Face Wash Tips : ವಾಶ್ಬೇಸಿನ್ ಹತ್ತಿರ ಕೈ ಮತ್ತು ಕಾಲು ತೊಳೆದ ನಂತರ ಒರೆಸಿಕೊಳ್ಳಲು ಕರವಸ್ತ್ರವ ಇಲ್ಲವೆ ಟವೆಲ್ ಇಡಲಾಗುತ್ತದೆ. ಒಂದು ವೇಳೆ ನೀವು ಅದರಿಂದಲೇ ನಿಮ್ಮ ಮುಖವನ್ನು ಸ್ವಚ್ಛಗೊಳಿಸುತ್ತಿದ್ದರೇ ನೀವು ಈ ವಿಚಾರವನ್ನು ತಿಳಿದುಕೊಳ್ಳಲೇಬೇಕು..
- ಮುಖವನ್ನು ಶುಚಿಗೊಳಿಸಿದಾಗ ಒರೆಸಿಕೊಳ್ಳಲು ಟವೆಲ್ ಬಳಸುತ್ತಾರೆ.
- ಈ ಅಭ್ಯಾಸ ನಿಮ್ಮ ಚರ್ಮಕ್ಕೆ ಗಂಭೀರ ಹಾನಿಯನ್ನುಂಟುಮಾಡುತ್ತದೆ.
- ಮುಖ ಚರ್ಮದ ತ್ವಚೆಯು ಸಡಿಲವಾಗಲು ಶುರುವಾಗುತ್ತದೆ.

Skin Care : ನಮ್ಮಲ್ಲಿ ಹೆಚ್ಚಿನವರು ಮುಖವನ್ನು ಶುಚಿಗೊಳಿಸಿದಾಗಲೆಲ್ಲಾ ನೀರನ್ನು ಒರೆಸಿಕೊಳ್ಳಲು ಟವೆಲ್ ಅಥವಾ ನ್ಯಾಪ್ಕಿನ್ ಅನ್ನು ಬಳಸುತ್ತಾರೆ. ಈ ಅಭ್ಯಾಸ ನಿಮ್ಮ ಚರ್ಮಕ್ಕೆ ಗಂಭೀರ ಹಾನಿಯನ್ನುಂಟುಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ? ಹೌದು.. ಟವೆಲ್ನಿಂದ ಮುಖವನ್ನು ಒರೆಸಿಕೊಂಡಾಗ ಅದು ಚರ್ಮದ ಸೋಂಕಿಗೆ ಕಾರಣವಾಗಬಹುದು. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ ತಿಳಿಯಿರಿ.
ಮುಖದ ತ್ವಚೆಯ ಮೇಲೆ ಸುಕ್ಕುಗಳು ಬೀಳುತ್ತವೆ : ಮುಖವನ್ನು ತೊಳೆದ ನಂತರ ಅತಿಯಾಗಿ ಟವೆಲ್ ನಿಂದ ಮುಖವನ್ನು ಉಜ್ಜಿದಾಗ ಮುಖ ಚರ್ಮದ ತ್ವಚೆಯು ಸಡಿಲವಾಗಲು ಶುರುವಾಗುತ್ತದೆ ಮತ್ತು ವಯಸ್ಸಿಗೂ ಮುನ್ನವೇ ಸುಕ್ಕುಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.
ಮೊಡವೆ ಉಂಟಾಗುತ್ತವೆ : ಸಾಮಾನ್ಯವಾಗಿ ಬಳಸುವ ಕರವಸ್ತ್ರ ಅಥವಾ ಟವೆಲ್ ಅನ್ನು ಒಂದು ದಿನ ಅಥವಾ ಎರಡು ದಿನಗಳವರೆಗೆ ತೊಳೆಯುವುದಿಲ್ಲ. ಈ ಕಾರಣದಿಂದಾಗಿ, ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳು ಅದರಲ್ಲಿ ರೂಪುಗೊಳ್ಳಲು ಪ್ರಾರಂಭಿಸುತ್ತವೆ. ನಿಮ್ಮ ಮುಖವನ್ನು ಸ್ವಚ್ಛಗೊಳಿಸಲು ನೀವು ಈ ನ್ಯಾಪ್ಕಿನ್ಗಳನ್ನು ಬಳಸಿದರೆ, ಬ್ಯಾಕ್ಟೀರಿಯಾಗಳು ನಿಮ್ಮ ಚರ್ಮವನ್ನು ಪ್ರವೇಶಿಸಿ ಮೊಡವೆಗಳಂತಹ ಸಮಸ್ಯೆಗಳನ್ನು ಉಂಟುಮಾಡುತ್ತವೆ.
ಕೈಯಿಂದ ಮುಖವನ್ನು ಸ್ವಚ್ಛಗೊಳಿಸಿ : ಪ್ರತಿ ಬಾರಿ ನೀವು ಮುಖವನ್ನು ಸ್ವಚ್ಛಗೊಳಿಸಿದ ನಂತರ ಹೊಸದಾದ ಕರವಸ್ತ್ರ ಅಥವಾ ಮೃದುವಾದ ಕರವಸ್ತ್ರವನ್ನು ಬಳಸಿ. ಅದು ಕೂಡ ಸ್ವಚ್ಛವಾಗಿರಬೇಕು. ಇದಲ್ಲದೆ, ನಿಮ್ಮ ತ್ವಚೆಯ ಹೊಳಪನ್ನು ಹೆಚ್ಚಿಸಲು ನೀವು ಬಯಸಿದರೆ, ನಿಮ್ಮ ಮುಖವನ್ನು ನೀರಿನಿಂದ ತೊಳೆದು, ನಂತರ ಅದನ್ನು ನಿಮ್ಮ ಕೈಗಳಿಂದ ಒರೆಸಿಕೊಳ್ಳಿ.
ನೈಸರ್ಗಿಕ ತೇವಾಂಶಕ್ಕೆ ಹಾನಿ : ನಮ್ಮ ಚರ್ಮವು ನೈಸರ್ಗಿಕ ತೇವಾಂಶವನ್ನು ಹೊಂದಿರುತ್ತದೆ. ಕ್ಲೆನ್ಸಿಂಗ್ ಆದ ನಂತರ ನಿಮ್ಮ ಮುಖವನ್ನು ಸ್ಕ್ರಬ್ ಮಾಡಿದರೆ ತ್ವಚೆಯೊಳಗಿನ ನೈಸರ್ಗಿಕ ತೇವಾಂಶ ಕಡಿಮೆಯಾಗಿ ಮುಖ ಕಳೆಗುಂದುತ್ತದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1