ಪಾಟ್ನಾದ ನಾಲ್ಕನೇ ಟ್ರೋಫಿ ಕನಸು ಭಗ್ನ! ಪ್ರೋ ಕಬಡ್ಡಿ ಇತಿಹಾಸದಲ್ಲಿ ಚೊಚ್ಚಲ ಕಪ್ ಗೆದ್ದು ಬೀಗಿದ ಸ್ಟೀಲರ್ಸ್.

ಪ್ರೊ ಕಬಡ್ಡಿ ಲೀಗ್-2024ರ ಫೈನಲ್ (PKL-2024) ಪಂದ್ಯದಲ್ಲಿ ಮೂರು ಭಾರಿಯ ಚಾಂಪಿಯನ್ ಪಾಟ್ನಾ ಪೈರೇಟ್ಸ್ (Patna Pirates) ತಂಡವನ್ನು ಮಣಿಸಿ ಪ್ರೋ ಕಬಡ್ಡಿ ಇತಿಹಾಸದಲ್ಲಿ ತನ್ನ ಮೊದಲ ಟ್ರೋಫಿ ಗೆಲ್ಲುವಲ್ಲಿ ಹರಿಯಾಣ ಸ್ಟೀಲರ್ಸ್ (Haryana Steelers) ಯಶಸ್ವಿಯಾಗಿದೆ. ಆ ಮೂಲಕ ಕಪ್ ಗೆಲ್ಲುವ ಫೇವರೇಟ್ ತಂಡ ಎನಿಸಿಕೊಂಡಿದ್ದ ಪಾಟ್ನಾವನ್ನು ಸೋಲಿಸಿದೆ.

32-23 ರ ಅಂಕಗಳ ಅಂತರದಲ್ಲಿ ಗೆದ್ದ ಪರಿಯಾಣ

ಡಿಸೆಂಬರ್ 29ರಂದು ಪುಣೆಯ ಶ್ರೀ ಶಿವ ಛತ್ರಪತಿ ಶಿವಾಜಿ ಕ್ರೀಡಾಂಗಣದಲ್ಲಿ ನಡೆದ ಪಿಕೆಎಲ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಪಾಟ್ನಾ ಎದುರಾಳಿ ತಂಡಕ್ಕೆ ರೈಡಿಂಗ್‌ಗೆ ಅವಕಾಶ ನೀಡಿತು. ಮೂರು ಬಾರಿಯ ಚಾಂಪಿಯನ್ ಬಲಿಷ್ಠ ಪಾಟ್ನಾ ಪೈರೇಟ್ಸ್ ತಂಡವನ್ನು ಸೋಲಿಸುವಲ್ಲಿ ಮೊಹಮ್ಮದ್ ರೆಜಾ ಶಾರ್ದ್ಲೂ ನೇತೃತ್ವದ ಹರ್ಯಾಣ ಸ್ಟೀಲರ್ಸ್ ಯಶಸ್ವಿಯಾಯಿತು. ರೈಡಿಂಗ್ ಹಾಗೂ ಡಿಫೆನ್ಸ್ ಎರಡರಲ್ಲೂ ಸಾಂಘಟಿತ ಪ್ರದರ್ಶನ ತೋರಿದ ಸ್ಟೀಲರ್ಸ್ ಮೂರು ಭಾರಿಯ ಚಾಂಪಿಯನ್ ಪಾಟ್ನಾವನ್ನು 32-23 ರ ಅಂಕಗಳ ಅಂತರದಲ್ಲಿ ಸೋಲಿಸಿತು.

ಹರಿಯಾಣ ಆಲ್‌ರೌಂಡ್ ಪ್ರದರ್ಶನ

ಹರಿಯಾಣ ಸ್ಟೀಲರ್ಸ್ ಪರವಾಗಿ ಅಮೋಘ ರೈಡಿಂಗ್ ನಡೆಸಿದ ಶಿವಂ ಪತಾರೆ 9 ಪಾಯಿಂಟ್ ಗಳಿಸಿ ಈ ಬಾರಿಯ ಫೈನಲ್‌ನಲ್ಲಿ ಗರಿಷ್ಠ ರೈಡರ್ ಆದರು. ಇನ್ನೂ ಡಿಫೆಂಡರ್ ಮೊಹಮ್ಮದ್ ರೇಜಾ ಶಾರ್ದ್ಲೂ 7 ಮತ್ತು ವಿನಯ್ 6 ಪಾಯಿಂಟ್ ಗಳಿಸುವ ಮೂಲಕ ಹರಿಯಾಣ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದರು. ಚಾಂಪಿಯನ್ ಹರಿಯಾಣ ತಂಡ ಬರೋಬ್ಬರಿ 3 ಕೋಟಿ ರೂಪಾಯಿ ಪಡೆದುಕೊಂಡರೆ, ರನ್ನರ್ ಅಪ್ ಆಗಿರುವ ಪೈರೇಟ್ಸ್‌ಗೆ 1.8 ಕೋಟಿ ರೂಪಾಯಿ ಹಣ ಪಡೆದುಕೊಂಡಿತು.

ಕಳೆದ ಬಾರಿ ರನ್ನರ್ ಅಪ್, ಈ ಬಾರಿ ಚಾಂಪಿಯನ್ ಪಟ್ಟ

ಮೊದಲಾರ್ಧದ ವೇಳೆಗೆ ಹರಿಯಾಣ ಸ್ಟೀಲರ್ಸ್ 15-12 ರಿಂದ ಕೇವಲ ಮೂರು ಅಂಕಗಳ ಮುನ್ನಡೆ ಸಾಧಿಸಿತ್ತು. ಮೊದಲಾರ್ಧದಲ್ಲೇ ಹರಿಯಾಣ ತಂಡವನ್ನು ಆಲೌಟ್ ಮಾಡುವ ಅವಕಾಶ ಪಾಟ್ನಾಗೆ ಸಿಕ್ಕಿತ್ತಾದರೂ ಅದನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾದರು. ಪಾಟ್ನಾದ ವೈಫಲವ್ಯನ್ನು ಸರಯಾಗಿ ಬಳಸಿಕೊಂಡ ಸ್ಟೀಲರ್ಸ್ ಕಳೆದ ಬಾರಿ ರನ್ನರ್ ಅಪ್ ಆಗುವ ಮೂಲಕ ಸ್ವಲ್ಪದರಲ್ಲಿ ಪ್ರಶಸ್ತಿ ಕೈ ಚೆಲ್ಲಿತ್ತು ಆದ್ರೆ, ಈ ಬಾರಿ ತನ್ನ ಪ್ರಶಸ್ತಿ ಹಸಿವನ್ನು ನೀಗಿಸಿಕೊಂಡಿತು.

PKL-2024 ಪ್ರಶಸ್ತಿಗಳು

ರೇಡ್ ಆಫ್ ದಿ ಸೀಸನ್ 11: ಮಂಜೀತ್ (ತೆಲುಗು ಟೈಟಾನ್ಸ್)

ಟ್ಯಾಕಲ್ ಆಫ್ ದಿ ಸೀಸನ್ 11: ಅಂಕಿತ್ (ಪಟ್ನಾ ಪೈರೇಟ್ಸ್)

ಸೀಸನ್ 11 ರ ಅತ್ಯುತ್ತಮ ರೈಡರ್: ದೇವಾಂಕ್ ದಲಾಲ್ (ಪಾಟ್ನಾ ಪೈರೇಟ್ಸ್)

ಸೀಸನ್ 11 ರ ಅತ್ಯುತ್ತಮ ಡಿಫೆಂಡರ್: ನಿತೇಶ್ ಕುಮಾರ್ (ತಮಿಳು ತಲೈವಾಸ್)

ಸೀಸನ್ 11 ರ ಉದಯೋನ್ಮುಖ ಆಟಗಾರ: ಅಯಾನ್ ಲೋಹ್ಚಾಬ್ (ಪಾಟ್ನಾ ಪೈರೇಟ್ಸ್)

ಸೀಸನ್ 11 ರ ಮೋಸ್ಟ್ ವ್ಯಾಲ್ಯೂಯೇಬಲ್ ಪ್ಲೇಯರ್: ಮೊಹಮ್ಮದ್ ರೇಜಾ ಶಾರ್ದ್ಲೂ (ಹರಿಯಾಣ ಸ್ಟೀಲರ್ಸ್)

Source : https://kannada.news18.com/news/sports/haryana-steelers-beat-patna-pirates-in-the-pro-kabaddi-2024-final-ddr-1956803.html

Leave a Reply

Your email address will not be published. Required fields are marked *