ಚಿತ್ರದುರ್ಗ ಸೆ. 22
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷರಾದ ಶಿವಸ್ವಾಮಿರವರ ಉಪಸ್ಥಿತಿಯಲ್ಲಿ ಚಿತ್ರದುರ್ಗ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷರಾದ ವಿ.ಎಲ್.ಪ್ರಶಾಂತ್‍ರವರು ತಮ್ಮ ಸಮಿತಿಗೆ ನೂತನವಾಗಿ ಕಾರ್ಯಕಾರಿ ಸಮಿತಿಯನ್ನು ನೇಮಕ ಮಾಡಿದ್ದಾರೆ.

ಗೌರವ ಕಾರ್ಯದರ್ಶಿಗಳಾಗಿ ಎಂ.ಕೆ.ಹರೀಶ್, ಎಸ್.ಟಿ.ಬಸವರಾಜ್, ಗೌರವ ಕೋಶಾಧ್ಯಕ್ಷರಾಗಿ ಆರ್. ಮಹಂತೇಶ್, ಮಹಿಳಾ ಪ್ರತಿನಿಧಿಗಳಾಗಿ ಶ್ರೀಮತಿ ರಜನಿ ಲೇಪಾಕ್ಷ, ಶ್ರೀಮತಿ ಸೌಮ್ಯ ಕಿರಣ್, ಪರಿಶಿಷ್ಟ ಜಾತಿ ಪ್ರತಿನಿಧಿಗಳಾಗಿ ಸಿ.ಎಂ.ಚಂದ್ರಶೇಖರ್, ಟಿ.ಹಿಮಂತ್ ರಾಜ್, ಪರಿಶಿಷ್ಟ ಪಂಗಡದ ಪ್ರತಿನಿಧಿಯಾಗಿ ಓ.ಉಪೇಂದ್ರ ಕುಮಾರ್, ಹಿಂದುಳಿದ ವರ್ಗಗಳ ಪ್ರತಿನಿಧಿಯಾಗಿ ಪ್ರತಾಪ್ ಜೋಗಿ, ಅಲ್ಪ ಸಂಖ್ಯಾತರ ಪ್ರತಿನಿಧಿಯಾಗಿ ಮೋಹಿದ್ದೀನ್ ಖಾನ್ ಹಾಗೂ ಸಂಘ, ಸಂಸ್ಥೆಗಳ ಪ್ರತಿನಿಧಿಯಾಗಿ ಸಿ.ರವಿಯವರನ್ನು ನೇಮಕ ಮಾಡಲಾಗಿದೆ ಎಂದು ವಿ.ಎಲ್.ಪ್ರಶಾಂತ್ ತಿಳಿಸಿದ್ದಾರೆ.
Views: 111