Bone Health: ದೈನಂದಿನ ಜೀವನದಲ್ಲಿ ನಾವು ಮಾಡುವ ಕೆಲವು ಕೆಲಸಗಳು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಇವುಗಳಲ್ಲಿ ಕೆಲವು ಕೆಟ್ಟ ಅಭ್ಯಾಸಗಳು ನಮ್ಮ ಮೂಳೆಗಳನ್ನು ದುರ್ಬಲಗೊಳಿಸುತ್ತವೆ. ಅಂತಹ ಅಭ್ಯಾಸಗಳೆಂದರೆ…

ಬದಲಾದ ಜೀವನಶೈಲಿ ಹಾಗೂ ತಪ್ಪಾದ ಆಹಾರ ಪದ್ದತಿಯಿಂದಾಗಿ ಮೂಳೆಗಳ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಮೂಳೆಗಳ ದುರ್ಬಲತೆಯನ್ನು ತಪ್ಪಿಸಬೇಕೆಂದರೆ ಇಂದಿನಿಂದಲೇ ನಿಮ್ಮ ಈ ಕೆಲವು ಕೆಟ್ಟ ಅಭ್ಯಾಸಗಳನ್ನು ಬಿಡಿ. ಅವುಗಳೆಂದರೆ…

ಸೋಮಾರಿತನ: ನೀವು ಸೋಮಾರಿಯಾಗಿದ್ದರೆ, ಕಡಿಮೆ ದೈಹಿಕ ಚಟುವಟಿಕೆ ಹೊಂದಿದ್ದರೆ ಮೂಳೆಗಳು ದುರ್ಬಲಗೊಳ್ಳಲು ಇದು ಪ್ರಮುಖ ಕಾರ್ಣವಾಗಿದೆ.

ಅತಿಯಾದ ಉಪ್ಪು ಬಳಕೆ: ನೀವು ನಿಮ್ಮ ಆಹಾರದಲ್ಲಿ ಅತಿಯಾಗಿ ಉಪ್ಪನ್ನು ಬಳಸುತ್ತಿದ್ದರೆ ಇದೂ ಕೂಡ ನಿಮ್ಮ ಮೂಳೆಗಳನ್ನು ದುರ್ಬಲಗೊಳಿಸುತ್ತದೆ.

ನೀವು ನಿತ್ಯ ಸಾಕಷ್ಟು ನಿದ್ರೆ ಮಾಡದಿದ್ದರೆ ಇದರಿಂದಲೂ ಕೂಡ ಮೂಳೆಗಳು ದುರ್ಬಲಗೊಳ್ಳುತ್ತವೆ

ಧೂಮಪಾನ: ಧೂಮಪಾನದಿಂದ ಶ್ವಾಸಕೋಶದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಎಲ್ಲರಿಗೂ ತಿಳಿದೇ ಇದೆ. ಆದರೆ, ಇದು ಮೂಳೆಗಳನ್ನು ದುರ್ಬಲಗೊಳಿಸುತ್ತದೆ.

ವಿಟಮಿನ್ ಡಿ ಕೊರತೆ: ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳದೆ ಇರುವುದರಿಂದ ದೇಹದಲ್ಲಿ ವಿಟಮಿನ್ ಡಿ ಕೊರತೆ ಉಂಟಾಗಿ ಅದು ಮೂಳೆಗಳನ್ನು ದುರ್ಬಲಗೊಳಿಸುತ್ತದೆ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.