Team India in 2023: 2023 ರಲ್ಲಿ ಟೀಂ ಇಂಡಿಯಾ ಫುಲ್ ಬ್ಯುಸಿ; ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

Team India in 2023 Full List of Test ODI and T20I Matches in 2023 in kannada

ಹಲವು ಏಳು- ಬೀಳುಗಳೊಂದಿಗೆ 2022ರ ವರ್ಷವನ್ನು ಮುಗಿಸಿರುವ ಟೀಂ ಇಂಡಿಯಾಕ್ಕೆ (Team India) ಇಡೀ ವರ್ಷ ಯಾವುದೇ ಐಸಿಸಿ ಈವೆಂಟ್​ಗಳನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಇದೀಗ ಲಂಕಾ ವಿರುದ್ಧದ ತವರು ಸರಣಿಯೊಂದಿಗೆ ಹೊಸ ವರ್ಷವನ್ನು ಬರಮಾಡಿಕೊಳ್ಳಲ್ಲಿರುವ ಟೀಂ ಇಂಡಿಯಾ ((India vs Srilanka)) 2023ರಲ್ಲಿ ಫುಲ್ ಬ್ಯುಸಿಯಾಗಿರಲಿದೆ. ಈಗಿನ ವೇಳಾಪಟ್ಟಿಯಂತೆ ಟೀಂ ಇಂಡಿಯಾ ಮುಂದಿನ ವರ್ಷ ಶ್ರೀಲಂಕಾ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಸರಣಿ ಆಡಲಿದೆ. ಅದೇ ಹೊತ್ತಿಗೆ ಐಪಿಎಲ್ (IPL) 16ನೇ ಸೀಸನ್​ನಲ್ಲಿ ಭಾರತದ ಆಟಗಾರರು ಸದ್ದು ಮಾಡಲಿದ್ದಾರೆ. ಆ ಬಳಿಕ ವೆಸ್ಟ್ ಇಂಡೀಸ್ ಪ್ರವಾಸ ಮಾಡಲ್ಲಿರುವ ಟೀಂ ಇಂಡಿಯಾ ಭಾರತದಲ್ಲೇ ಆಯೋಜನೆಯಾಗುತ್ತಿರುವ ಏಕದಿನ ವಿಶ್ವಕಪ್ (World Cup), ನಂತರ ಏಷ್ಯಾಕಪ್ (Asia Cup) ಕೂಡ ಆಡಬೇಕಿದೆ. ಇವೆಲ್ಲ ಹೋರಾಟಗಳ ಬಳಿಕ ವರ್ಷದ ಕೊನೆಯಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಲಿದೆ. ಇದರೊಂದಿಗೆ ಟೀಂ ಇಂಡಿಯಾ ವರ್ಷವನ್ನು ಅಂತ್ಯಗೊಳಿಸಲಿದೆ.

ಎರಡು ಪ್ರಮುಖ ಈವೆಂಟ್​ಗಳು

2023ರಲ್ಲಿ ಎರಡು ದೊಡ್ಡ ಐಸಿಸಿ ಟೂರ್ನಿಗಳು ನಡೆಯಲಿವೆ. ಇದರೊಂದಿಗೆ ಏಷ್ಯಾಕಪ್ ಟೂರ್ನಿಯೂ ನಡೆಯಲಿದೆ. ಇದರಲ್ಲಿ ಎರಡು ಪ್ರಮುಖ ಐಸಿಸಿ ಈವೆಂಟ್‌ಗಳೆಂದರೆ, ಒಂದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಮತ್ತು ಇನ್ನೊಂದು 2023ರ ಏಕದಿನ ವಿಶ್ವಕಪ್. ಹಾಗೆಯೇ 2023 ರಲ್ಲಿ ಏಷ್ಯಾಕಪ್ ಕೂಡ ನಡೆಯಲ್ಲಿದೆ.

ಮೊದಲು ಐಪಿಎಲ್​ನಲ್ಲಿ ಕೋಟಿ ಲೂಟಿ, ಈಗ ತಂಡಕ್ಕೆ ಎಂಟ್ರಿ! ಐದೇ ದಿನದಲ್ಲಿ ಬದಲಾಯ್ತು ಟ್ಯಾಕ್ಸಿ ಡ್ರೈವರ್ ಮಗನ ಬದುಕು

ಭಾರತದಲ್ಲಿ ಏಕದಿನ ವಿಶ್ವಕಪ್

2023ರ ಏಕದಿನ ವಿಶ್ವಕಪ್ ಭಾರತದಲ್ಲಿ ನಡೆಯಲಿದೆ. ಇದು ಟೂರ್ನಿಯಲ್ಲಿ ಟೀಂ ಇಂಡಿಯಾಕ್ಕೆ ಅತ್ಯಂತ ನಿರ್ಣಾಯಕವಾಗಲಿದೆ. ಟೀಂ ಇಂಡಿಯಾ 2011ರಲ್ಲಿ ಕೊನೆಯ ಬಾರಿಗೆ ಏಕದಿನ ವಿಶ್ವಕಪ್ ಗೆದ್ದುಕೊಂಡಿತ್ತು. ಏತನ್ಮಧ್ಯೆ, 2013 ರಿಂದ ಟೀಂ ಇಂಡಿಯಾ ಯಾವುದೇ ಐಸಿಸಿ ಈವೆಂಟ್ ಗೆದ್ದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾ 2023ರ ಏಕದಿನ ವಿಶ್ವಕಪ್ ಅನ್ನು ತಮ್ಮ ತಾಯ್ನಾಡಿನಲ್ಲಿ ಗೆಲ್ಲುವ ಭರವಸೆಯಲ್ಲಿದೆ.

2023ರಲ್ಲಿ ಟೀಂ ಇಂಡಿಯಾ ವೇಳಾಪಟ್ಟಿ

  1. ಜನವರಿ: ಶ್ರೀಲಂಕಾದೊಂದಿಗೆ ಮೂರು ಪಂದ್ಯಗಳ ಏಕದಿನ ಮತ್ತು 3 ಪಂದ್ಯಗಳ ಟಿ20 ಸರಣಿ.
  2. ಜನವರಿ-ಫೆಬ್ರವರಿ: ನ್ಯೂಜಿಲೆಂಡ್ ಎದುರು 3 ಏಕದಿನ ಮತ್ತು 3 ಟಿ20 ಪಂದ್ಯಗಳು
  3. ಫೆಬ್ರವರಿ-ಮಾರ್ಚ್: ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳು
  4. ಏಪ್ರಿಲ್-ಮೇ: ಐಪಿಎಲ್ 16ನೇ ಸೀಸನ್
  5. ಜೂನ್: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ 2023 (ಒಂದು ವೇಳೆ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ತಲುಪಿದರೆ)
  6. ಜುಲೈ-ಆಗಸ್ಟ್: ಟೀಂ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ. ಅಲ್ಲಿ 2 ಟೆಸ್ಟ್, 3 ಏಕದಿನ ಹಾಗೂ 3 ಟಿ20 ಪಂದ್ಯಗಳ ಸರಣಿ ನಡೆಯಲಿದೆ.
  7. ಸೆಪ್ಟೆಂಬರ್ – 2023 ಏಷ್ಯಾಕಪ್
  8. ಸೆಪ್ಟೆಂಬರ್ – ಆಸ್ಟ್ರೇಲಿಯಾ ಎದುರು ಮೂರು ಏಕದಿನ ಪಂದ್ಯಗಳ ಸರಣಿ
  9. ಅಕ್ಟೋಬರ್10 ರಿಂದ ನವೆಂಬರ್ 26: ಏಕದಿನ ವಿಶ್ವಕಪ್
  10. ನವೆಂಬರ್-ಡಿಸೆಂಬರ್: ಆಸ್ಟ್ರೇಲಿಯಾ ತಂಡದ ಭಾರತ ಪ್ರವಾಸ (5 ಪಂದ್ಯಗಳ ಟಿ20 ಸರಣಿಗಾಗಿ ಕಾಂಗರೂ ತಂಡ ಭಾರತಕ್ಕೆ ಬರಲಿದೆ)
  11. ಡಿಸೆಂಬರ್: ಟೀಂ ಇಂಡಿಯಾ ಡಿಸೆಂಬರ್ ಅಂತ್ಯದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ಅಲ್ಲಿ 2 ಟೆಸ್ಟ್, 3 ಏಕದಿನ ಹಾಗೂ 3 ಟಿ20 ಪಂದ್ಯಗಳ ಸರಣಿ ನಡೆಯಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/team-india-in-2023-full-list-of-test-odi-and-t20i-matches-in-2023-in-kannada-psr-au14-492020.html

Leave a Reply

Your email address will not be published. Required fields are marked *