ಸೆಪ್ಟೆಂಬರ್ 10: ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ (RLHP) ಮೈಸೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೈಸೂರು, ಗೋಪಾಲಪುರ ಗ್ರಾಮ ಪಂಚಾಯಿತಿ ಇವರ ಸಹಯೋಗದೊಂದಿಗೆ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ ವನ್ನು ಗೋಪಾಲಪುರ ಗ್ರಾಮದಲ್ಲಿ ನಡೆಸಲಾಯಿತು. ಶ್ರೀ ಶಶಿಕುಮಾರ್ ಸಂಯೋಜಕರು ಆರ್.ಎಲ್.ಹೆಚ್.ಪಿ. ಸಂಸ್ಥೆ ಪ್ರಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದ ಉದ್ಘಾಟನೆ ಮಾಡಿದ ಶ್ರೀ ವಿಜಯ್ ಕುಮಾರ್ ಎಸ್ ಜಿಲ್ಲಾ ನಿರೂಪಣಾಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೈಸೂರು ಜಿಲ್ಲೆ, ಇವರು ಮಾತನಾಡುತ್ತಾ ರಾಷ್ಟ್ರೀಯ ಪೌಷ್ಠಿಕತಾ ವಾರ 2025ನ್ನು ಭಾರತದಾದ್ಯಂತ ಸೆಪ್ಟೆಂಬರ್ 1ರಿಂದ 7ರವರೆಗೆ ಆಚರಿಸಲಾಗುತಿದ್ದು. ಈ ವಾರ್ಷಿಕ ಅಭಿಯಾನವನ್ನು 1982ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಪ್ರಾರಂಭಿಸಿತು. ಇದರ ಉದ್ದೇಶವೆಂದರೆ ಸರಿಯಾದ ಪೌಷ್ಠಿಕ ಆಹಾರ, ಸಮತೋಲಿತ ಆಹಾರ ಪದ್ಧತಿ ಹಾಗೂ ಆರೋಗ್ಯಕರ ಜೀವನಶೈಲಿಯ ಮಹತ್ವವನ್ನು ಎಲ್ಲಾ ವಯೋಮಾನದ ಜನರಿಗೆ, ವಿಶೇಷವಾಗಿ ಮಕ್ಕಳಿಗೆ, ಕಿಶೋರರಿಗೆ ಮತ್ತು ಮಹಿಳೆಯರಿಗೆ ತಲುಪಿಸುವುದು. ಈ ವರ್ಷದ ಥೀಮ್ ಜೀವನಕ್ಕಾಗಿ ಸರಿಯಾಗಿ ತಿನ್ನಿರಿ ಆಗಿತ್ತು. ಇದು ಪೌಷ್ಠಿಕ ಹಾಗೂ ಸುರಕ್ಷಿತ ಆಹಾರದ ಮಹತ್ವವನ್ನು ಒತ್ತಿ ಹೇಳಿ, ಆರೋಗ್ಯಕರ ಭವಿಷ್ಯ ನಿರ್ಮಾಣದಲ್ಲಿ ಅದರ ಪಾತ್ರವನ್ನು ಹೈಲೈಟ್ ಮಾಡಿತು.

ಈ ಥೀಮ್ ಮೂಲಕ ಪೌಷ್ಠಿಕಾಂಶದ ಕೊರತೆಯನ್ನು ಕಡಿಮೆ ಮಾಡುವುದು, ಜೀವನಶೈಲಿ ಸಂಬಂಧಿತ ರೋಗಗಳನ್ನು ತಡೆಯುವುದು ಮತ್ತು ಜನರು ತಮ್ಮ ಆಹಾರ ಆಯ್ಕೆಗಳನ್ನು ಜಾಗೃತಿಯಿಂದ ಮಾಡಿಕೊಳ್ಳುವಂತೆ ಉತ್ತೇಜಿಸಬೇಕಿದೆ. ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಜಾಗೃತಿಯು ಕಡಿಮೆಯಾಗುತ್ತಿದ್ದು ಎಲ್ಲರೂ ಜಂಕ್ ಫುಡ್ಗಳ ಮೊರೆ ಹೋಗುತ್ತಿದ್ದಾರೆ ನಾವು ನಮ್ಮ ಮನೆಯಲ್ಲಿ ಮತ್ತು ಸುತ್ತಮುತ್ತಲಿನ ವಾತಾವರಣದಲ್ಲಿ ಸಿಕ್ಕುವ ನುಗ್ಗೆ ಸೊಪ್ಪು ನಿಂಬೆಹಣ್ಣು ಹಣ್ಣು ತರಕಾರಿ ಆಯಾ ಕಾಲಕ್ಕೆ ದೊರಕುವ ಹಣ್ಣುಗಳು ಇವುಗಳನ್ನು ತಿನ್ನಬೇಕು ಉಪ್ಪು ಸಕ್ಕರೆ ಮತ್ತು ಕಾರ ಈ ಮೂರುಗಳನ್ನು ಕಡಿಮೆ ಮಾಡಿದರೆ ಆರೋಗ್ಯ ಉತ್ತಮವಾಗಿರುತ್ತದೆ. ಮಕ್ಕಳಿಗೆ ನಾವು ಪ್ರತಿದಿನ ಗೋಬಿ ಪಾನಿಪುರಿ ಕುರ್ಕುರೆ ಗಳನ್ನು ಕೊಡಿಸದೆ ಮೊಳಕೆ ಕಟ್ಟಿದ ಕಾಳುಗಳು, ಬೀಟ್ರೂಟ್ ಜ್ಯೂಸ್, ಹಣ್ಣುಗಳನ್ನು ನೀಡಲಿ ಮಕ್ಕಳು ಪೌಷ್ಟಿಕವಾಗಿ ಇರುತ್ತಾರೆ. ಆಹಾರ ಎಂದರೆ ಕೇವಲ ರುಚಿ ಅಥವಾ ಪ್ರಮಾಣವಲ್ಲ, ಅದು ಸಮತೋಲನ, ಆರೋಗ್ಯ ಮತ್ತು ದೀರ್ಘಕಾಲೀನ ಕಲ್ಯಾಣ ಎಂಬುದನ್ನು ನೆನಪಿಸಿತು. ಜಾಗೃತಿ ಹರಡುವುದರ ಮೂಲಕ ಮತ್ತು ಸಮುದಾಯದ ಭಾಗವಹಿಸುವಿಕೆಯನ್ನು ಉತ್ತೇಜಿಸುವುದರ ಮೂಲಕ, ಈ ಕಾರ್ಯಕ್ರಮವು ಆರೋಗ್ಯಕರ ಮತ್ತು ಪೌಷ್ಠಿಕತೆ ಅರಿವುಳ್ಳ ಸಮಾಜ ನಿರ್ಮಾಣಕ್ಕೆ ಮಹತ್ತರ ಕೊಡುಗೆ ನೀಡಲಿದೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಮಹದೇವ್.ಎಂ ಅಧ್ಯಕ್ಷರು ಗ್ರಾಮ ಪಂಚಾಯತಿ ಗೋಪಾಲಪುರ, ಶ್ರೀಮತಿ ಭಾಗ್ಯ ಉಪಾಧ್ಯಕ್ಷರು, ಶ್ರೀ ಕೃಷ್ಣಮೂರ್ತಿ ಮತ್ತು ಸಣ್ಣತಾಯಮ್ಮ ಗ್ರಾಮಪಂಚಾಯ್ತಿ ಸದಸ್ಯರು, ಶ್ರೀ ತಿಬ್ಬಯ್ಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಶ್ರೀ ಪ್ರದೀಪ್ ಕುಮಾರ್ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಶ್ರೀ ವಿಶ್ವನಾಥ್ ಹಿರಿಯ ಆರೋಗ್ಯ ನಿರೀಕ್ಷಕರು, ಶ್ರೀಮತಿ ನಂದಿನಿ ಆಪ್ತ ಸಮಾಲೋಚಕರು ಐ.ಸಿ.ಟಿ.ಎಸ್. ಮೈಸೂರು, ಶ್ರೀ ಪ್ರವೀಣ್ ಸಂಯೋಜಕರು ಮಿಷನ್ ಶಕ್ತಿ ಮೈಸೂರು, 100ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು.
Views: 121