ಕಬೀರಾನಂದಾಶ್ರಮದವತಿಯಿಂದ ನಡೆಯುತ್ತಿರುವ 95ನೇ ಮಹಾ ಶಿವರಾತ್ರಿಮಹೋತ್ಸವದ ನಾಲ್ಕನೇ ದಿನದ ಕಾರ್ಯಕ್ರಮ

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಫೆ. 26 ಪರಮಾತ್ಮನನ್ನು ಒಲಿಸಿಕೊಳ್ಳಲು ಯಾವುದೇ ರೀತಿಯ ಆಡಂಬರ ಬೇಡ, ಭಕ್ತಿಯಿಂದ ಆತನನ್ನು ಆರಾಧಿಸಿದರೆ ಸಾಕು ಆತ ನಿಮ್ಮ ಭಕ್ತಿಗೆ ಒಲಿಯುತ್ತಾನೆ, ನಿಮ್ಮ ಇಷ್ಠಾರ್ಥಗಳನ್ನು ನೇರವೇರಿಸುತ್ತಾನೆ ಎಂದು ಹುಬ್ಬಳ್ಳಿಯ ವಿಜಯಪುರದ ಶ್ರೀ ಷಣ್ಮುಖಾರೂಢ ಮಠದ
ಶಾಂತಾಶ್ರಮದ ಶ್ರೀ ಅಭಿನವ ಸಿದ್ದಾರೂಢ ಶ್ರೀಗಳು ತಿಳಿಸಿದರು.

ಚಿತ್ರದುರ್ಗ ನಗರದ ಕಬೀರಾನಂದ ನಗರದಲ್ಲಿನ ಶ್ರೀ ಕಬೀರಾನಂದಾಶ್ರಮದವತಿಯಿಂದ ನಡೆಯುತ್ತಿರುವ 95ನೇ ಮಹಾ ಶಿವರಾತ್ರಿ
ಮಹೋತ್ಸವದ ನಾಲ್ಕನೇ ದಿನದ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಭಕ್ತಿಯಿಂದ ಭಗವಂತ ನಾಮ
ಸ್ಮರಣೆಯನ್ನು ಮಾಡಿದಾಗ ಆತ ಒಲಿಯುತ್ತಾನೆ, ಮನಸ್ಸಿನಲ್ಲಿ ಆಸೆಯನ್ನು ಇಟ್ಟುಕೊಂಡು ಅದನ್ನು ಈಡೇರಿಸುವಂತೆ ಭಗವಂತನ್ನು
ಒತ್ತಾಯಿಸಿ ಪೂಜೆಯನ್ನು ಮಾಡಲಾಗುತ್ತದೆ. ಈ ಜನ್ಮದಲ್ಲಿ ಪುಣ್ಯವನ್ನು ಗಳಿಸಿದಾಗ ಮಾತ್ರ ಸ್ವರ್ಗದಲ್ಲಿ ಜಾಗ ಸಿಗಲು ಸಾಧ್ಯವಿದೆ.
ಸ್ವರ್ಗವೂ ಸಹಾ ಕ್ಷಣಿಕ ಅಲ್ಲಿಯ ಜಾಗ ಇಲ್ಲದಿದ್ಧಾಗ ಮತ್ತೇ ಭೂಲೋಕಕ್ಕೆ ಬರಲೇ ಬೇಕಿದೆ. ಮೋಕ್ಷವನ್ನು ಪಡೆಯಲು ಭಕ್ತಿಯೊಂದೇ
ಮಾರ್ಗವಾಗಿದೆ ಎಂದರು.
ಹೆಬ್ಬಾಳ್‍ನ ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಶ್ರೀಗಳು ಮಾತನಾಡಿ, ನಮ್ಮ ಮಠ ಹಾಗೂ ಕಭೀರಾನಂದ ಆಶ್ರಮ
ಹಿಂದುಳಿದ ವರ್ಗಗಳ ಮಠವಾಗಿವೆ, ಇವುಗಳು ಸಮಾಜದ ಪರವಾಗಿ ಚಿಂತನೆಯನ್ನು ನಡೆಸುತ್ತವೆ, ಭಕ್ತಿಯಿಂದ ಮುಕ್ತಿಯನ್ನು
ಕರುಣಿಸುತ್ತದೆ. ಇವುಗಳು ಸನಾತನ ಧರ್ಮವನ್ನು ಉಳಿಸುವ ಮಠಗಳಾಗಿವೆ. ಇಂದಿನ ದಿನಮಾನದಲ್ಲಿ ಸಮಾಜ ಅಧೋಗತಿಗೆ
ಹೋಗುತ್ತಿದೆ ಯುವ ಜನಾಂಗ ದಾರಿ ತಪ್ಪುತ್ತಿದೆ, ಉತ್ತಮ ಸಮಾಜ ನಿರ್ಮಾಣಕ್ಕೆ ದಾರಿ ತಪ್ಪುತ್ತಿರುವ ಯುವ ಜನಾಂಗವನ್ನು
ಸರಿದಾರಿಗೆ ತರಲು ಗುರುಗಳ ಅವಶ್ಯಕತೆ ಇದೆ. ನಮ್ಮಲ್ಲಿ ಕಾಯಕ ಪ್ರಜ್ಞೆ ಹೆಚ್ಚಾಗಬೇಕಿದೆ ಎಲ್ಲರು ಸಹಾ ಕಾಯಕ ಮಾಡಿದೇ
ಪ್ರಸಾದವನ್ನು ಸ್ವೀಕಾರ ಮಾಡಬೇಕೆಂಬ ಛಲ ಬರಬೇಕಿದೆ ಮಾನವನಲ್ಲಿ ಇರುವಂತ ದುಶ್ಚಟಗಳು, ದುರುದ್ದೇಶಗಳು
ದೂರವಾಗಬೇಕಿದೆ. ಆಗ ಮಾತ್ರ ಉತ್ತಮ ಸಮ ಸಮಾಜ ನಿರ್ಮಾಣವಾಗಲು ಸಾಧ್ಯವಿದೆ ಎಂದರು.
ಹೂಸದುರ್ಗದ ಶೀಲಾಪುರಿ ಉಪ್ಪಾರ ಭಗೀರಥ ಮಹಾ ಸಂಸ್ಥಾನದ ಶ್ರೀ ಪುರುಷೋತ್ತಮಾನಂದ ಶ್ರೀಗಳು ಮಾತನಾಡಿ,
ನಿರ್ಮಲವಾದ ನಿಷ್ಕಲ್ಮಶವಾದ ಭಕ್ತಿಯಿಂದ ಮುಕ್ತಿಯನ್ನು ಹೊಂದಲು ಸಾಧ್ಯವಿದೆ. ಶಿವರಾತ್ರಿಯನ್ನು ಈ ಒಂದು ದಿನ ಮಾತ್ರ ಆಚರಣೆ
ಮಾಡದೇ ಪ್ರತಿ ದಿನವೂ ಸಹಾ ಶಿವನ ನಾಮಸ್ಮರಣೆಯನ್ನು ಮಾಡುವುದರ ಮೂಲಕ ಶಿವನ ಕೃಪೆಗೆ ಪಾತ್ರರಾಗಬೇಕಿದೆ. ಮಾನವ
ಜೀವ ಇರುವವರೆಗೂ ಶಿವನಾಗಿರುತ್ತಾನೆ ಜೀವ ಹೋದ ಮೇಲೆ ಶವನಾಗುತ್ತಾನೆ, ಜೀವ ಇದ್ದಾಗಲೇ ಉತ್ತಮವಾದ ಸಮಾಜ
ಮುಖಿಯಾದ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಸನ್ಮಾರ್ಗವನ್ನು ಕಂಡುಕೊಳ್ಳಬಹುದಾಗಿದೆ ಎಂದರು.
ಮಾಜಿ ಸಚಿವರಾದ ಹೆಚ್.ಅಂಜನೇಯ ಮಾತನಾಡಿ, ಕಳೆದ 35 ವರ್ಷಗಳ ಹಿಂದೆ ಈ ಪ್ರದೇಶ ಕಾಡಾಗಿತ್ತು ಆಗ ಇಲ್ಲಿಗೆ ಬಂದ
ಶಿವಲಿಂಗಾನಂದ ಶ್ರೀಗಳು ಕೃಪಾ ದೃಷ್ಟಿಯಿಂದ ಈ ಪ್ರದೇಶ ಈಗ ನಾಡಾಗಿ ಉಪಯೋಗಕ್ಕೆ ಬರುವಂತ ಸ್ಥಳವಾಗಿದೆ.
ಚಿತ್ರದುರ್ಗದಲ್ಲಿ ಜಾತಿಗೊಂದು ಮಠಗಳು ಇವೆ, ಅದಕ್ಕೆ ಅವರದ್ದೇ ಆದ ಭಕ್ತರಿದ್ದಾರೆ. ಆದರೆ ಕಬೀರಾನಂದಾಶ್ರಮ ಮಾತ್ರ
ಯಾವುದೇ ಜಾತಿ, ಧರ್ಮ ಇಲ್ಲ ಇಲ್ಲಿ ಎಲ್ಲಾ ಜನಾಂಗ, ಜಾತಿ, ಧರ್ಮವರು ಸಹಾ ಬರುತ್ತಾರೆ ಶ್ರೀಗಳು ಎಲ್ಲರಿಗೂ ಸಹಾ
ದರ್ಶನಾರ್ಶಿವಾದವನ್ನು ನೀಡುತ್ತಾರೆ. ಈ ಆಶ್ರಮ ಬಸವಣ್ಣ ರವರ ಅನುಭವ ಮಂಟಪದ ರೀತಿಯಲ್ಲಿ ಇದೆ. ಶ್ರೀಗಳು ಅನಾಥ
ಮಕ್ಕಳನ್ನು ಪೋಷಣೆ ಮಾಡುತ್ತಿದ್ದಾರೆ ಅವರಿಗೆ ಶಿಕ್ಷಣವನ್ನು ನೀಡುತ್ತಿದ್ದಾರೆ, ವೃದ್ಧಾಶ್ರಮವನ್ನು ನಡೆಸುವುದರ ಮೂಲಕ ಕೊನೆಯ
ಸಮಯದಲ್ಲಿ ನಿಶ್ಚಿಂತ ಜೀವನ ನಡೆಸಲು ಸಹಕಾರಿಯಾಗಿದ್ದಾರೆ. ಗೋವುಗಳನ್ನು ಸಾಕುವುದರ ಮೂಲಕ ಗೋರಕ್ಷಕರಾಗಿದ್ದಾರೆ
ಎಂದರು.

ಶಿವಲಿಂಗಾನಂಧ ಶ್ರೀಗಳು, ಹಾಗೂ ಬಾಗಲಕೋಟೆಯ ಕೌದಿಶ್ವರ ಮಹಾ ಸಂಸ್ಥಾನದ ಶ್ರೀ ಮಾಧವಾನಂದ ಶ್ರೀಗಳು
ಸಾನಿಧ್ಯವಹಿಸಿದ್ದರು. ಕಾರ್ಯಕ್ರಮದಲ್ಲಿ 95ನೇ ಮಹಾ ಶಿವರಾತ್ರಿ ಮಹೋತ್ಸವ ಸಮಿತಿ ಅಧ್ಯಕ್ಷರಾದ ವಿಜಯಕುಮಾರ್, ಗ್ಯಾರೆಂಟಿ
ಯೋಜನೆಯ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷರಾದ ಶಿವಣ್ಣ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ತಾಜ್‍ಪೀರ್, ಚಿತ್ರದುರ್ಗ
ತಾ.ಪಂ. ಇಓ ರವಿಕುಮಾರ್, ಸೇರಿದಂತೆ ಇತರರು ಭಾಗವಹಿಸಿದ್ದರು.

ಸುಬ್ರಾಯ ತಿಮ್ಮಣ್ಣ ಭಟ್ಟರು ವೇದ ಘೋಷಗಳನ್ನು ಮಾಡಿದರೆ ಅಭೀಷೇಕ ಮುರುಡ ಪ್ರಾರ್ಥಿಸಿದರೆ, ವಿ.ಎಲ್.ಪ್ರಶಾಂತ್
ಸ್ವಾಗತಿಸಿದರು, ನವೀನ್ ಮಸ್ಕಲ್ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಸದ್ಗುರು ಕಬೀರಾನಂzದಸ್ವಾಮಿ ವಿದ್ಯಾಪೀಠದ ನರ್ಸಿಂಗ್
ಮತ್ತು ಪ್ಯಾರ ಮೆಡುಕಲ್ ಬಿ.ಇಡಿ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಸಿಕೊಟ್ಟರು,
ಮಯೂರಿ ಬಸವರಾಜ್ ರವರಿಂದ ಭರತನಾಟ್ಯ ಕುಚುಪುಡಿ, ಸಂದೀಪ್‍ರವರಿಂದ ಜಾದು ಕಾರ್ಯಕ್ರಮ ನಡೆಸಿಕೊಟ್ಟರು.

Leave a Reply

Your email address will not be published. Required fields are marked *