ಹೊಸದಿಲ್ಲಿ: ಇನ್ನು ಮುಂದೆ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರೂ ಆರೋಗ್ಯ ವಿಮೆ ಸೌಲಭ್ಯವನ್ನು ಪಡೆಯಬಹುದಾಗಿದೆ.

ಆರೋಗ್ಯ ವಿಮೆ ಖರೀದಿಗೆ ನಿಗದಿ ಮಾಡಲಾಗಿದ್ದ 65 ವರ್ಷ ವಯೋಮಿತಿಯನ್ನು ‘ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ‘(ಐಆರ್ಡಿಐಎ)
ರದ್ದುಗೊಳಿಸಿದ್ದು, ಇದರೊಂದಿಗೆ 65 ವರ್ಷ ಮೇಲ್ಪಟ್ಟವರೂ ವಿಮೆಗೆ ಅರ್ಹತೆ ಪಡೆದಿದ್ದಾರೆ. ಆದರೆ, ವಿಮೆ ಪ್ರೀಮಿಯಂ ಮೊತ್ತ ಕೊಂಚ ಹೆಚ್ಚಾಗಿರುವ ಸಾಧ್ಯತೆಯಿದೆ.
ಆರೋಗ್ಯ ವಿಮೆಯು ಎಲ್ಲಾ ವಯೋಮಾನದವರಿಗೂ ನೀಡಲು ಉದ್ದೇಶಿಸಲಾಗಿದ್ದು, ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ಮಕ್ಕಳು, ಮಾತೃತ್ವ, ಹಾಗೂ ಇತರೆ ವರ್ಗದವರಿಗೆ ವಿಭಿನ್ನ ರೂಪದಲ್ಲಿ ವಿಮೆ ಪಾಲಿಸಿಗಳನ್ನುವಿನ್ಯಾಸಗೊಳಿಸುವಂತೆ ವಿಮಾ ಸಂಸ್ಥೆಗಳಿಗೆ ಸೂಚಿಸಲಾಗಿದೆ.
ಇನ್ನು ಮುಂದೆ ಪ್ರಾಧಿಕಾರ ನಿಗದಿಪಡಿಸಿದ ಷರತ್ತುಗಳಿಗೆ ಒಳಪಟ್ಟು ವಯಸ್ಸು, ವಿಮೆ ಮೊತ್ತ ಸೇರಿದಂತೆ ಮತ್ತಿತರ ಮಾನದಂಡಗಳ ಮೇಲೆ ವಿಮಾ ಪಾಲಿಸಿಗಳನ್ನು ಸಂಸ್ಥೆಗಳು ವಿನ್ಯಾಸಗೊಳಿಸಲಿವೆ.
ಕಾಯುವಿಕೆಯೂ ಕಡಿತ: ವಿಮಾ ನಿಯಮಗಳನ್ನು ಗ್ರಾಹಕ ಸ್ನೇಹಿಯಾಗಿ ರೂಪಿಸಲಾಗುತ್ತದೆ. ಅಸ್ತಿತ್ವದಲ್ಲಿರುವ ಕಾಯಿಲೆಗಳನ್ನು ವಿಮೆ ವ್ಯಾಪ್ತಿಗೆ ತರಲು ಇದುವರೆಗೂ ಇದ್ದ ಕಾಯುವಿಕೆ ಅವಧಿ ಯನ್ನು 46 ತಿಂಗಳಿಂದ 36 ತಿಂಗಳಿಗೆ ಕಡಿತಗೊಳಿಸಲು ತೀರ್ಮಾನಿಸಲಾಗಿದೆ.
ಆರೋಗ್ಯ ವಿಮೆ ಪಾಲಿಸಿ ಕೊಳ್ಳಲು ನಿಗದಿ ಮಾಡಲಾಗಿದ್ದ ವಯೋಮಿತಿ ರದ್ದುಗೊಳಿಸಿದ ಪರಿಣಾಮ ವಿಮಾ ಕ್ಷೇತ್ರದ ಬೆಳವಣಿಗೆಗೆ ಪುಷ್ಟಿ ಮತ್ತಷ್ಟು ದೊರೆತಂತಾಗಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1