ಮಕ್ಕಳನ್ನೂ ಬಲಿ ಪಡಿಯುತ್ತಿದೆ ಹೃದಯಾಘಾತ! ಹೃದ್ರೋಗದ ಈ ಲಕ್ಷಣ ನಿರ್ಲಕ್ಷಿಸಬೇಡಿ..!

Heart Diseases : ಹೃದಯವು ನಮ್ಮ ದೇಹದ ಪ್ರಮುಖ ಅಂಗವಾಗಿದೆ. ಹೃದಯವು ಆರೋಗ್ಯವಾಗಿದ್ದರೆ, ನಾವು ದೀರ್ಘಕಾಲ ಆರೋಗ್ಯವಾಗಿರುತ್ತೇವೆ. ಆದರೆ ಹೃದಯದಲ್ಲಿ ಸ್ವಲ್ಪ ತೊಂದರೆಯಾದರೂ ಅದು ನಮ್ಮ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.   

Heart Attack Symtoms : ಹೃದಯ ಸಂಬಂಧಿ ಕಾಯಿಲೆಗಳು ವಿಶ್ವಾದ್ಯಂತ ಸಾವಿಗೆ ಕಾರಣವಾಗುತ್ತಿವೆ. ವಯಸ್ಸಾದಂತೆ ಹೃದ್ರೋಗದ ಅಪಾಯವೂ ಹೆಚ್ಚಾಗುತ್ತದೆ. ರಕ್ತನಾಳಗಳಲ್ಲಿ ಸಮಸ್ಯೆ ಉಂಟಾದಾಗ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಪ್ರಾರಂಭವಾಗುತ್ತವೆ. ಆದರೆ ಹೃದ್ರೋಗದಲ್ಲಿ ಸ್ಪಷ್ಟ ಲಕ್ಷಣಗಳಿಲ್ಲದ ಕಾರಣ ಜನರಿಗೆ ಅದರ ಬಗ್ಗೆ ತಿಳಿಯದೇ ಇರುವುದು ಹೆಚ್ಚಾಗಿ ಕಂಡು ಬಂದಿದೆ. 

ಎದೆಯುರಿ
ಎದೆಯುರಿ ಹೃದ್ರೋಗದ ಸಾಮಾನ್ಯ ಲಕ್ಷಣವಾಗಿದೆ. ನಿಮ್ಮ ಹೃದಯಕ್ಕೆ ರಕ್ತವನ್ನು ಪೂರೈಸುವ ಅಪಧಮನಿಯಲ್ಲಿ ಅಡಚಣೆಯಿದ್ದರೆ ನೀವು ಎದೆಯಲ್ಲಿ ನೋವು ಅಥವಾ ಬಿಗಿತವನ್ನು ಅನುಭವಿಸುತ್ತೀರಿ. ಪ್ರತಿಯೊಬ್ಬ ವ್ಯಕ್ತಿಯು ಅದನ್ನು ವಿಭಿನ್ನ ರೀತಿಯಲ್ಲಿ ಅನುಭವಿಸುತ್ತಾನೆ. ಉದಾಹರಣೆಗೆ, ಎದೆಯ ಮೇಲೆ ಭಾರವಾದ ವಸ್ತುವನ್ನು ಇಟ್ಟಂತೆ, ಮತ್ತೊಬ್ಬರಿಗೆ ಎದೆಯಲ್ಲಿ ಸುಡುವ ಸಂವೇದನೆ. 

ಉಸಿರಾಟದ ತೊಂದರೆ 
ಉಸಿರಾಟದ ತೊಂದರೆ ಇದು ಹೃದಯ ವೈಫಲ್ಯದ ಲಕ್ಷಣವಾಗಿರಬಹುದು ಅಥವಾ ಕೆಲವೊಮ್ಮೆ ಅಪಧಮನಿಗಳಲ್ಲಿ ಅಡಚಣೆಯಾಗಬಹುದು. ಇನ್ನು ಆರಂಭದಲ್ಲಿ, ರೋಗಿಗೆ ಆಯಾಸ ಮತ್ತು ಉಸಿರಾಟದ ತೊಂದರೆ ಶುರುವಾಗುತ್ತದೆ. ಮುಂದಿನ ಹಂತಗಳಲ್ಲಿ, ರೋಗಿ ವಿಶ್ರಾಂತಿಯಲ್ಲಿರುವಾಗಲೂ ಇಂತಹ ರೋಗಲಕ್ಷಣಗಳನ್ನು ಕಾಣಿಸಿಕೊಳ್ಳುತ್ತವೆ. ಇದು ಹೃದಯ ಸ್ನಾಯುವಿನ ದೌರ್ಬಲ್ಯದಿಂದಾಗಿ ಉಂಟಾಗುತ್ತದೆ ಮತ್ತು ಇದನ್ನು ಕಾರ್ಡಿಯೊಮಿಯೊಪತಿ ಎಂದು ಕರೆಯಲಾಗುತ್ತದೆ.

ಅಧಿಕ ರಕ್ತದೊತ್ತಡ
ಇತ್ತೀಚಿನ ದಿನಗಳಲ್ಲಿ ಅಧಿಕ ರಕ್ತದೊತ್ತಡದ ಸಮಸ್ಯೆ ಜನರಲ್ಲಿ ಸಾಮಾನ್ಯವಾಗಿದೆ. ಈ ರೋಗದ ಅಪಾಯವು 50 ವರ್ಷಗಳ ನಂತರ ಹೆಚ್ಚಾಗುತ್ತದೆ. ಡಿಜಿಟಲ್ ರಕ್ತದೊತ್ತಡ ಮಾಪನ ಯಂತ್ರದ ಸಹಾಯದಿಂದ ನೀವು ಪ್ರತಿ ವಾರ ಅಥವಾ 15 ದಿನಗಳಲ್ಲಿ ನಿಮ್ಮ ಪೋಷಕರ ರಕ್ತದೊತ್ತಡವನ್ನು ಪರಿಶೀಲಿಸಬಹುದು.

ನಿಮ್ಮ ಪೋಷಕರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ, ನೀವು ನಿಯಮಿತವಾಗಿ ಪರೀಕ್ಷಿಸಿಕೊಳ್ಳುತ್ತಿರಬೇಕು. ಅನಿಯಂತ್ರಿತ ಅಧಿಕ ರಕ್ತದೊತ್ತಡ ನಿಮ್ಮ ಹೃದಯವನ್ನು ಬಲಿಪಡೆಯಬಹುದು. ಹೃದಯಾಘಾತದ ಅಪಾಯವನ್ನು ಹೆಚ್ಚಿಸಲೂಬಹುದು. 

ತಲೆತಿರುಗುವಿಕೆ
ನಿರ್ಜಲೀಕರಣವು ತಲೆತಿರುಗುವಿಕೆಗೆ ಕಾರಣವಾಗುತ್ತದೆ. ಆದರೆ ಇದು ಅನಾರೋಗ್ಯಕರ ಹೃದಯದ ಲಕ್ಷಣವೂ ಆಗಿರಬಹುದು. ನಿಮಗೆ ಇದ್ದಕ್ಕಿದ್ದಂತೆ ತಲೆತಿರುಗುವಿಕೆ, ಉಸಿರಾಟದ ತೊಂದರೆ ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಏಕೆಂದರೆ ನಿಮಗೆ ಕಡಿಮೆ ರಕ್ತದೊತ್ತಡ ಸಮಸ್ಯೆ ಇರಬಹುದು. 

ಬೆವರುವುದು
ನೀವು ಯಾವುದೇ ಕೆಲಸ ಮಾಡದೆ ಬೆವರುತ್ತಿದ್ದರೆ ನಿಮ್ಮ ಹೃದಯವು ದುರ್ಬಲಗೊಳ್ಳಲು ಪ್ರಾರಂಭಿಸಿದೆ ಎಂದು ಅರ್ಥ. ಇದನ್ನೂ ಎಂದಿಗೂ ನಿರ್ಲಕ್ಷಿಸಬೇಡಿ.

Source : https://zeenews.india.com/kannada/lifestyle/children-are-also-victims-of-heart-attacks-do-not-ignore-this-symptom-of-heart-disease-155067

Leave a Reply

Your email address will not be published. Required fields are marked *