ಧರ್ಮಸ್ಥಳದ ವೀರೇಂದ್ರ ಹೆಗ್ಗಡೆನೇ ಇದನೆಲ್ಲ ಮಾಡುತ್ತಿದ್ದಾರೆ.. ಎನ್ನುವ ಬಿಂಬಿತ ಮಾಡುವ ಷಡ್ಯಂತರ ನಡೆದಿದೆ.

ಚಿತ್ರದುರ್ಗ ಆ. 17

ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್

ಧರ್ಮಸ್ಥಳದ ವಿಚಾರವಾಗಿ ಸಿದ್ದರಾಮಯ್ಯನವ ಟಿಪ್ಪುಗ್ಯಾಂಗ್ (ಟಿಪ್ಪುದರಲಾ)್ಲ ಆ ತರದ ಒತ್ತಡ ಮಾಡಿ ಯಾವನೋ ಅಮಾಯಕ ಕಂಪ್ಲೇಂಟ್ ಕೊಟ್ಟಿದ್ದನ್ನು ತೆಗೆದುಕೊಂಡು ಅದನ್ನು ದೊಡ್ಡದು  ರೀತಿ ಮಾಡಿ  ಅದೇನೋ ಧರ್ಮಸ್ಥಳದಲ್ಲಿ ನೂರಾರು ಅತ್ಯಾಚಾರಗಳು ಆಗಿದೆ. ನೂರಾರು ಕೊಲೆಗಳಾಗಿ ಬಿಟ್ಟಿವೆ. ಇಡೀ ಧರ್ಮಸ್ಥಳನೇ ಅದರಲ್ಲಿ ಭಾಗಿಯಾಗಿದೆ. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆನೇ ಇದನೆಲ್ಲ ಮಾಡುತ್ತಿದ್ದಾರೆ.. ಎನ್ನುವ ಬಿಂಬಿತ ಮಾಡುವ ಷಡ್ಯಂತರ ನಡೆದಿದೆ ಎಂದು ವಿಧಾನ ಸಭೆಯ ವಿರೋಧ ಪಕ್ಷದ ನಾಯಕರಾದ ಆರ್.ಆಶೋಕ್ ಸಿದ್ದರಾಮಯ್ಯ ಸರ್ಕಾರದ ವಿರುದ್ದ ಕಿಡಿ ಕಾರಿದ್ದಾರೆ.

ಬೆಂಗಳೂರಿನಿಂದ ಧಾರವಾಡಕ್ಕೆ ಹೋಗುವ ಸಮಯದಲ್ಲಿ ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ತಮ್ಮನ್ನು ಬೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ದಿನವೂ ರಾಜ್ಯದ ಒಂದೊಂದು ಜಿಲ್ಲೆಯಿಂದಲೂ ಸಾವಿರ ಕಂಪ್ಲೇಂಟ್ ಬರುತ್ತದೆ.. ಅದನ್ನೆಲ್ಲ ಎಸ್‍ಐಟಿ ಮಾಡತ್ತಾರಾ..? ನಾವು ವಿಧಾನಸೌಧದಲ್ಲಿ ಹೋರಾಟ ಮಾಡಬೇಕು.. ಒಂದು ದಿನವೆಲ್ಲ ಗಲಾಟೆ ಮಾಡಬೇಕು.ನಮ್ಮ ಎಂಎಲ್‍ಎಗಳು ಧರಣಿ ಮಾಡಬೇಕು.ಅಷ್ಟಾದರೂ ನೀವು ಎಸ್‍ಐಟಿ ಮಾಡಲ್ಲ. ಇಲ್ಲಿ ಏಕಾಏಕಿ ಯಾವನೋ ಅನಾಮಧೇಯ ಇಲ್ಲಿ ನೂರಾರು ಕೊಲೆಗಳ ಆಗಿವೆ ಎಂದ ತಕ್ಷಣನೇ ನೀವು ಎಸ್‍ಐಟಿನೇ ರಚನೆ ಮಾಡಿದ್ರಿ. ರಚನೆ ಮಾಡಿ 15-20 ದಿನ ಬೆಳಗಿನಿಂದ ಸಂಜೆವರೆಗೂ ಇಡೀ ಧರ್ಮಸ್ಥಳವನ್ನು ಅವಹೇಳನ ಮಾಡುವುದು ಆಗಿದೆ ಎಂದರು. 

ಎಸ್‍ಐಟಿ ಮಾಡಿ ಅದರ ವರದಿ ಬರಲಿ.. ಅದಕ್ಕೇನು ನಾವು ಭಯ ಬೀಳಲ್ಲ..ಅದಕ್ಕೆ ಯಾವುದೇ ಹಿಂದೂ ಸಂಘಟನೆನೂ ಭಯ ಬೀಳಲ್ಲ..ಆದರೆ ಸರ್ಕಾರದ ಹಣ ಪೋಲ್ ಮಾಡಿ.. ಇಷ್ಟೆಲ್ಲಾ ಜನರಿಗೆ ತೊಂದರೆ ಕೊಟ್ಟು.. ಇವೆಲ್ಲವನ್ನೂ ಷಡ್ಯಂತರ ಮಾಡಿದರಲ್ಲ.. ಇದರ ಹಿಂದೆ ಯಾರಿದ್ದಾರೆ..? ಎಂಬುದು ತಿಳಿಯಬೇಕಿದೆ. ಹಿಂದೆ ಬಿಜೆಪಿ ಸರ್ಕಾರ ಇತ್ತು. ಘಟನೆ ನಡೆದು 20 ವರ್ಷ ಆಯಿತು ಅಂತ ಹೇಳುತ್ತಿದ್ದಾರೆ.. ನಾವೇನಾದರೂ ತನಿಖೆ ಮಾಡಿದ್ವಾ.. ನಾವೇನಾದರೂ ಕೇಸ್ ಹಾಕಿದ್ದವಾ.ನಾವೇನಾದರೂ ಎಸ್‍ಐಟಿ ಮಾಡಿದ್ವಾ.ಈಗಾಗಲೇ ಸೌಜನ್ಯ ಪ್ರಕರಣವನ್ನು ಸಿಬಿಐ ತನಿಖೆ ಮಾಡಿದೆ.ಇನ್ನೊಂದು ಸಿಬಿಐ ತನಿಖೆ ಮಾಡಲಿ ನಮ್ಮದೇನು ಅಭ್ಯಂತರವಿಲ್ಲ.ಮುಸುಕುದಾರಿಗೆ ಹಣ ನೀಡಿ ಕರೆದುಕೊಂಡು ಬಂದಂತಿದೆ.ಅವನು ಮುಖ್ಯವಲ್ಲ. ಇದನ್ನು ಯಾರು ಮಾಡುತ್ತಿದ್ದಾರೆ ಎಂಬುದು ಮುಖ್ಯ.ಇದಕ್ಕೆ ವಿದೇಶದಿಂದ ಹಣ ಎಲ್ಲಿಂದ ಬರುತ್ತಿದೆ ಅದು ಮುಖ್ಯ.ಜೆಡಿಎಸ್, ಬಿಜೆಪಿ ಸರ್ಕಾರದ ವೇಳೆ ಈ ರೀತಿ ಆಗಿಲ್ಲ.ಸಿದ್ಧರಾಮಯ್ಯ ಸರ್ಕಾರದಲ್ಲಿ ಟಿಪ್ಪು ಗ್ಯಾಂಗ್ ನಿಂದ ಷಡ್ಯಂತ್ರ ನಡೆಯುತ್ತಿದೆ ಎಂದು ಆಶೋಕ್ ದೂರಿದರು.

ಸೋಷಿಯಲ್ ಮೀಡಿಯಾ, ಯುಟ್ಯೂಬ್ ಮೂಲಕ ಅಪಪ್ರಚಾರ ಮಾಡುತ್ತಿದ್ದಾರೆ.ಯುಟ್ಯೂಬರ್ ಸಮೀರ್ ಸಹ ಟಿಪ್ಪು ಗ್ಯಾಂಗ್‍ಗೆ ಸೇರಿದವನು. ಈ ಎಸ್ ಐಟಿ ತನಿಖೆ ಇಲ್ಲಿಗೆ ನಿಲ್ಲಬಾರದು.ಸರ್ಕಾರಕ್ಕೆ ಧರ್ಮದ ಬಗ್ಗೆ ಕಾಳಜಿ ಇದ್ದರೆ ಇದನ್ನು ಎನ್‍ಐಎಗೆ ಒಪ್ಪಿಸಬೇಕು. ಷಡ್ಯಂತ್ರಕ್ಕೆ ಪ್ರೇರಣೆ ನೀಡಿದವರು ಯಾರು ಎಂಬುದು ಬಯಲಾಗಬೇಕು. ಸಿಎಂಗೆ ಒಪ್ಪಿಸಿದವರು ಯಾರು ಎಲ್ಲವೂ ಬಯಲಾಗಬೇಕು.ಈ ತನಿಖೆ ಇಲ್ಲಿಗೆ ಮುಚ್ಚಿ ಹೋಗುತ್ತದೆ ಅನ್ನಿಸುತ್ತದೆ.ಎನ್‍ಐಎಗೆ ನೀಡಿ ಸಂಪೂರ್ಣ ತನಿಖೆ ಆಗಬೇಕು.ಈ ತಂಡ ಇನ್ನು ಯಾವ ಯಾವ ದೇವಸ್ಥಾನಕ್ಕೆ ಸಂಚು ರೂಪಿಸಿದ ಎಂಬುದು ಬಯಲಾಗಬೇಕು.ತಿರುಪತಿ, ಶಬರಿಮಲೆ, ಶನಿ ಶಿಂಗಣಾಪುರ ಬಗ್ಗೆ ಅವಹೇಳನ ನಡೆದಿತ್ತು… ಈ ಎಲ್ಲಾ ಷಡ್ಯಂತ್ರಗಳ ಹಿಂದೆ ನಗರ ನಕ್ಸಲರಿದ್ದಾರೆ…ನಗರ ನಕ್ಸಲರು ಸಿದ್ಧರಾಮಯ್ಯ ಸುತ್ತುವರೆದು ಈ ತನಿಖೆ ಮಾಡಿದ್ದಾರೆ.ಆ ಮುಸುಕುದಾರಿ ಸರ್ಕಾರಕ್ಕೆ ಮುಸುಕು ಹಾಕಿದ್ದಾನೆ.ಈಗೇನು ಬಂತು.. ಬೆಟ್ಟ ಅಗೆದು ಇಲಿನೂ ಸಿಗಲಿಲ್ಲ..ಇನ್ನೂ ನೂರು ಕಡೆ ತೋರಿಸಲು ಹೊರಟಿದ್ದಾನೆ ಕೊನೆಗೆ ಮಂಜುನಾಥನ ಕೆಳಗೆ ಹೂತಿಟ್ಟಿದ್ದೆನೆ ಎನ್ನುವಂಥದು ನಡೀತಿದೆ.ಹಿಂದೂಗಳನ್ನು ಇಷ್ಟೊಂದು ಕಡೆಗಣಿಸುವುದಾ.? ಅದೇ ರೀತಿ ಮಸೀದಿ ಆದರೆ ನೀವು ಹೋಗುತ್ತೀರಾ…? ಮಸೀದಿ ಬಗ್ಗೆ ಆಪಾದನೆ ಬಂದರೆ ಈ ಸರ್ಕಾರ ಮುಟ್ಟುತ್ತಾ…?ಹಿಂದೂ ದೇವಸ್ಥಾನಕ್ಕೆ ಸಲಿಕೆ, ಗುದ್ದಲಿ ಜತೆ ಹೋಗುತ್ತೀರಿ ಎಂದು ಸಿದ್ದರಾಮಯ್ಯ ಸರ್ಕಾರದ ಬಗ್ಗೆ ಟೀಕಿಸಿದರು.

ಅಧೀವೇಶನ ಬಳಿಕ ನಾನೂ ಧರ್ಮಸ್ಥಳ ಚಲೋ ಮಾಡುತ್ತೇನೆ. ಡಿಕೆಶಿ, ದಿನೇಶ್ ಗುಂಡೂರಾವ್, ಲಕ್ಷ್ಮೀ ಹೆಬ್ಬಾಳ್ಕರ್ ಈಗ ಹೇಳುತ್ತಿದ್ದಾರೆ.ಸಂಪುಟ ಸಭೆಯಲ್ಲೇ ಎಸ್‍ಐಟಿ ರಚನೆ ವೇಳೆ ಪ್ರಶ್ನಿಸಬೇಕಿತ್ತು..? ಸಿದ್ಧರಾಮಯ್ಯ ಸರ್ಕಾರದಿಂದ ಹಿಂದೂ, ದೇವಸ್ಥಾನಗಳಿಗೆ ಅವಮಾನ ಆಗುತ್ತಿದೆ.ಹಿಂದೂಗಳಿಗೆ ಅವಮಾನಿಸುತ್ತಿರುವ ಸರ್ಕಾರದ ವಿರುದ್ಧ ನಮ್ಮ ಹೋರಾಟ ಎಂದರು.

ಬಿ.ಕೆ ಹರಿಪ್ರಸಾದ್ ಮಾತಿನ ಬಗ್ಗೆ ಮಾತನಾಡಿದ ಆಶೋಕ್ ಅವರದು ಎಲುಬಿಲ್ಲದ ನಾಲಿಗೆ ಎಂದು ಕಾಣಿಸುತ್ತದೆ.ಆರ್.ಎಸ್.ಎಸ್‍ಇಲ್ಲ ಅಂದಿದ್ದರೆ ಭಾರತ ಮಿನಿ ಪಾಕಿಸ್ತಾನ ಮಾಡಿ ಬಿಡುತ್ತಿದ್ದರು.ಜೀವದ ಹಂಗು ತೊರೆದು ಸೈನಿಕರು ಯುದ್ಧ ಮಾಡಿದರೆ ಸಾಕ್ಷಿ ಕೇಳುತ್ತಾರೆ. ಯುದ್ಧ ನಡೆದಾಗ ಕಾಂಗ್ರೆಸ್ಸಿಗರೊಬ್ಬರನ್ನು ಫ್ಲೈಟ್ ನಲ್ಲಿ ಕಳಿಸಬೇಕು.ಸೈನಿಕರನ್ನು ನಂಬದ ಕಾಂಗ್ರೆಸ್ಸಿಗರಿಂದ ದೇಶಕ್ಕೆ ದ್ರೋಹ ಆಗುತ್ತಿದೆ.ಸಿಂದೂರ್ ತೆಗೆದವರಿಗೆ ಮೋದಿ ಬುದ್ಧಿ ಕಲಿಸಿದ್ದಾರೆ.ಮುಂಬೈನಲ್ಲಿ ಭಯೋತ್ಪಾದಕರಿಗೆ 187 ಜನ ಸಾವಿಗೀಡಾಗಿದ್ದರು.. ಮೂರು ವರ್ಷ ಕಾಂಗ್ರೆಸ್ ನವರು ಬಿರಿಯಾನಿ ನೀಡಿ ಅವನಿಗೆ ಸಾಕಿಕೊಂಡಿದ್ದರು.ಪಾಕಿಸ್ತಾನ ಮೇಲೆ ಯುದ್ಧ ಮಾಡಿದ್ರಾ.? ಧೈರ್ಯ ಇತ್ತಾ…? ಮೋದಿ ಪಾಕಿಸ್ತಾನದ ಮೇಲೆ ಯುದ್ಧ ಮಾಡಿದ್ದಾರೆ.. ಪಾಕ್ ಸೇನಾ ನೆಲೆ ಧ್ವಂಸಗೊಳಿಸಿ ಪಾಠ ಕಲಿಸಿದರು.. ಕಾಂಗ್ರೆಸ್ಸಿಗರಿಗೆ ಧಮ್ ಇದೆಯಾ.? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ಸಿಗರು ಪಾಕಿಸ್ತಾನ, ಮುಸ್ಲಿಂರು ಎಂದರೆ ಪಾದಕ್ಕೆ ಬೀಳುತ್ತೀರಿ… ಪಾಕಿಸ್ತಾನದವರು ಸತ್ತರೆ ಕಾಂಗ್ರೆಸ್ಸಿಗರು ಕಣ್ಣೀರು ಹಾಕುತ್ತಾರೆ. ಭಾರತೀಯರ ಸಿಂಧೂರ ಅಳಿಸಿದಾಗ ನಾವು ಸುಮ್ಮನಿರಲ್ಲ.ರೋಷ, ದ್ವೇಷದಿಂದ ಪ್ರತಿಕಾರ ತೆಗೆದುಕೊಳ್ಳುತ್ತೇವೆ.ಕಾಂಗ್ರೆಸ್ಸಿನ ಹೇಡಿಗಳಂತೆ ನಾವು ಓಡಿ ಹೋಗಲ್ಲ ಎಂದು ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ನೀಡಿದರು. 

ಈ ಸಂದರ್ಭದಲ್ಲಿ ಶಾಸಕರಾದ ಡಾ.ಎಂ.ಚಂದ್ರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ರೈತ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜನ್, ಪ್ರಧಾನ ಕಾರ್ಯದರ್ಶಿ ಸಂಪತ್‍ಕುಮಾರ್, ರೈತ ಮಾರ್ಚಾದ ಜಿಲ್ಲಾಧ್ಯಕ್ಷ ವೆಂಕಟೇಶ್ ಯಾದವ್, ವಕ್ತಾರ ನಾಗರಾಜ್ ಬೇದ್ರೇ, ನಗರಾಧ್ಯಕ್ಷ ಲೋಕೇಶ್, ಗ್ರಾಮಾಂತರ ಅದ್ಯಕ್ಷ ನಾಗರಾಜ್, ನಂದಿ ನಾಗರಾಜ್,ಕಿರಣ್, ಅರುಣ ಸೇರಿದಂತೆ ಭಾಗವಹಿಸಿದ್ದರು. 

Leave a Reply

Your email address will not be published. Required fields are marked *