Skip to content
  • Sunday, July 6, 2025
  • About us
  • Contact us
ಸಮಗ್ರ ಸುದ್ದಿ

ಸಮಗ್ರ ಸುದ್ದಿ

ನಿಖರತೆಗೆ ಮತ್ತೊಂದು ಹೆಸರು

  • Home
  • Chitradurga
  • National
  • States
  • Cities
  • Business
  • Entertainment
  • Health
  • Sports
  • Tech
  • General Konwledge
  • Horoscope
  • Home
  • Sports
  • IPL 2023 Final CSK vs GT: ಐಪಿಎಲ್ ಫೈನಲ್ ಪಂದ್ಯ ಸೋಮವಾರಕ್ಕೆ ಮುಂದೂಡಿಕೆ
Sports

IPL 2023 Final CSK vs GT: ಐಪಿಎಲ್ ಫೈನಲ್ ಪಂದ್ಯ ಸೋಮವಾರಕ್ಕೆ ಮುಂದೂಡಿಕೆ

May 28, 2023
samagrasuddi

IPL 2023 CSK vs GT: ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನಡೆಯಬೇಕಿದ್ದ ಚೆನ್ನೈ ಸೂಪರ್ ಕಿಂಗ್ ಹಾಗೂ ಗುಜರಾತ್ ಟೈಟಾನ್ಸ್​ ನಡುವಣ ಐಪಿಎಲ್ ಫೈನಲ್ ಪಂದ್ಯವನ್ನು ಮಳೆಯ ಕಾರಣ ಸೋಮವಾರಕ್ಕೆ ಮುಂದೂಡಲಾಗಿದೆ. ನಿಗದಿಯಂತೆ ಸೋಮವಾರ ರಾತ್ರಿ 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದ್ದು, 7.30 ಕ್ಕೆ ಪಂದ್ಯ ಶುರುವಾಗಲಿದೆ. ಒಂದು ವೇಳೆ ಸೋಮವಾರ ಕೂಡ ಪಂದ್ಯಕ್ಕೆ ವರುಣ ಅಡ್ಡಿಪಡಿಸಿದರೆ ಓವರ್​ಗಳ ಕಡಿತದೊಂದಿಗೆ ಪಂದ್ಯವನ್ನು ಆಯೋಜಿಸಲಿದೆ. ಸೋಮವಾರ ಕೂಡ ಮಳೆ ಬಂದರೆ ಹೇಗೆ ನಡೆಯಲಿದೆ ಫೈನಲ್ ಪಂದ್ಯ? - ಟಾಸ್ ಪ್ರಕ್ರಿಯೆಗೂ ಮುನ್ನ ಮಳೆ ಬಂದು ಪಂದ್ಯ ತಡವಾಗಿ ಆರಂಭವಾದರೂ ಓವರ್​ಗಳನ್ನು ಕಡಿತಗೊಳಿಸುವುದಿಲ್ಲ. ಅಂದರೆ ಪಂದ್ಯವು ರಾತ್ರಿ 9.40 ರೊಳಗೆ ಶುರುವಾದರೆ ಯಾವುದೇ ಓವರ್​ ಕಡಿತ ಇರುವುದಿಲ್ಲ. 2 ತಂಡಗಳು 20 ಓವರ್​ಗಳನ್ನು ಆಡಲಿದೆ. (ಒಂದು ವೇಳೆ ಮತ್ತೆ ಅಡಚಣೆ ಉಂಟಾಗಲಿದೆ ಎಂಬ ಸೂಚನೆಯಿದ್ದರೆ ಮಾತ್ರ ಓವರ್​ಗಳ ಕಡಿತಕ್ಕೆ ಮುಂದಾಗಬಹುದು)- ಮಳೆಯಿಂದಾಗಿ ವಿಳಂಬವಾಗಿ ರಾತ್ರಿ 9.40 ರ ಬಳಿಕ ಪಂದ್ಯ ಆರಂಭವಾಗುವುದಾರೆ, ಓವರ್​ಗಳ ಕಡಿತ ಮಾಡಲಾಗುತ್ತದೆ. ಅಲ್ಲದೆ ಆ ಬಳಿಕ ಡಕ್​ವರ್ತ್​ ಲೂಯಿಸ್ ನಿಯಮದ ಪ್ರಕಾರ ಫಲಿತಾಂಶ ನಿರ್ಧರಿಸಬೇಕಿದ್ದರೆ ಉಭಯ ತಂಡಗಳು ಕನಿಷ್ಠ 5 ಓವರ್​ಗಳನ್ನು ಆಡಿರಬೇಕು.- ಇನ್ನು ನಿಗದಿತ ಸಮಯದೊಳಗೆ ಪಂದ್ಯ ನಡೆಯದಿದ್ದರೆ ಹೆಚ್ಚುವರಿ ಸಮಯ ತೆಗೆದುಕೊಳ್ಳಲಾಗುತ್ತದೆ. ಈ ಮೂಲಕ 5 ಓವರ್​ಗಳ ಪಂದ್ಯವನ್ನು ಆಯೋಜಿಸಲಿದೆ. ಈ 5 ಓವರ್​ಗಳ ಪಂದ್ಯವು ರಾತ್ರಿ 11.56 ರಿಂದ ಶುರುವಾಗಲಿದ್ದು, 12.50 ರೊಳಗೆ ಮುಗಿಯಲಿದೆ.- ಇನ್ನು 11.56 ರಿಂದ 12.50 ರೊಳಗೆ 5 ಓವರ್​ಗಳ ಪಂದ್ಯ ಆಯೋಜಿಸಲು ಸಾಧ್ಯವಾಗದಿದ್ದರೆ ಸೂಪರ್ ಓವರ್ ನಡೆಸುವ ಸಾಧ್ಯತೆಯಿದೆ.- ಒಂದು ವೇಳೆ ಸೋಮವಾರ ಕೂಡ ಮಳೆಯಿಂದಾಗಿ ಕನಿಷ್ಠ ಸೂಪರ್ ಓವರ್ ಪಂದ್ಯ ನಡೆಯದಿದ್ದರೆ, ಲೀಗ್​ ಹಂತದ 70 ಪಂದ್ಯಗಳ ನಂತರ ಪಾಯಿಂಟ್ಸ್​ ಟೇಬಲ್​ನಲ್ಲಿ ಅಗ್ರಸ್ಥಾನ ಅಲಂಕರಿಸಿದ ತಂಡವನ್ನು ಚಾಂಪಿಯನ್ಸ್ ಎಂದು ಘೋಷಿಸಲಾಗುತ್ತದೆ ಎಂದು ವರದಿಯಾಗಿದೆ.ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೀಗಿದೆ: ಎಂಎಸ್ ಧೋನಿ (ನಾಯಕ), ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಅಂಬಟಿ ರಾಯುಡು, ಶಿವಂ ದುಬೆ, ಮೊಯಿನ್ ಅಲಿ, ರವೀಂದ್ರ ಜಡೇಜಾ, ದೀಪಕ್ ಚಾಹರ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ, ಮತೀಶ ಪತಿರಾಣ, ಮಿಚೆಲ್ ಸ್ಯಾಂಟರ್, ಶೇಕ್ ರಶೀದ್, ಆಕಾಶ್ ಸಿಂಗ್, ಸಿಸಂದಾ ಮಗಲಾ, ಡ್ವೈನ್ ಪ್ರಿಟೋರಿಯಸ್, ಅಜಯ್ ಜಾದವ್ ಮಂಡಲ್, ಪ್ರಶಾಂತ್ ಸೋಲಂಕಿ, ಸಿಮರ್ಜೀತ್ ಸಿಂಗ್, ಆರ್ ಎಸ್ ಹಂಗರ್ಗೇಕರ್, ಭಗತ್ ವರ್ಮಾ, ನಿಶಾಂತ್ ಸಿಂಧು.ಗುಜರಾತ್ ಟೈಟಾನ್ಸ್ ತಂಡ ಹೀಗಿದೆ: ವೃದ್ಧಿಮಾನ್ ಸಾಹ (ವಿಕೆಟ್ ಕೀಪರ್) , ಹಾರ್ದಿಕ್ ಪಾಂಡ್ಯ (ನಾಯಕ) , ಶುಭ್​ಮನ್ ಗಿಲ್ , ದಸುನ್ ಶಾನಕ , ಡೇವಿಡ್ ಮಿಲ್ಲರ್ , ರಾಹುಲ್ ತೆವಾಟಿಯಾ , ರಶೀದ್ ಖಾನ್ , ಮೋಹಿತ್ ಶರ್ಮಾ , ನೂರ್ ಅಹ್ಮದ್ , ಮೊಹಮ್ಮದ್ ಶಮಿ , ಯಶ್ ದಯಾಳ್ , ವಿಜಯ್ ಶಂಕರ್ , ಶಿವಂ ಭರತ್ , ಶಿವಂ ಭರತ್ ಕಿಶೋರ್ , ಅಭಿನವ್ ಮನೋಹರ್ , ಓಡಿಯನ್ ಸ್ಮಿತ್ , ಅಲ್ಜಾರಿ ಜೋಸೆಫ್ , ಮ್ಯಾಥ್ಯೂ ವೇಡ್ , ಜೋಶುವಾ ಲಿಟಲ್ ,ದರ್ಶನ್ ನಲ್ಕಂಡೆ , ಉರ್ವಿಲ್ ಪಟೇಲ್ , ಸಾಯಿ ಸುದರ್ಶನ್ , ಜಯಂತ್ ಯಾದವ್ , ಪ್ರದೀಪ್ ಸಾಂಗ್ವಾನ್.

source https://tv9kannada.com/photo-gallery/cricket-photos/ipl-2023-final-match-postponed-to-reserve-day-kannada-news-zp-589177.html

Tags: Chennai, Cricket, CSK, GT, Gujarat, IPL, IPL 2023, samagrasuddi, T-20, TATA IPL 2023, ಸಮಗ್ರ ಸುದ್ದಿ

Post navigation

IPL 2023 Final CSK vs GT: ಓವರ್​ಗಳ ಕಡಿತ: ಮಳೆ ಮುಂದುವರೆದರೆ ನಾಳೆ ಫೈನಲ್ ಫೈಟ್
CSK Vs GT Final Weather Forecast: ಸೋಮವಾರವೂ ಅಹಮದಾಬಾದ್​ನಲ್ಲಿ ಮಳೆಯಾಗುತ್ತಾ? ಇಲ್ಲಿದೆ ಹವಾಮಾನ ವರದಿ

Leave a Reply Cancel reply

Your email address will not be published. Required fields are marked *

Recent Comments

  1. Kaveri Sonkamble on SBI ನೇಮಕಾತಿ; ಸರ್ಕಲ್​ ಬೇಸ್ಡ್​​ ಆಫೀಸರ್​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನMay 31, 2025

    Kaveri Sonkamble

  2. Vani m on SBI Recruitment 2025: SBI ಬ್ಯಾಂಕಿನಲ್ಲಿ 2964 ಹುದ್ದೆಗಳಿಗೆ ನೇಮಕಾತಿ; ಪದವೀಧರರು ಕೂಡಲೇ ಅರ್ಜಿ ಸಲ್ಲಿಸಿMay 13, 2025

    I am complete b. Com in experience of work

  3. Sushma Basayya Hiremath on ಅಗ್ನಿವೀರ್​ ನೇಮಕಾತಿ: ರಾಜ್ಯದ 14 ಜಿಲ್ಲೆಗಳ ಅಭ್ಯರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.April 9, 2025

    Sushma Basayya Hiremath

  4. samagrasuddi on ಮೈಸೂರು| ಶಾರದ ವಿಲಾಸ ಶಿಕ್ಷಣ ಮಹಾವಿದ್ಯಾಲಯ ಸಭಾಂಗಣದಲ್ಲಿ ವಿಶ್ವ ಜಲ ದಿನ ಕಾರ್ಯಕ್ರಮ.March 24, 2025

    Tq

  5. Darshan K M on ಮೈಸೂರು| ಶಾರದ ವಿಲಾಸ ಶಿಕ್ಷಣ ಮಹಾವಿದ್ಯಾಲಯ ಸಭಾಂಗಣದಲ್ಲಿ ವಿಶ್ವ ಜಲ ದಿನ ಕಾರ್ಯಕ್ರಮ.March 24, 2025

    Meaning full program..✨❤️

CITIES

Cities

🏫 ಕರ್ನಾಟಕದ 4,134 ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮೀಡಿಯಂ ತರಗತಿಗಳಿಗೆ ಅವಕಾಶ

July 4, 2025
samagrasuddi

📅 ದಿನಾಂಕ: 4 ಜುಲೈ 2025✍️ ಸಮಗ್ರ ಸುದ್ದಿ ವಿಶೇಷ ✅ ಮಹತ್ವದ ನಿರ್ಧಾರ: ಕರ್ನಾಟಕ ಸರ್ಕಾರವು 2025–26ನೇ ಶೈಕ್ಷಣಿಕ ವರ್ಷದಿಂದ ರಾಜ್ಯದ 4,134 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮೀಡಿಯಂ ತರಗತಿಗಳನ್ನು ಪ್ರಾರಂಭಿಸಲು ಸಿದ್ಧತೆ ಮಾಡಿಕೊಂಡಿದೆ. ವಿದ್ಯಾರ್ಥಿಗಳಿಗೆ ಇಂದಿನ ಸ್ಪರ್ಧಾತ್ಮಕ…

Cities

ಕರ್ನಾಟಕದ ಪ್ರಮುಖ ಐತಿಹಾಸಿಕ ತಾಣಗಳು

July 4, 2025
samagrasuddi
Cities

ದಾವಣಗೆರೆ ಜಿಲ್ಲೆಯ ಮಾರುತಿ ಹೆಚ್ ಗೆ 2025ರ ಇಂಟರ್ ನ್ಯಾಷನಲ್ ಐಕಾನ್ ಪ್ರಶಸ್ತಿ ಪ್ರದಾನ.

July 4, 2025
samagrasuddi
Cities

“ಉತ್ತರ ಕರ್ನಾಟಕದಲ್ಲಿ ಭಾರೀ ಮಳೆಯ ಮುನ್ಸೂಚನೆ – ರೈತರಿಗೆ ಮುನ್ನೆಚ್ಚರಿಕೆ ಅಗತ್ಯ!”

July 4, 2025
samagrasuddi
Cities Health

ಚಿಂತೆ ಬೇಡ, ಹೃದಯ ಸೇಫ್! — ಹಾಸನ ಜಿಲ್ಲೆಯಲ್ಲಿನ ಹೃದಯಾಘಾತ ಪ್ರಕರಣಗಳಿಗೆ ತಡೆಗಟ್ಟಲು ಸರ್ಕಾರದಿಂದ ಕ್ರಮ

July 2, 2025
samagrasuddi

You may Missed

Health

“Health Tips”: ವಿಟಮಿನ್‌ ಡಿ: ನಮಗೇಕೆ ಬೇಕು?

July 6, 2025
samagrasuddi
Health

ತಿಂಗಳುಗಟ್ಟಲೆ ಕ್ಯಾರೆಟ್ ತಾಜಾವಾಗಿರಲು ಈ ಸಲಹೆಯನ್ನು ಅನುಸರಿಸಿ! “carrot”

July 5, 2025
samagrasuddi
Health

“ಕರ್ನಾಟಕದಲ್ಲಿ COVID-19 ಪ್ರಕರಣಗಳಲ್ಲಿ ಮತ್ತೆ ಹೆಚ್ಚಳ – ಆರೋಗ್ಯ ಇಲಾಖೆ ಎಚ್ಚರಿಕೆ”

July 4, 2025
samagrasuddi
Health

🌿 ತುಳಸಿಯ ಸೌಂದರ್ಯ ಮತ್ತು ಆರೋಗ್ಯ ಮಹತ್ವ

July 4, 2025
samagrasuddi
July 2025
M T W T F S S
 123456
78910111213
14151617181920
21222324252627
28293031  
« Jun    
  • 2025-2026ನೇ ಸಾಲಿನ ರೋಟರಿ ಕ್ಲಬ್‍ನ ನೂತನ ಪದಾಧಿಕಾರಿಗಳ ಪದಗ್ರಹ ಸಮಾರಂಭ.
  • ನಮ್ಮ ಜನಾಂಗದಿಂದಲೇ ಸರ್ವೆಯನ್ನು ಮಾಡಿಸುವುದರ ಮೂಲಕ ಮುಂದಿನ ಮೂರು ತಿಂಗಳಲ್ಲಿ ಸರ್ಕಾರಕ್ಕೆ ವರದಿಯನ್ನು ನೀಡಲಾಗುವುದು: ಬಿ.ಎಸ್.ಸೋಮಶೇಖರ್.
  • ಕಾಂಗ್ರೆಸ್ ಪಕ್ಷದವರಿಂದ ಸುಳ್ಳಿನ ಅಪ ಪ್ರಚಾರ ; ಬಿಜೆಪಿ ವಕ್ತಾರ ನಾಗರಾಜ್ ಬೇದ್ರೇ.
  • ಸ್ಥಗಿತಗೊಂಡ ಕಾಮಗಾರಿ ಪುನರಾರಂಭಿಸಿ: ಪಪ್ಪಿ ಸ್ಟೂಡೆಂಟ್ ಸದಸ್ಯರು ಮನವಿ.
  • 2025-2026ನೇ ಸಾಲಿನ ರೋಟರಿ ಕ್ಲಬ್‍ನ ನೂತನ ಪದಾಧಿಕಾರಿಗಳ ಪದಗ್ರಹ ಸಮಾರಂಭ.
Copyright © 2025 ಸಮಗ್ರ ಸುದ್ದಿ
Contact us
Theme by: Theme Horse
Proudly Powered by: WordPress