ಚಿತ್ರದುರ್ಗ| ಜಿಲ್ಲಾ ಮಟ್ಟದ ಅರಿವು ಮೂಡಿಸುವ ಕಾರ್ಯಕ್ರಮ

ಚಿತ್ರದುರ್ಗ ಅ. 24: ಜನರು ಸ್ವಾವಲಂಬಿಗಳಾಗಲು ಸರ್ಕಾರ ವಿವಿಧ ರೀತಿಯ ಯೋಜನೆಗಳನ್ನು ಜಾರಿ ಮಾಡಿದೆ, ವಿವಿಧ ರೀತಿಯ ಸ್ವಯಂ ಉದ್ಯೋಗಗಳಿಗೆ ತರಬೇತಿಗಳನ್ನು ಪಡೆಯುವುದರ ಮೂಲಕ ಬ್ಯಾಂಕ್‍ನಿಂದ ಸಾಲವನ್ನು ಪಡೆದು ಸ್ವಾವಲಂಭಿಗಳಾಗಿ ಬೇರೆಯವರಿಗೂ ಸಹಾ
ಉದ್ಯೋಗವನ್ನು ನೀಡುವಂತೆ ಕೆವಿಐಸಿಯ ನಿರ್ದೆಶಕರಾದ ಮೋಹನ್ ರಾವ್ ತಿಳಿಸಿದ್ದಾರೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಗುರುವಾರ ಖಾದಿ ಮತ್ತು ಗ್ರಾಮೀಣ ಕೈಗಾರಿಕಾ ಮಿಷನ್ ಹಾಗೂ ಶ್ರೀ ಗಂಗಾ ಚಾರಿಟಬಲ್
ಟ್ರಸ್ಟ್‍ದೊಂದಿಗೆ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಕಾರ್ಯಕ್ರಮದ ಅಡಿಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಅರಿವು ಮೂಡಿಸುವ
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

1925ರಲ್ಲಿ ಖಾದಿಗೆ ಸಂಬಂಧಪಟ್ಟಂತೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು ತದ ನಂತರ ವಿವಿಧ ರೀತಿಯಲ್ಲಿ ಇದನ್ನು ಮಾರ್ಪಾಡು ಮಾಡಲಾಯಿತು. ಈಗ ಸಾರ್ವಜನಿಕರಿಗೆ ಉತ್ತಮವಾದ ಖಾದಿಯ ವಸ್ತ್ರಗಳನ್ನು ಕೈಯಿಂದ ತಯಾರಿಸಿ ನೀಡಲಾಗುತ್ತಿದೆ ಇದರಲ್ಲಿ ಹಲವಾರು ಜನತೆ ಯಂತ್ರದಿಂದ ತಯಾರಿಸಿದ ಖಾದಿಯನ್ನು ಬಳಸುತ್ತಿದ್ದಾರೆ, ಆದರೆ ಇದು ಉತ್ತವವಾದ ಖಾದಿ ಅಲ್ಲ ಕೈಯಿಂದ ತಯಾರಿಸಿದ ಖಾದಿಯೇ ಉತ್ತಮವಾಗಿದೆ ಇದು ಬೇಸಿಗೆಯಲ್ಲಿ ತಂಪಾಗಿ ಚಳಿಗಾಲದಲ್ಲಿ ಬೆಚ್ಚಗೆ ದೇಹವನ್ನು ಇಡುತ್ತದೆ. ಅಕ್ಬೋಬರ್‍ನಲ್ಲಿ ಖಾದಿ ಉತ್ಪನ್ನಗಳಿಗೆ ರಿಯಾಯಿತಿ ಸೌಲಭ್ಯ ಇದೆ ಇದರ ಉಪಯೋಗವನ್ನು ಪಡೆಯಬೇಕಿದೆ ಎಂದರು.
ಕರ್ನಾಟಕದಲ್ಲಿ ಸುಮಾರು 250 ಖಾದಿ ತಯಾರಿಕೆಯ ಕೇಂದ್ರಗಳಿವೆ, ಚಿತ್ರದುರ್ಗದಲ್ಲಿಯೂ ಸಹಾ ಉತ್ತಮವಾದ ಖಾದಿ ತಯಾರಿಕಾ
ಘಟಕಗಳು ಇವೆ. ಖಾದಿ ತಯಾರಿಕಾಮ ಘಟಕಗಳನ್ನು ಪ್ರಾರಂಭ ಮಾಡುವವರಿಗೆ ವಿವಿಧ ರೀತಿಯ ಹಣಕಾಸು, ಮಾರಾಟ, ತರಬೇತಿ,
ಪ್ರಮಾಣ ಪತ್ರದ ಸೌಲಭ್ಯ ಹಾಗು ಸಹಾಯ ಇಲಾಖೆಯವತಿಯಿಂದ ದೊರಕಲಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ನಿರ್ಮಾಣವಾಗುವ ಗುಡಿ
ಕೈಗಾರಿಕೆಗಳಿಗೆ ಸಹಾ ಸಹಾಯಧನ ಸಿಗಲಿದೆ. ಗ್ರಾಮಾಂತರ ಪ್ರದೇಶದಲ್ಲಿ ನಿರ್ಮಾಣ ಮಾಡುವ ಗುಡಿ ಕೈಗಾರಿಕೆಗಳಿಗೆ ಸರ್ಕಾರದ
ಬಿಪಿಎಲ್ ಕಾರ್ಡ ಇದ್ದವರಿಗೆ ಉಚಿತವಾಗಿ ಯಂತ್ರಗಳಿ ಸಿಗಲಿದೆ ಎಪಿಎಲ್ ಕಾರ್ಡ ಇದ್ದವರು ಶೇ.10 ರಷ್ಟು ಹಣವನ್ನು ಪಾವತಿಸುವುದರ
ಮೂಲಕ ಯಂತ್ರಗಳನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.

ಯಾವುದೇ ಒಂದು ಕೈಗಾರಿಕೆಯನ್ನು ಪ್ರಾರಂಭ ಮಾಡಲು ಅದರ ಬಗ್ಗೆ ತರಬೇತಿ ಅತಿ ಅವಶ್ಯಕವಾಗಿದೆ. ತರಬೇತಿ ಇಲ್ಲದಿದ್ದರೆ
ಬ್ಯಾಂಕ್‍ಗಳಲ್ಲಿ ಸಾಲ ಸಿಗುವುದು ಕಷ್ಠವಾಗುತ್ತದೆ, ಲಕ್ಷ ಲಕ್ಷಗಟ್ಟಲೆ ಹಣವನ್ನು ತುಂಬಿ ಅದರಿಂದ ಅಂಕಪಟ್ಟಿಗಳನ್ನು ಪಡೆದು ಕೆಲಸಕ್ಕಾಗಿ
ಅಲೆಯುವ ಬದಲು ನಮ್ಮಲ್ಲಿ ನೀಡುವಂತ ತರಬೇತಿಯನ್ನು ಪಡೆದು ಬ್ಯಾಂಕ್ ಮೂಲಕ ಸಾಲವನ್ನು ಪಡೆದು ಸ್ವಯಂ ಉದ್ಯೋಗಿಗಳಾಗಿ
ಬೇರೆಯವರಿಗೂ ಸಹಾ ಕೆಲಸವನ್ನು ನೀಡುವಂತರಾಗಿ ಎಂದು ಮೋಹನ್‍ರಾವ್ ಕರೆ ನೀಡಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ನಿರ್ದೆಶಕರಾದ ನಾಗರಾಜ್ ಮಾತನಾಡಿ, ನೀವುಗಳು ನಿರ್ಮಾಣ ಮಾಡುವ ಕೈಗಾರಿಕೆಗಳ ಬಗ್ಗೆ
ಪೂರ್ಣವಾದ ಮಾಹಿತಿಯನ್ನು ತಿಳಿಯುವುದರ ಮೂಲಕ ನಂತರ ಕೈಗಾರಿಕೆಯನ್ನು ಪ್ರಾರಂಭ ಮಾಡಿ, ಇದೇ ರೀತಿ ಬ್ಯಾಂಕ್‍ಗಳಿಂದ
ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡುವುದರ ಮೂಲಕ ಬೇರೆಯವರಿಗೆ ಸಹಾಯವನ್ನು ಮಾಡಿ, ಸರ್ಕಾರದ ಯೋಜನೆಗಳ
ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಪ್ರಗತಿಯನ್ನು ಸಾಧಿಸಿ ಎಂದರು.

ಕರ್ನಾಟಕ ಪ್ರಗತಿ ಗ್ರಾಮೀಣ ಬ್ಯಾಂಕ್‍ನ ಹಿರಿಯ ವ್ಯವಸ್ಥಾಪಕರಾದ ಕಾವ್ಯ ಮಾತನಾಡಿ, ಬ್ಯಾಂಕ್ ಗಳಿಗೆ ಸಾಲಕ್ಕಾಗಿ ಅರ್ಜಿಯನ್ನು
ಸಲ್ಲಿಸುವಾಗ ಸರಿಯಾದ ರೀತಿಯಲ್ಲಿ ಕಾಗದ ಪತ್ರಗಳನ್ನು ನೀಡಬೇಕಿದೆ, ಕೆಲವೊಮ್ಮೆ ಸರಿಯಾದ ರೀತಿಯಲ್ಲಿ ಕಾಗದ ನೀಡದಿದ್ದರೆ
ಸಾಲವನ್ನು ನೀಡಲು ಆಗುವುದಿಲ್ಲ ಆದರೆಚ ಇದರ ಬಗ್ಗೆ ತಿಳಿಯದ ಜನತೆ ಬ್ಯಾಂಕ್ ಸಾಲವನ್ನು ನೀಡುತ್ತಿಲ್ಲ ಎಂದು ಆರೋಪಿಸುತ್ತಾರೆ.
ತಾವು ಸ್ಥಾಪನೆ ಮಾಡುವ ಉದ್ಯಮ ಮೂರು ವರ್ಷಗಳ ಕಾಲ ನಿರಂತರವಾಗಿ ನಡೆಸುವುದರ ಮೂಲಕ ಸಹಾಯಧನ ನೀಡಲು ಸಾಧ್ಯವಿದೆ
ಎಂದರು.

ಕಾರ್ಯಕ್ರಮದಲ್ಲಿ ಶ್ರೀ ಗಂಗಾ ಚಾರಿಟಬಲ್ ಟ್ರಸ್ಟ್‍ನ ಅಧ್ಯಕ್ಷರಾದ ರಾಜ್, ಕಟ್ಟಡ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ
ವೈ.ಕುಮಾರ್, ಸಮಾಜ ಸೇವಕರಾದ ಕೊಲ್ಲಿಲಕ್ಷ್ಮೀ, ದಿವ್ಯಶ್ರೀ, ಜಾನಪದ ಸಂಘದ ಅಧ್ಯಕ್ಷರಾದ ಪ್ಯಾರಿಜಾನ್ ಹಾಗೂ ಮರಾಠ
ಭಾಗವಹಿಸಿದ್ದರು.

Leave a Reply

Your email address will not be published. Required fields are marked *