ಚಿತ್ರದುರ್ಗ: ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ವತಿಯಿಂದ ದಿನಾಂಕ : 31.01.2025ರ ಗುರುವಾರ ತ.ರಾ.ಸು ರಂಗ ಮಂದಿರದಲ್ಲಿ 2024-25ನೇ ಸಾಲಿನ “ಕಿಡ್ಡೀ ಕಾರ್ನಿವಲ್” ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದ ಶ್ರೀಮತಿ ಉಜ್ವಲ ವೀರಣ್ಣ ಸಿದ್ದಣ್ಣನವರ್ ಹಿರಿಯ ನ್ಯಾಯಾಧೀಶರು ಚಿತ್ರದುರ್ಗ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಮಕ್ಕಳಿಗೆ ವಿದ್ಯೆಯ ಜೊತೆ ಸಂಸ್ಕಾರ ಬಹುಮುಖ್ಯ ಕೇವಲ ಶಾಲೆಯಷ್ಟೇ ಅಲ್ಲದೇ ಮನೆಯಲ್ಲೂ ಕಲಿಯುವ, ಕಲಿಸುವ, ಜವಾಬ್ದಾರಿ ತಂದೆ ತಾಯಿಗೆ ಇರುತ್ತದೆ. ಎಲ್ಲವನ್ನು ಶಾಲೆಯಿಂದ ಅವಲಂಬಿಸುವುದು ತಪ್ಪು. ಮನೆಯಲ್ಲಿ ಪೋಷಕರು ಮಕ್ಕಳನ್ನು ಹೇಗೆ ಬೇಳೆಸುತ್ತಾರೋ ಹಾಗೆ ಸಮಾಜದಲ್ಲಿ ವ್ಯವಹರಿಸುತ್ತಾರೆ. ಹಾಗಾಗಿ ಕುಟುಂಬದ ಸದಸ್ಯರು ಮಗುವಿನ ಬೆಳವಣಿಗೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತಾರೆ ಎಂದರು. ಜವಾಬ್ದಾರಿಯುತ ಪೋಷಕರಾದ ನೀವು ಮಕ್ಕಳ ಮೊಬೈಲ್ ಗೀಳನ್ನು ಬಿಡಿಸಿ ಹೆಚ್ಚು ಅಂಕಗಳನ್ನು ಗಳಿಸಲು ಉತ್ತೇಜಿಸಿ ಎಂದು ಕಿವಿಮಾತು ಹೇಳಿದರು.
ಇನ್ನು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಚಿತ್ರದುರ್ಗ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ಎಸ್ ನಾಗಭೂಷಣ್ ಅವರು ಮಾತನಾಡುತ್ತಾ ಮಗುವಿಗೆ ಶಾಲೆಗಳಲ್ಲಿ ಕೇವಲ ಪಠ್ಯಬೋಧನೆ ಮಾಡಿದರಷ್ಟೇ ಸಾಲದು ಚಿಕ್ಕ ವಯಸ್ಸಿನಿಂದಲೇ ಅವರಿಗೆ ಒಳ್ಳೆಯ ಸಂಸ್ಕಾರ ಕೊಡುವಂತಹ ವಾತವರಣ ಕಲ್ಪಿಸಿ ಅದಕ್ಕೆ ಪೂರಕವಾದ ಚಟುವಟಿಕೆಗಳನ್ನು ಶಾಲೆಯಲ್ಲಿ ಹಮ್ಮಿಕೊಳ್ಳವುದು ಅತೀ ಅವಶ್ಯವಾಗಿದೆ. ಪೋಷಕರು ಮಕ್ಕಳನ್ನು ಸಂಸ್ಕಾರವoತರನ್ನಾಗಿ ಮಾಡಿದಾಗ ಸಮಾಜದ ಸ್ವಾಸ್ಥ್ಯವೂ, ಸದೃಢವಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಸoಸ್ಥಾಪಕ ಕಾರ್ಯದರ್ಶಿಗಳಾದ ಶ್ರೀಯುತ ಬಿ ವಿಜಯ ಕುಮಾರ್ ಅವರು ಮಾತನಾಡುತ್ತಾ ಯಾವುದೇ ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಪೋಷಕರ ಪಾತ್ರ ಮತ್ತು ಸಹಕಾರ ಬಹುಮುಖ್ಯ ಎಂದರು. ಮಕ್ಕಳನ್ನು ಐಟಿ ಬಿಟಿಗೆಂದೇ ತಯಾರು ಮಾಡಬೇಡಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ವೃತ್ತಿಪರತೆಯನ್ನು ಬೆಳಿಸಿಕೊಳ್ಳುವಂತಹ ಪದವಿಗಳಿಗೆ ಪ್ರೋತ್ಸಾಹ ನೀಡಿ ಎಂದರು.
ಕಾರ್ಯಕ್ರಮದಲ್ಲಿ ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ‘ವಿದ್ಯಾ ವಿಕಾಸ ರತ್ನ’ ನೀಡಿ ಸನ್ಮಾನಿಸಲಾಯಿತು. ನಂತರ ರಾಷ್ಟçಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಮೂರನೇ ಸ್ಥಾನ ಪಡೆದ 9ನೇ ತರಗತಿಯ ವಿದ್ಯಾರ್ಥಿಗಳಾದ ಜಾಗೃತ್ ಟಿ ಹಾಗೂ ಹರ್ಷವರ್ಧನ್ ಎಸ್ ಅವರನ್ನು ಸಂಸ್ಥೆಯ ವತಿಯಿoದ ಸನ್ಮಾನಿಸಲಾಯಿತು.
ಪೋಷಕರ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿಲಾಯಿತು.
ಕಾರ್ಯಕ್ರಮದಲ್ಲಿ ನರ್ಸರಿಯಿಂದ 1 ನೇ ತರಗತಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವರ್ಣರಂಜಿತವಾಗಿ ಅಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಶಿಕ್ಷಕಿ ಕಾವ್ಯಾ ಯದುವಂಶ್ ನಿರೂಪಿಸಿದರು. ಶಿಕ್ಷಕಿ ರೇಖಾ ಪಿ.ವಿ ಸ್ವಾಗತಿಸಿದರು,
ಉಪಪ್ರಾಚಾರ್ಯರಾದ ಅವಿನಾಶ್.ಬಿ ಶಾಲಾ ವಾರ್ಷಿಕ ವರದಿಯನ್ನು ವಾಚಿಸಿದರು, ಶಿಕ್ಷಕಿ ಭಾಗ್ಯಶ್ರೀ ವಂದಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಸುನಿತಾ.ಪಿ.ಸಿ, ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಯುತ.ಎಸ್.ಎಂ ಪೃಥ್ವೀಶ, ಮತ್ತೋರ್ವ ನಿರ್ದೇಶಕರಾದ ಸ್ನೇಹಾ ಎನ್ ಎಸ್, ಐಸಿಎಸ್‌ಇ ಪ್ರಾಚಾರ್ಯರಾದ ಬಸವರಾಜಯ್ಯ.ಪಿ, ಮುಖ್ಯ ಶಿಕ್ಷಕರಾದ ಎನ್.ಜಿ.ತಿಪ್ಪೇಸ್ವಾಮಿ ಮತ್ತು ಎಲ್ಲಾ ಶಿಕ್ಷಕ/ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.