ಅಕ್ಟೋಬರ್ 30: ಕ್ರಿಕೆಟ್ ಜಗತ್ತಿನ ಬದ್ಧ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮತ್ತೊಮ್ಮೆ ರೋಚಕ ಕದನಕ್ಕೆ ಸಜ್ಜಾಗಿವೆ. ಆದರೆ, ಈ ಬಾರಿ ಇವೆರಡೂ ತಂಡಗಳು ಸೆಣಸಾಡುತ್ತಿರುವುದು ಕೇವಲ 6 ಓವರ್‌ಗಳ ಅತ್ಯಂತ ಚುಟುಕು ಮಾದರಿಯ ಪಂದ್ಯದಲ್ಲಿ ಎಂಬುದು ವಿಶೇಷ. ಹಾಂಗ್‌ಕಾಂಗ್‌ನಲ್ಲಿ ನಡೆಯುತ್ತಿರುವ ‘ಹಾಂಗ್‌ಕಾಂಗ್ ಸಿಕ್ಸಸ್ 2026’ (Hong Kong Sixes) ಟೂರ್ನಿಯ ಮೊದಲ ದಿನವೇ ಈ ಸಾಂಪ್ರದಾಯಿಕ ಎದುರಾಳಿಗಳು ಮುಖಾಮುಖಿಯಾಗುತ್ತಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.


ಏನಿದು ಹಾಂಕಾಂಗ್ ಸಿಕ್ಸಸ್?
ಹಾಂಕಾಂಗ್ ಸಿಕ್ಸಸ್ ಎಂಬುದು ಕೇವಲ 6 ಓವರ್‌ಗಳ ಚುಟುಕು ಕ್ರಿಕೆಟ್ ಟೂರ್ನಿಯಾಗಿದೆ. ಈ ಬಾರಿ ಟೂರ್ನಿಯಲ್ಲಿ ಒಟ್ಟು 12 ತಂಡಗಳು ಕಣಕ್ಕಿಳಿಯುತ್ತಿವೆ. ಇಲ್ಲಿ ಪ್ರತಿ ತಂಡದಲ್ಲಿ ಒಟ್ಟು 7 ಆಟಗಾರರಿದ್ದು, ಪಂದ್ಯದ ವೇಳೆ ಕೇವಲ 6 ಮಂದಿ ಮಾತ್ರ ಮೈದಾನದಲ್ಲಿ ಆಡಲಿದ್ದಾರೆ. ಈ ಆರು ಆಟಗಾರರಲ್ಲಿ ವಿಕೆಟ್ ಕೀಪರ್ ಹೊರತುಪಡಿಸಿ ಉಳಿದ ಐದೂ ಆಟಗಾರರು ತಲಾ ಒಂದು ಓವರ್ ಬೌಲಿಂಗ್ ಮಾಡುವುದು ಕಡ್ಡಾಯವಾಗಿದೆ.
ಪಂದ್ಯದ ಸ್ಥಳ ಮತ್ತು ಸಮಯ
- ನಡೆಯುವ ಸ್ಥಳ: ಹಾಂಗ್‌ಕಾಂಗ್‌ನ ಮೌಂಗ್ ಕಾಕ್‌ನ ಮಿಷನ್ ರೋಡ್ ಮೈದಾನದಲ್ಲಿ ಭಾರತ ಮತ್ತು ಪಾಕಿಸ್ತಾನ್ ನಡುವಣ ಹೈ-ವೋಲ್ಟೇಜ್ ಪಂದ್ಯ ಜರುಗಲಿದೆ.
- ಸಮಯ: ಶುಕ್ರವಾರ (ಅಕ್ಟೋಬರ್ 30) ಭಾರತೀಯ ಕಾಲಮಾನ (IST) ಬೆಳಗ್ಗೆ 11:45 ಕ್ಕೆ ಈ ಪಂದ್ಯ ಆರಂಭವಾಗಲಿದೆ.
- ನೇರ ಪ್ರಸಾರ: ಭಾರತದಲ್ಲಿ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಟಿವಿ ವಾಹಿನಿಗಳಲ್ಲಿ ಈ ಪಂದ್ಯದ ನೇರ ಪ್ರಸಾರ ಇರಲಿದೆ. ಹಾಗೆಯೇ ಫ್ಯಾನ್‌ಕೋಡ್ ಆ್ಯಪ್‌ನಲ್ಲಿ ಡಿಜಿಟಲ್ ಲೈವ್ ಸ್ಟ್ರೀಮಿಂಗ್ ವೀಕ್ಷಿಸಬಹುದಾಗಿದೆ.
ಕಣಕ್ಕಿಳಿಯುವ ತಂಡಗಳ ವಿವರ
ಈ ಟೂರ್ನಿಗಾಗಿ ಎರಡೂ ದೇಶಗಳ ಬಲಿಷ್ಠ ಆಟಗಾರರನ್ನು ಒಳಗೊಂಡ ತಂಡಗಳನ್ನು ಪ್ರಕಟಿಸಲಾಗಿದೆ:
- ಭಾರತ ತಂಡ: ಕೃನಾಲ್ ಪಾಂಡ್ಯ (ನಾಯಕ), ನಿತೀಶ್ ರಾಣಾ, ಶಶಾಂಕ್ ಸಿಂಗ್, ರಾಹುಲ್ ತೇವಾಟಿಯಾ, ರಾಹುಲ್ ತ್ರಿಪಾಠಿ, ಟಿ. ನಟರಾಜನ್, ಕುಲವಂತ್ ಖೇಜ್ರೋಲಿಯಾ.
- ಪಾಕಿಸ್ತಾನ್ ತಂಡ: ಅಬ್ಬಾಸ್ ಅಫ್ರಿದಿ (ನಾಯಕ), ಅಹ್ಮದ್ ದಾನಿಯಾಲ್, ಇರ್ಫಾನ್ ಖಾನ್ ನಿಯಾಜಿ, ಸಾದ್ ಮಸೂದ್, ಖ್ವಾಜಾ ನಫೆ, ಅಬ್ದುಲ್ ಸಮದ್, ಮೊಹಮ್ಮದ್ ಶೆಹಝಾದ್.
ಟೂರ್ನಿಯಲ್ಲಿ ಭಾಗವಹಿಸುವ 12 ತಂಡಗಳ ಗ್ರೂಪ್ ವಿಂಗಡಣೆ
ಈ ಬಾರಿಯ ಟೂರ್ನಿಯಲ್ಲಿ ಒಟ್ಟು ನಾಲ್ಕು ಗ್ರೂಪ್‌ಗಳಾಗಿ 12 ತಂಡಗಳು ಸೆಣಸಾಡುತ್ತಿವೆ:
- ಗ್ರೂಪ್ A: ಆಸ್ಟ್ರೇಲಿಯಾ, ಇಂಗ್ಲೆಂಡ್, ಹಾಂಗ್ ಕಾಂಗ್
- ಗ್ರೂಪ್ B: ಶ್ರೀಲಂಕಾ, ಬಾಂಗ್ಲಾದೇಶ್, ಸ್ಕಾಟ್‌ಲ್ಯಾಂಡ್
- ಗ್ರೂಪ್ C: ಭಾರತ, ಪಾಕಿಸ್ತಾನ್, ಯುಎಇ
- ಗ್ರೂಪ್ D: ಸೌತ್ ಆಫ್ರಿಕಾ, ಅಫ್ಘಾನಿಸ್ತಾನ್, ಒಮಾನ್
ಪಾಕಿಸ್ತಾನ್ ಚಾಂಪಿಯನ್ ಪಟ್ಟದೊಂದಿಗೆ, ಭಾರತಕ್ಕೆ ಇತಿಹಾಸ ಬದಲಿಸುವ ಅವಕಾಶ
ಕಳೆದ ನವೆಂಬರ್‌ನಲ್ಲಿ ನಡೆದ ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ್ ತಂಡವು ಕುವೈತ್ ತಂಡವನ್ನು 43 ರನ್‌ಗಳಿಂದ ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಇದು ಹಾಂಕಾಂಗ್ ಸಿಕ್ಸಸ್ ಇತಿಹಾಸದಲ್ಲಿ ಪಾಕಿಸ್ತಾನ ಗೆದ್ದ ದಾಖಲೆಯ 6ನೇ ಪ್ರಶಸ್ತಿಯಾಗಿದೆ. ಹೀಗಾಗಿ ಹಾಲಿ ಚಾಂಪಿಯನ್ ಆಗಿ ಪಾಕಿಸ್ತಾನ್ ಈ ಬಾರಿಯ ಟೂರ್ನಿಯನ್ನು ಆರಂಭಿಸುತ್ತಿದೆ.
ಮತ್ತೊಂದೆಡೆ, 2005ರಲ್ಲಿ ನಡೆದ ಹಾಂಕಾಂಗ್ ಸಿಕ್ಸಸ್ ಟೂರ್ನಿಯ ಫೈನಲ್‌ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ಭಾರತ ತಂಡವು ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಆದರೆ, ಇದಾದ ಬಳಿಕ ಟೀಮ್ ಇಂಡಿಯಾಗೆ ಒಮ್ಮೆಯೂ ಈ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಕಳೆದ ಎರಡು ದಶಕಗಳಿಂದ ಪ್ರಶಸ್ತಿ ವಂಚಿತವಾಗಿರುವ ಭಾರತಕ್ಕೆ ಈ ಬಾರಿ ಕೃನಾಲ್ ಪಾಂಡ್ಯ ನೇತೃತ್ವದಲ್ಲಿ ಇತಿಹಾಸ ಬದಲಿಸುವ ಸುವರ್ಣ ಅವಕಾಶವಿದೆ. ಬಲಿಷ್ಠ ಪಡೆಯೊಂದಿಗೆ ಕಣಕ್ಕಿಳಿದಿರುವ ಟೀಮ್ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ವಿರುದ್ಧ ಭರ್ಜರಿ ಜಯ ಸಾಧಿಸಿ ತನ್ನ ಅಭಿಯಾನವನ್ನು ಯಶಸ್ವಾಗಿ ಆರಂಭಿಸಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.
🟢 WhatsApp Group
Join WhatsApp Group
🔵 Facebook Page
Follow Facebook Page
⚫ Twitter / X
Follow on X (Twitter)
🟣 Threads
Follow on Threads
Follow on Instagram
🔵 Telegram
Join Telegram Channel
🟢 WhatsApp Channel
Follow WhatsApp Channel
📰 ಸಮಗ್ರ ಸುದ್ದಿ
ನಿಖರತೆಗೆ ಮತ್ತೊಂದು ಹೆಸರು
📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು