Health Care: ಅನ್ನ ತಿಂದರೆ ತೂಕ ಹೆಚ್ಚಾಗುತ್ತೆ ಅಂತ ಟೆನ್ಷನ್ನಾ? ಹಾಗಾದ್ರೆ ಈ ಟಿಪ್ಸ್​ ಫಾಲೋ ಮಾಡಿ.

ನಮ್ಮ ಆಧುನಿಕ ಜೀವನಶೈಲಿಯಿಂದ (Lifestryle) ಅಧಿಕ ತೂಕದ ಸಮಸ್ಯೆ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಕಾಡುತ್ತಿರುವುದು ಸುಳ್ಳಲ್ಲ. ಈ ತೂಕ ಇಳಿಸುವ ಜರ್ನಿಯಲ್ಲಿ ಅನೇಕ ರೀತಿಯ ನಿರ್ಬಂಧಗಳು ಇದ್ದೆ ಇರುತ್ತದೆ. ಅದರಲ್ಲೂ ಇಂತಹ ಆಹಾರಗಳನ್ನೆ ಸೇವಿಸಬೇಕು ಎನ್ನುವ ಸ್ಟ್ರಿಕ್ ರೋಟಿನ್ ಕೂಡ ಇರುತ್ತದೆ. ಉದಾಹರಣೆಯಾಗಿ ನೋಡುವುದಾದರೆ, ಅನೇಕ ಜನರು ತಮ್ಮ ತೂಕ ಇಳಿಕೆಯ ಜರ್ನಿಯಲ್ಲಿ ಅನ್ನ ಅಥವಾ ರೊಟ್ಟಿಯನ್ನು (Roti) ತಿನ್ನುವುದಿಲ್ಲ. ಆದರೆ ಇದು ಸೂಕ್ತವೇ? ಎಂದು ಅನೇಕರು ಪ್ರಶ್ನಿಸುತ್ತಾರೆ. ಇದಕ್ಕೆ ಉತ್ತರವೆಂಬತೆ ಪೌಷ್ಟಿಕತಜ್ಞ ನ್ಮಾಮಿ ಅಗರ್ವಾಲ್ ಅವರು ತೂಕವನ್ನು ಹೆಚ್ಚಿಸಿಕೊಳ್ಳದೇ ಯಾವ ರೀತಿ ಅನ್ನವನ್ನು ಸೇವಿಸಬಹುದು ಎಂಬುದಕ್ಕೆ ಕೆಲವು ಸಲಹೆಗಳು ಮತ್ತು ಟೆಕ್ನಿಕ್‌ಗಳನ್ನು ಹಂಚಿಕೊಂಡಿದ್ದಾರೆ.

ಪೌಷ್ಟಿಕತಜ್ಞ ನ್ಮಾಮಿ ಅಗರ್ವಾಲ್ ಅವರು ತೂಕ ಇಳಿಕೆಯಲ್ಲಿ ಅನ್ನದ ಸೇವನೆ ಕುರಿತು ನೀಡಿರುವ ಸಲಹೆಗಳು ಇಂತಿವೆ

“ನೀವು ಕೂಡ ರೈಸ್ ಲವರ್ ಆಗಿರುವೀರಾ? ನಾನು ಕೂಡ ರೈಸ್ ಲವರ್. ಹಾಗಿದ್ರೆ ತೂಕ ಇಳಿಸಿಕೊಳ್ಳಬೇಕೆಂದು ಅನ್ನದ ಸೇವನೆಯನ್ನು ನೀವು ತ್ಯಜಿಸಿರುವೀರಾ? ಈ ತೂಕ ಇಳಿಸುವ ಭರದಲ್ಲಿ ಅಯ್ಯೋ ನನ್ನ ಇಷ್ಟವಾದ ರೈಸ್ ತಿನ್ನಕ್ಕೆ ಆಗ್ತಿಲ್ಲ ಎಂದು ಚಿಂತೆ ಮಾಡ್ತಿದೀರಾ? ಡೋಂಟ್ ವರಿ, ತೂಕ ಹೆಚ್ಚಳ ಆಗದೇ ರೈಸ್ ಹೇಗೆ ತಿನ್ನಬಹುದು ಅಂತ ನಾನು ನಿಮಗೆ ಇಂದು ಕಲಿಸುತ್ತೆನೆ. ಹಾಗಿದ್ರೆ ಇಲ್ಲಿದೆ ಐಡಿಯಾ..!” ಎಂದು ಅಗರ್ವಾಲ್ ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ ಬರೆದುಕೊಂಡಿದ್ದಾರೆ.

‘ತೂಕ ಇಳಿಸುವವರು ಅನ್ನ ಸೇವನೆ ಮಾಡಬಹುದು ಅಂತ ಹೇಳಿದೆ. ಆದರೆ ಎಷ್ಟು ಪ್ರಮಾಣದಲ್ಲಿ ಅನ್ನವನ್ನು ಸೇವಿಸಬೇಕು ಎಂದು ಮುಖ್ಯವಾಗಿ ತಿಳಿದಿರಬೇಕು. ನಾವು ಅನ್ನವನ್ನು ಸೇವಿಸುವಾಗ ಸಾಮಾನ್ಯವಾಗಿ ಎಷ್ಟು ತಿನ್ನಬೇಕು ಎಂದು ತಿಳಿದುಕೊಂಡಿರುವುದಿಲ್ಲ’ ಎಂದು ಪೌಷ್ಠಿಕ ತಜ್ಞ ಅಗರ್ವಾಲ್ ಹೇಳುತ್ತಾರೆ.

ಆದ್ದರಿಂದ ಅದಕ್ಕೆ ಸೂಕ್ತ ಸಲಹೆಯೆಂದರೆ ಮಧ್ಯಮ ಗಾತ್ರದ ಬಟ್ಟಲನಲ್ಲಿ ಅನ್ನದ ಪ್ರಮಾಣ ಅಳೆದು ಸೇವಿಸುವುದು ತೂಕ ಇಳಿಸುವವರಿಗೆ ಬೆಸ್ಟ್ ಎನ್ನುತ್ತಾರೆ ಅಗರ್ವಾಲ್.

ತರಕಾರಿಗಳೊಂದಿಗೆ ಅನ್ನದ ಸೇವನೆ ತೂಕ ಇಳಿಕೆಯಲ್ಲಿ ಪರಿಣಾಮಕಾರಿ

ನೀವು ಹೆಚ್ಚಿನ ಪ್ರೊಟೀನ್ ಅಂಶಗಳನ್ನು ಹೊಂದಿರುವ ತರಕಾರಿಗಳೊಂದಿಗೆ ಅನ್ನವನ್ನು ಸೇವಿಸುತ್ತಿದ್ದರೆ, ನೀವು ತೂಕ ಹೆಚ್ಚಾಗುವ ಬಗ್ಗೆ ಚಿಂತಿಸಬೇಕಾಗಿಲ್ಲ. “ಪ್ರೋಟೀನ್‌ಗಳು ಮತ್ತು ತರಕಾರಿಗಳೊಂದಿಗೆ ನಿಮ್ಮ ಪ್ಲೇಟ್ ಅನ್ನು ಸಮತೋಲನಗೊಳಿಸಿ.

ದಾಲ್, ರಾಜ್ಮಾ, ಚೋಲ ಇತ್ಯಾದಿಗಳಂತಹ ಸಾಕಷ್ಟು ಪ್ರೋಟೀನ್ ಭರಿತ ಆಹಾರವನ್ನು ತೆಗೆದುಕೊಳ್ಳಿ ಮತ್ತು ಅದನ್ನು ಅನ್ನದೊಂದಿಗೆ ಸೇವಿಸಿ. ಅನ್ನದೊಂದಿಗೆ ನಿಮ್ಮ ಆಯ್ಕೆಯ ಯಾವುದೇ ತರಕಾರಿಗಳನ್ನು ಸೇರಿಸಿ ನಿಮ್ಮ ನೆಚ್ಚಿನ ಆಹಾರವನ್ನು ಸೇವಿಸಬಹುದು ” ಎಂದು ಅಗರ್ವಾಲ್ ಹೇಳುತ್ತಾರೆ.

ದಾಲ್-ಚಾವಲ್-ಸಬ್ಜಿಯು ನಿಮ್ಮ ನೆಚ್ಚಿನ ಊಟವಾಗಿದ್ದರೆ, ನಿಮ್ಮ ಪುಡ್ ಪ್ಲೇಟ್ ಅನ್ನು ಅನ್ನದೊಂದಿಗೆ ತುಂಬುವ ಮೊದಲು ದಾಲ್ ಮತ್ತು ತರಕಾರಿಗಳನ್ನು ಸೇರಿಸುವತ್ತ ಹೆಚ್ಚಿನ ಗಮನ ಹರಿಸಿ, ಏಕೆಂದರೆ ಇದು ನಿಮ್ಮ ಹೆಚ್ಚಿನ ಆಹಾರ ಸೇವನೆಯ ಗಾತ್ರದ ಬಗ್ಗೆ ಗಮನ ಹರಿಸುತ್ತದೆ.

“ಇನ್ನು ತೂಕ ಇಳಿಸುವ ರೈಸ್ ತಿನ್ನುವವರಿಗೆ ನನ್ನ ಎರಡನೇ ಸಲಹೆ ಅಂದ್ರೆ ನಿಮ್ಮ ಪ್ಲೇಟ್ ಗೆ ಮೊದಲು ದಾಲ್ ಮತ್ತು ತರಕಾರಿಗಳನ್ನು ಸೇರಿಸಿ ನಂತರ ಅನ್ನವನ್ನು ಸೇರಿಸಿ. ಇದು ಇನ್ಸುಲಿನ್ ಸ್ಪೈಕ್ಗಳನ್ನು ತಡೆಗಟ್ಟಲು ಮತ್ತು ಫೈಬರ್ , ಪ್ರೋಟೀನ್ ಅನ್ನು ಸೇರಿಸುವಾಗ ಅನ್ನದ ಭಾಗದ ಗಾತ್ರವನ್ನು ನಿಯಂತ್ರಿಸಲು ನಿಮಗೆ ಸಾಕಷ್ಟು ಸಹಾಯ ಮಾಡುತ್ತದೆ” ಎಂದು ಅಗರ್ವಾಲ್ ಹೇಳುತ್ತಾರೆ.

ಊಟದ ಕೊನೆಯಲ್ಲಿ ಮೊಸರಿನ ಸೇವನೆ ಆರೋಗ್ಯಕ್ಕೆ ಉತ್ತಮ

“ಕೊನೆಯದಾಗಿ, ನಿಮ್ಮ ದಾಲ್-ಚಾವಲ್ ಪ್ಲೇಟ್‌ಗೆ ಪ್ರೋಬಯಾಟಿಕ್‌ಗಳನ್ನು ಸೇರಿಸುವುದು ಹೆಚ್ಚು ಪ್ರಯೋಜನಕಾರಿಯಾಗಿದೆ. ಆದ್ದರಿಂದ ನಿಮ್ಮ ಊಟವನ್ನು ಮೊಸರಿನೊಂದಿಗೆ ಮುಗಿಸಿ. ಮೊಸರು ನಿಮ್ಮ ಊಟಕ್ಕೆ ಪ್ರೋಬಯಾಟಿಕ್‌ಗಳನ್ನು ಸೇರಿಸುತ್ತದೆ. ಅದಲ್ಲದೇ ದೇಹದ ಜೀರ್ಣಕ್ರಿಯೆಗೆ ಉತ್ತಮವಾಗಿ ಸಹಾಯ ಮಾಡುತ್ತದೆ” ಎಂದು ಪೌಷ್ಟಿಕತಜ್ಞರು ಹೇಳಿದ್ದಾರೆ.

Source : https://kannada.news18.com/news/lifestyle/how-to-lose-weight-by-eating-rice-stg-hhb-1418428.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *