಲೋಮ್ರರ್: 10 ಇನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿರುವ ಲೋಮ್ರರ್ 135 ರನ್​ಗಳಿಸಲಷ್ಟೇ ಶಕ್ತರಾಗಿದ್ದಾರೆ.6- ಅನೂಜ್ ರಾವತ್: 7 ಇನಿಂಗ್ಸ್​ ಆಡಿರುವ ಅನೂಜ್ ರಾವತ್ ಕಲೆಹಾಕಿರುವುದು ಕೇವಲ 91 ರನ್​ ಮಾತ್ರ.7- ಮೈಕೆಲ್ ಬ್ರೇಸ್​ವೆಲ್: 5 ಇನಿಂಗ್ಸ್ ಆಡಿರುವ ಬ್ರೇಸ್​ವೆಲ್ 58 ರನ್​ಗಳಿಸಲಷ್ಟೇ ಶಕ್ತರಾಗಿದ್ದಾರೆ. ಹಾಗೆಯೇ 6 ವಿಕೆಟ್​ಗಳನ್ನು ಕಬಳಿಸಿದ್ದಾರೆ.8- ಶಹಬಾಝ್ ಅಹ್ಮದ್: 10 ಪಂದ್ಯಗಳಲ್ಲಿ 6 ಮ್ಯಾಚ್​ನಲ್ಲಿ ಬ್ಯಾಟ್ ಮಾಡಿರುವ ಶಹಬಾಝ್ ಕಲೆಹಾಕಿದ್ದು 42 ರನ್​ ಮಾತ್ರ. ಇನ್ನು ಕೇವಲ 1 ವಿಕೆಟ್ ಮಾತ್ರ ಪಡೆದಿದ್ದಾರೆ.9- ಕೇದರ್ ಜಾಧವ್: 1 ಇನಿಂಗ್ಸ್ ಆಡಿದ್ದ ಹಿರಿಯ ಆಟಗಾರ ಕೇದರ್ ಜಾಧವ್ ಕಲೆಹಾಕಿದ್ದು ಕೇವಲ 12 ರನ್​ ಮಾತ್ರ.10- ಸುಯಶ್ ಪ್ರಭುದೇಸಾಯಿ: 5 ಮ್ಯಾಚ್​ನಲ್ಲಿ ಕಣಕ್ಕಿಳಿದಿದ್ದ ಸುಯಶ್ 4 ಇನಿಂಗ್ಸ್ ಆಡಿದ್ದಾರೆ. ಈ ವೇಳೆ ಕಲೆಹಾಕಿದ ಒಟ್ಟು ಸ್ಕೋರ್ ಕೇವಲ 35 ರನ್ ಮಾತ್ರ.11- ಡೇವಿಡ್ ವಿಲ್ಲಿ: 4 ಪಂದ್ಯಗಳಲ್ಲಿ 3 ಮ್ಯಾಚ್​ನಲ್ಲಿ ಬ್ಯಾಟಿಂಗ್ ಮಾಡಿದ್ದ ವಿಲ್ಲಿ 35 ರನ್​ಗಳಿಸಿದ್ದರು. ಅಲ್ಲದೆ 3 ವಿಕೆಟ್ ಕಬಳಿಸಿದ್ದರು.12- ವನಿಂದು ಹಸರಂಗ: 8 ಮ್ಯಾಚ್​ನಲ್ಲಿ 5 ಬಾರಿ ಬ್ಯಾಟಿಂಗ್ ಮಾಡಿದ್ದ ಹಸರಂಗ ಗಳಿಸಿದ್ದು ಕೇವಲ 33 ರನ್​ ಮಾತ್ರ. ಇನ್ನು 8 ವಿಕೆಟ್​ಗಳನ್ನು ಕಬಳಿಸಿದ್ದಾರೆ.13- ಮೊಹಮ್ಮದ್ ಸಿರಾಜ್: 14 ಪಂದ್ಯಗಳಲ್ಲಿ ಬೌಲಿಂಗ್ ಮಾಡಿದ್ದ ಸಿರಾಜ್ 376 ರನ್​ ನೀಡಿ ಒಟ್ಟು 19 ವಿಕೆಟ್ ಕಬಳಿಸಿ ಮಿಂಚಿದ್ದಾರೆ.14- ಹರ್ಷಲ್ ಪಟೇಲ್: 14 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಹರ್ಷಲ್ ಪಟೇಲ್ 454 ರನ್ ನೀಡಿ ಒಟ್ಟು 14 ವಿಕೆಟ್ ಪಡೆದಿದ್ದಾರೆ.15- ಕರ್ಣ್ ಶರ್ಮಾ: 7 ಪಂದ್ಯಗಳಲ್ಲಿ 223 ರನ್ ನೀಡಿ ಕರ್ಣ್ ಶರ್ಮಾ ಒಟ್ಟು 10 ವಿಕೆಟ್ ಕಬಳಿಸಿದ್ದಾರೆ.16- ಆಕಾಶ್ ದೀಪ್: 2 ಪಂದ್ಯಗಳಲ್ಲಿ 30 ರನ್ ನೀಡಿ ಆಕಾಶ್ ದೀಪ್ 1 ವಿಕೆಟ್ ಪಡೆದಿದ್ದರು.17- ವೈಶಾಕ್ ವಿಜಯಕುಮಾರ್: 7 ಪಂದ್ಯಗಳಲ್ಲಿ ಬೌಲಿಂಗ್ ಮಾಡಿದ್ದ ವೈಶಾಕ್ 253 ರನ್ ನೀಡಿ 9 ವಿಕೆಟ್ ಪಡೆದಿದ್ದಾರೆ.18- ವೇಯ್ನ್ ಪಾರ್ನೆಲ್: 7 ಪಂದ್ಯಗಳಲ್ಲಿ 236 ರನ್ ನೀಡಿ ವೇಯ್ನ್ ಪಾರ್ನೆಲ್ ಒಟ್ಟು 9 ವಿಕೆಟ್ ಕಬಳಿಸಿದ್ದಾರೆ.19- ಜೋಶ್ ಹ್ಯಾಝಲ್​ವುಡ್: ಕೇವಲ 3 ಪಂದ್ಯಗಳನ್ನಾಡಿದ್ದ ಹ್ಯಾಝಲ್​ವುಡ್ 76 ರನ್ ನೀಡಿ 3 ವಿಕೆಟ್ ಪಡೆದಿದ್ದಾರೆ.20- ರೀಸ್ ಟೋಪ್ಲಿ: ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಟೋಪ್ಲಿ 2 ಓವರ್​ಗಳಲ್ಲಿ 14 ರನ್ ನೀಡಿ 1 ವಿಕೆಟ್ ಕಬಳಿಸಿದ್ದಾರೆ.21- ಹಿಮಾಂಶು ಶರ್ಮಾ: ಗುಜರಾತ್ ಟೈಟಾನ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಹಿಮಾಂಶು 3 ಓವರ್​ಗಳಲ್ಲಿ 28 ರನ್ ನೀಡಿದರೂ ಯಾವುದೇ ವಿಕೆಟ್ ಪಡೆದಿಲ್ಲ.RCB ತಂಡ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಮೈಕೆಲ್ ಬ್ರೇಸ್​ವೆಲ್​, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್​ವುಡ್​, ಮೊಹಮ್ಮದ್ ಸಿರಾಜ್, ಕರ್ಣ್​ ಶರ್ಮಾ, ಸಿದ್ಧಾರ್ಥ್​ ಕೌಲ್, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್​ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್, ವೇಯ್ನ್ ಪಾರ್ನೆಲ್, ವೈಶಾಕ್ ವಿಜಯಕುಮಾರ್.

source https://tv9kannada.com/photo-gallery/cricket-photos/ipl-2023-rcb-players-performance-report-card-kannada-news-zp-584759.html

Leave a Reply

Your email address will not be published. Required fields are marked *