IPL 2023: RCB ಪರ ಒಂದೇ ಒಂದು ಪಂದ್ಯವಾಡದ 6 ಆಟಗಾರರು ಯಾರು ಗೊತ್ತಾ?

IPL 2023: ಐಪಿಎಲ್​ ಸೀಸನ್​ 16 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 14 ಪಂದ್ಯಗಳನ್ನಾಡಿದೆ. ಈ ಹದಿನಾಲ್ಕು ಪಂದ್ಯಗಳಲ್ಲಿ ಆರ್​ಸಿಬಿ 7 ರಲ್ಲಿ ಜಯ ಸಾಧಿಸಿದರೆ, ಏಳು ಪಂದ್ಯಗಳಲ್ಲಿ ಸೋಲನುಭವಿಸಿದೆ. ಇನ್ನು ಈ ಪಂದ್ಯಗಳಲ್ಲಿ ಆರ್​ಸಿಬಿ ಪರ ಒಟ್ಟು 21 ಆಟಗಾರರು ಕಣಕ್ಕಿಳಿದಿದ್ದಾರೆ.ಆದರೆ ಮತ್ತೊಂದೆಡೆ 6 ಆಟಗಾರರು ಇಡೀ ಟೂರ್ನಿಯಲ್ಲಿ ಬೆಂಚ್ ಕಾದಿದ್ದಾರೆ. ಅಂದರೆ ಈ ಆರು ಆಟಗಾರರು ಒಂದೇ ಒಂದು ಪಂದ್ಯದಲ್ಲಿ ಕಣಕ್ಕಿಳಿದಿಲ್ಲ.ಇನ್ನು ಈ ಆರು ಆಟಗಾರರಲ್ಲಿ 5 ಆಟಗಾರರು ಚೊಚ್ಚಲ ಅವಕಾಶವನ್ನು ಎದುರು ನೋಡುತ್ತಿದ್ದರು. ಆದರೆ ಪಾದರ್ಪಣೆ ಮಾಡುವ ಅವಕಾಶ ಕೂಡ ಸಿಗದೇ ಐಪಿಎಲ್​ ಅಭಿಯಾನ ಅಂತ್ಯಗೊಳಿಸಿದ್ದಾರೆ. ಹಾಗಿದ್ರೆ ಈ ಬಾರಿಯ ಐಪಿಎಲ್​ನಲ್ಲಿ ಆರ್​ಸಿಬಿ ಪರ ಒಂದೇ ಒಂದು ಪಂದ್ಯವಾಡದ 6 ಆಟಗಾರರು ಯಾರೆಲ್ಲಾ ನೋಡೋಣ...
1- ಸಿದ್ದಾರ್ಥ್ ಕೌಲ್ (ಬೌಲರ್​): ಕಳೆದ ಸೀಸನ್​ನಲ್ಲಿ ಆರ್​ಸಿಬಿ ಪರ 1 ಪಂದ್ಯವಾಡಿದ್ದ ಸಿದ್ದಾರ್ಥ್​ ಕೌಲ್ ಈ ಬಾರಿ ಒಂದೇ ಒಂದು ಪಂದ್ಯವಾಡಿಲ್ಲ.2- ಸೋನು ಯಾದವ್ (ಆಲ್​ರೌಂಡರ್): ಈ ಬಾರಿಯ ಹರಾಜಿನಲ್ಲಿ ಆರ್​ಸಿಬಿ 20 ಲಕ್ಷ ರೂ. ನೀಡಿ ಖರೀದಿಸಿದ್ದ ಸೋನು ಯಾದವ್ ಅವರನ್ನು  ಒಂದೇ ಒಂದು ಪಂದ್ಯದಲ್ಲಿ ಕಣಕ್ಕಿಳಿಸಿಲ್ಲ.3- ಅವಿನಾಶ್ ಸಿಂಗ್ (ಬೌಲರ್): 60 ಲಕ್ಷ ರೂ.ಗೆ ಆರ್​ಸಿಬಿ ಖರೀದಿಸಿದ ಅವಿನಾಶ್ ಸಿಂಗ್​ಗೂ ಕೂಡ ಚಾನ್ಸ್ ನೀಡಲಾಗಿಲ್ಲ.4- ಮನೋಜ್ ಭಾಂಡಗೆ (ಆಲ್​ರೌಂಡರ್): ಆರ್​ಸಿಬಿ ತಂಡದಲ್ಲಿದ್ದ ಕನ್ನಡಿಗ ಮನೋಜ್ ಭಾಂಡಗೆಗೂ ಕೂಡ ಒಂದೇ ಒಂದು ಪಂದ್ಯದಲ್ಲಿ ಅವಕಾಶ ನೀಡಿಲ್ಲ.5- ರಜನ್ ಕುಮಾರ್ (ಬೌಲರ್): ಆರ್​ಸಿಬಿ 70 ಲಕ್ಷ ರೂ.ಗೆ ಖರೀದಿಸಿದ್ದ ರಜನ್ ಕುಮಾರ್ ಕೂಡ ಇಡೀ ಟೂರ್ನಿಯಲ್ಲಿ ಬೆಂಚ್ ಕಾದಿದ್ದಾರೆ.6- ಫಿನ್ ಅಲೆನ್ (ಬ್ಯಾಟ್ಸ್​ಮನ್): 2021 ರಿಂದ ಆರ್​ಸಿಬಿ ತಂಡದಲ್ಲಿರುವ ಯುವ ಸ್ಪೋಟಕ ಬ್ಯಾಟ್ಸ್​ಮನ್ 3ನೇ ವರ್ಷದಲ್ಲೂ ಬೆಂಚ್ ಕಾದಿದ್ದಾರೆ. ಅಂದರೆ ಕಳೆದ 3 ವರ್ಷಗಳಿಂದ ತಂಡದಲ್ಲಿದ್ದೂ ಅಲೆನ್​ಗೆ ಒಂದೇ ಒಂದು ಚಾನ್ಸ್ ನೀಡಿಲ್ಲ ಎಂಬುದೇ ಅಚ್ಚರಿ.

source https://tv9kannada.com/photo-gallery/cricket-photos/ipl-2023-rcb-players-didnt-play-a-single-match-kannada-news-zp-584816.html

Leave a Reply

Your email address will not be published. Required fields are marked *