5G in India: ಕೇವಲ 10 ತಿಂಗಳಲ್ಲಿ 3 ಲಕ್ಷಕ್ಕೂ ಅಧಿಕ ಕಡೆ 5ಜಿ ನೆಟ್​ವರ್ಕ್: ವಿಶ್ವದ ಎರಡನೇ ಅತಿದೊಡ್ಡ 5G ಪ್ರದೇಶವಾದ ಭಾರತ

ಇಂಟರ್ನೆಟ್ ವೇಗ ಹೆಚ್ಚಿಸಲು ಮೋದಿ ಸರ್ಕಾರ 5Gಗೆ ವಿಶೇಷ ಒತ್ತು ನೀಡಿದೆ. ಈಗಾಗಲೇ ದೇಶದ 714 ಜಿಲ್ಲೆಗಳಲ್ಲಿ 3 ಲಕ್ಷಕ್ಕೂ ಅಧಿಕ ಕಡೆ 5G ಲಭ್ಯವಾಗುತ್ತಿದೆ. ಈ ಮೂಲಕ ಭಾರತವು ವಿಶ್ವದ ಎರಡನೇ ಅತಿದೊಡ್ಡ 5G ನೆಟ್​ವರ್ಕ್ ಹೊಂದಿದ ಪ್ರದೇಶವಾಗಿದೆ.

ಈಗಿನ ಕಾಲಕ್ಕೆ ತಕ್ಕಂತೆ ಭಾರತವನ್ನು ‘ಡಿಜಿಟಲ್ ಇಂಡಿಯಾ’ (Digital India) ಆಗಿ ಅಭಿವೃದ್ಧಿಪಡಿಸುವುದಾಗಿ ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ (Narendra Modi) ಘೋಷಿಸಿದ್ದರು. ಅದರಂತೆ ಭಾರತ ಇಂದು ಸಂಪೂರ್ಣವಾಗಿ ‘ಡಿಜಿಟಲ್ ಇಂಡಿಯಾ’ ಆಗುತ್ತಿದೆ. ಡಿಜಿಟಲೀಕರಣದಿಂದ ಹಿಡಿದು ಹಣಕಾಸು ವಹಿವಾಟಿನವರೆಗೆ ವಿವಿಧ ಕ್ಷೇತ್ರಗಳಲ್ಲಿ ಆನ್​ಲೈನ್ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇಂಟರ್ನೆಟ್ ವೇಗ ಹೆಚ್ಚಿಸಲು ಮೋದಿ ಸರ್ಕಾರ 5Gಗೆ ವಿಶೇಷ ಒತ್ತು ನೀಡಿದೆ. ಈಗಾಗಲೇ ದೇಶದ 714 ಜಿಲ್ಲೆಗಳಲ್ಲಿ 3 ಲಕ್ಷಕ್ಕೂ ಅಧಿಕ ಕಡೆ 5G ನೆಟ್​ವರ್ಕ್ (5G Network) ಲಭ್ಯವಾಗುತ್ತಿದೆ. ಈ ಮೂಲಕ ಭಾರತವು ವಿಶ್ವದ ಎರಡನೇ ಅತಿದೊಡ್ಡ 5G ನೆಟ್​ವರ್ಕ್ ಹೊಂದಿದ ಪ್ರದೇಶವಾಗಿದೆ.

ಈ ಬಗ್ಗೆ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ”5 ತಿಂಗಳಲ್ಲಿ 1 ಲಕ್ಷ 5 ಜಿ ನೆಟ್​ವರ್ಕ್​ ಅನ್ನು ರಚಿಸಲಾಗಿದೆ, 8 ತಿಂಗಳಲ್ಲಿ 2 ಲಕ್ಷ ನೆಟ್​ವರ್ಕ್​ ಮತ್ತು 10 ತಿಂಗಳಲ್ಲಿ 3 ಲಕ್ಷ ನೆಟ್​ವರ್ಕ್​ರಚಿಸಲಾಗಿದೆ ಎಂದು ಹೇಳಿದ್ದಾರೆ. ಪ್ರಸ್ತುತ 714 ಜಿಲ್ಲೆಗಳಲ್ಲಿ 3 ಲಕ್ಷಕ್ಕೂ ಹೆಚ್ಚು 5G ಸೈಟ್‌ಗಳನ್ನು ಸ್ಥಾಪಿಸಲಾಗಿದೆ,” ಎಂದು ಅಶ್ವಿನಿ ವೈಷ್ಣವ್ ಉಲ್ಲೇಖಿಸಿದ್ದಾರೆ.

Source : https://tv9kannada.com/technology/india-is-now-worlds-second-largest-5g-ecosystem-over-3-lakh-5g-in-714-districts-says-union-minister-ashwini-vaishnaw-vb-635257.html

Leave a Reply

Your email address will not be published. Required fields are marked *