ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಅ. ೦೮ ರಾಜ್ಯದಲ್ಲಿ ದಲಿತ ಸಿಎಂ ವಿಚಾರ ಈಗ ಅಪ್ರಸ್ತುತ ಮುಂದೆ ದಲಿತ ಸಿಎಂ, ಪಿಎಂ ಆಗಲಿ ಬೇಡ ಎನ್ನಲು ಆಗಲ್ಲ ಈಗ ಸದ್ಯಕ್ಕೆ ನಮ್ಮಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ ದಲಿತ ನಾಯಕರು ಸಾಕಷ್ಟು ಮಂದಿ ಇದ್ದಾರೆ ಮುಂದಕ್ಕೆ ಅವ್ರು ಬೇಕಾದ್ರೆ ಸಿಎಂ ಆಗಲಿ ಮುಂದೆ ಅವ್ರು ದೇಶಕ್ಕೆ ಪ್ರಧಾನಿ, ರಾಷ್ಟ್ರಪತಿಯೂ ಆಗಬಹುದು ಮುಂದೆ ದಲಿತ ಸಮುದಾಯದವರು ಸಿಎಂ ಆಗುವ ಅವಕಾಶ ಇದೆ ಸಾರಿಗೆ ಮತ್ತು
ಮುಜರಾಯಿ ಇಲಾಖೆ ಸಚಿವರಾದ ರಾಮಲಿಂಗ ರೆಡ್ಡಿ ತಿಳಿಸಿದರು.
ಚಿತ್ರದುರ್ಗ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ದಲಿತ ಸಿಎಂ ಆಗುವ
ವಿಚಾರವಾಗಿ ಅಭಿಪ್ರಾಯ ತಿಳಿಸಿ, ಹರಿಯಾಣದಲ್ಲಿ ಬಿಜೆಪಿ ಮುನ್ನಡೆ ವಿಚಾರ ಹರಿಯಾಣದಲ್ಲಿ ಬಿಜೆಪಿ ಬರಲ್ಲ ಅಂದುಕೊಂಡಿದ್ದೆವು ೧೦
ವರ್ಷದಿಂದ ಆಡಳಿತದಲ್ಲಿ ಇದ್ದೆವು ಜನರಿಗೂ ಬೇಸರ ಆಗಿದೆ, ಮೋದಿ ಆಡಳಿತದ ಬಗ್ಗೆ ಬೇಸರ ಇದೆ ಬಿಜೆಪಿ ಮುನ್ನಡೆ ಇದೆ, ಕಾಂಗ್ರೆಸ್
ಸ್ವಲ್ಪ ಹಿನ್ನಡೆ ಇದೆ ಕೆಲವರು ಬಾರಿ ಜನರಿಗೆ ಬಿಜೆಪಿಗರ ಮಾತು ಇಂಪಾಗಿ ಕೇಳಿಸುತ್ತೆ ಜನರು ಬಿಜೆಪಿಯ ಸುಳ್ಳನ್ನ ಬೇಗ ನಂಬುತ್ತಾರೆ
ಸುಳ್ಳು ಹೇಳುವುದರಲ್ಲಿ ಬಿಜೆಪಿಯವರು ಎಕ್ಸ್ಪರ್ಟ್ ಈ ಬಾರಿಯೂ ಜನರಿಗೆ ಬಿಜೆಪಿ ಸುಳ್ಳು ಇಂಪಾಗಿ ಕೇಳಿಸಿದೆ ಜನ ನಂಬುವಂತೆ
ಬಿಜೆಪಿಗರು ಸುಳ್ಳುಗಳನ್ನು ಹೇಳುತ್ತಾರೆ ಲೋಕಸಭೆ ಚುನಾವಣೆಯಲ್ಲಿ ಇಲ್ಲೂ ನಂಬಿದ್ದರಲ್ಲ ಎಂದು ವ್ಯಂಗವಾಡಿದರು.
೫ ವರ್ಷ ಇರ್ತಾರೆ ಅಂತ ಸತೀಶ್ ಜಾರಕಿಹೊಳಿ ಹೇಳಿದ್ದಾರೆ ೫ ವರ್ಷ ಸಿಎಂ ಸಿದ್ದರಾಮಯ್ಯ ಇರ್ತಾರೆ ಅಂತ ನಾನು ಹೇಳ್ತೀನಿ
ವಿಜಯೇಂದ್ರಗೆ ಮಲಗಿದ್ದಾಗ ಕನಸು ಬೀಳುತ್ತೆ ಅದನ್ನೇ ನಿಜ ಅಂದುಕೊಂಡು ಎಲ್ರಿಗೂ ಹೇಳ್ತಾರೆ ಮುಡಾ ಕೇಸ್ ಅದರ ಪಾಡಿಗೆ ಅದು
ನಡೆಯುತ್ತೆ ಬಿಜೆಪಿ, ಜೆಡಿಎಸ್ ನೂರಾರು ಹಗರಣ ಇದೆಯಲ್ಲ ಅದರ ಬಗ್ಗೆ ನಾವು ಮೊದಲು ಮಾತಾಡೋಣ ಸತೀಶ್ ಜಾರಕಿಹೊಳಿ,
ಪರಮೇಶ್ವರ್ ಭೇಟಿ ವಿಚಾರ ಅವರಿಬ್ಬರದ್ದು ವೈಯಕ್ತಿಕ ಸಭೆ ನಡೆಸಿಲ್ಲ ರಾಜ್ಯಕ್ಕೆ ಸಂಬಂಧ ಪಟ್ಟಂಗೆ, ಪಕ್ಷದ ಬಗ್ಗೆ ಚರ್ಚೆ ಮಾಡಿರಬಹುದು
ಎಂದು ರಾಮಲಿಂಗಾರೆಡ್ಡಿ ಉತ್ತರಿಸಿದರು.
ಜಾತಿ ಜನಗಣತಿ ಬಗ್ಗೆ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಮಾಡಲಾಗುವುದು. ಜಾತಿಗಣತಿ ವಿಚಾರ ಬಹಳ ದಿನದಿಂದ ಇತ್ತು
ಯಾವತ್ತಿದ್ರು ಒಂದು ದಿನ ಬರಬೇಕಿತ್ತಲ್ಲ ಆಮೇಲೆ ಇದೆಲ್ಲ ಜಾತಿ ಗಣತಿಯನ್ನ ಯಾರು ಸಹ ಓದಿಲ್ಲ ವರದಿ ಬಂದ ಮೇಲೆ ಏನಿದೆ ಅಂತ
ಗೊತ್ತಾಗುತ್ತೆ ಒಳ್ಳೇದು ಇದ್ರೆ ಸರಿ, ತಪ್ಪಿದ್ರೆ ಸರಿ ಮಾಡಿಕೊಳ್ಳಿ ಅಂತ ಸಲಹೆ ನೀಡಬಹುದು ಎಲ್ರೂ ಜಾತಿ ಗಣತಿ ಬಗ್ಗೆ ತಪ್ಪಿದ್ರೆ ಸಲಹೆ
ಕೊಡಲಿ ತಪ್ಪಿದ್ರೆ ಸರಿ ಮಾಡಿಕೊಳ್ಳಬಹುದು ಅಲ್ವಾ ಜಾತಿ ಗಣತಿ ಜಾರಿ ಆದ್ಮೇಲೆ ಸರಿ ಇದೆಯೋ, ತಪ್ಪಿದ್ಯ ಗೊತ್ತಾಗುತ್ತೆ ಎಂದು
ಸಚಿವರು ತಿಳಿಸಿದರು.
ಈ ಸಂದರ್ಭದಲಿ ಡಿಸಿಸಿ ಅಧ್ಯಕ್ಷ ತಾಜ್ಪೀರ್, ಪ್ರಧಾನ ಕಾರ್ಯದರ್ಶಿ, ಕೆ. ಪಿ. ಸಂಪತ್ ಕುಮಾರ್, ದ್ರಾಕ್ಷ ಮಂಡಳಿ ಅಧ್ಯಕ್ಷ
ಯೋಗಿಶ್ ಬಾಬು. ಮೈಲಾರಪ್ಪ ಇತರರು ಉಪಸ್ಥಿತರಿದ್ದರು.