ನೀರಿನ ಅಂಶ ಕಡಿಮೆಯಾದರೆ ಮೆದುಳು ಹೀಗೆ ಸಿಗ್ನಲ್​ ನೀಡುತ್ತೆ: ತಲೆನೋವು, ಹೊಟ್ಟೆ ನೋವಿಗೂ ಇದೇ ಕಾರಣ.

Best Times To Drink Water: ಸಾಕಷ್ಟು ನೀರು ಕುಡಿಯುವ ಹುಡುಗಿಯರಿಗೆ ಮುಟ್ಟಿನ ನೋವು ಕಡಿಮೆಯಾಗುತ್ತದೆ. ತಲೆನೋವು ಹಾಗೂ ಹೊಟ್ಟೆ ನೋವಿಗೂ ಇದೇ ಕಾರಣವಾಗಿದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

DRINKING WATER  ​​DRINKING WATER AT THE RIGHT TIME  WHEN TO DRINK WATER  WHAT IS BEST TIME TO DRINK WATERBest Times To Drink Water: ನಿತ್ಯ ನಾವು ಎಷ್ಟು ನೀರು ಕುಡಿಯಬೇಕು? ಯಾವ ಸಮಯದಲ್ಲಿ ನೀರು ಕುಡಿಯಬೇಕು ಎಂಬ ಸಂದೇಹಗಳು ಉದ್ಭವಿಸುತ್ತವೆ. ದೇಹವು ನಿರ್ಜಲೀಕರಣಗೊಂಡಾಗ ಮೆದುಳು ಯಾವ ಸಂಕೇತಗಳನ್ನು ಕಳುಹಿಸುತ್ತದೆ? ಅವುಗಳನ್ನು ಗುರುತಿಸುವುದು ಹೇಗೆ? ಜೊತೆಗೆ ನಿತ್ಯ ದೇಹಕ್ಕೆ ಎಷ್ಟು ನೀರು ಬೇಕಾಗುತ್ತದೆ ಎಂಬುದನ್ನು ತಿಳಿಯೋಣ. ನಾವು ಆಹಾರವಿಲ್ಲದೇ ಕೆಲವು ದಿನ ಬದುಕಬಹುದು, ಆದರೆ ನೀರಿಲ್ಲದೇ ಬದುಕಲು ಸಾಧ್ಯವಿಲ್ಲ. ದೇಹವು ಸರಾಗವಾಗಿ ಕಾರ್ಯನಿರ್ವಹಿಸಲು ನೀರು ಅವಶ್ಯವಾಗಿದೆ. ಯಾವಾಗ ಮತ್ತು ಎಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು ಎಂಬುದನ್ನು ಈಗ ಒಂದೊಂದಾಗಿ ತಿಳಿದುಕೊಳ್ಳೋಣ.

ಹಸಿವಾದಾಗ ನೀರು ಕುಡಿಯುವುದು: ಹಸಿವಾದಾಗ ನೀರು ಕುಡಿಯಬೇಕಾಗುತ್ತದೆ. ಮತ್ತೆ ಬಾಯಾರಿದಾಗಲೂ ಕೂಡ ನೀರು ಕುಡಿಯಬೇಕಾಗುತ್ತದೆ. ಅನೇಕ ಜನರು ಇದನ್ನು ಅರ್ಥಮಾಡಿಕೊಳ್ಳಲು ವಿಫಲರಾಗುತ್ತಾರೆ. ಇದಕ್ಕೆ ಕಾರಣವೆಂದರೆ ಮೆದುಳು ಬಾಯಾರಿಕೆ ಮತ್ತು ಹಸಿವು ಎರಡನ್ನೂ ಒಂದೇ ರೀತಿಯಲ್ಲಿ ಗುರುತಿಸುತ್ತದೆ. ಹಾಗಾಗಿ ಹಸಿವಾದರೂ ಹಾಗೂ ಬಾಯಾರಿಕೆಯಾದಾಗ ನೀರು ಸೇವಿಸಬೇಕಾಗುತ್ತದೆ. ದಿನಕ್ಕೆ 2ರಿಂದ 3 ಲೀಟರ್​ ನೀರು ಕುಡಿಯುವುದು ಉತ್ತಮ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

DRINKING WATER  ​​DRINKING WATER AT THE RIGHT TIME  WHEN TO DRINK WATER  WHAT IS BEST TIME TO DRINK WATER

ಬೆಳಗ್ಗೆ ಎಚ್ಚರವಾದ ನಂತರ: ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ (National Library of Medicine) ನಡೆಸಿದ ಅಧ್ಯಯನದ ವರದಿ ಪ್ರಕಾರ, ಬೆಳಗ್ಗೆ ಎದ್ದ ನಂತರ ಬಾಯಿ ಮುಕ್ಕಳಿಸಿ ಒಂದು ಲೋಟ ನೀರು ಕುಡಿಯುವುದು ಒಳ್ಳೆಯದು ಎಂದು ತಿಳಿಸುತ್ತದೆ. ರಾತ್ರಿಯಿಡೀ ಖಾಲಿಯಾಗಿದ್ದ ದೇಹಕ್ಕೆ ಒಂದು ಗ್ಲಾಸ್​ ನೀರಿಗೆ ಸ್ವಲ್ಪ ನಿಂಬೆ ರಸ ಸೇರಿಸಿ ಕುಡಿಯುವುದರಿಂದ ಚೈತನ್ಯ ಲಭಿಸುತ್ತದೆ. ದೇಹವು ವಿಟಮಿನ್ ಸಿ, ಪೊಟ್ಯಾಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳನ್ನು ಪಡೆಯಲು ಸಾಧ್ಯವಾಗುತ್ತದೆ.

DRINKING WATER  ​​DRINKING WATER AT THE RIGHT TIME  WHEN TO DRINK WATER  WHAT IS BEST TIME TO DRINK WATER

ಬೆವರು ಹರಿಸುವಾಗ: ಬಿಸಿ, ಆರ್ದ್ರ ವಾತಾವರಣ ಮತ್ತು ವ್ಯಾಯಾಮದ ಸಮಯದಲ್ಲಿ ನೀರು ಬೆವರಿನ ರೂಪದಲ್ಲಿ ಹೊರಗೆ ಹೋಗುತ್ತದೆ. ತಾಪಮಾನ ಹೆಚ್ಚಾದಾಗ ಅದು ದೇಹವನ್ನು ತಣ್ಣಗಾಗಲು ಮಾಡುವ ಪ್ರಯತ್ನ ಮಾಡುತ್ತದೆ. ಇದರಿಂದ ಸಾಕಷ್ಟು ನೀರು ಕುಡಿಯುವುದು ಅತ್ಯಗತ್ಯ. ವ್ಯಾಯಾಮದ ಮೊದಲು ಮತ್ತು ನಂತರ ನೀವು ನೀರು ಕುಡಿಯಬೇಕು ಎಂದು ಮೇಯೊ ಕ್ಲಿನಿಕ್ ( mayoclinic) ತಿಳಿಸುತ್ತದೆ.

ನೀವು ಅನಾರೋಗ್ಯಕ್ಕೆ ಒಳಗಾದಾಗ: ನೀರು ಅನಾರೋಗ್ಯದಿಂದ ಚೇತರಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜ್ವರ, ವಾಂತಿ ಮತ್ತು ಅತಿಸಾರದ ಸಮಯದಲ್ಲಿ ದೇಹದಿಂದ ಬಹಳಷ್ಟು ನೀರು ಕಳೆದುಹೋಗುತ್ತದೆ. ಈ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಸ್ವಲ್ಪ ಸ್ವಲ್ಪವೇ ನೀರು ಕುಡಿಯಲು ಪ್ರಾರಂಭಿಸಬೇಕು. ಬಾಯಾರಿಕೆ ಇಲ್ಲದಿದ್ದರೂ ನೀರು ಕುಡಿಯಬೇಕು ಎಂದು ಸ್ಪಷ್ಟಪಡಿಸಲಾಗಿದೆ. ಕಾಫಿ, ತಂಪು ಪಾನೀಯಗಳು ಮತ್ತು ಮದ್ಯಪಾನದಂತಹವುಗಳು ನಿಮ್ಮ ದೇಹದಿಂದ ಇನ್ನೂ ಹೆಚ್ಚಿನ ನೀರನ್ನು ಹೊರಹಾಕಲು ಕಾರಣವಾಗುವುದರಿಂದ ಅವುಗಳನ್ನು ತಪ್ಪಿಸಬೇಕು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

ಮುಟ್ಟಿನ ಸಮಯದಲ್ಲಿ: ಮಹಿಳೆಯರು ಮುಟ್ಟಿನ ಸಮಯದಲ್ಲಿ ಮತ್ತು ಅದಕ್ಕೂ ಮೊದಲು ಸಾಕಷ್ಟು ನೀರು ಕುಡಿಯುವುದು ಅತ್ಯಗತ್ಯ. ಇದು ಮುಟ್ಟಿನ ನೋವಿನಿಂದ ಉಂಟಾಗುವ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಮತ್ತು ನಿರ್ಜಲೀಕರಣವು ತಲೆನೋವು ಮತ್ತು ಹೊಟ್ಟೆ ನೋವಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದು ವಿವರಿಸಲಾಗಿದೆ. ಹೆಚ್ಚು ನೀರು ಕುಡಿಯುವ ಹುಡುಗಿಯರಲ್ಲಿ ಮುಟ್ಟಿನ ನೋವು ಕಡಿಮೆಯಾಗುತ್ತದೆ ಎಂದು ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ (National Library of Medicine) ಅಧ್ಯಯನವು ಬಹಿರಂಗಪಡಿಸಿದೆ. ಈ ಸಮಯದಲ್ಲಿ ಸಾಕಷ್ಟು ನೀರು ಕುಡಿಯುವುದರಿಂದ ನೋವು ನಿವಾರಕ ಔಷಧಗಳ ಅಗತ್ಯವೂ ಕಡಿಮೆಯಾಗುತ್ತದೆ ಎನ್ನುತ್ತಾರೆ ತಜ್ಞರು.

DRINKING WATER  ​​DRINKING WATER AT THE RIGHT TIME  WHEN TO DRINK WATER  WHAT IS BEST TIME TO DRINK WATER

ಮಧ್ಯಾಹ್ನದ ಚಹಾ: ಕೆಲಸದ ಒತ್ತಡದಿಂದಾಗಿ ನಿರುತ್ಸಾಹಗೊಂಡಾಗ ಅನೇಕ ಜನರು ಕಾಫಿ ಅಥವಾ ಚಹಾದ ಮೊರೆ ಹೋಗುತ್ತಾರೆ. ಇವುಗಳಿಗಿಂತ ಒಂದು ಲೋಟ ನೀರು ಕುಡಿಯುವುದು ಉತ್ತಮ. ಇದೇ ಒಂದು ಗ್ಲಾಸ್​ಗೆ ಸ್ವಲ್ಪ ನಿಂಬೆ ರಸ ಹಿಂಡಿ ಕುಡಿದರೆ ದೇಹದಲ್ಲಿ ನೀರಿನ ಅಂಶ ಹೆಚ್ಚಾಗುತ್ತದೆ. ಇದು ಇನ್ನಷ್ಟು ರೋಮಾಂಚನಕಾರಿಯಾಗಿರಬಹುದು ಎಂದು ಸಂಶೋಧನೆ ತೋರಿಸುತ್ತದೆ.

ತಲೆನೋವು ಬಂದಾಗ: ಕಡಿಮೆ ನೀರಿನ ಅಂಶವು ತಲೆನೋವಿಗೆ ಕಾರಣವಾಗುತ್ತದೆ. ಸ್ವಲ್ಪ ನೀರು ಕಡಿಮೆಯಾದರೂ ಕೆಲವರಲ್ಲಿ ತೀವ್ರ ತಲೆನೋವು ಉಂಟಾಗಬಹುದು. ಇದು ಗೊಂದಲಕ್ಕೂ ಕಾರಣವಾಗಬಹುದು. ಆಗಾಗ್ಗೆ ತಲೆನೋವಿನಿಂದ ಬಳಲುತ್ತಿರುವ ಜನರು ತಮ್ಮೊಂದಿಗೆ ನೀರಿನ ಬಾಟಲಿಯನ್ನು ಕೊಂಡೊಯ್ಯಲು ಸೂಚಿಸಲಾಗುತ್ತದೆ. ಕೆಲಸದ ಮಧ್ಯದಲ್ಲಿ ಸಾಂದರ್ಭಿಕವಾಗಿ ಬಾಯಿ ಮುಕ್ಕಳಿಸುವುದರಿಂದ ನೋವು ನಿವಾರಣೆಯಾಗುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

ಊಟಕ್ಕೂ ಮೊದಲು: ಹಾರ್ವರ್ಡ್ ಹೆಲ್ತ್ ಪಬ್ಲಿಷಿಂಗ್ (Harvard Health Publishing) ಅಧ್ಯಯನ ವರದಿ ಪ್ರಕಾರ, ಬೆಳಗಿನ ಉಪಹಾರ ಮತ್ತು ಮಧ್ಯಾಹ್ನದ ಊಟಕ್ಕೆ ಅರ್ಧ ಗಂಟೆ ಮೊದಲು ನೀರು ಕುಡಿಯುವುದರಿಂದ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂಬುದು ತಿಳಿದಿದೆ. ಊಟಕ್ಕೂ ಮುನ್ನ ನೀರು ಕುಡಿಯುವುದರಿಂದ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಆದ್ದರಿಂದ ಆಹಾರ ಸೇವಿಸುವ ಅರ್ಧ ಗಂಟೆಗೂ ಮುನ್ನ ನೀರು ಕುಡಿಯುವುದು ಒಳ್ಳೆಯದು.

ಗಮನ ಕೇಂದ್ರೀಕರಿಸಲು ಸಾಧ್ಯವಾಗದಿದ್ದಾಗ: ಹಲವು ಜನರು ಕೆಲಸದಲ್ಲಿ ವಿಶೇಷವಾಗಿ ಅಧ್ಯಯನ ಮಾಡುವಾಗ ಗಮನಹರಿಸಲು ತೊಂದರೆ ಅನುಭವಿಸುತ್ತಾರೆ. ಈ ಸಮಯದಲ್ಲಿ ಒಂದು ಲೋಟ ನೀರು ಕುಡಿಯಬೇಕು. ದೇಹವು ನೀರನ್ನು ಕಳೆದುಕೊಂಡರೆ ಮೆದುಳಿನಲ್ಲಿರುವ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ. ಇದು ಏಕಾಗ್ರತೆ, ಅಲ್ಪಾವಧಿಯ ಸ್ಮರಣೆ ಮತ್ತು ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ವಿವರಿಸುತ್ತಾರೆ.

ETV Bharath

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *