ಚಿತ್ರದುರ್ಗ|ಶ್ರೀ ಉಜ್ಜಯಿನಿ ಜಗದ್ಗುರು ವಿದ್ಯಾಪೀಠ ಸಂಸ್ಕೃತ ಪಾಠಶಾಲೆವತಿಯಿಂದ “ಅಸ್ಮಾಕಂ ಸಂಸ್ಕೃತಮ್” ಸರಣಿ ಕಾರ್ಯಕ್ರಮ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಬೆಳಿಗ್ಗೆ ಉಜ್ಜಯಿನಿ ಜಗದ್ಗುರು ವಿದ್ಯಾಪೀಠ ಸಂಸ್ಕೃತ ಪಾಠಶಾಲಾ ವಿದ್ಯಾರ್ಥಿಗಳು ಹಾಗೂ ಸಂಸ್ಕೃತ ಪಾಠಶಾಲಾ ಶಿಕ್ಷಕರು ಅಸ್ಮಾಕಂ
ಸಂಸ್ಕೃತಂ ಜಾಥ ನಡೆಸಲಾಯಿತು ಉಜ್ಜಯಿನಿ ಮಠದಿಂದ ಜಾಥ ಆರಂಭಗೊಂಡು ಸಂಸ್ಕೃತ ಘೋಷಣೆ ಕೂಗುತ್ತಾ ರಂಗಯ್ಯನ ಬಾಗಿಲು
ಮದಕರಿ ಸರ್ಕಲ್, ಮಾರ್ಗವಾಗಿ ಜೋಗಿಮಟ್ಟಿ ರಸ್ತೆಯಲ್ಲಿನ ದಾರುಕಾ ಬಡಾವಣೆ ಹತ್ತಿರವಿರುವ ಶ್ರೀ ವಾಸುದೇವ ರೆಡ್ಡಿ ಶಾಲಾ ಆವರಣ
ತಲುಪಿತು ಸಂದರ್ಭದಲ್ಲಿ ಸಂಸ್ಕೃತ ಘೋಷವಾಕ್ಯಗಳು ವಿದ್ಯಾರ್ಥಿಗಳಿಂದ ಮೊಳಗಿ ಸಾರ್ವಜನಿಕರ ಗಮನ ಸೆಳೆಯಿತು. ಸುಮಾರು 2
ಗಂಟೆಗಳ ಸಂಸ್ಕೃತ ಜಾಥ ನಡೆಸಲಾಯಿತು.

ಶ್ರೀ ವಾಸುದೇವರಡ್ಡಿ ಸ್ಮಾರಕ ಪ್ರೌಢಶಾಲೆಯ ಆವರಣದಲ್ಲಿ ನಡೆದ ಅಸ್ಮಾಕಂ ಸಂಸ್ಕೃತ ಸರಣಿ ಕಾರ್ಯಕ್ರಮದಲ್ಲಿ ಶ್ರೀ ಉಜ್ಜಯಿನಿ ಮಠದ
ನಿಯೋಜಿತ ಉತ್ತರಾಧಿಕಾರಿಗಳು ಅಭಿಷೇಕ್ ದೇವರು ಸಾನಿಧ್ಯ ವಹಿಸಿ ಮಾತನಾಡಿ ಸಂಸ್ಕೃತ ಭಾಷೆಯನ್ನು ಬೆಳೆಸುವುದರಿಂದ
ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡಬಹುದು, ಆ ಒಂದು ಶಕ್ತಿ ಸಂಸ್ಕೃತ ಭಾಷೆಗೆ ಇದೆ ಎಂದು ತಿಳಿಸಿದರು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀ ವಾಸುದೇವ ರೆಡ್ಡಿ ಸ್ಮಾರಕ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ಶ್ರೀಮತಿ ಪದ್ಮ ಬಿಎ
ಮಾತನಾಡಿ ಮಕ್ಕಳಲ್ಲಿ ಸ್ಮರಣ ಶಕ್ತಿ ಹೆಚ್ಚಿಸಲು ಹಾಗೂ ಸ್ಪಷ್ಟ ಉಚ್ಚಾರಣೆ ಹಾಗೂ ವ್ಯಾಕರಣ ಬದ್ಧವಾದ ಭಾಷೆ ಸಂಸ್ಕೃತ ಎಂದರು

ಸಂಸ್ಕೃತ ಪಾಠಶಾಲಾ ಕಾರ್ಯದರ್ಶಿ ಯುಎಂಆರ್ ಪ್ರಸಾದ್, ಪ್ರೌಢಶಾಲಾ ಶಿಕ್ಷಕರಾದ ರಾಮಲಿಂಗಪ್ಪ ನಾಗರಾಜ್ ರವಿಕುಮಾರ್,
ಗಿರಿಜಾ ಭಾಗವಹಿಸಿದ್ದರು. ಸಂಸ್ಕೃತ ಪಾಠಶಾಲೆಯ ಸಹ ಶಿಕ್ಷಕ ದೇವರಾಜು ಕೆ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶಿಕ್ಷಕಿ ಜಲಜಾಕ್ಷಿ
ಪ್ರಾಸ್ತಾವಿಕ ನುಡಿ ಸಹ ಶಿಕ್ಷಕಿ ಕುಮಾರಿ ಶಿಲ್ಪಾ ಸ್ವಾಗತಿಸಿದರು.

2023-24ನೇ ಸಾಲಿನ ಕಾವ್ಯ ಮತ್ತು ಪ್ರಥಮ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದಂತಹ ವಿದ್ಯಾರ್ಥಿಗಳಾದ ಕಾವ್ಯ ತರಗತಿಯಲ್ಲಿ
ಪ್ರಥಮ ಸ್ಥಾನ ಪ್ರಾರ್ಥನಾ, ದ್ವಿತೀಯ ಸ್ಥಾನ ಸಹನಾ , ತೃತೀಯ ಸ್ಥಾನ ಭಾರ್ಗವಿ ಎನ್, ಪ್ರಥಮ 3ನೇ ತರಗತಿ ವಿದ್ಯಾರ್ಥಿಗಳು
ಪ್ರಥಮ ಸ್ಥಾನ ಲಕ್ಷ್ಮಿ ದ್ವಿತೀಯ ಸ್ಥಾನ ಮಲ್ಲಿಕಾ ತೃತೀಯ ಸ್ಥಾನ ರಿಹಾನ್ ಪಡೆದುಕೊಂಡರು. ನಂತರ ಸಂಸ್ಕೃತ ಪಾಠಶಾಲಾ ಮಕ್ಕಳಿಂದ
ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು

Leave a Reply

Your email address will not be published. Required fields are marked *