“ರಾಜ್ಯ ರಾಜಕೀಯದಲ್ಲಿ ಪರ್ಯಾಯ ಶಕ್ತಿ: ಎಲ್ಲಾ ಚುನಾವಣೆಗಳಲ್ಲಿ ಸ್ಪರ್ಧಿಸಲು ತಯಾರಾಗಿರುವ ಆಮ್ ಆದ್ಮೀ ಪಾರ್ಟಿ – ರಾಜೇಶ್ ಗುಪ್ತ”

ಚಿತ್ರದುರ್ಗ ಸೆ. 18

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್


ರಾಜ್ಯದಲ್ಲಿನ ಮತದಾರರು ಎರಡು ರಾಷ್ಟ್ರೀಯ ಪಕ್ಷಗಳ ಆಡಳಿತವನ್ನು ನೋಡಿದ್ದಾರೆ ಇಬ್ಬರಲ್ಲಿಯೂ ಸಹಾ ಭ್ರಷ್ಟಾಚಾರ ಹೆಚ್ಚಾಗಿದ್ದು ಮತದಾರರು ಈ ಎರಡು ಪಕ್ಷವನ್ನು ಬದಲಾಯಿಸಲು ನಿರ್ಧಾರ ಮಾಡಿದ್ದಾರೆ ಈ ಹಿನ್ನಲೆಯಲ್ಲಿ ಮುಂಬರುವ ಯಾವುದೇ ಚುನಾವಣೆಯಲ್ಲಿಯೂ ಸಹಾ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದರ ಮೂಲಕ ಮತದಾರರ ಒಲವನ್ನು ಪಡೆಯುವ ಕಾರ್ಯವನ್ನು ಮಾಡಲಾಗುವುದು ಎಂದು ಅಮ್ ಆದ್ಮೀ ಪಾರ್ಟಿಯ ಮಾಜಿ ಶಾಸಕರು, ಕರ್ನಾಟಕ ಉಸ್ತುವಾರಿಗಳಾದ ರಾಜೇಶ್ ಗುಪ್ತ ತಿಳಿಸಿದ್ದಾರೆ.


ಚಿತ್ರದುರ್ಗ ನಗರದಲ್ಲಿನ ಆಮ್ ಆದ್ಮಿ ಪಾರ್ಟಿ ಕಚೇರಿಯಲ್ಲಿ ಬುಧವಾರ ಸಂಜೆ ನಡೆದ ಪಾರ್ಟಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪಾರ್ಟಿಯನ್ನು ಸಂಘಟಿಸುವ ಸಲುವಾಗಿ ಜಿಲ್ಲಾವಾರು ಪ್ರವಾಸವನ್ನು ಹಮ್ಮಿಕೊಳ್ಳಲಾಗಿದೆ, ಈಗಾಗಲೇ 5 ರಿಂದ 6 ಜಿಲ್ಲೆಗಳನ್ನು ಮುಗಿಸಿದ್ದು, ಈಗ ಚಿತ್ರದುರ್ಗದಲ್ಲಿ ಪಾರ್ಟೀಯ ಕಾರ್ಯಕರ್ತರನ್ನು ಭೇಟಿ ಮಾಡಲಾಗುತ್ತಿದೆ, ಆಮ್ ಆದ್ಮಿ ಪಾರ್ಟಿಯೂ ದೆಹಲಿಯಲ್ಲಿ ಅಧಿಕಾರವನ್ನು ನಡೆಸಿದ ಈಗ ಪಂಜಾಬ್‍ನಲ್ಲಿ ಅಧಿಕಾರವನ್ನು ನಡೆಸುತ್ತಿದೆ, ಇಲ್ಲಿ ಮತದಾರರಿಗೆ ಸರಿಯಾದ ರೀತಿಯಲ್ಲಿ ಸೌಲಭ್ಯವನ್ನು ನೀಡುವುದು ನಮ್ಮ ಉದ್ದೇಶವಾಗಿದೆ ಉಚಿತ ಕುಡಿಯುವನೀರು, ಶಿಕ್ಷಣ ಆರೋಗ್ಯ ಉತ್ತಮವಾದ ರಸ್ತೆಗಳನ್ನು ನೀಡಲಾಗುತ್ತದೆ ತೆರಿಗೆಯನ್ನು ನೀಡಿದ ಹಣವನ್ನು ತೆರಿಗೆಯನ್ನು ಪಾವತಿಸುವವರಿಗೆ ಬಳಕೆ ಮಾಡಲಾಗುತ್ತದೆ ಇದು ನಮ್ಮ ಪಾರ್ಟಿಯ ಉದ್ಧೇಶವಾಗಿದೆ ಎಂದರು.


ನಮ್ಮ ಪಾರ್ಟಿಯ ಅಧ್ಯಕ್ಷರಾದ ಅರವಿಂದ ಕ್ರೇಜಿವಾಲರವರು ದೇಹಲಿಯಲ್ಲಿ ಮುಖ್ಯಮಂತ್ರಿಗಳಾಗಿದ್ಧಾಗ ಉತ್ತಮವಾದ ಅಡಳಿತವನ್ನು ನೀಡಿದರು. ಅಲ್ಲಿನ ಜನತೆಗೆ ಎಲ್ಲವೂ ಸಹಾ ಉಚಿತವಾಗಿ ನೀಡುವುದರ ಮೂಲಕ ಅವರು ನೀಡಿದ್ದ ಹಣವನ್ನು ಅವರಿಗೆ ಹಿಂತಿರುಗಿಸುದ್ದಾರೆ.

ನಮ್ಮ ಪಾರ್ಟಿಯನ್ನು ದೇಶದೆಲ್ಲಡೆ ಪಸರಿಸಬೇಕೆಂಬ ಉದ್ದೇಶದಿಂದ ಬೇರೆ ರಾಜ್ಯಗಳಲ್ಲಿಯೂ ಸಹಾ ಪಕ್ಷವನ್ನು ಸಂಘಟಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಈ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯಕ್ಕೆ ನನ್ನನ್ನು ನೇಮಿಸಲಾಗಿದೆ, ರಾಜ್ಯದಲ್ಲಿ ಪಾರ್ಟಿಯನ್ನು ಬೆಳಸಬೇಕಿದೆ ಮತದಾರರಿಗೆ ನಮ್ಮ ಪಾರ್ಟಿಯ ಬಗ್ಗೆ ಒಲವು ಮೂಡುವಂತೆ ಮಾಡಬೇಕಿದೆ, ನಮ್ಮದು ಯಾವುದೇ ಭ್ರಷ್ಟಾಚಾರ ರಹಿತವಾದ ಪಾರ್ಟಿಯಾಗಿದೆ ನಮ್ಮಲ್ಲಿ ಯಾವುದೇ ರೀತಿಯ ಹಣದ ಕಾರ್ಯಚರಣೆ ಇಲ್ಲಿ ನಮ್ಮಲ್ಲಿ ಸ್ಪರ್ದೆ ಮಾಡುವವರು ಸಹಾ ನಿಷ್ಠಾವಂತರಾಗಿರಬೇಕಿದೆ ಎಂದು ರಾಜೇಶ್ ಗುಪ್ತ ತಿಳಿಸಿದರು.


ರಾಜದ್ಯಲ್ಲಿ ಮುಂಬರುವ ಜಿ.ಪಂ., ತಾ.ಪಂ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ,ವಿಧಾನಸಭೆ ಹಾಗೂ ಲೋಕಸಭೆ ಸೇರಿದಂತೆ ಯಾವುದೇ ಚುನಾವಣೆಯಾಗಲಿ ಅದರಲ್ಲಿ ನಮ್ಮ ಪಾರ್ಟಿವತಿಯಿಂದ ಸ್ಪರ್ದೆ ಮಾಡಲಾಗುವುದು ಇದರಲ್ಲಿ ಸ್ಪರ್ದೆ ಮಾಡುವ ನಿಷ್ಟಾವಂತರನ್ನು ಹುಡುಕುವ ಕಾರ್ಯವನ್ನು ಈಗಿನಿಂದಲೇ ಮಾಡಲಾಗುವುದು, ಮತದಾರರಿಗೆ ನಮ್ಮ ಪಾರ್ಟಿಯ ಬಗ್ಗೆ ತಿಳಿಸುವುದರ ಮೂಲಕ ಅವರಿಗೆ ಎರಡು ರಾಷ್ಟ್ರೀಯ ಪಕ್ಷಗಳ ಬದಲು ಇನ್ನೊಂದು ಪಾರ್ಟಿ ಇದೆ ಎಂದು ತಿಳಿಸಿ ಕೊಡಲಾಗುವುದು ರಾಜ್ಯದಲ್ಲಿ ಆಡಳಿತವನ್ನು ನಡೆಸಿದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಭ್ರಷ್ಠಾಚಾರದಲ್ಲಿ ಮುಳುಗಿವೆ, ಎರಡು ಪಕ್ಷಗಳು ಲಂಚವನ್ನು ಹೊಡೆಯುವುದರಲ್ಲಿ ಪೈಪೋಟಿಯನ್ನು ನಡೆಸಿವೆ. ಇವೆರಡನ್ನು ಮತದಾರ ತಿರಸ್ಕಾರದಿಂದ ನೋಡುತ್ತಿದ್ದಾನೆ ಇನ್ನೂ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ತನ್ನ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಅಲ್ಲದೆ ಮತದಾರರು ಇದನ್ನು ಒಪ್ಪುವುದಿಲ್ಲ ಎಂದರು.


ಇಂದಿನ ರಾಜಕೀಯ ಎಂದರೆ ಅದು ಸೇವೆ ಎಂದು ಆಗದೇ ಬಂಡವಾಳವನ್ನು ಹಾಕಿ ಬಂಡವಾಳವನ್ನು ತೆಗೆಯುವ ಉದ್ಯಮವಾಗಿ ರೂಪುಗೊಂಡಿದೆ, ಆದರೆ ಆಮ್ ಆದ್ಮಿ ಪಾರ್ಟಿ ರಾಜಕೀಯ ಎಂದರೆ ಸೇವೆ ಎಂದು ಪರಿಗಣಿಸಿದೆ, ತಮ್ಮ ಮತದಾರರಿಗೆ ಎನು ಬೇಕು ಅದನ್ನು ನೀಡುತ್ತಿದೆ, ಇಂದಿನ ರಾಜಕೀಯದಲ್ಲಿ ಬಡವರ ಬದುಕಿಗೆ ಸೇವೆಯನ್ನು ನೀಡುವ ಅಧಿಕಾರ ಬೇಕು ಆದರೆ ಶ್ರೀಮಂತರಿಗೆ ತಮ್ಮ ಆಸ್ತಿಯನ್ನು ಸಂರಕ್ಷಣೆ ಮಾಡುವ ಅಧಿಕಾರ ಬೇಕಿದೆ. ದೆಹಲಿಯಲ್ಲಿ ನಮ್ಮ ಪಾರ್ಟಿ ಗ್ಯಾರೆಂಟಿಯನ್ನು ಪ್ರಾರಂಭ ಮಾಡಿತ್ತು ಇದನ್ನು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕಾಪಿ ಮಾಡಿದೆ ಇದನ್ನೇ ಬಿಜೆಪಿ ಪಕ್ಷ ಅನುಸರಿಸುತ್ತಿದೆ ಎಂದು ತಿಳಿಸಿದರು. 


ಚಿತ್ರದುರ್ಗ ಆಮ್ ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷರಾದ ಜಗದೀಶ್ ಮಾತನಾಡಿ ರಾಜ್ಯದಲ್ಲಿ ನಮ್ಮ ಪಾರ್ಟಿಯನ್ನು ಸಂಘಟಿಸುವ ಕಾರ್ಯವನ್ನು ನಮ್ಮ ಮುಖಂಡರು ಮಾಡುತ್ತಿದ್ದಾರೆ ಮುಂದಿನ ದಿನದಲ್ಲಿ ನಮ್ಮ ಪಾರ್ಟಿ ಎಲ್ಲಾ ಚುನಾವಣೆಗಳಲ್ಲಿಯೂ ಸಹಾ ಸ್ಪರ್ದೆ ಮಾಡುವುದರ ಮೂಲಕ ಮತದಾರರ ಗಮನ ಸೆಳೆಯಲಾಗುವುದು, ನಮ್ಮದು ಯಾವುದೇ ಭ್ರಷ್ಟಾಚಾರ ಇಲ್ಲದ ಪಾರ್ಟಿಯಾಗಿದೆ. ಇಲ್ಲಿ ಕೆಲಸ ಮಾಡುವವರು ಸಹಾ ನಿಸ್ವಾರ್ಥವಾಗಿ ಕೆಲಸವನ್ನು ಮಾಡುತ್ತಾರೆ, ಈಗ ಅಲ್ಲದಿದ್ದರೂ ಸಹಾ ಮುಂದಿನ ದಿನಮಾನದಲ್ಲಿ ನಮ್ಮ ಪಾರ್ಟಿ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. 


ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಸೀತರಾಮ್ ಗುಂಡಪ್ಪ, ಕಾರ್ಯದರ್ಶಿ ಬಸವರಾಜ್, ಜಿಲ್ಲಾ ಕಾರ್ಯದರ್ಶಿ ರಾಮಣ್ಣ, ಲೋಕೇಶ್ವರಪ್ಪ, ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಜ್ಯೋತಿ, ರವಿ, ಸುಧಾಕರ್ ಭಾಗವಹಿಸಿದ್ದರು.

Leave a Reply

Your email address will not be published. Required fields are marked *