Jani Chacko Uthup: ಹೃದಯಸ್ತಂಭನದಿಂದ ಖ್ಯಾತ ಗಾಯಕಿ ಉಷಾ ಉತ್ತುಪ್‌ ಪತಿ ನಿಧನ.

ಉಷಾ ಅವರಿಗೆ ಜಾನಿ ಚಾಕೋ (Jani Chacko Uthup) ಎರಡನೇ ಪತಿ. 70 ದಶಕದಲ್ಲಿ ಉಷಾ ಮೊದಲ ಬಾರಿ ರೆಸ್ಟೋರೆಂಟ್‌ ವೊಂದರಲ್ಲಿ ಕಾರ್ಯಕ್ರಮದ ವೇಳೆ ಜಾನಿ ಅವರನ್ನು ಭೇಟಿ ಆಗಿದ್ದರು. ಉಷಾ ಈ ಹಿಂದೆ ರಾಮು ಅವರನ್ನು ಮದುವೆಯಾಗಿದ್ದರು. ಉಷಾ – ಜಾನಿ ದಂಪತಿಗೆ ಸನ್ನಿ ಎಂಬ ಮಗ ಮತ್ತು ಅಂಜಲಿ ಎಂಬ ಮಗಳಿದ್ದಾರೆ. ಮಂಗಳವಾರ (ಜು.9ರಂದು) ಜಾನಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. ಸಂಗೀತ ಲೋಕದಲ್ಲಿನ ಅಪಾರ ಸಾಧನೆಗಾಗಿ ಉಷಾ ಉತ್ತುಪ್‌ ಅವರಿಗೆ ಈ ವರ್ಷದ ಆರಂಭದಲ್ಲಿ ಪದ್ಮಭೂಷಣ ನೀಡಿ ಗೌರವಿಸಲಾಗಿತ್ತು.

Source : https://m.dailyhunt.in/news/india/kannada/udayavani-epaper-udayavani/jani+chacko+uthup+hrudayastambhanadindha+khyaata+gaayaki+usha+uttup+pati+nidhana-newsid-n621247777?listname=topicsList&topic=news&index=39&topicIndex=1&mode=pwa&action=click

Leave a Reply

Your email address will not be published. Required fields are marked *