Hibiscus Tea Benefits: ಅನೇಕ ಜನರು ತಮ್ಮ ಹಿತ್ತಲಿನಲ್ಲಿ ದಾಸವಾಳದ ಗಿಡವನ್ನು ಬೆಳೆಸುತ್ತಾರೆ. ದಾಸವಾಳ ಹೂವಿನಿಂದ ಹಲವಾರು ಪ್ರಯೋಜನಗಳಿವೆ. ಇದರಿಂದ ಆಗುವ ಲಾಭಗಳೇನು ಎಂಬುದನ್ನು ಈಗ ತಿಳಿಯೋಣ.
- ದಾಸವಾಳ ಹೂವಿನ ಟೀ ಪ್ರಯೋಜನಗಳು
- ದಾಸವಾಳ ಹೂವಿನ ಚಹಾ ಮಾಡುವ ವಿಧಾನ
- ದಾಸವಾಳ ಹೂವಿನ ಆರೋಗ್ಯ ಪ್ರಯೋಜನಗಳು

Hibiscus Tea Benefits: ಮನೆಯಲ್ಲಿ ಬೆಳೆಸುವ ಹೂವಿನ ಗಿಡಗಳಲ್ಲಿ ದಾಸವಾಳ ಗಿಡವೂ ಒಂದು. ದಾಸವಾಳದ ಹೂವುಗಳು ಮಾರುಕಟ್ಟೆಯಲ್ಲಿ ಹಲವು ವಿಧಗಳಲ್ಲಿ ಲಭ್ಯವಿದೆ. ಆಯುರ್ವೇದ ತಜ್ಞರು ಹೇಳುವ ಪ್ರಕಾರ, ಈ ಹೂವುಗಳು ಕೇವಲ ಪೂಜೆಗೆ ಅಲಂಕಾರಕ್ಕೆ ಮಾತ್ರವಲ್ಲ ನಮ್ಮ ಆರೋಗ್ಯಕ್ಕೂ ಉಪಕಾರಿಯಾಗಿವೆ.
ದಾಸವಾಳ ಹೂವುಗಳು ಸುಂದರವಾಗಿದ್ದು, ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಕೂದಲು ಬೆಳವಣಿಗೆಗೆ ದಾಸವಾಳ ಹೂವು ಬಳಸುತ್ತಾರೆ. ದಾಸವಾಳ ಹೂವುಗಳನ್ನು ಬಳಸುವುದರಿಂದ ಕೂದಲು ಸುಂದರವಾಗಿ ಮತ್ತು ದಟ್ಟವಾಗಿ ಬೆಳೆಯುತ್ತದೆ. ಆದರೆ ದಾಸವಾಳದ ಹೂವುಗಳು ಕೂದಲಿನ ಬೆಳವಣಿಗೆಗೆ ಮಾತ್ರವಲ್ಲ ನಮ್ಮ ಆರೋಗ್ಯಕ್ಕೂ ಒಳ್ಳೆಯದು. ದಾಸವಾಳದ ಹೂವುಗಳಿಂದ ತಯಾರಿಸಿದ ಚಹಾವನ್ನು ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.
ದಾಸವಾಳ ಚಹಾವನ್ನು ತಯಾರಿಸಲು ಮೊದಲು ಒಂದು ಲೋಟ ನೀರು, ದಾಸವಾಳದ ಹೂವುಗಳು, ಒಂದು ಚಮಚ ಕಾಳುಮೆಣಸಿನ ಪುಡಿ, ಒಂದು ಗ್ರಾಂ ದಾಲ್ಚಿನ್ನಿ ಪುಡಿ ಸೇರಿಸಿ, ಕುದಿಸಿ. ಹೀಗೆ ತಯಾರಿಸಿದ ಚಹಾವನ್ನು 12 ವಾರಗಳ ಕಾಲ ಕುಡಿಯುವುದರಿಂದ ದೇಹದಿಂದ ಕಫ ಮತ್ತು ಪಿತ್ತ ದೋಷಗಳು ದೂರವಾಗುತ್ತವೆ.
ಇದರಿಂದ ಒತ್ತಡ ಕಡಿಮೆಯಾಗುವುದಲ್ಲದೆ ಮನಸ್ಸಿಗೆ ನೆಮ್ಮದಿಯೂ ಸಿಗುತ್ತದೆ. ಈ ದಾಸವಾಳದ ಟೀ ಕುಡಿಯುವುದರಿಂದ ಮೈಗ್ರೇನ್ ತಲೆನೋವು ನಿವಾರಣೆಯಾಗುತ್ತದೆ. ಈ ಟೀ ಕುಡಿಯುವುದರಿಂದ ಜೀರ್ಣಕ್ರಿಯೆ ಸಮಸ್ಯೆ ದೂರವಾಗುತ್ತದೆ.
ವಸಡಿನ ಊತ, ವಸಡಿನಿಂದ ರಕ್ತಸ್ರಾವದಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ. ಈ ಚಹಾವು ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ. ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವೂ ಕಡಿಮೆಯಾಗುತ್ತದೆ.
ಸೂಚನೆ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಸಮಗ್ರ ಸುದ್ದಿ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ.
Source : https://zeenews.india.com/kannada/health/health-benefits-of-drinking-hibiscus-tea-179230
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/Telegram: https://t.me/+E1ubNzdguQ5jN2Y1