Skip to content
  • Sunday, March 29, 2026
  • ABOUT US
  • CONTACT US
  • Privacy Policy

  • Home
  • Chitradurga
  • National
  • States
  • Cities
  • Business
  • Entertainment
  • Health
  • Sports
  • Tech
  • General Konwledge
  • Privacy Policy
  • Horoscope
  • Home
  • Sports
  • Virat Kohli: 7 ಶತಕಗಳು, 14 ಅರ್ಧಶತಕಗಳು: ಆಸ್ಟ್ರೇಲಿಯಾಗೆ ಕಿಂಗ್ ಕೊಹ್ಲಿಯದ್ದೇ ಭಯ..!
Sports

Virat Kohli: 7 ಶತಕಗಳು, 14 ಅರ್ಧಶತಕಗಳು: ಆಸ್ಟ್ರೇಲಿಯಾಗೆ ಕಿಂಗ್ ಕೊಹ್ಲಿಯದ್ದೇ ಭಯ..!

June 5, 2023
samagrasuddi

WTC Final 2023: ಟೀಮ್ ಇಂಡಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ ಪಂದ್ಯಕ್ಕಾಗಿ ಆಸ್ಟ್ರೇಲಿಯಾ ತಂಡವು ಭರ್ಜರಿ ತಯಾರಿಯಲ್ಲಿದ್ದಾರೆ. ಈ ತಯಾರಿ ನಡುವೆ ವಿರಾಟ್ ಕೊಹ್ಲಿಗಾಗಿ ವಿಶೇಷ ರಣತಂತ್ರಗಳನ್ನು ಕೂಡ ಹೆಣೆಯುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಕಿಂಗ್ ಕೊಹ್ಲಿಯ ಕಂಬ್ಯಾಕ್.ಹೌದು, 2019 ರಿಂದ 2021 ರವರೆಗೆ ಮರೆಯಾಗಿದ್ದ ಕಿಂಗ್ ಕೊಹ್ಲಿಯ ಫಾರ್ಮ್​ ಇದೀಗ ಮತ್ತೆ ಬಂದಿದೆ. ಇದುವೇ ಈಗ ಆಸ್ಟ್ರೇಲಿಯಾ ತಂಡವನ್ನು ಚಿಂತೆಗೀಡು ಮಾಡಿದೆ. ಏಕೆಂದರೆ ಕಳೆದ ಒಂದು ವರ್ಷದಲ್ಲಿ ವಿರಾಟ್ ಕೊಹ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಇದಕ್ಕೆ ಸಾಕ್ಷಿಯೇ ಈ ಅಂಕಿ ಅಂಶಗಳು.ಅಂದರೆ ವಿರಾಟ್ ಕೊಹ್ಲಿ 2022ರ ಏಷ್ಯಾಕಪ್​ ಮೂಲಕ ಫಾರ್ಮ್​ ಕಂಡುಕೊಂಡಿದ್ದರು. ಅದರಲ್ಲೂ ಅಫ್ಘಾನಿಸ್ತಾನ್ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿ ಶತಕದ ಬರವನ್ನು ನೀಗಿಸಿದ್ದರು. ಇದಾದ ಬಳಿಕ ಕಿಂಗ್ ಕೊಹ್ಲಿ ಹಿಂತಿರುಗಿ ನೋಡಿಲ್ಲ ಎನ್ನಬಹುದು.ಏಕೆಂದರೆ ಏಷ್ಯಾಕಪ್​ನಲ್ಲಿ ಫಾರ್ಮ್​ ಕಂಡುಕೊಂಡ ಬಳಿಕ ವಿರಾಟ್ ಕೊಹ್ಲಿ ಒಟ್ಟು 48 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 52 ಇನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿರುವ ಕೊಹ್ಲಿ ಕಲೆಹಾಕಿರುವುದು ಬರೋಬ್ಬರಿ 2235 ರನ್​ಗಳು. ಅಂದರೆ ಕೊಹ್ಲಿ ಪ್ರತಿ ಪಂದ್ಯಗಳಲ್ಲಿ 53.21 ಸರಾಸರಿಯಲ್ಲಿ ರನ್ ಪೇರಿಸಿದ್ದಾರೆ.ಇದರ ನಡುವೆ 7 ಭರ್ಜರಿ ಶತಕಗಳನ್ನು ಬಾರಿಸಿದರೆ, 14 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಅಂದರೆ 2019 ರಿಂದ 2022 ರವರೆಗೆ 3 ವರ್ಷ ಶತಕದ ಬರ ಎದುರಿಸಿದ್ದ ಕೊಹ್ಲಿ ಒಂದೇ ವರ್ಷದೊಳಗೆ ಒಟ್ಟು 7 ಸೆಂಚುರಿಗಳನ್ನು ಸಿಡಿಸಿ ಅಬ್ಬರಿಸಿರುವುದು ವಿಶೇಷ.ಅದರಲ್ಲೂ ಈ ಒಂದು ವರ್ಷದೊಳಗೆ ವಿರಾಟ್ ಕೊಹ್ಲಿ ಅತೀ ಹೆಚ್ಚು ಸ್ಕೋರ್​ಗಳಿಸಿದ್ದು ಆಸ್ಟ್ರೇಲಿಯಾ ವಿರುದ್ಧ ಎಂಬುದು ವಿಶೇಷ. ಈ ವರ್ಷ ಮಾರ್ಚ್​ನಲ್ಲಿ ಅಹಮದಾಬಾದ್​ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್​ನಲ್ಲಿ ಕಿಂಗ್ ಕೊಹ್ಲಿ ಶತಕ ಬಾರಿಸಿ ವಿರಾಟ ದರ್ಶನ ತೋರಿಸಿದ್ದರು.ಅಂದು ಆಸ್ಟ್ರೇಲಿಯಾ ಬೌಲರ್​ಗಳನ್ನು ಚೆಂಡಾಡಿದ್ದ ಕೊಹ್ಲಿ ಮೊದಲ ಇನಿಂಗ್ಸ್​ನಲ್ಲಿ 186 ರನ್ ಬಾರಿಸಿ ಅಬ್ಬರಿಸಿದ್ದರು. ಈ ಅಬ್ಬರವನ್ನು ನೋಡಿ ಆಸೀಸ್ ಬೌಲರ್​ಗಳೇ ಇದೀಗ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ಗಾಗಿ ಸಜ್ಜಾಗುತ್ತಿದ್ದಾರೆ. ಅಂದರೆ ಕಿಂಗ್ ಕೊಹ್ಲಿಯ ಅದ್ಭುತ ಫಾರ್ಮ್​ ಆಸ್ಟ್ರೇಲಿಯಾ ಪಾಲಿಗೆ ಕಂಟಕವಾಗುವುದರಲ್ಲಿ ಅನುಮಾನವೇ ಇಲ್ಲ. ಅದರಲ್ಲೂ ನಿರ್ಣಾಯಕ ಪಂದ್ಯದಲ್ಲಿ ಅತ್ಯದ್ಭುತ ಇನಿಂಗ್ಸ್ ಆಡುವ ವಿರಾಟ್ ಕೊಹ್ಲಿಯನ್ನು ಕಟ್ಟಿಹಾಕಲು ಆಸ್ಟ್ರೇಲಿಯಾ ಬೌಲರ್​ಗಳು ವಿಶೇಷ ರಣತಂತ್ರಗಳನ್ನು ರೂಪಿಸುತ್ತಿದ್ದಾರೆ. ಈ ತಂತ್ರಗಳಿಗೆ ಕಿಂಗ್ ಕೊಹ್ಲಿಯ ಪ್ರತಿತಂತ್ರ ಹೇಗಿರಲಿದೆ ಎಂಬುದು ಜೂನ್ 7 ರಿಂದ ಗೊತ್ತಾಗಲಿದೆ.

source https://tv9kannada.com/photo-gallery/cricket-photos/virat-kohli-since-asia-cup-2022-stats-kannada-news-zp-594870.html

Tags: Cricket, samagrasuddi, ಸಮಗ್ರ ಸುದ್ದಿ

Post navigation

ನಮ್ಮ ಹೋರಾಟಕ್ಕೆ ಉದ್ಯೋಗ ಅಡ್ಡಿಯಾಗುವುದಾದರೆ ಅದನ್ನು ಬಿಡುವುದಕ್ಕೂ ನಾವು ಹಿಂಜರಿಯುವುದಿಲ್ಲ: ಕುಸ್ತಿಪಟುಗಳು
Fact Check: ಕುಸ್ತಿಪಟುಗಳ ಬೆಂಬಲಕ್ಕೆ ನಿಂತ ಎಂಎಸ್ ಧೋನಿ; ವೈರಲ್ ಪೋಸ್ಟ್ Fake

Leave a Reply Cancel reply

Your email address will not be published. Required fields are marked *

CITIES

Cities

ಏ. 1ರಂದು ಎಸ್ಎಸ್ಎಲ್ಸಿ ಪರೀಕ್ಷೆ ಹಿನ್ನೆಲೆ: ಸಿದ್ದಗಂಗಾ ಮಠದ ಡಾ. ಶಿವಕುಮಾರ ಶ್ರೀಗಳ 119ನೇ ಜಯಂತ್ಯೋತ್ಸವ ಕಾರ್ಯಕ್ರಮ ಕಡಿತ!

March 29, 2026
samagrasuddi

ತುಮಕೂರು: ತ್ರಿವಿಧ ದಾಸೋಹಿ, ‘ನಡೆದಾಡುವ ದೇವರು’ ಎಂದೇ ಭಕ್ತರ ಮನದಲ್ಲಿ ನೆಲೆಸಿರುವ ಪರಮಪೂಜ್ಯ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿ ಅವರ 119ನೇ ಜನ್ಮದಿನೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಏಪ್ರಿಲ್ 1ರಂದು ತುಮಕೂರಿನ ಸಿದ್ದಗಂಗಾ ಮಠದಲ್ಲಿ ಅತ್ಯಂತ ಭಕ್ತಿ-ಭಾವದಿಂದ ಆಚರಿಸಲು ಸಕಲ ಸಿದ್ಧತೆಗಳನ್ನು…

Cities

ಕರ್ನಾಟಕ ಹವಾಮಾನ ಎಚ್ಚರಿಕೆ Weather Alert Karnataka Today.

March 22, 2026
samagrasuddi
Cities

ತುರುವೇಕೆರೆಯ ವಿದ್ಯಾರಣ್ಯ”D Ed College”ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಭರ್ಜರಿ ಯಶಸ್ಸು.

March 18, 2026
samagrasuddi
Cities

Karnataka Weather Today: ರಾಜ್ಯದಲ್ಲಿಂದು ಮಳೆಯ ಮುನ್ಸೂಚನೆ, ಹೇಗಿರಲಿದೆ ಹವಾಮಾನ?

March 18, 2026
samagrasuddi
Cities

LPG Helpline Karnataka: ಗ್ಯಾಸ್ ಸಿಲಿಂಡರ್ ಸಮಸ್ಯೆಗೆ ಆಹಾರ ಇಲಾಖೆಯ ಟೋಲ್ ಫ್ರೀ ನಂಬರ್.

March 16, 2026
samagrasuddi

You may Missed

Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 12 | ದಿನ 84

March 29, 2026
samagrasuddi
Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 11 | ದಿನ 83

March 28, 2026
samagrasuddi
Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 10 | ದಿನ 82

March 27, 2026
samagrasuddi
Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 9 | ದಿನ 81

March 26, 2026
samagrasuddi
  • Financial tasks: ಮಾರ್ಚ್ 31 ಡೆಡ್‌ಲೈನ್; ಹಣಕಾಸು ವರ್ಷಾಂತ್ಯದೊಳಗೆ ನೀವು ಪೂರ್ಣಗೊಳಿಸಲೇಬೇಕಾದ 7 ಪ್ರಮುಖ ಕೆಲಸಗಳಿವು!
  • ಏ. 1ರಂದು ಎಸ್ಎಸ್ಎಲ್ಸಿ ಪರೀಕ್ಷೆ ಹಿನ್ನೆಲೆ: ಸಿದ್ದಗಂಗಾ ಮಠದ ಡಾ. ಶಿವಕುಮಾರ ಶ್ರೀಗಳ 119ನೇ ಜಯಂತ್ಯೋತ್ಸವ ಕಾರ್ಯಕ್ರಮ ಕಡಿತ!
  • IDBI Recruitment : ಐಡಿಬಿಐ ಬ್ಯಾಂಕ್‌ನಲ್ಲಿ ಐಟಿ, ಭದ್ರತೆ, ಆಡಿಟ್ ವಿಭಾಗಗಳಲ್ಲಿ ಉದ್ಯೋಗ: ಏಪ್ರಿಲ್ 8 ರೊಳಗೆ ಅರ್ಜಿ ಸಲ್ಲಿಸಿ.
  • IPL 19: ಚಿನ್ನಸ್ವಾಮಿ ಅಂಗಳದಲ್ಲಿ ರಾಯಲ್ ಚಾಲೆಂಜರ್ಸ್ ಅಬ್ಬರ, ಉದ್ಘಾಟನಾ ಪಂದ್ಯದಲ್ಲಿ ಸನ್‌ರೈಸರ್ಸ್‌ಗೆ ಸೋಲು.
  • Excessive sweat:ನೀವು ಅತಿಯಾಗಿ ಬೆವರುತ್ತೀರಾ? ಕಾರಣಗಳು, ಲಕ್ಷಣಗಳು ಮತ್ತು ಚಿಕಿತ್ಸೆಗಳ ಸಮಗ್ರ ಮಾಹಿತಿ.
Copyright © 2026
CONTACT US
Theme by: Theme Horse
Proudly Powered by: WordPress