ಪಕ್ಷದ ಕಾರ್ಯಕರ್ತರಿಗೆ ಮುಂದಿನ ದಿನಮಾನದಲ್ಲಿ ಇನ್ನಷ್ಟು ಹೆಚ್ಚಿನ ರೀತಿಯ ಮನ್ನಣೆಯನ್ನು ನೀಡಲಾಗುವುದು: ಡಿ.ಸುಧಾಕರ್

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ: ಪಕ್ಷದ ಕಾರ್ಯಕರ್ತರಿಗೆ ಮುಂದಿನ ದಿನಮಾನದಲ್ಲಿ ಇನ್ನಷ್ಟು ಹೆಚ್ಚಿನ ರೀತಿಯ ಮನ್ನಣೆಯನ್ನು ನೀಡಲಾಗುವುದು. ಮುಂದಿನ ಮೂರು ವರ್ಷದಲ್ಲಿ ನಮ್ಮ ಪಕ್ಷ ಕಾರ್ಯಕರ್ತರನ್ನು ಹೆಚ್ಚಿನ ರೀತಿಯ ಸೌಲಭ್ಯಗಳನ್ನು ನೀಡುವುದರ ಮೂಲಕ ಅವರ ಕಾರ್ಯವನ್ನು
ಸ್ಮರಿಸಲಾಗುವುದೆಂದು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ತಿಳಿಸಿದರು.


ಚಿತ್ರದುರ್ಗ ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಶನಿವಾರ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಚಿತ್ರದುರ್ಗ ನಗರ ಮತ್ತು
ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಸರ್ಕಾರದ ನಡೆ ಕಾರ್ಯಕರ್ತರ ಕಡೆ
ಜಿ.ಪಂ.,ತಾ.ಪಂ.ಚುನಾವಣೆ ಹಾಗೂ ಪಕ್ಷದ ಸಂಘಟನೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೇ.
೨೦ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಧಿಕಾರಕ್ಕೆ ಬಂದು ಎರಡು ವರ್ಷವಾಗಲಿದೆ. ಈ ಸಮಯದಲ್ಲಿ ನಮ್ಮ ಸರ್ಕಾರದಿಂದ ಆದ
ಕಾರ್ಯಕ್ರಮ ಹಾಗೂ ಪಂಚ ಗ್ಯಾರೆಂಟಿಗಳ ಬಗ್ಗೆ ಜನರಿಗೆ ತಿಳಿ ಹೇಳಬೇಕಿದೆ. ಇದ್ದಲ್ಲದೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಸಹಾ
ಸಿದ್ದರಾಮಯ್ಯರವರು ಅನುದಾನವನ್ನು ನೀಡಿದ್ದಾರೆ. ಸರ್ಕಾರದ ಪ್ರಾರಂಭದಲ್ಲಿ ಸ್ವಲ್ಪ ಕಷ್ಠವಾಯಿತು ಅದರೆ ಈಗ ಸರ್ಕಾರ
ಸುಸ್ಥಿತಿಯಲ್ಲಿದ್ದು ಎಲ್ಲಾ ಕ್ಷೇತ್ರಕ್ಕೂ ಸಹಾ ಅನುದಾನವನ್ನು ನೀಡಲಾಗುತ್ತಿದೆ. ಇದ್ದಲ್ಲದೆ ಹಿಂದಿನ ಬಿಜೆಪಿ ಸರ್ಕಾರ ತನ್ನ
ಅವಧಿಯಲ್ಲಿ ಮಾಡಿದ ೩ ಲಕ್ಷ ಕೋಟಿ ಸಾಲವನ್ನು ನಮ್ಮ ಸರ್ಕಾರ ತೀರಿಸುತ್ತಿದೆ ಇದರಿಂದ ಅಭೀವೃದ್ದಿಯಲ್ಲಿ ಪ್ರಾರಂಭದಲ್ಲಿ
ತಡವಾಯಿತು ಎಂದರು.


ಚಿತ್ರದುರ್ಗದ ಆರು ಕ್ಷೇತ್ರದಲ್ಲಿ ಈಗ ಅಭೀವೃದ್ದಿ ಕಾರ್ಯವಾಗುತ್ತಿವೆ. ಇದಕ್ಕಾಗಿ ಸರ್ಕಾರ ೨೬೦೦ ಕೋಟಿಯನ್ನು ನೀಡಲಾಗಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ೫ ಜನ ಗೆಲುವಿಗೆ ಪಕ್ಷದ ಕಾರ್ಯಕರ್ತರು ಶ್ರಮವನ್ನು ಹಾಕಿದ್ದಾರೆ. ಇವರ ಶ್ರಮವನ್ನು ಪಕ್ಷ
ಮರೆಯುವುದಿಲ್ಲ, ಅವರಿಗೆ ಗೌರವನ್ನು ನೀಡುತ್ತದೆ ಈಗಾಗಲೇ ಹಲವಾರು ಕಾರ್ಯಕರ್ತರನ್ನು ವಿವಿಧ ನಿಗಮ ಮಂಡಳಿಗಳಿಗೆ
ಸದಸ್ಯರನ್ನಾಗಿ ಮಾಡಿದೆ ಇದೇ ರೀತಿ ನಮ್ಮ ಸರ್ಕಾರ ಇನ್ನೂ ಮೂರು ವರ್ಷ ಇರಲಿದೆ ಅಲ್ಲಿಯವರೆಗೂ ಪಕ್ಷದ ಕಾರ್ಯಕರ್ತರಿಗೆ
ವಿಶೇಷವಾದ ಸ್ಥಾನವನ್ನು ನೀಡಲಾಗುವುದು. ಇದ್ದಲ್ಲದೆ ಮುಂಬರುವ ಜಿ.ಪಂ.ತಾ.ಪಂ,. ಚುನಾವಣೆಯಲ್ಲಿ ನಮ್ಮ ಪಕ್ಷದ
ಕಾರ್ಯಕರ್ತರು ಗೆಲ್ಲುವುದರ ಮೂಲಕ ಕಾಂಗ್ರೇಸ್ ಎಲ್ಲಾ ತಾ.ಪಂ. ಹಾಗೂ ಜಿ.ಪಂ.ಯಲ್ಲಿ ಅಧಿಕಾರವನ್ನು ಹಿಡಿಯಬೇಕಿದೆ ಇದಕ್ಕೆ
ನಿಮ್ಮ ಸಹಕಾರ ಅಗತ್ಯವಾಗಿದೆ ಎಂದು ಸಚಿವ ಸುಧಾಕರ್ ತಿಳಿಸಿದರು.


ಶಾಸಕರಾದ ಕೆ.ಸಿ.ವಿರೇಂದ್ರ ಪಪ್ಪಿ ಮಾತನಾಡಿ, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ೨೫ ವರ್ಷಗಳಿಂದ ಕಾಂಗ್ರೆಸ್
ಶಾಸಕರಿರಲ್ಲಿಲ್ಲ, ಈಗ ಚಿತ್ರದುರ್ಗಕ್ಕೆ ಕಾಂಗ್ರೇಸ್ ಶಾಸಕರಿದ್ದಾರೆ, ನನ್ನನ್ನು ಚುನಾವಣೆಯಲ್ಲಿ ಗೆಲ್ಲಿಸಿದ್ದಕ್ಕೆ ಅಭಿನಂದನೆಗಳು, ಪಕ್ಷ
ಈಗ ಕಾರ್ಯಕರ್ತರಿಗಾಗಿ ಕಾರ್ಯಕ್ರಮವನ್ನು ನೀಡಿದೆ ಅದನ್ನು ಎಲ್ಲಾ ಕಡೆಯಲ್ಲಿಯೂ ಸಹಾ ಮಾಡಲಾಗಿದೆ. ಪಕ್ಷ ಚುನಾವಣೆಯ
ಸಮಯದಲ್ಲಿ ಪಂಚ ಗ್ಯಾರೆಂಟಿಗಳನ್ನು ನೀಡಿತ್ತು ಅದರಂತೆ ಅದನ್ನು ಅನುಷ್ಠಾನ ಸಹಾ ಮಾಡಲಾಗಿದೆ ಇವುಗಳ ಜಾರಿಗೆ ಸರ್ಕಾರ,
ಸಮಿತಿ ಅಧಿಕಾರಿಗಳು ಇದ್ದಾರೆ ಪಕ್ಷದ ಕಾಯಕರ್ತರಾದವರು ಇದರ ಪ್ರಚಾರವನ್ನು ಮಾಡಬೇಕಿದೆ. ಇದಕ್ಕೆ ಹೆಚ್ಚಿನ ಒತ್ತನ್ನು
ನೀಡಬೇಕಿದೆ. ಚಿತ್ರದುರ್ಗದಲ್ಲಿ ಶೇ.೯೯ರಷ್ಟು ಗ್ಯಾರೆಂಟಿಗಳು ಅನುಷ್ಠಾನವಾಗಿದೆ. ಇದರ ಬಗ್ಗೆ ಸರಿಯಾದ ರೀತಿಯಲ್ಲಿ ಪ್ರಚಾರವನ್ನು
ಮಾಡುವುದರ ಮೂಲಕ ಮುಂದಿನ ತಾ.ಪಂ.ಜಿ.ಪಂ. ಚುನಾವಣೆಯಲ್ಲಿ ಮತವನ್ನು ಕೇಳಬೇಕಿದೆ. ಮುಂದಿನ ಚುನಾವಣೆಯಲ್ಲಿ
ನಮ್ಮ ಪಕ್ಷ ಅಧಿಕಾರವನ್ನು ಹಿಡಿಯಬೇಕಿದೆ ಎಂದರು.


ಶಾಸಕರಾದ ಬಿ.ಜಿ.ಗೋವಿಂದಪ್ಪ ಮಾತನಾಡಿ, ಈ ವರ್ಷ ಚುನಾವಣೆಯ ವರ್ಷವಾಗಿದೆ. ತಾ.ಪಂ.ಜಿ.ಪಂ ಚುನಾವಣೆ ಇದ್ದಲ್ಲದೆ
ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಸಹಾ ಬರಲಿವೆ ಇದಕ್ಕೆ ನಮ್ಮ ಪಕ್ಷ ಈಗಿನಿಂದಲೇ ಸಜ್ಜಾಗಬೇಕಿದೆ, ನಮ್ಮ ಪಕ್ಷದ
ಕಾರ್ಯಕರ್ತರು ಸಹಾ ಸಿದ್ದರಾಗಬೇಕಿದೆ. ನಮ್ಮ ಜಿಲ್ಲೆಯಲ್ಲಿ ೫ ಜನ ಶಾಸಕರಿದ್ದು ಓರ್ವ ವಿಧಾನ ಪರಿಷತ್ ಸದಸ್ಯರಿದ್ದಾರೆ ಇವರ
ಪರಿಶ್ರಮ ಹಾಗೂ ಕಾರ್ಯಕರ್ತರ ಸಹಾಯದಿಂದ ಚುನಾವಣೆಯನ್ನು ಗೆಲ್ಲಿಬೇಕಿದೆ ಎಂದರು.


ಶಾಸಕರಾದ ರಘುಮೂರ್ತಿ ಮಾತನಾಡಿ, ೨೦೨೩ರ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರ ಪರಿಶ್ರಮದಿಂದ ಅಧಿಕಾರಕ್ಕೆ ಬಂದ
ಕಾಂಗ್ರೆಸ್ ಪಕ್ಷಕ್ಕೆ ಮೇ.೨೦ಕ್ಕೆ ಎರಡು ವರ್ಷವಾಗಲಿದೆ, ಪಕ್ಷ ತನ್ನನ್ನು ಗೆಲ್ಲಿಸಿದ ಕಾರ್ಯಕರ್ತರನ್ನು ಕಡೆಗಣಿಸಿಲ್ಲ, ಅವರಿಗೂ ಸಹಾ
ಸರ್ಕಾರದಲ್ಲಿ ಸ್ಥಾನವನ್ನು ನೀಡುತ್ತಿದೆ. ಸರ್ಕಾರ ನೀಡಿದ ಪಂಚ ಗ್ಯಾರೆಂಟಿಯಿಂದಾಗಿ ವರ್ಷಕ್ಕೆ ೨೪೦ ಕೋಟಿ ಹಣ ಜಿಲ್ಲೆಗೆ ಬರುತ್ತಿದೆ

ಇದರಲ್ಲಿ ಜಿಲ್ಲೆಯ ಅಭೀವೃದ್ದಿ ಕಾರ್ಯವನ್ನು ಹೊರತು ಪಡಿಸಿದೆ. ಇದರಿಂದ ಪ್ರತಿ ಕುಟುಂಬಕ್ಕೂ ಸಹಾ ಪ್ರತಿ ಮಾಹೆ ೫ ರಿಂದ ೬
ಸಾವಿರ ಸಿಗುತ್ತಿದೆ. ಪಕ್ಷದಲ್ಲಿನ ಭೀನ್ನಾಭೀಪ್ರಾಯವನ್ನು ಮರೆತು ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವಂತ ಕಾರ್ಯವನ್ನು
ಮಾಡಬೇಕಿದೆ. ಜನತೆ ಕೇಂದ್ರ ಸರ್ಕಾರದ ವಿರುದ್ದ ಜನಾಕ್ರೋಶವನ್ನುಗೊಂಡಿದ್ದಾರೆ ಇದನ್ನು ಬಿಜೆಪಿ ಕಾಂಗ್ರೆಸ್ ಪಕ್ಷದ ವಿರುದ್ದ
ಜನತೆ ಆಕ್ರೋಶಗೊಂಡಿದ್ದಾರೆ ಎಂದು ಬಿಂಬಿಸುವುದರ ಮೂಲಕ ತಮ್ಮ ತಪ್ಪನ್ನು ಮುಚ್ಚಿಕೊಳ್ಳುವ ಕಾರ್ಯವನ್ನು ಮಾಡುತ್ತಿದೆ ಎಂದು
ದೂರಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿಸಿಸಿ ಅಧ್ಯಕ್ಷರಾದ ತಾಜ್‌ಪೀರ್ ವಹಿಸಿದ್ದರು.ಸಮಾರಂಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ
ರಾಮಕೃಷ್ಣಪ್ಪ, ಮೈಲಾರಪ್ಪ, ಎಸ್.ಎಂ,ಎಲ್.ತಿಪ್ಪೇಸ್ವಾಮಿ, ಹನುಮಲಿ ಷಣ್ಮುಖಪ್ಪ, ಗ್ಯಾರೆಂಟಿ ಯೋಜನೆ ಅಧ್ಯಕ್ಷರಾದ ಶಿವಣ್ಣ,
ಜೆಜೆಹಟ್ಟಿ ತಿಪ್ಪೇಸ್ವಾಮಿ, ಮುನೀರ ಮಾತನಾಡಿದರು. ಗ್ಯಾರೆಂಟಿ ಯೋಜನೆಯ ತಾಲ್ಲೂಕು ಅಧ್ಯಕ್ಷರಾದ ಪ್ರಕಾಶ್
ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿ,ವಂದಿಸಿದರು ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು ವಿವಿಧ ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು ಕಾರ್ಯಕರ್ತರು ಭಾಗವಹಿಸಿದ್ದರು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *