ಮಿಥಾಲಿ ರಾಜ್ ಶುಭ ಸುದ್ದಿ : ವಾಪಾಸ್ಸು ಬರ್ತಿದ್ದಾರೆ ದಿಗ್ಗಜ ಆಟಗಾರ್ತಿ

ಮಿಥಾಲಿ ರಾಜ್ ಗೆ ಇರುವ ಫ್ಯಾನ್ಸ್ ಅಷ್ಟಿಷ್ಟಲ್ಲ. ಅವ್ರು ಫೀಲ್ಡ್ ಗೆ ಇಳಿದ್ರೆ ಸಾಕು ಓ ಅಂತ ಕಿರುಚುವ ಬಳಗವೇ ಜಾಸ್ತಿ ಇದೆ. ಅಷ್ಟು ಕ್ರೇಜ್ ಮಿಥಾಲಿ ರಾಜ್ ಅಂದ್ರೆ. ಗಂಡೈಕ್ಲ ಹೃದಯ ಕದ್ದಿದ್ದ ಮಿಥಾಲಿ ರಾಜ್, ಕಳೆದ ವರ್ಷ ನಿವೃತ್ತಿ ಪಡೆದು ಎಲ್ಲರಿಗೂ ಬೇಸರ ಮೂಡಿಸಿದ್ದರು. ಇದೀಗ ಮತ್ತೆ ಅದೇ ಖುಷಿ ಮರಳಿದೆ. ಮಿಥಾಲಿ ರಾಜ್ ವಾಪಾಸ್ಸು ಬರುತ್ತಿದ್ದಾರಂತೆ.

ಹೌದು, ಮಿಥಾಲಿ ರಾಜ್ ನಿವೃತ್ತಿಯಿಂದ ವಾಪಾಸ್ಸು ಬರಲು ಸಜ್ಜಾಗಿದ್ದಾರಂತೆ. ಮಹಿಳಾ ಐಪಿಎಲ್ ಗಾಗಿ ತಮ್ಮ ನಿವೃತ್ತಿಯನ್ನು ವಾಪಾಸ್ ಪಡೆಯಲಿದ್ದಾರಂತೆ. ಫೆಬ್ರವರಿ ಹನ್ನೊಂದರಂದು ಹರಾಜು ಪ್ರಕ್ರಿಯೆ ಆರಂಭವಾಗಲಿದೆ. ಇದರಲ್ಲಿ ಮಿಥಾಲಿ ರಾಜ್ ಯಾರ ಪಾಲಾಗಲಿದ್ದಾರೆ ಎಂಬ ಕುತೂಹಲವಿದೆ.

ಸಾರ್ವಕಾಲಿಕ ನಿವೃತ್ತಿ ಘೋಷಿಸಿದ್ದ ಮಿಥಾಲಿ ರಾಜ್, ಕಳೆದ ಜೂನ್ ನಲ್ಲಿ ICC ಕ್ರಿಕೆಟ್ ಪಾಡ್ ಕಾಸ್ಟ್ ನಲ್ಲಿ ಐಪಿಎಲ್ ಗಾಗಿ ನಿವೃತ್ತಿ ವಾಪಾಸ್ ಪಡೆಯುವುದಾಗಿ ಘೋಷಣೆ ಮಾಡಿದ್ದರು.

The post ಮಿಥಾಲಿ ರಾಜ್ ಶುಭ ಸುದ್ದಿ : ವಾಪಾಸ್ಸು ಬರ್ತಿದ್ದಾರೆ ದಿಗ್ಗಜ ಆಟಗಾರ್ತಿ first appeared on Kannada News | suddione.

from ರಾಷ್ಟ್ರೀಯ ಸುದ್ದಿ – Kannada News | suddione https://ift.tt/DOJ3G6b
via IFTTT

Leave a Reply

Your email address will not be published. Required fields are marked *