Horoscope Today May 25, 2024: ಶನಿವಾರದ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ?

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಮೂಲಾ, ಯೋಗ: ಸಿದ್ಧಿ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 55 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 9:17 ರಿಂದ 10:53 ರ ವರೆಗೆ, ಯಮಘಂಡ ಕಾಲ 14:06 ರಿಂದ 15:42ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:04 ರಿಂದ 07:41ರ ವರೆಗೆ.

ಮೇಷ ರಾಶಿ :ಹಲವು ದಿನಗಳ ಮನಸ್ಸಿನ ಗೊಂದಲಹಳಿಗೆ ಪರಿಹಾರ ಇರುವುದು. ವೈವಾಹಿಕ ಜೀವನವು ಸುಖಮಯವಾಗಿ ಸಾಗಲಿದೆ. ದುಡುಕಿನ ನಿರ್ಧಾರಗಳನ್ನು ತಗೆದುಕೊಂಡು ಸಂಕಟಪಡಬೇಕಾದೀತು. ನಿಮ್ಮವರೆದು ಕಠೋರ ಮಾತುಗಳನ್ನು ಆಡುವರಿ. ಸಂಗಾತಿಯ ವಿರುದ್ಧವಾದ ಕೆಲಸವನ್ನು ಮಾಡಿ ಮಾತಿಗೆ ಗುರಿಯಾಗುವಿರಿ. ನಿಮ್ಮನ್ನು ನಿಂದಿಸಲು ಕೆಲವು ಹೊಂಚು ಹಾಕಿದ್ದು ತಿಳಿದು ಅದನ್ನು ಸರಿ ಮಾಡಿಕೊಳ್ಳುವಿರಿ. ಬಂಧುಗಳು ನಿಮ್ಮ ಸಂಕಟಕ್ಕೆ ಜೊತೆಯಾಗುವರು. ರಾಜಕೀಯಕ್ಷೇತ್ರವು ನಿಮಗೆ ಕೈಹಿಡಿಯಬಹುದು. ಆದಷ್ಟು ಆಲೋಚಿಸಿ ಮುಂದಡಿಯಿಡಿ. ಮಾನಸಿಕವಾಗಿ ಋುಣಾತ್ಮಕ ಚಿಂತನೆಗಳು ನಿಮ್ಮ ಮನಸ್ಸನ್ನು ಕೊರೆಯಲಿವೆ. ನಿಮ್ಮ ಆಸಕ್ತಿಯಿಂದ ಉದ್ಯೋಗ ಕ್ಷೇತ್ರದಲ್ಲಿ ಕೆಲವು ಬದಲಾವಣೆಗಳಿರಬಹುದು. ನಿಮ್ಮ ಸಹೋದ್ಯೋಗಿಗಳು ನಿಮ್ಮ ಬಗ್ಗೆ ಅಸೂಯೆ ಪಡಬಹುದು. ಅಪರಿಚಿತರ ವ್ಯಕ್ತಿಗಳಿಂದ ನಿಮಗೆ ಸಂತೋಷವು ಸಿಗಲಿದೆ.

ವೃಷಭ ರಾಶಿ :ಇಂದು ಸ್ತ್ರೀಯರು ವ್ಯವಹಾರದಲ್ಲಿ ಲಾಭವನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಶ್ರಮಕ್ಕೆ ದೈವವು ಅನುಕೂಲವನ್ನು ಮಾಡಲಿದೆ‌. ಮಾತಿನಲ್ಲಿ ಮೆಚ್ಚುಗೆಯು ನಿಮಗೆ ಸಿಗಲಿದೆ. ನಿಮಗೆ ಕೆಲವು ಜವಾಬ್ದಾರಿಗಳು ಬರಬಹುದು. ಧನಾಗಮನವನ್ನು ನೀವು ನಿರೀಕ್ಷಿಸಬಹುದು. ಸಣ್ಣ ಉಧಯಮವನ್ನು ಮಾಡುವವರಗೆ ಸ್ವಲ್ಪ ಹೆಚ್ಚು ಆದಾಯವು ದೊರೆಯಲಿದೆ. ಸುಳ್ಳಾಡಿ ನಿಮ್ಮ ಕೆಲಸವನ್ನು ಮಾಡಿಕೊಳ್ಳುವಿರಿ. ಅನಾರೋಗ್ಯದಿಂದ ಕಿರಿಕಿರಿ ಅನುಭವಿಸಿದರೆ ಇಂದು ಸ್ವಲ್ಪ ಕಿಡಮೆ ಆಗಲಿದೆ. ಆರ್ಥಿಕವಾಗಿ ಖರ್ಚು ವೆಚ್ಚಗಳಲ್ಲಿ ಬಲವಾದ ಹಿಡಿತವಿರಲಿದೆ. ಒಂದೇ ವಿಚಾರವನ್ನು ಮತ್ತೆ ಮತ್ತೆ ಕೇಳಿ ಕಿರಿ ಕಿರಿ ಎನಿಸಬಹುದು.‌ ವಿದ್ಯಾರ್ಥಿಗಳಿಗೆ ಕರ್ತವ್ಯವನ್ನು ನೆನಪಿಸುವಂತಾಗುತ್ತದೆ. ನಿಮ್ಮ ಸ್ಥಗಿತಗೊಂಡ ಕಾರ್ಯಗಳನ್ನು ಪೂರ್ಣಗೊಳ್ಳಬಹುದು. ಇಂದು ನೀವು ಸಂತೋಷವಾಗಿರುವುದರಿಂದ ಎಲ್ಲದರಲ್ಲೂ ಯಶಸ್ಸನ್ನು ಪಡೆಯುತ್ತೀರಿ.

ಮಿಥುನ ರಾಶಿ :ಇಂದು ಅನಗತ್ಯವಾಗಿ ಸುತ್ತಾಟವಾಗುವುದೇ ವಿನಃ ಪ್ರಯೋಜನವಾಗದು. ಇದರಿಂದ ಸಿಟ್ಟೂ ಹತಾಶೆಯೂ ಇರಲಿದೆ. ನಿಧಾನವಾಗಿ ಸಾಗುವ ಸಾಗುತ್ತಿರುವ ಕೆಲಸದಿಂದ ಬೇಸರವಾಗಲಿದೆ. ತಂದೆಯೊಂದಿಗೆ ಕಲಹವಾಗಬಹುದು. ಮನಸ್ಸು ಉದ್ವೇಗಕ್ಕೆ ಒಳಗಾಗದಂತೆ ನೋಡಿಕೊಳ್ಳಿ. ದೈವದ ಸಹಾಯವನ್ನು ನೀವು ಪಡೆಯಬೇಕಾಗಿರುವುದು ಅನಿವಾರ್ಯ. ನಿಮ್ಮ ಸಕಾರಾತ್ಮಕ ಆಲೋಚನೆಗಳೇ ನಿಮ್ಮನ್ನು ಒಂದು ಒಳ್ಳೆಯ ಮಾರ್ಗಕ್ಕೆ ಒಯ್ಯುವುದು. ಶಿಕ್ಷಕವೃತ್ತಿಯವರಿಗೆ ಮಕ್ಕಳಿಂದ ಗೌರವವು ಸಿಗಲಿವೆ. ನಿಮ್ಮನ್ನು ಪ್ರೀತಿಮಾಡಿಕೊಳ್ಳಲಿದ್ದಾರೆ. ನಿಮ್ಮವರಿಂದಲೇ ವಂಚಿತರಾಗುವಿರಿ. ವಿಶ್ವಾಸವು ಇಲ್ಲದೇ ಹೋಗಿ ಸಂಬಂಧವೂ ಒಡೆದುಹೋಗಲಿದೆ. ಉದ್ಯೋಗಿಗಳಿಗೆ ಉದ್ಯಮದಲ್ಲಿಉತ್ತಮ ಅವಕಾಶಗಳು ಬರಲಿವೆ. ಮೌಲ್ಯಯುತವಾದ ಏನನ್ನಾದರೂ ಪಡೆಯುವ ಬಯಕೆಯನ್ನು ಇಂದು ಪೂರೈಸಬಹುದು. ನಿಮ್ಮ ವಸ್ತುವು ಕಳೆದುಹೋಗಬಹುದು. ಯಾವುದೇ ಉದ್ವೇಗಕ್ಕೆ ಒಳಗಾಗುವುದು ಬೇಡ.

ಕಟಕ ರಾಶಿ :ಇಂದು ದುಶ್ಚಟವನ್ನು ಸ್ನೇಹಿತರ ಮೂಲಕ ಕಲಿಯುವ ಸಂಭವವಿದೆ. ಉದ್ಯೋಗದಲ್ಲಿ ಭಡ್ತಿಯು ಸಿಗಲಿದೆ. ಮಕ್ಕಳಿಂದ ಸಂತೋಷವಾರ್ತೆಯು ಇರುತ್ತದೆ. ಅಪರಿಚಿತ ವ್ಯಕ್ತಿಗಳ ಸಹವಾಸದಿಂದ ನಿಮಗೆ ವಂಚನೆಯಾಗಬಹುದು. ಕೃಷಿಯಲ್ಲಿ ನೀವು ಮಾಡಿದ ಕೆಲಸವು ಪ್ರಶಂಸೆಗೆ ಒಳಗಾಗುವುದು. ಉತ್ತಮ ಇಳುವರಿಯನ್ನು ಪಡೆಯುವಿರಿ. ವಾಹನದಲ್ಲಿ ಸಂಚಾರ ಮಾಡಿ ಖುಷಿ ಪಡುವಿರಿ. ಎಲ್ಲವನ್ನೂ ನಿಮ್ಮ ಮಾತಿನಂತೆ ನಡಸಲಾಗದು. ಬಂಧುಗಳ ಮನೆಯಲ್ಲಿ ಇಂದು ನಿಮ್ಮ ವಾಸವಿರಲಿದೆ. ಮಕ್ಕಳು ಕಲಿಕೆಯಲ್ಲಿ ಆಸಕ್ತಿಯನ್ನು ತೋರಿಸದೇ ಇರುವುದರಿಂದ ಬೈಯ್ಯುವಿರಿ. ಆಲಸ್ಯದಿಂದ ಹೊರಬರಬೇಕಾದ ಸ್ಥಿತಿಯು ಇದೆ. ಹೊಸ ಆಲೋಚನೆಗೆ ನೀವು ತೆರೆದುಕೊಳ್ಳುವಿರಿ. ರಾಜಕೀಯವಾಗಿ ಕೆಲವು ಬದಲಾವಣೆಗಳು ಆಗುವುದು. ದೈವಭಕ್ತಿಯನ್ನು ಬೆಳೆಸಿಕೊಂಡು ಸಾಗಬೇಕಾಗುವುದು. ನೀವು ಭಾವನಾತ್ಮಕವಾಗಿ ತೆಗೆದುಕೊಳ್ಳುವ ನಿರ್ಧಾರಗಳು ನಿಮ್ಮ ಸ್ಥಾನವನ್ನು ದುರ್ಬಲಗೊಳಿಸಬಹುದು. ನಿಮ್ಮದಾದ ವಸ್ತುವನ್ನು ಇತರರಿಗೆ ಕೊಡಬೇಕಾಗುವುದು.

ಸಿಂಹ ರಾಶಿ :ಇಂದು ಸಾಮಾಜಿಕವಾದ ಕೆಲಸ ಮಾಡುತ್ತಿದ್ದರೆ ನಿಮಗೆ ಠೀಕೆಗಳು ಬರಲಿದೆ. ಅದು ನಿಮ್ಮ ಪರೀಕ್ಷೆಯ ಕಾಲವೂ ಆಗಬಹುದು. ಕಟ್ಟಡವನ್ನು ನಿರ್ಮಿಸುವ ಕಾರ್ಯದಲ್ಲಿ ನೀವು ಯಶಸ್ವಿಯಾಗುವಿರಿ. ಸ್ಥಿರಾಸ್ತಿಯ ಖರೀದಿಯನ್ನು ಮಾಡುವಿರಿ. ಸಮಾಜಸೇವೆಯಿಂದ ನಿಮಗೆ ಕೀರ್ತಿಯು ಲಭಿಸುವುದು. ಇಷ್ಟು ದಿನ ಕಷ್ಟಪಟ್ಟು ಕಟ್ಟುತ್ತಿದ್ದ ಸಾಲವು ಇಂದಿಗೆ ಮುಕ್ತಾಯವಾಗಿ ನೆಮ್ಮದಿಯನ್ನು ಕಾಣುವಿರಿ. ಆರ್ಥಿಕವಾಗಿ ಇಂದು ಸಬಲರಾಗುವಿರಿ. ವಾತಾವರಣದ ಕಾರಣದಿಂದ ಅನಾರೋಗ್ಯವು ಉಂಟಾಗಬಹುದು. ಪ್ರೀತಿಯ ಜೀವನದಲ್ಲಿ ಹೆಚ್ಚಿನ ನಿರೀಕ್ಷೆಗಳು ನಿರಾಸೆಗೆ ಕಾರಣವಾಗಬಹುದು. ಅಜಾಗರೂಕರಾಗಿ ಯಾರ ಜೊತೆಯೂ ವರ್ತಿಸುವುದು ಬೇಡ. ಸಮಸ್ಯೆಗಳೆಲ್ಲವೂ ಪರಿಹಾರವಾಗಲಿದೆ. ವೈವಾಹಿಕ ಜೀವನವನ್ನು ಇಂದು ಕೂಡ ಅತ್ಯಂತ ಸಂತೋಷದಿಂದ ಕಳೆಯುವಿರಿ. ಆರೋಗ್ಯದ ವಿಷಯದಲ್ಲಿ ಇಂದು ಸ್ವಲ್ಪ ತೊಂದರೆಯಾಗಬಹುದು. ಉದ್ಯಮಕ್ಕೆ ಹೊಸ ದಿಕ್ಕನ್ನು ಕೊಡುವ ಸಾಧ್ಯತೆ ಇದೆ.

ಕನ್ಯಾ ರಾಶಿ :ನಿಮ್ಮ ವೇಗಕ್ಕೆ ಕೆಲಸಗಳು ಆಗುತ್ತಿಲ್ಲ ಎಂಬ ತುಡಿತ ಇರಲಿದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಇಂದು ನೀವು ನಿಶ್ಚಿಂತರು. ಆಲಂಕಾರಿಕ ವಸ್ತುಗಳನ್ನು ಇಷ್ಟಪಟ್ಟು ಖರೀದಿಸುವಿರಿ. ಏಕಾಗ್ರತೆಗಾಗಿ ಮಾಡಿದ ಪ್ರಯತ್ನಗಳು ಇಂದು ನಿಮಗೆ ಫಲವನ್ನು ಕೊಡುವುದು. ಉದ್ಯೋಗವನ್ನು ಬದಲಿಸುವ ಆಲೋಚನೆಗಳನ್ನು ಮಾಡುವಿರಿ. ಸಂಗಾತಿಯಿಂದ ಹಣದ ಸಹಾಯವು ದೊರೆಯಬಹುದು. ನಿಮಗೆ ಕುಟುಂಬವು ಬೆಂಬಲವನ್ನು ನೀಡುತ್ತದೆ. ನಿಮ್ಮ ವೃತ್ತಿಯಲ್ಲಿ ಪ್ರಸಿದ್ಧರಾಗುತ್ತೀರಿ. ಇನ್ನೊಬ್ಬರ ವಸ್ತುಗಳ ಮೇಲೆ ಬಯಕೆ ಆಗಬಹುದು. ಆಸೆಗಳನ್ನು ಹಿಡಿತದಲ್ಲಿ ಇಡಿ. ಶುಭ ಕಾರ್ಯದ ಚಿಂತನೆ ಅನಿರೀಕ್ಷಿತವಾಗಿ ನಡೆಯಲಿದೆ. ವ್ಯವಹಾರದಲ್ಲಿಯೂ ಹೊಸ ಅಧ್ಯಾಯ ತೆರೆಯಲಿದೆ. ಹೂಡಿಕೆ ವಿಸ್ತರಣೆಗೆ ಅವಸರ ಬೇಡ. ನಿಮ್ಮ ವಿರೋಧಿಗಳಿಗೆ ನೀವು ತಲೆನೋವಾಗಿ ಉಳಿಯುತ್ತೀರಿ. ನಿಮ್ಮ ನೇರ ಮಾತುಗಳು ಇಷ್ಟವಾಗದ ಕಾರಣ ನಿಮ್ಮಿಂದ ಯಾರಾದರೂ ದೂರವಿರಬಹುದು.

ತುಲಾ ರಾಶಿ :ಇಂದು ನಿಮ್ಮ ಆಕಸ್ಮಿಕ ಪ್ರಯಾಣದಲ್ಲಿ ತೊಡಕಾಗಬಹುದು. ಪ್ರೀತಿಯನ್ನು ನೀವು ಒಪ್ಪಿಕೊಳ್ಳುವುದು ನಿಮಗೆ ಅನಿವಾರ್ಯವಾದೀತು. ಸಣ್ಣ ಕಾರಣಕ್ಕೆ ಜೀವನ ಸಂಗಾತಿಯಿಂದ ದೂರಾಗುವ ಸಾಧ್ಯತೆಯಿದೆ. ಸ್ನೇಹಿತರಿಗೆ ಸಹಾಯ ಮಾಡಲು ಅವಕಾಶವಿರುತ್ತದೆ. ಉದ್ಯೋಗ ಮತ್ತು ವ್ಯವಹಾರ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಯತ್ನಗಳಿಂದ ಊಹಿಸಲಾಗದ ಯಶಸ್ಸನ್ನು ಸಾಧಿಸುವಿರಿ. ನೀವು ಮಕ್ಕಳ ಕಡೆಯಿಂದ ತೃಪ್ತಿದಾಯಕ ಒಳ್ಳೆಯ ಸುದ್ದಿ ಪಡೆಯುತ್ತೀರಿ. ಮಕ್ಕಳಿಂದ ಬೇಸರವಾಗುವ ಸಾಧ್ಯತೆ ಇದೆ. ವ್ಯಾಪಾರ, ವ್ಯವಹಾರಗಳ ಮುನ್ನಡೆಗಾಗಿ ಪ್ರಯಾಣದ ಮಾತುಕತೆಯ ಸಾಧ್ಯತೆ ಇರುತ್ತದೆ. ದಾಯಾದಿಗಳ ಆಗಮನ ಕಿರಿಕಿರಿ ತರಲಿದೆ. ಕೆಲವು ಕೆಲಸದ ಭರಾಟೆಯಲ್ಲಿ ಇಂದು ಸಮಯವು ನಿಮ್ಮದಾಗಿರದು. ಲಭ್ಯತೆಯನ್ನು ರೂಢಿಸಿಕೊಳ್ಳಿ.

ವೃಶ್ಚಿಕ ರಾಶಿ :ನಿಮ್ಮ ಬಳಿ ಸಂಪತ್ತಿರುವುದು ತಿಳಿದು ಅದನ್ನು ಪಡೆಯಲು ನಿಮ್ಮವರು ಪ್ರಯತ್ನಿಸಬಹುದು. ಸದವಕಾಶಗಳು ಸಿಗಲಿವೆ ಇಂದು ನಿಮಗೆ. ಬಹಳ ದಿನದ ಕಾರ್ಯಗಳನ್ನು ಬೇಗನೆ ಮುಗಿಸಲಿದ್ದೀರಿ. ಮಕ್ಕಳು ನಿಮಗೆ ಅಪಮಾನ ಮಾಡುವ ಸಾಧ್ಯತೆ ಇದೆ. ನಿಮ್ಮ ನಾಯಕತ್ವವು ಎಲ್ಲರಿಗೂ ತಿಳಿಯುವುದು. ಅಧಿಕಾರಿಗಳಿಂದ ಮೆಚ್ಚುಗೆಯು ಸಿಗಲಿದೆ. ಮುಂದಿನ ದಿನಕ್ಕೆ ಲಾಭವೂ ಸಿಗುವುದು. ಕುಟುಂಬದ ಕೀರ್ತಿಯನ್ನು ಬೆಳೆಸುವವರಿದ್ದೀರಿ. ರಕ್ಷಣೆಯ ವ್ಯವಸ್ಥೆಯಲ್ಲಿ ಇರುವವರಿಗೆ ಶುಭಸುದ್ದಿ ಇರಲಿದೆ. ಚಿಂತಿತ ವ್ಯವಹಾರಗಳು ಹಂತ ಹಂತವಾಗಿ ಬಲಗೊಳ್ಳಲಿವೆ. ಅದೃಷ್ಟ ಬಲದಿಂದ ಹೂಡಿಕೆಗಳು ಲಾಭದಾಯಕವಾಗಲಿವೆ. ನಿಮ್ಮ ಸ್ಥಾನವು ಆರ್ಥಿಕವಾಗಿ ಸದೃಢವಾಗಿರುತ್ತದೆ. ಮನೆಯಲ್ಲಿ ಸಹಕಾರ ಮತ್ತು ಸಂತೋಷದ ವಾತಾವರಣವೂ ಇರುತ್ತದೆ. ಯಾವುದೇ ವೆಚ್ಚದಲ್ಲಿ ಮಾತಿನ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳಬೇಡಿ. ಇಲ್ಲದಿದ್ದರೆ ನಷ್ಟವು ನಿಮ್ಮದಾಗುತ್ತದೆ.

ಧನು ರಾಶಿ :ಇಂದು ಸರ್ಕಾರದ ಕಡೆಯಿಂದ ಆಗಬೇಕಾದ ಕೆಲಸಕ್ಕೆ ಹಿನ್ನಡೆಯಾಗುವುದು. ಉದ್ಯೋಗದ ಸ್ಥಳದಲ್ಲಿ ಕೆಲಸವು ವೇಗವಾಗಿ ನಡೆಯಲಿದೆ. ನೂತನ ಗೃಹನಿರ್ಮಾಣದ ಕನಸು ಕಾಣುವಿರಿ.‌ಒಳ್ಳೆಯ ಕೆಲಸವನ್ನು ಮಾಡುವ ಚಿಂತನೆಯನ್ನು ಮಾಡುವಿರಿ. ಎಲ್ಲವೂ ಕ್ಷಣದಲ್ಲಿ ಆಗಬೇಕು ಎನ್ನುವ ಉದ್ವೇಗವವನ್ನು ಬಿಟ್ಟು ಬಿಡಿ. ಸಮಾಜದಲ್ಲಿ ನಿಮ್ಮ ಹೆಸರು ಕೇಳಿಬರಲಿದೆ. ಅನಾರೋಗ್ಯದಿಂದ ಕಂಗೆಡಬಹುದು. ತೈಲವ್ಯಾಪಾರಿಗಳು ಹೆಚ್ಚು ಲಾಭವನ್ನು ಪಡೆವರು. ನಿಮ್ಮಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ. ನಿಮ್ಮ ಪಾಲಿನ ಕೆಲಸ ಕಾರ್ಯಗಳಲ್ಲಿ ಚುರುಕುತನ ಕಂಡುಬಂದು ಮುನ್ನಡೆ ಸಾಧಿಸಲಿದ್ದೀರಿ. ವ್ಯಾಪಾರ, ವ್ಯವಹಾರದಲ್ಲಿ ಲಾಭದಾಯಕ ವಾತಾವರಣ ಕಂಡುಬರಲಿದೆ. ನಿಮ್ಮ ಖರೀದಿಯಲ್ಲಿ ಸಮಯವನ್ನು ಕಳೆಯುವಿರಿ. ನಿಮ್ಮ ಭೋಗದ ವಿಧಾನಗಳು ಹೆಚ್ಚಾಗುತ್ತವೆ.

ಮಕರ ರಾಶಿ :ನೀವು ಹಿಂದೆ ಆಗಿಹೋದ ಘಟನೆಗಳನ್ನು ನೆನೆಸಿಕೊಂಡು ವ್ಯಥೆಪಡುವಿರಿ. ಸಹೋದರರ ಜೊತೆ ಪ್ರೀತಿಯಿಂದ ಇರಲು ಬಯಸುವಿರಿ. ಬದಲಾಗಬೇಕು ಎನ್ನುವ ಹಂಬಲವು ನಿಮ್ಮಲ್ಲಿ ಅತಿಯಾಗಿರಬಹುದು. ಸರಿಯಾದ ಬದಲಾವಣೆಯನ್ನು ಹೊಂದಿರಿ. ಉದ್ಯೋಗದಲ್ಲಿ ನಷ್ಟವಾಗಬಹುದು ಅಥವಾ ಉದ್ಯೋಗವು ನಷ್ಟವಾಗುವ ಭೀತಿಯೂ ಇರಲಿದೆ. ವಿದ್ಯಾಭ್ಯಾಸದ ಕುರಿತು ಮಕ್ಕಳಿಗೆ ಪಾಠವನ್ನು ಮನೆಯಲ್ಲಿ ಮಾಡುವರು. ನಿಮಗದು ಅಸಹ್ಯ ವಿಷಯವಾಗುವುದು. ನಿಮ್ಮ ಬೆಳವಣಿಗೆಗೆ ಸಹಕರಿಸಿದವರ ನೆನಪನ್ನು ಮಾಡಿಕೊಳ್ಳವಿರಿ. ವ್ಯಾಪಾರದಲ್ಲಿನ ಹೊಸ ಒಪ್ಪಂದಗಳು ಲಾಭದ ಪರಿಸ್ಥಿತಿಗಳನ್ನು ಸೃಷ್ಟಿಸುತ್ತವೆ. ಅಮೂಲ್ಯವಾದದ್ದನ್ನು ಕಳೆದುಕೊಳ್ಳುವಿರಿ. ಕೌಟುಂಬಿಕ ವಿಚಾರಗಳಲ್ಲಿ ಒತ್ತಡಗಳು ದೂರವಾಗಿ ನೆಮ್ಮದಿ ಕಂಡುಬರಲಿದೆ. ಉದ್ಯೋಗ, ವ್ಯವಹಾರಗಳಲ್ಲಿ ಏರುಗತಿಯನ್ನು ಕಂಡು ಸಮಾಧಾನವಾಗಲಿದೆ. ನಕಾರಾತ್ಮಕ ವಿಚಾರಗಳ ಗಮನ ಕೊಟ್ಟು ನಿಮ್ಮ ಸಮಯವು ಹಾಳಾಗುವುದು.

ಕುಂಭ ರಾಶಿ :ನಿಮ್ಮ ಏಳ್ಗೆಯನ್ನು ಕಂಡು ಶತ್ರುಗಳು ಸಂಕಟಪಡುತ್ತಾರೆ. ಅವರನ್ನು ದೂರವಿಟ್ಟು ನಿಮ್ಮ ಕೆಲಸವನ್ನು ಮಾಡಿಕೊಳ್ಳಿ. ಹತ್ತಿರದೂರಿಗೆ ಪ್ರಯಾಣವನ್ನು ಮಾಡಲಿದ್ದೀರಿ. ರಾಜಕೀಯ ನಾಯಕರ ಭೇಟಿಯಾಗಿ, ನಿಮಗೊಂದು ಮಾರ್ಗವು ಸಿಗಲಿದೆ. ಅಚ್ಚರಿಯ ಕೆಲವು ಸಂಗತಿಗಳು ನಿಮಗೆ ಕಾದಿರಬಹುದು. ಅಪರಿಚಿತರ ಭೇಟಿಯಿಂದ ಸ್ವಲ್ಪ ಕಳವಳವಾಗಲಿದೆ. ನಿಯಮಗಳನ್ನು ಮುರಿಯಬೇಕು ಎನ್ನುವ ಮನಃಸ್ಥಿತಿಯು ಇರಲಿದೆ. ಅತಿಯಾದ ಪ್ರಯಾಣವನ್ನು ನೀವು ನಿಲ್ಲಿಸುವುದು ಉತ್ತಮ. ಇಲ್ಲವಾದರೆ ಅದರ ಪರಿಣಾಮವನ್ನು ಅನುಭವಿಸಬೇಕಾಗುವುದು. ಕೆಲವು ಅಹಿತಕರ ಜನರನ್ನು ಭೇಟಿಯಾಗುವುದರಿಂದ ಅನಗತ್ಯ ತೊಂದರೆಗಳನ್ನು ಎದುರಿಸಬೇಕಾಗಬಹುದು. ಉದ್ಯೋಗ, ವ್ಯಾಪಾರ, ವ್ಯವಹಾರಗಳಲ್ಲಿ ಉಲ್ಲಾಸಕರ ವಾತಾವರಣ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ನೆಮ್ಮದಿ ತರಲಿದೆ. ಆಸ್ತಿಯ ವಿಚಾರದಲ್ಲಿ ಅಧಿಕ ಲಾಭ ಸಿಗಲಿದೆ.

ಮೀನ ರಾಶಿ :ಇಂದು ನಿಮ್ಮನ್ನು ಭೇಟಿಯಾಗಲು ಬಂದವರನ್ನು ಅಗೌರವದಿಂದ ಕಾಣಲಿದ್ದೀರಿ. ನಿಮ್ಮ ಹತ್ತಾರು ಕನಸುಗಳಲ್ಲಿ ಒಂದು ಸಾಕಾರಗೊಳ್ಳುವುದು. ಬಂಧುಗಳ ವಿಯೋಗವಾರ್ತೆಯು ಬರಬಹುದು. ನೀವಂದು ಅಶಕ್ತರಿಗೆ ಸಹಾಯ ಮಾಡುವಿರಿ. ಅವರ ದೃಷ್ಟಿಯಲ್ಲಿ ನೀವೇ ಶ್ರೇಷ್ಠರಾಗುವಿರಿ. ಆಲಸ್ಯದಿಂದ ಬಂದಿರುವ ಅವಕಾಶವನ್ನು ಕೈಚೆಲ್ಲಿ ಕುಳಿತುಕೊಳ್ಳಬೇಡಿ. ನಿಮ್ಮ ನಿರ್ಧಾರಕ್ಕೆ ಹಿಂದಿನ ಅನುಭವಗಳೇ ನಿಮಗೆ ಸಹಾಯವಾಗಲಿವೆ. ಇರುವವರನ್ನು ಬಿಟ್ಟು ಇನ್ನೊಬ್ಬರ ನಂಬಿ ಮೋಸಹೋಗಬೇಡಿ. ನೀವು ಯಾವುದೇ ನಿರ್ಧಾರಕ್ಕೆ ಕಟ್ಟುಬೀಳದೇ ಸ್ವತಂತ್ರವಾಗಿ ಇರಲು ಬಯಸುವಿರಿ. ಸ್ವಂತ ವ್ಯಾಪಾರ, ವ್ಯವಹಾರ ಹಾಗೂ ಕೌಟುಂಬಿಕ ವಿಚಾರಗಳಲಿದ್ದ ಒತ್ತಡಗಳು ನಿವಾರಣೆಯಾಗಲಿವೆ. ಶುಭ ಕಾರ್ಯದ ನಿರ್ಧಾರವು ಪ್ರಯತ್ನ ಬಲದಿಂದ ಫಲ ನೀಡಲಿದೆ. ಇಂದು ನಿಮ್ಮ ವೈವಾಹಿಕ ಜೀವನವು ಸಂತೋಷಕರವಾಗಿರುತ್ತದೆ.

Source : https://tv9kannada.com/horoscope/daily-astrology-may-25th-2024-and-zodiac-signs-aries-to-pisces-in-kannada-rbj-838094.html

Leave a Reply

Your email address will not be published. Required fields are marked *