ದೇಹದಲ್ಲಿ ಈ ವಿಟಮಿನ್ ಕಡಿಮೆಯಾದರೆ ದೃಷ್ಟಿ ಕೂಡಾ ಮಂದವಾಗುವುದು !

Vitamin C Deficiency:ಸರಿಯಾಗಿ ಆಹಾರ ಸೇವಿಸದೆ ಇದ್ದರೆ, ಯಾವುದೇ ರೀತಿಯ ಮಾನಸಿಕ ಅಸ್ವಸ್ಥತೆಯನ್ನು ಹೊಂದಿದ್ದರೆ, ನಿಮ್ಮ ದೇಹದಲ್ಲಿ ವಿಟಮಿನ್ ಸಿ ಕೊರತೆ ಇದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.

Vitamin C Deficiency : ನಮ್ಮ ದೇಹಕ್ಕೆ ಸಾಕಷ್ಟು ವಿಟಮಿನ್‌ಗಳು ಬೇಕಾಗುತ್ತವೆ. ಅವುಗಳಲ್ಲಿ  ಮುಖ್ಯವಾದುದು ವಿಟಮಿನ್ ಸಿ.   ಇದನ್ನು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪೋಷಕಾಂಶವೆಂದು ಪರಿಗಣಿಸಲಾಗುತ್ತದೆ. ಇದೊಂದು ಆಂಟಿ ಆಕ್ಸಿಡೆಂಟ್ ಆಗಿದ್ದು,  ಕನೆಕ್ಟಿವ್ ಟಿಶ್ಯೂಸ ಅನ್ನು ಆರೋಗ್ಯವಾಗಿಡುತ್ತದೆ. ಕೀಲುಗಳನ್ನು ಆರೋಗ್ಯವನ್ನು ಕಾಪಾಡಲು ಕೂಡಾ ಇದು ಸಹಾಯ ಮಾಡುತ್ತದೆ. ಇದಲ್ಲದೆ, ನಮ್ಮ ಕಣ್ಣುಗಳನ್ನು ಆರೋಗ್ಯವಾಗಿಡಲು ವಿಟಮಿನ್ ಸಿ ಅಗತ್ಯ. ದೇಹದಲ್ಲಿ ಈ ಪೋಷಕಾಂಶದ ಕೊರತೆಯಿದ್ದರೆ, ಅನೇಕ ನಷ್ಟಗಳನ್ನು ಎದುರಿಸಬೇಕಾಗುತ್ತದೆ. 

ವಿಟಮಿನ್ ಸಿ ಕೊರತೆ  ಅಂದರೆ ಏನು ? : 
ನೀವು ಧೂಮಪಾನ ಮಾಡುತ್ತಿದ್ದರೆ, ಮದ್ಯಪಾನ ಮಾಡುತ್ತಿದ್ದರೆ, ಸರಿಯಾಗಿ ಆಹಾರ ಸೇವಿಸದೆ ಇದ್ದರೆ, ಯಾವುದೇ ರೀತಿಯ ಮಾನಸಿಕ ಅಸ್ವಸ್ಥತೆಯನ್ನು ಹೊಂದಿದ್ದರೆ, ನಿಮ್ಮ ದೇಹದಲ್ಲಿ ವಿಟಮಿನ್ ಸಿ ಕೊರತೆ ಇದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.  ಈ ಸಂದರ್ಭದಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರ ವನ್ನು ಸೇವಿಸಬೇಕು. 

ದೇಹಕ್ಕೆ ಎಷ್ಟು ವಿಟಮಿನ್ ಸಿ ಅಗತ್ಯವಿದೆ : 
ಸಾಮಾನ್ಯವಾಗಿ, ಪುರುಷರಿಗೆ 90 ಮಿಗ್ರಾಂ ಮತ್ತು ಮಹಿಳೆಯರಿಗೆ ದಿನಕ್ಕೆ 75 ಮಿಗ್ರಾಂ ವಿಟಮಿನ್ ಸಿ ಅಗತ್ಯವಿರುತ್ತದೆ. ಅದನ್ನು ಪೂರೈಸದಿದ್ದರೆ, ದೇಹದಲ್ಲಿ ಅನೇಕ ರೀತಿಯ ಸಮಸ್ಯೆಗಳು ಉಂಟಾಗಬಹುದು.

ವಿಟಮಿನ್ ಸಿ ಕೊರತೆಯ ಲಕ್ಷಣಗಳು :
– ಒಣ ಮತ್ತು ಒಡೆದ ಕೂದಲುಗಳು
– ಗಾಯಗಳು ವಾಸಿಯಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ
– ರಕ್ತಹೀನತೆ (ರಕ್ತದ ಕೊರತೆ)
– ಒಸಡುಗಳಲ್ಲಿ  ರಕ್ತಸ್ರಾವ
– ಒಣ  ಚರ್ಮ
– ಕೀಲು ನೋವು 
-ಹಲ್ಲುಗಳು ದುರ್ಬಲಗೊಳ್ಳುವುದು
– ಚಯಾಪಚಯ ಕ್ರಿಯೆ ನಿಧಾನವಾಗುವುದು 
– ಸೋಂಕಿನ ವಿರುದ್ಧ ಹೋರಾಡುವ ಸಾಮರ್ಥ್ಯ ಕಡಿಮೆಯಾಗುವುದು  
– ಸಣ್ಣ ಗೀರುಗಳಿಂದಲೂ ರಕ್ತಸ್ರಾವವಾಗುವುದು .

ವಿಟಮಿನ್ ಸಿ ಕಣ್ಣುಗಳನ್ನು ಆರೋಗ್ಯವಾಗಿರಿಸುತ್ತದೆ : 
ವಿಟಮಿನ್ ಸಿ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಇದು ಕಣ್ಣುಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ವಿಟಮಿನ್ ಸಿ ಅನ್ನು ಪ್ರತಿದಿನ ಸೇವಿಸಿದರೆ, ಕಣ್ಣಿನ ಪೊರೆಗಳಂತಹ ಕಾಯಿಲೆಗಳು ಬರುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿ ವಿಟಮಿನ್ ಸಿ ಕೊರತೆಯಿದ್ದರೆ, ಕಣ್ಣುಗಳಿಗೆ ಅಪಾಯವು ಹೆಚ್ಚಾಗುತ್ತದೆ.

ವಿಟಮಿನ್ ಸಿ ಕೊರತೆಯಿಂದ ಉಂಟಾಗುವ ರೋಗಗಳು : 
-ಅನೇಕ ಜನರು ಸ್ಕರ್ವಿ ಕಾಯಿಲೆಗೆ ಒಳಗಾಗುತ್ತಾರೆ. 
-ದೌರ್ಬಲ್ಯ ಮತ್ತು ಬಳಲಿಕೆ  ಕಾಡುತ್ತದೆ 
– ಹಲ್ಲುಗಳು ಬೇಗ ಸಡಿಲವಾಗುತ್ತವೆ.
-ಉಗುರುಗಳು ದುರ್ಬಲವಾಗುತ್ತವೆ.
-ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುವುದು 
-ಕೂದಲು ಉದುರಲು ಪ್ರಾರಂಭಿಸುತ್ತದೆ.

ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿರುವ ಆಹಾರಗಳು :
– ನೆಲ್ಲಿಕಾಯಿ 
-ಕಿತ್ತಳೆ 
– ನಿಂಬೆ
-ಕಿತ್ತಳೆ 
-ದ್ರಾಕ್ಷಿ 
– ಟೊಮೆಟೊ
– ಸೇಬು
-ಬಾಳೆಹಣ್ಣು
-ಪ್ಲಮ್  
– ಹಲಸು 
-ಗಡ್ಡೆ ಕೋಸು 
– ಪುದೀನ
 – ಮೂಲಂಗಿ ಎಲೆಗಳು
 – ಒಣದ್ರಾಕ್ಷಿ 
 – ಹಾಲು
– ಬೀಟ್ರೂಟ್ 
– ಎಲೆಕೋಸು 
– ಪಾಲಕ್ 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ಸಮಗ್ರ ಸುದ್ದಿ ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)

ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk

ನಮ್ಮ Facebook page: https://www.facebook.com/samagrasudii

Source : https://zeenews.india.com/kannada/health/vitamin-c-deficiency-may-lead-to-low-vision-156339

Leave a Reply

Your email address will not be published. Required fields are marked *