ಗ್ರಾಹಕರಿಗೆ ಬಿಗ್ ಶಾಕ್ ಎದುರಾಗಿದ್ದು, ಕೆಎಂಎಫ್ (KMF) ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 8 ರೂಪಾಯಿ ಹೆಚ್ಚಳ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಪರಿಷ್ಕೃತ ದರವು ನವೆಂಬರ್ 1 ರಿಂದಲೇ ರಾಜ್ಯಾದ್ಯಂತ ಜಾರಿಗೆ ಬರಲಿದೆ ಎಂದು ಗುರುವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ತಿಳಿಸಲಾಗಿದೆ. ಹಾಲು ಒಕ್ಕೂಟಗಳ ಸತತ ಒತ್ತಾಯದ ಮೇರೆಗೆ ಕಳೆದ ತಿಂಗಳು ಕೆಎಂಎಫ್ ಸಲ್ಲಿಸಿದ್ದ ಪ್ರಸ್ತಾವನೆಗೆ ಕೊನೆಗೂ ಸರ್ಕಾರ ಹಸಿರು ನಿಶಾನೆ ತೋರಿದೆ.
ರೈತರ ಜೇಬಿಗೆ 7 ರೂಪಾಯಿ: ಹಾಲಿನ ದರ 8 ರೂ. ಏರಿಕೆಯಾಗಿದ್ದರೂ, ಇದರಲ್ಲಿ ಸಿಂಹಪಾಲು ಅಂದರೆ 7 ರೂಪಾಯಿಗಳನ್ನು ನೇರವಾಗಿ ಹಾಲು ಉತ್ಪಾದಕ ರೈತರಿಗೆ ಸಹಾಯಧನವಾಗಿ ನೀಡಲು ನಿರ್ಧರಿಸಲಾಗಿದೆ. ಪ್ರಸ್ತುತ ಬಮುಲ್ ವ್ಯಾಪ್ತಿಯಲ್ಲಿ ರೈತರಿಗೆ ಪ್ರತಿ ಲೀಟರ್‌ಗೆ 33 ರಿಂದ 35 ರೂಪಾಯಿ ಸಿಗುತ್ತಿದ್ದು, ಹೊಸ ಆದೇಶದನ್ವಯ ಈ ಮೊತ್ತ 40 ರಿಂದ 42 ರೂಪಾಯಿಗೆ ಏರಿಕೆಯಾಗಲಿದೆ. ಉಳಿದ 1 ರೂಪಾಯಿ ಹಣವು ಹಾಲು ಒಕ್ಕೂಟಗಳ ಪಾಲಾಗಲಿದೆ.


ನಂದಿನಿ ಹಾಲಿನ ಪ್ರಸ್ತುತ ಹಾಗೂ ನಿರೀಕ್ಷಿತ ಹೊಸ ದರಗಳ ಪಟ್ಟಿ: ಕೆಎಂಎಫ್ ಶೀಘ್ರದಲ್ಲೇ ಅಧಿಕೃತ ಪರಿಷ್ಕೃತ ದರಪಟ್ಟಿಯನ್ನು ಬಿಡುಗಡೆ ಮಾಡಲಿದ್ದು, ಅಂದಾಜು ಹೊಸ ದರಗಳು ಈ ಕೆಳಗಿನಂತಿವೆ.
| ಹಾಲಿನ ವಿಧ / ಉತ್ಪನ್ನ | ಪ್ರಸ್ತುತ ದರ (1 ಲೀಟರ್) | ಅಂದಾಜು ಹೊಸ ದರ (1 ಲೀಟರ್) |
|---|---|---|
| ಟೋನ್ಡ್ ಹಾಲು (ನೀಲಿ ಪ್ಯಾಕೆಟ್) | ರೂ. 46 | ರೂ. 54 |
| ಶುಭಂ ಹಾಲು (ಕಿತ್ತಳೆ ಪ್ಯಾಕೆಟ್) | ರೂ. 52 | ರೂ. 60 |
| ಸಮೃದ್ಧಿ ಫುಲ್ ಕ್ರೀಮ್ ಹಾಲು | ರೂ. 56 | ರೂ. 64 |
| ಹೋಮೋಜಿನೈಸ್ಡ್ ಹಸುವಿನ ಹಾಲು | ರೂ. 52 | ಪರಿಷ್ಕೃತಗೊಂಡಿಲ್ಲ |
| ಸ್ಪೆಷಲ್ ಹಾಲು | ರೂ. 54 | ಪರಿಷ್ಕೃತಗೊಂಡಿಲ್ಲ |
| ಗುಡ್‌ಲೈಫ್ ಹಾಲು | ರೂ. 70 | ಪರಿಷ್ಕೃತಗೊಂಡಿಲ್ಲ |
| ನಂದಿನಿ ಮೊಸರು | ರೂ. 50 | ಪರಿಷ್ಕೃತಗೊಂಡಿಲ್ಲ |
ಸೂಚನೆ: 500 ml ಟೋನ್ಡ್ ಹಾಲಿಗೆ ಪ್ರಸ್ತುತ 24 ರೂ., ಶುಭಂ ಹಾಲಿಗೆ 26 ರೂ. ಮತ್ತು ಸಮೃದ್ಧಿ ಹಾಲಿಗೆ 28 ರೂ. ದರವಿದೆ. ನಂದಿನಿ ಶುದ್ಧ ತುಪ್ಪ 1 ಲೀಟರ್‌ಗೆ 680-700 ರೂ.ಗಳಷ್ಟಿದೆ.
ಬಸ್ ಟಿಕೆಟ್ ದರ ಏರಿಕೆಗೂ ಮುಹೂರ್ತ ಫಿಕ್ಸ್? ಹಾಲಿನ ದರ ಏರಿಕೆಯ ಬಿಸಿಯ ಬೆನ್ನಲ್ಲೇ ಸಾರಿಗೆ ಬಸ್ ಪ್ರಯಾಣಿಕರಿಗೂ ದರ ಏರಿಕೆಯ ಶಾಕ್ ಎದುರಾಗುವ ಸಾಧ್ಯತೆ ಇದೆ. ಸಾರಿಗೆ ನಿಗಮಗಳು ಎದುರಿಸುತ್ತಿರುವ ಆರ್ಥಿಕ ನಷ್ಟವನ್ನು ಸರಿದೂಗಿಸಲು ಬಸ್ ಟಿಕೆಟ್ ದರ ಹೆಚ್ಚಳದ ಕುರಿತು ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು, ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಅಂತಿಮ ನಿರ್ಧಾರ ಹೊರಬೀಳುವ ನಿರೀಕ್ಷೆಯಿದೆ.
ಅತುಲ್ ತಿವಾರಿ ಸಮಿತಿಯು KSRTC, NWKRTC, ಮತ್ತು KKRTC ನಿಗಮಗಳಿಗೆ ಶೇ.25-26ರಷ್ಟು ಹಾಗೂ ಬಿಎಂಟಿಸಿಗೆ ಬರೋಬ್ಬರಿ ಶೇ.42ರಷ್ಟು ದರ ಏರಿಕೆಗೆ ಶಿಫಾರಸು ಮಾಡಿದೆ. ಆದರೆ ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರವು ಮೂರು ನಿಗಮಗಳ ದರವನ್ನು ಶೇ.13-15ರಷ್ಟು ಮತ್ತು ಬಿಎಂಟಿಸಿ ದರವನ್ನು ಶೇ.15-17ರಷ್ಟು ಮಾತ್ರ ಹೆಚ್ಚಳ ಮಾಡುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.
🟢 WhatsApp Group
Join WhatsApp Group
🔵 Facebook Page
Follow Facebook Page
⚫ Twitter / X
Follow on X (Twitter)
🟣 Threads
Follow on Threads
Follow on Instagram
🔵 Telegram
Join Telegram Channel
🟢 WhatsApp Channel
Follow WhatsApp Channel
📰 ಸಮಗ್ರ ಸುದ್ದಿ
ನಿಖರತೆಗೆ ಮತ್ತೊಂದು ಹೆಸರು 📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು