ಗ್ರಾಹಕರಿಗೆ ಶಾಕ್​; ಇಂದಿನಿಂದ ಲೀಟರ್​ಗೆ 2 ರೂ.ನಂತೆ ಅಮೂಲ್​ ಹಾಲಿನ ದರ ಹೆಚ್ಚಳ.

ನವದೆಹಲಿ: ಅಮುಲ್ ಬ್ರಾಂಡ್ ಹೆಸರಿನಡಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವ ಗುಜರಾತ್​ ಕೋಆಪರೇಟಿವ್​​ ಮಿಲ್ಕ್​​ ಮಾರ್ಕೆಟಿಂಗ್​ ಫೆಡರೇಶನ್ (GCMMF) ಅಮೂಲ್​ ಹಾಲಿನ ದರವನ್ನು ಲೀಟರ್​ಗೆ 2 ರೂಪಾಯಿ ಹೆಚ್ಚಿಸಿದೆ. ಇಂದಿನಿಂದ ಈ ಅಮೂಲ್​ ಹಾಲಿನ ದರ ದೇಶದಾದ್ಯಂತ ಜಾರಿಯಾಗಿದೆ. ಹಾಲು ಉತ್ಪಾದನ ವೆಚ್ಚ ಮತ್ತು ಹಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹಾಲಿನ ಮಾರಾಟ ದರವನ್ನು ಹೆಚ್ಚಿಸಲಾಗಿದೆ ಎಂದು ಮಿಲ್ಕ್​​ ಮಾರ್ಕೆಟಿಂಗ್​ ಫೆಡರೇಶನ್​ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಜತೆಗೆ ನಮ್ಮ ಸದಸ್ಯ ಒಕ್ಕೂಟಗಳು ಕಳೆದ ವರ್ಷಕ್ಕಿಂತ ಸರಿಸುಮಾರು 6-8 ಪ್ರತಿಶತದಷ್ಟು ರೈತರಿಗೆ ನೀಡುವ ಬೆಲೆಯಲ್ಲಿ ಹೆಚ್ಚಿಸಿದೆ. ಅಮುಲ್​ ಕಂಪನಿಯ ನಿಯಮದಂತೆ ಹಾಲು ಮತ್ತು ಮತ್ತು ಹಾಲಿನ ಉತ್ಪನ್ನಗಳಿಗೆ ಗ್ರಾಹಕರು ಪಾವತಿಸುವ ಪ್ರತಿ ರೂಪಾಯಿಯ ಸುಮಾರು 80 ಪೈಸೆಗಳನ್ನು ಹಾಲು ಉತ್ಪಾದಕರಿಗೆ ವರ್ಗಾಯಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಪ್ರಸ್ತುತ ಬೆಲೆ ಹೀಗಿದೆ : ಬೆಲೆ ಏರಿಕೆಯಿಂದ 54 ರೂ. ಇದ್ದ ಅಮುಲ್ 1 ಲೀಟರ್​ ಹಾಲಿನ ಬೆಲೆ 56 ಹಾಗೂ 66 ರೂ. ಇದ್ದ 1 ಲೀಟರ್​ ಅಮುಲ್ ಗೋಲ್ಡ್ ಹಾಲಿನ ದರ 68 ರೂ. ಆಗಿವೆ.

Source : https://www.etvbharat.com/kn/!bharat/amul-hikes-milk-price-by-rs-2-per-litre-across-country-from-today-kas24060300795

Leave a Reply

Your email address will not be published. Required fields are marked *