ನವದೆಹಲಿ : ಟೀಮ್ ಇಂಡಿಯಾದ ಕ್ರಿಕೆಟರ್ ವಿರಾಟ್ ಕೊಹ್ಲಿ ಅವರಿಗೆ ವರ್ಷದ ಪಬ್ಟಿ ಪುರುಷ ಅಥ್ಲೀಟ್.

ನವದೆಹಲಿ : ಟೀಮ್ ಇಂಡಿಯಾದ ಕ್ರಿಕೆಟರ್ ವಿರಾಟ್ ಕೊಹ್ಲಿ ಅವರಿಗೆ ವರ್ಷದ ಪಬ್ಟಿ ಪುರುಷ ಅಥ್ಲೀಟ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ರಸಿದ್ಧ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿಯನ್ನು ಹಿಂದಿಕ್ಕಿ ಕೊಹ್ಲಿ ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕೊಹ್ಲಿ ಶೇ.78ರಷ್ಟು ಮತಗಳನ್ನು ಪಡೆದಿದ್ದು, 5 ಲಕ್ಷ ಜನರು ಈ ಪ್ರಶಸ್ತಿಗೆ ಮತ ಚಲಾಯಿಸಿದ್ದಾರೆ.
ಮೆಸ್ಸಿ ಕೇವಲ 22 ಪ್ರತಿಶತದಷ್ಟು ಮತಗಳನ್ನು ಪಡೆದರು. ಪಿಯುಬಿಟಿ ಸ್ಪೋರ್ಟ್ ಡಿಸೆಂಬರ್ 31 ರಂದು ವಿಜೇತರನ್ನು ಘೋಷಿಸಿತು.
ನೊವಾಕ್ ಜೊಕೊವಿಕ್, ಕಾರ್ಲೋಸ್ ಅಲ್ಕರಾಜ್, ಲೆಬ್ರಾನ್ ಜೇಮ್ಸ್, ಮ್ಯಾಕ್ಸ್ ವೆರ್ಸ್ಟಾಪೆನ್ ಮತ್ತು ಲಿಯೋನೆಲ್ ಮೆಸ್ಸಿ ಅವರೊಂದಿಗೆ ಪುಬಿಟಿ ವರ್ಷದ ಪುರುಷ ಕ್ರೀಡಾಪಟು ಪ್ರಶಸ್ತಿಗಾಗಿ ಕಿಂಗ್ ಕೊಹ್ಲಿ ಸ್ಪರ್ಧಿಸಿದ್ದರು. ಕೊಹ್ಲಿ ಮತ್ತು ಮೆಸ್ಸಿಯನ್ನು ಅಂತಿಮ ಸ್ಪರ್ಧಿಗಳಾಗಿ ಆಯ್ಕೆ ಮಾಡಲಾಗಿತ್ತು.
https://twitter.com/pubitysport/status/1741508138673856615/photo/1?ref_src=twsrc%5Etfw%7Ctwcamp%5Etweetembed%7Ctwterm%5E1741508138673856615%7Ctwgr%5E108328b4fd406aa994c8df9309b11b6914eb08f1%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fkannada%2Fetvbharatkannada-epaper-etvbhkn%2Fhomenews-updates-homenews%3Fmode%3Dpwaaction%3Dclick

2023 ನೇ ವರ್ಷ ವಿರಾಟ್ ಕೊಹ್ಲಿಗೆ ವಿಶೇಷವಾಗಿದೆ. ಅವರು ಈ ವರ್ಷ ಅನೇಕ ದೊಡ್ಡ ದಾಖಲೆಗಳನ್ನು ಮುರಿದರು. ಏಕದಿನ ಕ್ರಿಕೆಟ್ನಲ್ಲಿ 50 ಶತಕಗಳನ್ನು ಬಾರಿಸಿದ ಮೊದಲ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ವಿಶ್ವಕಪ್ನಲ್ಲಿ ಅತಿ ಹೆಚ್ಚು ಏಕದಿನ ಶತಕಗಳನ್ನು ಬಾರಿಸಿದ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಅವರು ಮುರಿದರು. 2023ರ ವಿಶ್ವಕಪ್ನಲ್ಲಿ ಕೊಹ್ಲಿ 765 ರನ್ ಬಾರಿಸಿದ್ದು, ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದಾಖಲೆ ನಿರ್ಮಿಸಿದ್ದಾರೆ. ಅವರು ಈ ವರ್ಷ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಎರಡು ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1