ಚಿತ್ರದುರ್ಗ:
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಕನ್ನಡದ ನೆಲ, ಜಲ, ಭಾಷೆ, ಸಂಸ್ಕೃತಿಯನ್ನು ಕಾಪಾಡುವ ಜವಾಬ್ದಾರಿ
ನಮ್ಮೆಲ್ಲರ ಮೇಲಿದೆ. ಕನ್ನಡದ ಬಗ್ಗೆ ಎಂದಿಗೂ ಉದಾಸೀನ ಇರಬಾರದು ಎಂದು ಜಿಲ್ಲಾ
ಉಸ್ತುವಾರಿ ಸಚಿವ ಟಿ.ರಘುಮೂರ್ತಿ ಹೇಳಿದರು.
ನಗರದ ಕಣುಮಪ್ಪ ಬಡಾವಣೆ, ಆದಿಜಾಂಬವ ಲೇಔಟ್ ನಿವಾಸಿಗಳು ಸಾಮ್ರಾಟ್ ವೃತ್ತದಲ್ಲಿ
ಭಾನುವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ
ಮಾತನಾಡಿದರು.
ನಾಲ್ಕನೇ ವರ್ಷದಿಂದಲೂ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ಅಭಿನಂದನಾರ್ಹ. ನಗರ ಪ್ರದೇಶದಲ್ಲಿ ಪಕ್ಕದ ಮನೆಯವರ ಪರಿಚಯವೂ ಇಲ್ಲದಂತಾಗಿದೆ. ಆದರೆ, ಇಲ್ಲಿ ಎಲ್ಲರೂ
ಒಟ್ಟು ಸೇರಿ ಸೌಹಾರ್ದಯುತ, ಸಾಮರಸ್ಯ ಕಾಪಾಡಿಕೊಂಡು ರಾಜ್ಯೋತ್ಸವ ಆಚರಿಸುತ್ತಿರುವುದು
ಮಾದರಿ ಕಾರ್ಯ ಎಂದು ಬಣ್ಣಿಸಿದರು.
ನಮ್ಮ ತಾಯಿಯನ್ನು ಪ್ರೀತಿಸುವಂತೆ ಮೊದಲು ನಮ್ಮ ಭಾಷೆಯನ್ನು ಪ್ರೀತಿಸಬೇಕು. ಕನ್ನಡದ
ಮೂಲಕವೇ ಬೇರೆ ಭಾಷೆಗಳನ್ನು ಕಲಿತು ಏನು ಬೇಕಾದರೂ ಸಾಧನೆ ಮಾಡಬಹುದು. ಕನ್ನಡದಲ್ಲಿ ಓದಿದರೆ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗುತ್ತದೆ ಎಂಬ ತಪ್ಪು ಕಲ್ಪನೆ
ದೂರಗೊಳಿಸಬೇಕೆಂದರು. ಕಾನ್ವೆAಟ್ನಲ್ಲಿ ಓದಿ ಹೆಚ್ಚು ಅಂಕ ಪಡೆದು ಉನ್ನತ ಸ್ಥಾನಕ್ಕೇರಿದ ಕೆಲ ಮಕ್ಕಳು ತಂದೆ-ತಾಯಿಯನ್ನು ನಿರ್ಲಕ್ಷಿಸುವ ಉದಾಹರಣೆಗಳಿವೆ. ಆದರೆ, ಕನ್ನಡ ಸಂಸ್ಕೃತಿಯಲ್ಲಿ
ಬೆಳೆದ ಮಕ್ಕಳು ಮೌಲ್ಯಗಳನ್ನು ಮರೆಯುವುದಿಲ್ಲ. ಕನ್ನಡಕ್ಕಾಗಿ ಹೋರಾಟ ಮಾಡಿದ,
ಕರ್ನಾಟಕ ಏಕೀಕರಣಕ್ಕಾಗಿ ನೇತೃತ್ವ ವಹಿಸಿದ ಎಸ್. ನಿಜಲಿಂಗಪ್ಪ ಸೇರಿ ಅನೇಕರ ಸ್ಮರಣೆ
ಅಗತ್ಯ ಎಂದು ತಿಳಿಸಿದರು.
ಇಲ್ಲಿನ ಮೂಲ ಸೌಕರ್ಯಗಳ ಬೇಡಿಕೆಗಳನ್ನು ತಾವು ನನ್ನ ಗಮನಕ್ಕೆ ತಂದಿದ್ದು, ಶಾಸಕ
ಕೆ.ಸಿ.ವೀರೇಂದ್ರ ಪಪ್ಪಿ ಅವರು ಕಾರಣಾಂತರಗಳಿAದ ಬರಲು ಆಗಿಲ್ಲ. ಅವರೊಂದಿಗೆ ಚರ್ಚಿಸಿ
ಜಿಲ್ಲಾಧಿಕಾರಿ, ನಗರಸಭೆ ಆಯುಕ್ತರ ಮೂಲಕ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ
ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಕನ್ನಡ ರಾಜ್ಯೋತ್ಸವ ಬಳಗದ ಅಧ್ಯಕ್ಷ ಅಶ್ವಥ್ ನಾಯಕ್, ಪ್ರಧಾನ ಕಾರ್ಯದರ್ಶಿ
ರಾಘವೇಂದ್ರ, ಖಜಾಂಚಿ ತಿಪ್ಪೇಸ್ವಾಮಿ, ಗೌನಹಳ್ಳಿ ಗೋವಿಂದಪ್ಪ, ವೀರೇಂದ್ರ ಕೋಗುಂಡೆ
ಮಠ, ಶಿವುಯಾದವ್, ಸಿ.ಎನ್.ಕುಮಾರ್, ಮಹಾದೇವ್, ಮೈಲಾರಪ್ಪ, ಬಡಪ್ಪ, ಚನ್ನಬಸಪ್ಪ,
ಡಾ.ಸವಿತಾ, ಶಿವರುದ್ರಪ್ಪ, ಯಶವಂತಕುಮಾರ್, ಹನುಮಂತಪ್ಪ, ಮಂಜುನಾಥ್. ಯಶೋಧಮ್ಮ,
ನಾಗರಾಜಪ್ಪ ಸೇರಿ ಸ್ಥಳೀಯರು ನೂರಾರು ಸಂಖ್ಯೆಯಲ್ಲಿದ್ದರು.
ಸAಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು. ಗಾಯನ, ನೃತ್ಯ, ಮಕ್ಕಳ ಕುಣಿತ ಗಮನಸೆಳೆಯಿತು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.
🟢 WhatsApp Group
Join WhatsApp Group
🔵 Facebook Page
Follow Facebook Page
⚫ Twitter / X
Follow on X (Twitter)
🟣 Threads
Follow on Threads
Follow on Instagram
🔵 Telegram
Join Telegram Channel
🟢 WhatsApp Channel
Follow WhatsApp Channel
📰 ಸಮಗ್ರ ಸುದ್ದಿ
ನಿಖರತೆಗೆ ಮತ್ತೊಂದು ಹೆಸರು
📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು