ಜಂಗಮ ಸಮಾಜ ತನ್ನ ಧಾರ್ಮಿಕ ಆಚಾರ-ವಿಚಾರಗಳನ್ನು ಉಳಿಸಿಕೊಂಡು ಮುನ್ನಡೆಯಬೇಕು: ವೀರಭದ್ರ ಶಿವಾಚಾರ್ಯ ಶ್ರೀಗಳು.

ಜಂಗಮ ಸಮಾಜದಿಂದ ಮಾತ್ರ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ: ಸಂಸದ ಕಾರಜೋಳ

ಸಮಾಜಕ್ಕೆ ಸಂಸ್ಕಾರ ಮಾರ್ಗದರ್ಶನ ನೀಡುವಲ್ಲಿ ಜಂಗಮ ಸಮಾಜದ ಪಾತ್ರ ಅನನ್ಯ: ಕೆ.ಎಸ್. ನವೀನ್

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಸೆ. 18

ಜಂಗಮ ಸಮಾಜವು ತನ್ನ ಧಾರ್ಮಿಕ ಸಂಪ್ರದಾಯ, ಶಿವಪೂಜೆ ಮತ್ತು ಆಚಾರ-ವಿಚಾರಗಳನ್ನು ಮರೆಯದೆ ಸಂಸ್ಕೃತಿಯನ್ನು ಜಾಗೃತವಾಗಿಡಬೇಕು ಹಾಗೂ ಯುವ ಪೀಳಿಗೆಗೆ ಸಕಾರಾತ್ಮಕ ಹಾದಿಯಲ್ಲಿ ಸಾಗಲು ಧಾರ್ಮಿಕ ಶಿಕ್ಷಣ ನೀಡಬೇಕು ಎಂದು ಕೊರಟಿಗೆರೆಯ ಶ್ರೀ ಕ್ಷೇತ್ರ ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾಮಠದ ಷ.ಬ್ರ ವೀರಭದ್ರ ಶಿವಾಚಾರ್ಯ ಶ್ರೀಗಳು ಕರೆ ನೀಡಿದರು.

ಜಿಲ್ಲಾ ಜಂಗಮ ಸಮಾಜ ಸಂಸ್ಥೆ ಮತ್ತು ತಾಲ್ಲೂಕು ಜಂಗಮ ಸಮಾಜ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಗರದ ಪಂಚಚಾರ್ಯ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದೆ 2025-26ನೇ ಸಾಲಿನ ಜಿಲ್ಲಾ ಪ್ರತಿಭಾ ಪುರಸ್ಕಾರ ಹಾಗೂ ಶಿಷ್ಯವೇತನ ವಿತರಣಾ ಸಮಾರಂಭದ ಸಾನೀಧ್ಯವಹಿಸಿ ಮಾತನಾಡಿದ ಶ್ರೀಗಳು, ಜಂಗಮ ಸಮಾಜಕ್ಕೆ ದೇಶಾದ್ಯಂತ ಅಪಾರ ಗೌರವವಿದ್ದು, ಸಮಾಜದ ಪ್ರತಿಯೊಬ್ಬರೂ ತಮ್ಮ ಧಾರ್ಮಿಕ ಆಚಾರ-ವಿಚಾರಗಳನ್ನು ಗೌರವಿಸಿ, ಪರಂಪರೆಯನ್ನು ಕಾಪಾಡಿಕೊಂಡು ಮುನ್ನಡೆಯಬೇಕು ಎಂದು ಜಂಗಮ ಸಮಾಜಕ್ಕೆ ಕರೆ ನೀಡಿದ್ದಾರೆ.

ಆಚಾರ-ವಿಚಾರಗಳು ಹಾಗೂ ಕಾಯಕದ ಮೇಲೆಯೇ ಸಮಾಜದಲ್ಲಿ ಜಂಗಮರಿಗೆ ಗೌರವ ಸಿಗುತ್ತಿದೆ. ಪ್ರಸ್ತುತ ದಿನಗಳಲ್ಲಿ ಕೆಲವರಲ್ಲಿ ಶಿವಪೂಜೆ, ವಿಭೂತಿ (ಭಸ್ಮ) ಧಾರಣೆ ಹಾಗೂ ಲಿಂಗಧಾರಣೆ ಮಾಡುವಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವುದು ಬೇಸರದ ಸಂಗತಿಯಾಗಿದೆ. ಜಾಗತಿಕವಾಗಿ ನಾಗರಿಕತೆ ಬೆಳೆದರೂ ಇತರ ಧರ್ಮಗಳ ಜನರು ತಮ್ಮ ಧಾರ್ಮಿಕ ಲಾಂಛನ ಹಾಗೂ ಆಚರಣೆಗಳನ್ನು ಬಿಟ್ಟುಕೊಟ್ಟಿಲ್ಲ. ಮಠದ ವತಿಯಿಂದ ಅರ್ಚಕರು ಹಾಗೂ ಪೌರೋಹಿತ್ಯ ಮಾಡುವವರಿಗಾಗಿ ಕಳೆದ 15-20 ವರ್ಷಗಳಿಂದ ಉಚಿತ ಗುರುಕುಲ ಶಿಕ್ಷಣ ನೀಡಲಾಗುತ್ತಿದೆ. ಪ್ರಸ್ತುತ ಎಂಜಿನಿಯರಿಂಗ್ ಪದವೀಧರರು ಕೂಡ ಇಲ್ಲಿ ಮಂತ್ರಗಳನ್ನು ಕಲಿಯಲು ಆಗಮಿಸುತ್ತಿದ್ದು, ಪೌರೋಹಿತ್ಯ ಕಲಿತ ಯುವಕರು ಬೆಂಗಳೂರು ಮುಂತಾದ ನಗರಗಳಲ್ಲಿ ಉತ್ತಮ ಜೀವನ ನಡೆಸುತ್ತಿದ್ದಾರೆ. ಆದ್ದರಿಂದ ಯುವಜನರು ಮತ್ತು ವಿದ್ಯಾರ್ಥಿಗಳು ಗುರುಕುಲ ಶಿಕ್ಷಣದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಉಪ ಮುಖ್ಯಮಂತ್ರಿಗಳು ಸಂಸದರಾದ ಗೋವಿಂದ ಕಾರಜೋಳ ಮಾತನಾಡಿ, ಜಂಗಮ ಸಮಾಜವು ಸಮಾಜವನ್ನು ಸುಸಂಸ್ಕೃತ ಹಾಗೂ ಧರ್ಮವಂತರನ್ನಾಗಿ ಮಾಡಿ ಮುನ್ನಡೆಸುವ ಮಹತ್ತರ ಜವಾಬ್ದಾರಿಯನ್ನು ಹೊತ್ತಿದೆ. ದೇವರಿಗೆ ನೀಡುವ ಸ್ಥಾನವನ್ನು ಸಮಾಜದಲ್ಲಿ ಜಂಗಮರಿಗೆ ನೀಡಲಾಗುತ್ತದೆ. ಧಾರ್ಮಿಕ ವಿಧಿ-ವಿಧಾನಗಳಲ್ಲಿ ಹಾಗೂ ಸಮಾಜಕ್ಕೆ ಸನ್ಮಾರ್ಗ ತೋರಿಸುವಲ್ಲಿ ಜಂಗಮರ ಪಾತ್ರ ಅಪಾರವಾದದ್ದು. ಜಂಗಮರ ಮನೆಯಲ್ಲಿ ಹುಟ್ಟಿ ಬೆಳೆದ ಪ್ರತಿಯೊಬ್ಬರೂ ಸಮಾಜಕ್ಕೆ ಮಾರ್ಗದರ್ಶಕರಾಗಿದ್ದಾರೆ. ಇಂತಹ ಕಾರ್ಯಕ್ರಮಗಳಲ್ಲಿ ಯುವಜನರ ಭಾಗವಹಿಸುವಿಕೆ ಕಡಿಮೆಯಿರುವು ದನ್ನು ಗುರುತಿಸಿದ ಅವರು, ಮುಂದಿನ ದಿನಗಳಲ್ಲಿ ಯುವಕರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಹಾಗೂ ಸಂಸ್ಕಾರವಂತರನ್ನಾಗಿ ಮಾಡಲು ಪ್ರತಿಯೊಂದು ಕುಟುಂಬವೂ ತಮ್ಮ ಮಕ್ಕಳನ್ನು ಇಂತಹ ಕಾರ್ಯಕ್ರಮಗಳಿಗೆ ಕರೆತರಬೇಕು ಎಂದು ಕರೆ ನೀಡಿದರು.

ಮುಂದಿನ ಕಾರ್ಯಕ್ರಮಗಳಲ್ಲಿ ಜಂಗಮ ಸಮಾಜದ ಮಕ್ಕಳ ಜೊತೆಗೆ ಸಮಾಜದ ಕಡುಬಡವರಾದ ಕುಂಬಾರ, ಕಂಬಾರ, ಬಡಿಗೇರ ಹಾಗೂ ಪತ್ತಾರ ಸಮುದಾಯದ ಪ್ರತಿಭಾವಂತ ಮಕ್ಕಳನ್ನೂ ಕರೆದು ಸನ್ಮಾನಿಸಿ, ಆಶೀರ್ವದಿಸುವ ಉದಾರತೆಯನ್ನು ಬೆಳೆಸಿಕೊಳ್ಳಬೇಕು ಎಂದು ಅವರು. ಜಂಗಮ ಸಮಾಜವು ಕೇವಲ ಪೂಜೆ-ಪುನಸ್ಕಾರಗಳಿಗೆ ಸೀಮಿತವಾಗದೆ, ಸಮಾಜದ ಎಲ್ಲಾ ವರ್ಗದ ಜನರನ್ನು ಒಗೂಡಿಸಿಕೊಂಡು, ಬಡ ವಿದ್ಯಾರ್ಥಿಗಳಿಗೆ ಬೆಂಬಲ ನೀಡುವ ಮೂಲಕ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು. ಪಂಚಪೀಠದ ವ್ಯವಸ್ಥೆ ಮತ್ತು ಬಸವಣ್ಣನವರ ವಿಚಾರಧಾರೆಗಳನ್ನು ಅನುಸರಿಸುವವರನ್ನು ಹಾಗೂ 56 ಲಿಂಗಾಯತ ಉಪಜಾತಿಗಳನ್ನು ಒಗೂಡಿಸಿ ಸಮಾಜವನ್ನು ಗಟ್ಟಿಗೊಳಿಸುವ ಪ್ರಯತ್ನ ನಡೆಯಬೇಕಿದೆ. ತಮ್ಮ ಚುನಾವಣಾ ಸಮಯದಲ್ಲಿ ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಸಮಾಜದ ಮುಖಂಡರು ತೋರಿದ ಬೆಂಬಲ ಮತ್ತು ಆಶೀರ್ವಾದವನ್ನು ಸ್ಮರಿಸಿದ ಸಂಸದರು ಸಮಾಜದ ಋಣ ತೀರಿಸಲು ತಾವು ಸದಾ ಸಿದ್ಧರಿರುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಮಾತನಾಡಿ, ನೂರಾರು ವರ್ಷಗಳಿಂದ ಚಿತ್ರದುರ್ಗ ಜಿಲ್ಲೆಯ ಶಿಕ್ಷಣ, ಸಂಸ್ಕಾರ, ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಜಂಗಮ ಸಮಾಜವು ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಹಿಂದೆ ದೇಶದಲ್ಲಿ ಜಾತಿ ವ್ಯವಸ್ಥೆ ಹಾಗೂ ವಿಭಿನ್ನ ದೇವತಾರಾಧಕರ ನಡುವೆ ಭಿನ್ನಾಭಿಪ್ರಾಯಗಳಿದ್ದಾಗ, ಜಂಗಮ ಸಮಾಜವು ಕೇಂದ್ರ ಸ್ಥಾನದಲ್ಲಿ ನಿಂತು ಸಂಸ್ಕಾರ, ಶಿಕ್ಷಣ ಹಾಗೂ ಉಪದೇಶಗಳ ಮೂಲಕ ಜನರನ್ನು ಸರಿದಾರಿಗೆ ತರುವ ಕೆಲಸ ಮಾಡಿದೆ ಎಂದರು.

ಇಂದಿನ ಪೋಷಕರು ತಮ್ಮ ಮಕ್ಕಳನ್ನು ಇಂಜಿನಿಯರ್, ಡಾಕ್ಟರ್ ಅಥವಾ ಉನ್ನತ ಅಧಿಕಾರಿಗಳನ್ನಾಗಿ ಮಾಡಲು ಬಯಸುತ್ತಾರೆಯೇ ಹೊರತು ಪಾರಂಪರಿಕ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಲು ಹಿಂದೇಟು ಹಾಕುತ್ತಿದ್ದಾರೆ. ಆದರೆ, ಸಮಾಜಕ್ಕೆ ಇಂದಿಗೂ ಸಂಸ್ಕಾರ ಮತ್ತು ಮಾರ್ಗದರ್ಶನದ ಅವಶ್ಯಕತೆ ಇದೆ. ಗುರುಗಳ ಸ್ಥಾನದಲ್ಲಿದ್ದು ಸಮಾಜವನ್ನು ಮುನ್ನಡೆಸಿದ ಜಂಗಮ ಪರಂಪರೆಯನ್ನು ಮುಂದಿನ ಪೀಳಿಗೆಯೂ ಮುಂದುವರಿಸಿಕೊಂಡು ಹೋಗಬೇಕು ಶಾಸಕರಾಗಿ ಹಾಗೂ ಸಾರ್ವಜನಿಕ ಪ್ರತಿನಿಧಿ ಯಾಗಿ ಸಮಾಜಕ್ಕೆ ಯಾವುದೇ ಸಮಸ್ಯೆ ಬಂದರೂ ಬೆಂಬಲವಾಗಿ ನಿಲ್ಲುವುದಾಗಿ ಭರವಸೆ ನೀಡಿ ಜಂಗಮ ಸಮಾಜವು ಸಂಘಟಿತವಾಗಿ ಬೆಳೆದು ಇತರ ಎಲ್ಲಾ ಸೋದರ ಸಮಾಜಗಳಿಗೆ ಸದಾ ಮಾರ್ಗದರ್ಶನ ನೀಡುವ ಉನ್ನತ ಸ್ಥಾನದಲ್ಲಿರಲಿ ಎಂದರು.

ಜಿಲ್ಲಾ ಜಂಗಮ ಸಮಾಜ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾದ ಎಸ್.ಷಡಾಕ್ಷರಯ್ಯ ಪ್ರಸ್ತಾವಿಕವಾಗಿ ಮಾತನಾಡಿ ವೀರಶೈವ- ಲಿಂಗಾಯತ ಅಭಿವೃದ್ಧಿ ನಿಗಮ ಮಾದರಿಯಲ್ಲೇ, ಅಲ್ಪಸಂಖ್ಯಾತರಾಗಿರುವ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಜಂಗಮ ಸಮುದಾಯದ ಜನರ ಶೈಕ್ಷಣಿಕ ಮತ್ತು ಆರ್ಥಿಕ ಸೌಲಭ್ಯಕ್ಕಾಗಿ ರಾಜ್ಯ ಮಟ್ಟದಲ್ಲಿ ಪ್ರತ್ಯೇಕವಾದ ;ಜಂಗಮ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕೆಂದು ಸರ್ಕಾರಕ್ಕೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿ, ಚಿತ್ರದುರ್ಗ ಜಿಲ್ಲಾ ಜಂಗಮ ಸಮಾಜವು ಕಳೆದ 12 ವರ್ಷಗಳಿಂದ ಸತತವಾಗಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಸಾಂತ್ವನ ಕಾರ್ಯಕ್ರಮಗಳು, ಆರ್ಥಿಕ ನೆರವು, ಪ್ರತಿಭಾ ಪುರಸ್ಕಾರ, ಕೋವಿಡ್ ಸಂದರ್ಭದಲ್ಲಿ ಆಹಾರ ಧಾನ್ಯ ಹಾಗೂ ಅಗತ್ಯ ಸೌಲಭ್ಯಗಳ ವಿತರಣೆಯಂತಹ ಹಲವಾರು ಕಾರ್ಯಕ್ರಮಗಳನ್ನು ನೆರವೇರಿಸಲಾಗಿದೆ. ಸಮಾಜದ ಯುವಕರು ಸಂಘಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಕರೆ ನೀಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಜಂಗಮ ಸಮಾಜ ಸಂಸ್ಥೆಯ ಅಧ್ಯಕ್ಷರಾದ ಎಂ.ಟಿ.ಮಲ್ಲಿಕಾರ್ಜನ ಸ್ವಾಮಿ ವಹಿಸಿದ್ದರು, ಸಮಾರಂಭದಲ್ಲಿ ಮಾಜಿ ಶಾಸಕರಾದ ಎಸ್.ಕೆ.ಬಸವರಾಜನ್, ಜಿಲ್ಲಾ ಜಂಗಮ ಸಮಾಜದ ಖಂಜಾಚಿ ಕೆ.ಎಸ್.ಶಿವನಗೌಡ್ರು, ಹಿರಿಯ ಪತ್ರಕರ್ತರಾದ ಚಿಕ್ಕಪ್ಪನಹಳ್ಳಿ ಷಣ್ಮುಖ, ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ವಿಜಯ ಕುಮಾರ್, ನಿವೃತ್ತ ಪ್ರಾಧ್ಯಾಪಕ ಡಾ.ಎಂ.ಕೆ.ಪ್ರಭುದೇವ್, ಚಿತ್ರದುರ್ಗ ತಾಲ್ಲೂಕು ಜಂಗಮ ಸಮಾಜದ ಅಧ್ಯಕ್ಷರಾದ ಕಲ್ಲೇಶಯ್ಯ, ಹೊಸದುರ್ಗದ ಚಂದ್ರಶೇಖರ್, ಹೊಳಲ್ಕೆರೆಯ ಹೆಚ್.ಪ್ರಭುಲಿಂಗಯ್ಯ, ಚಳ್ಳಕೆರೆಯ ಎಂ.ಸಿ.ತಿಪ್ಪಸ್ವಾಮಿ, ಹಿರಿಯೂರಿನ ಸಿ.ಎಂ,ಸ್ವಾಮಿ, ಮೊಳಕಾ ಲ್ಮೂರಿನ ಟಿ.ಶಿವಣ್ಣ ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಸಮಾಜದ ಗಣ್ಯರಾದ ನಿವೃತ್ತ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧಿಶರಾಧ ವಸ್ತ್ರದ್ ಮಠ, ಆರೋಗ್ಯ ಇಲಾಖೆಯ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ.ಚಂದ್ರಶೇಖರ ಬಾವಿಮಠ ಹಾಗೂ ಉಪ ನೊಂದಣಾಧೀಕಾರಿಗಳಾದ ಪ್ರಭಾಕರ್ ಮಠದ ಇವರನ್ನು ಸನ್ಮಾನಿಸಲಾಯಿತು.

ಬಸವರಾಜ ಶಾಸ್ತ್ರಿ ವೇದ ಘೋಷ ವಾಚನ ಮಾಡಿದರೆ ದೇವಿರಮ್ಮ ಪ್ರಾರ್ಥಿಸಿದರು, ಬಾಪೂಜಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಕೆ.ಎಂ.ವಿರೇಶ್ ಸ್ವಾಗತಿಸಿದರು. ಗಣೇಶಯ್ಯ ಕಾರ್ಯಕ್ರಮ ನಿರೂಪಿಸಿದರು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Whats App Channel: https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *