ತೆಂಗಿನಕಾಯಿಯ ಈ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತೇ?

  • ಫೈಬರ್‌ನಲ್ಲಿ ಸಮೃದ್ಧವಾಗಿರುವ ತೆಂಗಿನಕಾಯಿಯಲ್ಲಿ ಆಸ್ಕೋರ್ಬಿಕ್ ಆಮ್ಲ, ಜೀವಸತ್ವಗಳು ಮತ್ತು ಪ್ರೋಟೀನ್‌ಗಳು ಕೂಡ ಹೇರಳವಾಗಿವೆ.
  • ಹಾಗಾಗಿ ಇದನ್ನು ಆರೋಗ್ಯಕ್ಕೆ ಒಂದು ದಿವ್ಯೌಷಧ ಎಂದು ಹೇಳಲಾಗುತ್ತದೆ

Coconut Benefits: ತೆಂಗಿನಕಾಯಿಯನ್ನು ಹಲವು ವಿಧಾನಗಳಲ್ಲಿ ಬಳಸಲಾಗುತ್ತದೆ. ತೆಂಗಿನಕಾಯಿ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ, ಇದನ್ನು ಹಸಿಯಾಗಿ ತಿನ್ನಲೂ ಕೂಡ ತುಂಬಾ ರುಚಿಕರವಾಗಿರುತ್ತದೆ. ಫೈಬರ್‌ನಲ್ಲಿ ಸಮೃದ್ಧವಾಗಿರುವ ತೆಂಗಿನಕಾಯಿಯಲ್ಲಿ ಆಸ್ಕೋರ್ಬಿಕ್ ಆಮ್ಲ, ಜೀವಸತ್ವಗಳು ಮತ್ತು ಪ್ರೋಟೀನ್‌ಗಳು ಕೂಡ ಹೇರಳವಾಗಿವೆ. ಹಾಗಾಗಿ ಇದನ್ನು ಆರೋಗ್ಯಕ್ಕೆ ಒಂದು ದಿವ್ಯೌಷಧ ಎಂದು ಹೇಳಲಾಗುತ್ತದೆ. 

ಆರೋಗ್ಯಕ್ಕೆ ತೆಂಗಿನಕಾಯಿಯ ಸೇವನೆಯ ಅದ್ಭುತ ಪ್ರಯೋಜನಗಳು 
* ದೇಹಕ್ಕೆ ಉತ್ತಮ ಪೌಷ್ಟಿಕಾಂಶ: 

ಆರೋಗ್ಯಕರ ಕೊಬ್ಬುಗಳು, ಪ್ರೋಟೀನ್ಗಳು ಮತ್ತು ವಿವಿಧ ಜೀವಸತ್ವಗಳು ಮತ್ತು ಖನಿಜಗಳ ಮೂಲವಾಗಿರುವ ತೆಂಗಿನಕಾಯಿ (Coconut) ಸೇವನೆಯಿಂದ ದೇಹಕ್ಕೆ ಉತ್ತಮ ಪೌಷ್ಟಿಕಾಂಶಗಳು ದೊರೆಯುತ್ತವೆ. 

* ರೋಗ ನಿರೋಧಕ ಶಕ್ತಿ: 
ಇದರಲ್ಲಿ ಆಂಟಿವೈರಲ್, ಬ್ಯಾಕ್ಟೀರಿಯಾ ವಿರೋಧಿ, ಆಂಟಿಫಂಗಲ್ ಮತ್ತು ಆಂಟಿ-ಪರಾವಲಂಬಿ ಗುಣಗಳು ಕಂಡು ಬರುವುದರಿಂದ ಇದು ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. 

ತ್ವರಿತ ಶಕ್ತಿ: 
ತೆಂಗಿನಕಾಯಿ ತಿನ್ನುವುಯರಿಂದ ದೇಹಕ್ಕೆ ತ್ವರಿತ ಶಕ್ತಿ ಸಿಗುತ್ತದೆ. 

ಜೀರ್ಣಕ್ರಿಯೆ: 
ತೆಂಗಿನಕಾಯಿ ಸೇವನೆಯು ಜೀರ್ಣಕ್ರಿಯೆಯನ್ನು ಸುಧಾರಿಸಿ, ದೇಹವು ಪೋಷಕಾಂಶಗಳು, ಜೀವಸತ್ವಗಳು ಮತ್ತು ಖನಿಜಗಳ ಹೀರುಕೊಳ್ಳುವಿಕೆಯನ್ನು ಸುಧಾರಿಸಲು ಸಹಕಾರಿ ಆಗಿದೆ. 

* ಮಧುಮೇಹ: 
ತೆಂಗಿನಕಾಯಿಯಲ್ಲಿರುವ ಉತ್ತಮ ಅಂಶಗಳು ದೇಹದಲ್ಲಿ ಇನ್ಸುಲಿನ್ ಸ್ರವಿಸುವಿಕೆಯನ್ನು ಸುಧಾರಿಸುತ್ತದೆ. ಹಾಗಾಗಿ ಇದು ಮಧುಮೇಹಿಗಳಿಗೆ (Diabetes) ಲಾಭದಾಯಕ.

* ಕೂದಲ ಆರೋಗ್ಯ 
ತೆಂಗಿನಕಾಯಿ ಸೇವನೆಯು ಒಳಗಿನಿಂದ ಕೂದಲನ್ನು ರಕ್ಷಿಸಲು ಸಹಕಾಗಿ ಆಗಿದೆ 

* ತೂಕ ನಷ್ಟ: 
ಹಿತ-ಮಿತವಾಗಿ ತೆಂಗಿನಕಾಯಿ ತಿನ್ನುವುದರಿಂದ ಇದು ತೂಕನಷ್ಟವನ್ನು (Weight Loss) ಬೆಂಬಲಿಸುತ್ತದೆ. 

* ಚರ್ಮದ ಆರೋಗ್ಯ: 
ತೆಂಗಿನಕಾಯಿಯಲ್ಲಿ ತ್ವಚೆಯ ಆರೋಗ್ಯಕ್ಕೆ ಬೇಕಾಗುವ ಹಲವು ಪೋಷಕಾಂಶಗಳು ಅಡಕವಾಗಿವೆ. ಹಾಗಾಗಿ, ಇದು ಚರ್ಮವನ್ನು ಆರೋಗ್ಯವಾಗಿರಿಸುವ ಮೂಲಕ ಸದಾ  ಯೌವನದಿಂದ ಕಾಣುವಂತೆ ಮಾಡಲು ಸಹಾಯಕವಾಗಿದೆ.  

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. SAMAGRASUDDI ಇದನ್ನು ಖಚಿತಪಡಿಸುವುದಿಲ್ಲ.

Source : https://zeenews.india.com/kannada/health/coconut-benefits-from-weight-loss-to-diabetes-221723

Leave a Reply

Your email address will not be published. Required fields are marked *