Vitamin B7 ಬಯೋಟಿನ್ ಕೊರತೆಯಿಂದಲೂ ಕೂದಲು ಉದುರಬಹುದು, ಇದರಿಂದ ಪರಿಹಾರಕ್ಕಾಗಿ ಇಲ್ಲಿವೆ 5 ಸೂಪರ್‌ಫುಡ್ಸ್

Biotin Rich Foods: ಸಾಮಾನ್ಯವಾಗಿ ವಿಟಮಿನ್ B7 ಎಂದು ಕರೆಯಲ್ಪಡುವ ಬಯೋಟಿನ್ ಇತರ ಪೋಷಕಾಂಶಗಳಂತೆ  ದೇಹಕ್ಕೆ ಅತ್ಯಗತ್ಯ ಪೋಷಕಾಂಶಗಳಲ್ಲಿ ಒಂದಾಗಿದೆ. ದೇಹದಲ್ಲಿ ಬಯೋಟಿನ್ ಕೊರತೆಯೂ ಕೂದಲು ಉದುರುವ ಸಮಸ್ಯೆಗೂ ಕಾರಣವಾಗಿದೆ. 

ಬಯೋಟಿನ್ ಅನ್ನು ಸಾಮಾನ್ಯವಾಗಿ ವಿಟಮಿನ್ ಬಿ7 ಎಂದು ಕರೆಯಲಾಗುತ್ತದೆ. ದೇಹದಲ್ಲಿ ಈ ಪೋಷಕಾಂಶದ ಕೊರತೆಯು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಸರಿಯಾದ ಸಮಯದಲ್ಲಿ ಈ ಬಗ್ಗೆ ಕಾಳಜಿ ವಹಿಸದಿದ್ದರೆ ಕ್ರಮೇಣ ಕೂದಲುದುರುವಿಕೆ ಬೋಳು ತಲೆ ಸಮಸ್ಯೆಗೆ ಕಾರಣವಾಗಬಹುದು. ಇದನ್ನು ತಪ್ಪಿಸಲು ನಿಮ್ಮ ದೈನಂದಿನ ಆಹಾರದಲ್ಲಿ ಕೆಲವು ಬಯೋಟಿನ್ ಸಮೃದ್ಧ ಆಹಾರಗಳನ್ನು ಸೇವಿಸುವುದು ಬಹಳ ಮುಖ್ಯ. ಈ ಫೋಟೋ ಗ್ಯಾಲರಿಯಲ್ಲಿ ಬಯೋಟಿನ್ ಸಮೃದ್ಧ 5 ಸೂಪರ್‌ಫುಡ್ಸ್  ಬಗ್ಗೆ ತಿಳಿಯಿರಿ. 

ಮೊಟ್ಟೆಯು  ಪ್ರೋಟೀನ್, ಕಬ್ಬಿಣ ಮತ್ತು ರಂಜಕದ ಸಮೃದ್ಧ ಮೂಲವಾಗಿದೆ. ಹಾಗಾಗಿಯೇ ಇದನ್ನು ಸೂಪರ್‌ಫುಡ್‌ ಎಂದು ಪರಿಗಣಿಸಲಾಗುತ್ತದೆ. ಮೊಟ್ಟೆಯ ಹಳದಿ ಭಾಗದಲ್ಲಿ ವಿಟಮಿನ್ ಬಿ7  ಬಯೋಟಿನ್ ಹೇರಳವಾಗಿ ಕಂಡು ಬರುತ್ತದೆ. 

ಚಿಕನ್ ಸೇವನೆಯಿಂದ ಪ್ರೊಟೀನ್ ಲಭ್ಯವಾಗುತ್ತದೆ. ದಿನಕ್ಕೆ 75 ಗ್ರಾಂ ಚಿಕನ್ ಲಿವರ್ ಸೇವಿಸುವುದರಿಂದ 138 ಮೈಕ್ರೋಗ್ರಾಂಗಳಷ್ಟು ಬಯೋಟಿನ್ ಲಭ್ಯವಾಗುತ್ತದೆ.

ರುಚಿಕರವಾದ ಮತ್ತು ಪೌಷ್ಟಿಕಾಂಶದ ಗಣಿ ಎಂದು ಪರಿಗಣಿಸಲಾಗಿರುವ ಸಿಹಿ ಗೆಣಸು ವಿಟಮಿನ್ಗಳು, ಖನಿಜಗಳು, ಫೈಬರ್ ಮತ್ತು ಕ್ಯಾರೊಟಿನಾಯ್ಡ್ ಉತ್ಕರ್ಷಣ ನಿರೋಧಕಗಳ ಗಣಿಯೂ ಹೌದು. ಅಷ್ಟೇ ಅಲ್ಲ, ಸಿಹಿಗೆಣಸು ಬಯೋಟಿನ್‌ನ ಸಮೃದ್ಧ ಮೂಲ ಎಂದು ಹೇಳಲಾಗುತ್ತದೆ. 

ದುಬಾರಿ ಆಹಾರ ಎಂದೇ ಪರಿಗಣಿಸಲ್ಪಟ್ಟಿರುವ ಅಣಬೆಯಲ್ಲೂ ಸಹ ಬಯೋಟಿನ್ ಹೇರಳವಾಗಿ ಕಂಡು ಬರುತ್ತದೆ.   

ಆವಕಾಡೊ ಫೋಲೇಟ್ ಮತ್ತು ಅಪರ್ಯಾಪ್ತ ಕೊಬ್ಬುಗಳಲ್ಲಿ ಸಮೃದ್ಧವಾಗಿರುವ ಅತ್ಯಂತ ರುಚಿಕರವಾದ ಹಣ್ಣು. ಈ ಹಣ್ಣಿನ ಸೇವನೆಯಿಂದಲೂ ಕೂಡ  ಬಯೋಟಿನ್ ಕೊರತೆಯನ್ನು ನೀಗಿಸಬಹುದು. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. ಸಮಗ್ರ ಸುದ್ದಿ ಇದನ್ನು ಖಚಿತಪಡಿಸುವುದಿಲ್ಲ. 

Source : https://zeenews.india.com/kannada/photo-gallery/vitamin-b7-biotin-deficiency-can-also-cause-hair-loss-here-are-five-superfoods-to-get-healthy-hair-160073/%E0%B2%86%E0%B2%B5%E0%B2%95%E0%B2%BE%E0%B2%A1%E0%B3%8A-160074

Leave a Reply

Your email address will not be published. Required fields are marked *