ಹಾಲಿನಲ್ಲಿ ಲವಂಗವನ್ನು ಹಾಕಿ ಕುಡಿಯುವುದು ತನ್ನದೇ ಆದ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಹಾಲಿನಲ್ಲಿ ಲವಂಗವನ್ನು ಬಳಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.
- ಹಾಲು ಒಂದು ಸಂಪೂರ್ಣ ಆಹಾರವಾಗಿದೆ.
- ಹಾಲಿನ ಜೊತೆ ಲವಂಗ ಸೇವಿಸುವ ಪ್ರಯೋಜನಗಳು
- ಮಂಡಿ ನೋವಿಗೆ ಸಿಗುತ್ತದೆ ಶಾಶ್ವತ ಪರಿಹಾರ

ಬೆಂಗಳೂರು : ಹಾಲು ಒಂದು ಸಂಪೂರ್ಣ ಆಹಾರವಾಗಿದೆ. ವಾಸ್ತವವಾಗಿ, ಹಾಲಿನಲ್ಲಿ ಕ್ಯಾಲ್ಸಿಯಂ, ರಂಜಕ, ಮೆಗ್ನೀಸಿಯಮ್, ಅಯೋಡಿನ್ ಮತ್ತು ವಿಟಮಿನ್ ಡಿ ಇರುತ್ತದೆ. ಈ ಎಲ್ಲಾ ಅಂಶಗಳು ದೇಹದ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ. ಆದರೆ, ಹಾಲಿನಲ್ಲಿ ಕೆಲವು ವಿಶೇಷ ವಸ್ತುಗಳನ್ನು ಬೆರೆಸಿದರೆ ಅದರ ಆರೋಗ್ಯ ಪ್ರಯೋಜನ ಮತ್ತಷ್ಟು ಹೆಚ್ಚುತ್ತದೆ. ಲವಂಗವನ್ನು ಹಾಲಿನಲ್ಲಿ ಬೆರೆಸಿ ಕುಡಿಯುವ ಹವ್ಯಾಸ ಅನೇಕರಿಗೆ ಇರುತ್ತದೆ. ಲವಂಗವು ಆಂಟಿಬ್ಯಾಕ್ಟೀರಿಯಲ್ ಮತ್ತು ಉರಿಯೂತದ ಗುಣಲಕ್ಷಣಗಳಿಂದ ಸಮೃದ್ಧವಾಗಿದೆ. ಇದನ್ನು ಹಾಲಿನೊಂದಿಗೆ ಬೆರೆಸಿದಾಗ ದೇಹದ ಅನೇಕ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ.
ಹಾಲಿನ ಜೊತೆ ಲವಂಗ ಸೇವಿಸುವ ಪ್ರಯೋಜನಗಳು :
1. ಮಂಡಿ ನೋವಿಗೆ ಪರಿಹಾರ :
ಮಂಡಿ ನೋವಿನಿಂದ ಬಳಲುತ್ತಿರುವವರು ಲವಂಗವನ್ನು ಹಾಲಿನಲ್ಲಿ ಹಾಕಿ ಬೇಯಿಸಿ ಕುಡಿಯುವುದರಿಂದ ಮೊಣಕಾಲು ನೋವು ತಕ್ಷಣ ಮಾಯವಾಗುತ್ತದೆ. ಇದು ಮೂಳೆಗಳ ಬಿಗಿತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಲ್ಲದೆ, ಇದು ಸಂಧಿವಾತದ ಊತವನ್ನು ಕಡಿಮೆ ಮಾಡುತ್ತದೆ.
2. ಕಫ ಕರಗುತ್ತದೆ :
ಗಂಟಲು ಕಿರಿ ಕಿರಿ, ಮುಗು ಕಟ್ಟುವುದು, ಕಫ ಕಟ್ಟಿಕೊಂಡಂತೆ ಆಗುತ್ತಿದ್ದರೆ ಹಾಲು ಮತ್ತು ಲವಂಗ ಜೊತೆಯಾಗಿ ಸೇವಿಸಬೇಕು. ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಹಾಲಿನೊಂದಿಗೆ ಲವಂಗ ಬೆರೆಸಿ ಕುಡಿಯುವುದರಿಂದ ಎದೆಯಲ್ಲಿ ಶಾಖ ಉತ್ಪತ್ತಿಯಾಗಿ ಕಫ ಕರಗಿಸಲು ಸಹಾಯ ಮಾಡುತ್ತದೆ.
3. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ :
ಆಂಟಿಆಕ್ಸಿಡೆಂಟ್, ಆಂಟಿವೈರಲ್ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿರುವ ಈ ಹಾಲು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಕಾಲೋಚಿತ ರೋಗಗಳನ್ನು ತಡೆಗಟ್ಟುವಲ್ಲಿ ಸಹಾಯಕವಾಗಿವೆ. ಹಾಲು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
4. ಹಲ್ಲುನೋವಿಗೆ ಪರಿಹಾರ :
ಹಲ್ಲುನೋವು ಕಾನಿಸಿಕೊಂಡಾಗ ಲವಂಗ ಬೆರೆಸಿದ ಹಾಲನ್ನು ಕುಡಿಯಬೇಕು. ಈ ಹಾಲನ್ನು ಕುಡಿದರೆ ನೋವು ನಿವಾರಣೆಯಾಗುತ್ತದೆ. ನೀವು ಕೂಡಾ ಹಲ್ಲು ನೋವಿನಿಂದ ಬಳಲುತ್ತಿದ್ದರೆ, ಲವಂಗ ಬೆರೆಸಿದ ಹಾಲನ್ನು ಸೇವಿಸಿ. ನೋವು ಕಡಿಮೆಯಾಗುತ್ತದೆ.
(ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ ಸಮಗ್ರ ಸುದ್ದಿ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
Source : https://zeenews.india.com/kannada/health/add-clove-into-milk-to-cure-arthritis-and-tooth-pain-177884
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/Telegram: https://t.me/+E1ubNzdguQ5jN2Y1