ಚಿತ್ರದುರ್ಗ ನ. 23:
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಕಾಡುಗೊಲ್ಲರಿಗೆ ಪರಿಶಿಷ್ಟ ಪಂಗಡ (ಎಸ್‍ಟಿ) ಮೀಸಲಾತಿ ನೀಡುವ ಕುರಿತು ಕುಲಶಾಸ್ತ್ರ ಅಧ್ಯಯನವನ್ನು ಮೂರು ತಿಂಗಳಲ್ಲಿ ಕಳುಹಿಸುವುದಾಗಿ ಹೇಳಿದರೆ ಕಳುಹಿಸಲಿ, ತಾವು ಹೋಗುವುದಾಗಿ ತಿಳಿಸಿ ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಲು ಸಿದ್ಧರಿದ್ದು, ದೇವೇಗೌಡರು, ಕುಮಾರಸ್ವಾಮಿ, ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರೂ ಸಹ ಬರುತ್ತಾರೆ ಅಧ್ಯಯನ ವರದಿ ಮತ್ತು ಮಾಹಿತಿ ಸರಿಯಾಗಿ ಹೋದರೆ ಹಾಗೂ ಮಾನದಂಡಗಳ ಪ್ರಕಾರ ಸಲ್ಲಿಸಿದರೆ ಬೆಂಬಲ ನೀಡುವುದಾಗಿ ಸಂಸದರಾದ ಗೋವಿಂದ ಕಾರಜೋಳ ತಿಳಿಸಿದರು.
ಚಿತ್ರದುರ್ಗ ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಡು ಗೊಲ್ಲರಿಗೆ ಎಸ್‍ಟಿ ಮೀಸಲಾತಿ ಸೌಲಭ್ಯ ಸಿಗಬೇಕು ಈ ಕುರಿತು ಸರ್ಕಾರಕ್ಕೆ ಆಗ್ರಹಿಸುವುದಾಗಿ ತಿಳಿಸಿ ಪ್ರಸ್ತಾವನೆಯನ್ನು ಪದೇ ಪದೇ ತಿರಸ್ಕರಿಸುವುದಕ್ಕಿಂತ, ಸರ್ಕಾರದಿಂದ ಕುಲಶಾಸ್ತ್ರ ಅಧ್ಯಯನವನ್ನು ಸಂವಿಧಾನದ ಮಾನದಂಡಗಳಿಗೆ ಅನುಗುಣವಾಗಿ ಮಾಡಬೇಕು ಸರಿಯಾಗಿ ಅಧ್ಯಯನ ಮಾಡಿ ಕಳುಹಿಸಿದರೆ ಅವರಿಗೆ ಖಂಡಿತವಾಗಿಯೂ ಸಿಗುತ್ತದೆ ಕಾಡುಗೊಲ್ಲರು ನಿಜವಾಗಿಯೂ ಬುಡಕಟ್ಟು (ಟ್ರೈಬಲ್) ಸ್ವರೂಪ ಹೊಂದಿದ್ದು, ಊರುಗಳಲ್ಲಿರದೆ ಅಡವಿಗಳಲ್ಲಿನ ಹಟ್ಟಿಗಳಲ್ಲಿ ವಾಸಿಸುತ್ತಾರೆ ಮತ್ತು ಇಂದಿಗೂ ಅವರಲ್ಲಿ ಶಿಕ್ಷಣ ಕಡಿಮೆ ಇದೆ ಬಡವರಾಗಿರುವ ಹಾಗೂ ಅವಿದ್ಯಾವಂತರಾಗಿರುವ ಅವರು ಕುರಿ ಸಾಕಾಣಿಕೆ ಮಾಡಿ ಜೀವನ ನಡೆಸುತ್ತಿದ್ದು, ಅವರಿಗೆ ಮೀಸಲಾತಿ ಸಿಗಬೇಕು ಮತ್ತು ನ್ಯಾಯ ಸಿಗಬೇಕು ಕಾಡುಗೊಲ್ಲರ ಎಸ್‍ಟಿ ಮೀಸಲಾತಿ ವಿಚಾರದಲ್ಲಿ ಸಂವಿಧಾನಬದ್ಧ ಕುಲಶಾಸ್ತ್ರ ಅಧ್ಯಯನದ ಮೂಲಕ ನ್ಯಾಯ ದೊರಕಿಸಿಕೊಡಲು ಬದ್ಧವಾಗಿರುವುದಾಗಿ ಎಂದು ಹೇಳಿದರು.
ಕಾಡುಗೊಲ್ಲರಿಗೆ ಪರಿಶಿಷ್ಟ ಪಂಗಡ (ಎಸ್‍ಟಿ) ಮೀಸಲಾತಿ ನೀಡುವ ಕುರಿತು ಸರ್ಕಾರಕ್ಕೆ ಆಗ್ರಹಿಸಿದ್ದು, ಕುಲಶಾಸ್ತ್ರ ಅಧ್ಯಯನವನ್ನು ಸಂವಿಧಾನದ ಮಾನದಂಡಗಳಿಗೆ ಅನುಗುಣವಾಗಿ ಸಲ್ಲಿಸಿದರೆ ಅನುಮೋದನೆಗೆ ಬೆಂಬಲ ನೀಡುವುದಾಗಿ ತಿಳಿಸಿ ಎಸ್‍ಸಿ ಮತ್ತು ಎಸ್‍ಟಿ ಜನಾಂಗದ ಮೀಸಲಾತಿ ಕಡಿಮೆ ಮಾಡಲು ನ್ಯಾಯಾಲಯದಲ್ಲಿ ಪ್ರಮಾಣಪತ್ರ ಹಾಕಿದ್ದರ ಪರಿಣಾಮವಾಗಿ ಆ ಜನಾಂಗಕ್ಕೆ ದೊಡ್ಡ ಅನ್ಯಾಯವಾಗಿದೆ ಎಂದ ಅವರು ಹಿರಿಯೂರು ಉಪಚುನಾವಣೆಯಲ್ಲಿ ಎನ್‍ಡಿಎ ಮೈತ್ರಿಕೂಟದ ಅಭ್ಯರ್ಥಿ ಕಣಕ್ಕಿಳಿಯುವುದು ನಿಶ್ಚಿತವಾಗಿದ್ದು, ಮೂರೂವರೆ ವರ್ಷಗಳ ಕಾಲ ಆಡಳಿತಕ್ಕೆ ಮಂಗಳಾರತಿ ಮಾಡಲಾಗಿದೆ ಮತ್ತು ವಿದ್ಯಾವಂತರು ಮಂಗಳಾರತಿ
ಮಾಡಿದ್ದಾರೆ. ನಾಲ್ಕಕ್ಕೆ ನಾಲ್ಕು ಸೋತರು ಒಂದರಲ್ಲಿ ಅದು ಸಹ ಹೋಯಿತು ಧೈರ್ಯವಿದ್ದರೆ ಹಿರಿಯೂರು ಉಪಚುನಾವಣೆ ಮಾಡುವ ಬದಲು ರಾಜ್ಯ ವಿಧಾನಸಭೆಯನ್ನು ವಿಸರ್ಜಿಸಿ ಬಂದು ಚುನಾವಣೆ ಮಾಡಲಿ ಎಂದು ಸವಾಲು ಹಾಕಲಾಗಿದ್ದು, ಭಾರತೀಯ ಜನತಾ ಪಕ್ಷದವರು ಸಿದ್ಧರಿದ್ದಾರೆ ಎಂದು ಹೇಳಿದರು.
ಹಿರಿಯೂರು ಟಿಕೆಟ್ ವಿಚಾರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಯಾವುದೇ ಪ್ರಶ್ನೆಯಿಲ್ಲ ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷದವರು ಸೇರಿ ಚುನಾವಣೆ ಮಾಡಲಿದ್ದು, ಹಿರಿಯೂರು ಉಪಚುನಾವಣೆಯಲ್ಲಿ ಎನ್‍ಡಿಎ ಅಭ್ಯರ್ಥಿ ಇರುತ್ತಾರೆ. ಪಕ್ಷದ ಕಾರ್ಯಕರ್ತರು ಮತ್ತು ದುಡಿಯುವವರು ಆಕಾಂಕ್ಷಿಗಳಾಗಿ ಕೇಳು ವುದು ಸಹಜವಾಗಿದ್ದು, 24×7 ಕೆಲಸ ಮಾಡುವ ಕಾರ್ಯಕರ್ತರು ಇರುವುದರಿಂದ ಅವರು ಕೇಳುವು ದರಲ್ಲಿ ತಪ್ಪಿಲ್ಲ ಎಂದು ಹೇಳಿ ಹಿರಿಯೂರಿಗೆ ಮುಖ್ಯಮಂತ್ರಿಗಳು ನಾಲ್ಕು ಬಾರಿ ಬಂದಿದ್ದಾರೆ ಎಂದು ಹೇಳಲಾಗಿದ್ದು, ಇಲ್ಲಿ ಬರುವ ಬದಲು ರಾಜ್ಯದಾದ್ಯಂತ ಸುತ್ತಾಡಿ ಸಂಕಷ್ಟದಲ್ಲಿರುವ ರೈತರ ಬಳಿ ಹೋಗಬೇಕು ಬರಗಾಲವಿರುವಾಗ ಎಸ್‍ಸಿ ಮತ್ತು ಎಸ್‍ಟಿ ಜನಾಂಗದ 52 ಸಾವಿರ ಕೋಟಿ ರೂಪಾಯಿಯನ್ನು ದುರುಪಯೋಗ ಮಾಡಿಕೊಂಡು ಬೇರೆ ಉದ್ದೇಶಕ್ಕೆ ಬಳಸಿಕೊಂಡಿರುವುದಕ್ಕೆ ಉತ್ತರ ನೀಡುವಂತೆ ಆಗ್ರಹಿಸಿದರು.
ಭದ್ರಾ ಯೋಜನೆಗೆ 5,000 ಕೋಟಿ ರೂಪಾಯಿ ಹಣ ಕೊಟ್ಟಿಲ್ಲ ಎಂದು ಆರೋಪಿಸಿ ರೈತರು ಕಚೇರಿ ಮುಂದೆ ಪ್ರತಿಭಟನೆ ನಡೆಸುವ ವಿಚಾರಕ್ಕೆ ಪ್ರತಿಕ್ರಿಯಿಸಿ, 5,000 ಕೋಟಿ ರೂಪಾಯಿ ಹಣವನ್ನು ಖಾತರಿ ಆಗಿ ಕೊಡುತ್ತಾರೆ ಎಂದು ಹೇಳಲಾಗಿದೆ. ಆದರೆ ಸಮಯಕ್ಕೆ ಸರಿಯಾಗಿ ಪರಿಷ್ಕೃತ ಅಂದಾಜು ಮತ್ತು ಯಾವ ಬಾಬ್ತಿಗೆ ಹಣ ಖರ್ಚು ಮಾಡಲಾಗಿದೆ ಎಂಬ ಮಾಹಿತಿಯನ್ನು ಕಳುಹಿಸಿಲ್ಲ ಎಂದು ತಿಳಿಸಿ ಅಪ್ಪರ್ ಭದ್ರಾ ಯೋಜನೆಗೆ ಪ್ರತ್ಯೇಕ ಖಾತೆ ತೆರೆಯಬೇಕು ಪ್ರತ್ಯೇಕ ಖಾತೆ ತೆರೆದು ಕಳುಹಿಸಿದರೆ ಅದೇ ಖಾತೆಗೆ ಹಣ ನೀಡಲಾಗುತ್ತದೆ ಮತ್ತು ಅದನ್ನು ಅದೇ ಉದ್ದೇಶಕ್ಕೆ ಬಳಸಬೇಕು, ಬೇರೆ ಉದ್ದೇಶಕ್ಕೆ ಬಳಸಬಾರದು ಎಂದು ಹೇಳಲಾಗಿದೆ. ನಿಯಮಾವಳಿಗಳ ಪ್ರಕಾರ ಮಾಡಬೇಕಾಗಿರುವುದರಿಂದ ಮತ್ತು ಪ್ರಕ್ರಿಯೆ ನಡೆಯುತ್ತಿರುವು ದರಿಂದ ವಿಳಂಬವಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.
ಗಂಗಾ ಗೃಹ ಕಚೇರಿ ನವೀಕರಣಕ್ಕೆ 100 ಕೋಟಿ ರೂಪಾಯಿ ವೆಚ್ಚವಾಗಿರುವ ವಿಚಾರ ತಮಗೆ ಗೊತ್ತಿಲ್ಲದ ವಿಷಯವಾಗಿದ್ದು, ಅದರ ಬಗ್ಗೆ ಮಾತನಾಡುವುದಿಲ್ಲ ಎಂದು ತಿಳಿಸಿದರು.