IPL 2023 Final: ಇನ್ನೊಂದೆ ಹೆಜ್ಜೆ ಬಾಕಿ; ಚಹಲ್ ದಾಖಲೆ ಮುರಿಯಲಿದ್ದಾರೆ ರಶೀದ್ ಖಾನ್..!

ಗುಜರಾತ್ ಪರ ಆಲ್​ರೌಂಡರ್ ಪ್ರದರ್ಶನ ನೀಡಿರುವ ರಶೀದ್ ಖಾನ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ತಂಡಕ್ಕೆ ನೆರವಾಗಿದ್ದಾರೆ. ಅಲ್ಲದೆ ಈ ಸೀಸನ್​ನಲ್ಲಿ 27 ವಿಕೆಟ್ ಉರುಳಿಸಿರುವ ರಶೀದ್ ಪರ್ಪಲ್ ಕ್ಯಾಪ್​ ರೇಸ್​ನಲ್ಲೂ ಇದ್ದಾರೆ. ಇದರೊಂದಿಗೆ ಈ ಫೈನಲ್ ಪಂದ್ಯದಲ್ಲಿ ಇನ್ನೊಂದು ವಿಕೆಟ್ ಉರುಳಿಸಿದರೆ ರಶೀದ್ ಐಪಿಎಲ್ ಇತಿಹಾಸದಲ್ಲಿ ದಾಖಲೆ ಸೃಷ್ಟಿಸಲಿದ್ದಾರೆ.ಈ ಸೀಸನ್​ನಲ್ಲಿ 27 ವಿಕೆಟ್ ಉರುಳಿಸಿರುವ ರಶೀದ್ ಐಪಿಎಲ್ ಸೀಸನ್‌ನಲ್ಲಿ ಸ್ಪಿನ್ನರ್‌ ಒಬ್ಬ ಪಡೆದ ಅತಿ ಹೆಚ್ಚು ವಿಕೆಟ್​ಗಳ ವಿಚಾರದಲ್ಲಿ ಇದೀಗ ಯುಜ್ವೇಂದ್ರ ಚಾಹಲ್‌ ನಿರ್ಮಿಸಿದ ದಾಖಲೆಯನ್ನು ಸರಿಗಟ್ಟಿದ್ದಾರೆ. ಚಾಹಲ್ ಕಳೆದ ವರ್ಷ ರಾಜಸ್ಥಾನ್ ರಾಯಲ್ಸ್ ಪರ 27 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ವಿಜೇತರಾಗಿದ್ದರು. ಇದೀಗ 2023 ರ ಐಪಿಎಲ್ ಆವೃತ್ತಿಯಲ್ಲಿ ರಶೀದ್ ಮತ್ತೊಬ್ಬ ಬ್ಯಾಟರ್ ಅನ್ನು ವಜಾ ಮಾಡಿದರೆ ತಮ್ಮ ಹೆಸರಿನಲ್ಲಿ ಸಾರ್ವಕಾಲಿಕ ದಾಖಲೆಯನ್ನು ಬರೆದುಕೊಳ್ಳಲಿದ್ದಾರೆ. ಇನ್ನು ಒಂದು ಸೀಸನ್​ನಲ್ಲಿ ಅತಿ ಹೆಚ್ಚು ವಿಕೆಟ್ ಉರುಳಿಸಿದ ಸ್ಪಿನ್ನರ್​ಗಳು ಯಾರ್ಯಾರು ಎಂಬುದನ್ನು ನೋಡುವುದಾದರೆ..27 - ಯುಜ್ವೇಂದ್ರ ಚಹಾಲ್ (ರಾಜಸ್ಥಾನ್ ರಾಯಲ್ಸ್), ಐಪಿಎಲ್ 202227* - ರಶೀದ್ ಖಾನ್ (ಗುಜರಾತ್ ಟೈಟಾನ್ಸ್), ಐಪಿಎಲ್ 202326 - ಇಮ್ರಾನ್ ತಾಹಿರ್ (ಚೆನ್ನೈ ಸೂಪರ್ ಕಿಂಗ್ಸ್), ಐಪಿಎಲ್ 201926 - ವನಿಂದು ಹಸರಂಗ (ರಾಯಲ್ ಚಾಲೆಂಜರ್ಸ್ ಬೆಂಗಳೂರು), ಐಪಿಎಲ್ 202224 - ಸುನಿಲ್ ನರೈನ್ (ಕೋಲ್ಕತ್ತಾ ನೈಟ್ ರೈಡರ್ಸ್, ಐಪಿಎಲ್ 201224 - ಹರ್ಭಜನ್ ಸಿಂಗ್ (ಮುಂಬೈ ಇಂಡಿಯನ್ಸ್), ಐಪಿಎಲ್ 2013

source https://tv9kannada.com/photo-gallery/cricket-photos/ipl-2023-final-rashid-khan-1-wicket-away-from-creating-history-breaking-all-time-ipl-record-psr-588940.html

Leave a Reply

Your email address will not be published. Required fields are marked *