
India vs Sri Lanka, 3rd T20 Live Score: ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಮ್ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. 3 ಪಂದ್ಯಗಳ ಟಿ20 ಸರಣಿಯಲ್ಲಿ 1-1 ಅಂತರದಿಂದ ಸಮಬಲ ಸಾಧಿಸಿರುವ ಉಭಯ ತಂಡಗಳಿಗೂ ಈ ಪಂದ್ಯ ನಿರ್ಣಾಯಕ. ಅಂದರೆ ಈ ಪಂದ್ಯದಲ್ಲಿ ಗೆಲ್ಲುವ ತಂಡ ಸರಣಿ ವಶಪಡಿಸಿಕೊಳ್ಳಲಿದೆ.
ಇದಕ್ಕೂ ಮುನ್ನ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 2 ರನ್ಗಳ ರೋಚಕ ಜಯ ಸಾಧಿಸಿತ್ತು. ಇನ್ನು ಪುಣೆಯಲ್ಲಿ ನಡೆದ 2ನೇ ಪಂದ್ಯದಲ್ಲಿ ಕಂಬ್ಯಾಕ್ ಮಾಡಿದ ಶ್ರೀಲಂಕಾ ತಂಡವು ಭಾರತಕ್ಕೆ 16 ರನ್ಗಳಿಂದ ಸೋಲುಣಿಸಿತ್ತು. ಇದೀಗ ಉಭಯ ತಂಡಗಳ ನಡುವೆ ಫೈನಲ್ ಫೈಟ್ ನಡೆಯುತ್ತಿದೆ. ಹೀಗಾಗಿ ಕಪ್ ಗೆಲ್ಲಲು ಎರಡೂ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.
ಶ್ರೀಲಂಕಾ ಟಿ20 ತಂಡ: ಕುಸಾಲ್ ಮೆಂಡಿಸ್, ದಸುನ್ ಶನಕ (ನಾಯಕ) , ಪಾತುಂ ನಿಸ್ಸಂಕ , ಧನಂಜಯ ಡಿ ಸಿಲ್ವ , ಚರಿತ್ ಅಸಲಂಕ , ಭಾನುಕ ರಾಜಪಕ್ಸೆ , ವನಿಂದು ಹಸರಂಗ , ಚಾಮಿಕ ಕರುಣಾರತ್ನೆ , ಮಹೀಶ್ ತೀಕ್ಷಣ , ದಿಲ್ಶನ್ ಮಧುಶಂಕ , ಅಶ್ಮೋದ್ ಕುಮಾರ , ಅವಿಶ್ಕ ಕುಮಾರ , ಅವಿಷ್ಕ ಕುಮಾರ ವೆಲ್ಲಲಾಗೆ , ನುವಾನ್ ತುಷಾರ , ಕಸುನ್ ರಜಿತ , ಸದೀರ ಸಮರವಿಕ್ರಮ.
ಟೀಮ್ ಇಂಡಿಯಾ ಟಿ20 ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (ಉಪನಾಯಕ), ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್, ಶಿವಂ ಮಾವಿ, ಮುಖೇಶ್ ಕುಮಾರ್, ಜಿತೇಶ್ ಶರ್ಮಾ.