MS Dhoni: ಫೈನಲ್ ಪಂದ್ಯದಲ್ಲಿ ಕಣಕ್ಕಿಳಿದು ಹಲವು ದಾಖಲೆ ನಿರ್ಮಿಸಿದ ಎಂಎಸ್ ಧೋನಿ

IPL 2023 Final CSK vs GT: ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ ಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಮಹೇಂದ್ರ ಸಿಂಗ್ ಧೋನಿ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.ಗುಜರಾತ್ ಟೈಟಾನ್ಸ್ ವಿರುದ್ಧದ ಈ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದ್ದಂತೆ ಐಪಿಎಲ್ ಇತಿಹಾಸದಲ್ಲಿ 250 ಪಂದ್ಯಗಳನ್ನಾಡಿದ ಮೊದಲ ಆಟಗಾರ ಎಂಬ ದಾಖಲೆಯನ್ನು ಬರೆದರು.ಹಾಗೆಯೇ ಅತೀ ಹೆಚ್ಚು ಐಪಿಎಲ್ ಫೈನಲ್ ಆಡಿದ ಆಟಗಾರ ಎಂಬ ಹೆಗ್ಗಳಿಕೆಗೂ ಧೋನಿ ಪಾತ್ರರಾದರು. ಧೋನಿ ಸಿಎಸ್​ಕೆ ಪರ ಒಟ್ಟು 10 ಫೈನಲ್​ ಪಂದ್ಯಗಳನ್ನಾಡಿದ್ದಾರೆ. ಹಾಗೆಯೇ ರೈಸಿಂಗ್ ಪುಣೆ ಜೈಂಟ್ಸ್​ ಪರ 1 ಫೈನಲ್ ಪಂದ್ಯವಾಡಿದ್ದರು.ಇನ್ನು ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಪ್ಲೇಆಫ್ಸ್ ಪಂದ್ಯಗಳನ್ನಾಡಿದ ದಾಖಲೆ ಕೂಡ ಧೋನಿ ಹೆಸರಿನಲ್ಲಿದೆ. ಎಂಎಸ್​ಡಿ ಒಟ್ಟು 28 ಪ್ಲೇಆಫ್ಸ್ ಪಂದ್ಯಗಳನ್ನಾಡಿದರೆ, 2ನೇ ಸ್ಥಾನದಲ್ಲಿರುವ ಸುರೇಶ್ ರೈನಾ 24 ಪ್ಲೇಆಫ್ಸ್ ಪಂದ್ಯಗಳನ್ನಾಡಿದ್ದಾರೆ.ಇದಲ್ಲದೆ ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಬಾರಿ ಫೈನಲ್ ಆಡಿದ ಕ್ಯಾಪ್ಟನ್ ಎಂಬ ದಾಖಲೆ ಕೂಡ ಧೋನಿ ಪಾಲಾಗಿದೆ. ಎಂಎಸ್​ಡಿ ಒಟ್ಟು 10 ಬಾರಿ ಸಿಎಸ್​ಕೆ ತಂಡವನ್ನು ಫೈನಲ್ ಪಂದ್ಯದಲ್ಲಿ ಮುನ್ನಡೆಸಿದ್ದಾರೆ.ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್​ಕೆ ತಂಡವು ಮೊದಲು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 214 ರನ್​ ಕಲೆಹಾಕಿದೆ.

source https://tv9kannada.com/photo-gallery/cricket-photos/ipl-2023-final-ms-dhoni-becomes-first-player-to-play-250-matches-in-ipl-kannada-news-zp-589737.html

Leave a Reply

Your email address will not be published. Required fields are marked *