ಚಿತ್ರದುರ್ಗದಲ್ಲಿ ನೂತನ ಔಷಧಿ ಭವನ ಉದ್ಘಾಟನೆ – ಆ.26ರಂದು ಭವ್ಯ ಸಮಾರಂಭ.

ಚಿತ್ರದುರ್ಗ ಆ. 25 

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್


ಚಿತ್ರದುರ್ಗ ಜಿಲ್ಲಾ ಔಷಧಿ ವ್ಯಾಫಾರಿಗಳ ಸಂಘದವತಿಯಿಂದ ನೂತನವಾಗಿ ನಿರ್ಮಾಣ ಮಾಡಲಾದ ಔಷಧಿ ಭವನದ ಉದ್ಘಾಟನಾ ಸಮಾರಂಭವೂ ಆ. 26ರ ಭಾನುವಾರ ನಗರದ ಚಳ್ಳಕೆರೆ ರಸ್ತೆಯ ಆಕ್ಷಯ ಗ್ಲೋಬಲ್ ಆಸ್ಪತ್ರೆಯ ಹಿಂಭಾಗದ ಶ್ರೀರಾಮ ಬಡಾವಣೆಯಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ ಚಿತ್ರದುರ್ಗ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಚಂದ್ರಮೋಹನ್ ರೆಡ್ಡಿ ತಿಳಿಸಿದ್ದಾರೆ. 


ಈ ಉದ್ಘಾಟನಾ ಸಮಾರಂಭದಲ್ಲಿ ಆಹಾರ ಸುರಕ್ಷತೆ ಮತ್ತು ಔಷಧಿ ಆಡಳಿತದ ಆಯುಕ್ತರಾದ ಕೆ.ಶ್ರೀನಿವಾಸ್, ಆಹಾರ ಸುರಕ್ಷತೆ ಮತ್ತು ಔಷಧಿ ಆಡಳಿತದ ಆಪರ ಔಷಧ ನಿಯಂತ್ರಕರು ಮತ್ತು ನಿಯಂತ್ರಣಾಧಿಕಾರಿಗಳಾದ ಡಾ.ಉಮೇಶ್ ಎಸ್. ಹರೀಶ್ ಜೈನ್, ಕರ್ನಾಟಕ ರೀಟೇಲರ್ಸ್ ಡಿಸ್ಟ್ರಿಬ್ಯೂಟರ್ಸ್ ಆರ್ಗನೈಸೇಷನ್‍ನ ಅಧ್ಯಕ್ಷರಾದ ಸಿ ಜಯರಾಮ್, ಕೆ.ಸಿ.ಡಿ.ಎ. ಮತ್ತು ಚೇತನ ಹಾಗೂ ಚಿರಾಗ್ ಫಾರ್ಮನ ಮಾಜಿ ಅಧ್ಯಕ್ಷರಾದ ಕೆ.ಇ.ಪ್ರಕಾಶ್, ದಾವಣಗೆರೆಯ ಆಹಾರ ಸುರಕ್ಷತೆ ಮತ್ತು ಔಷಧಿ ಆಡಳಿತ ಪ್ರಾದೇಶಿಕ ಕಚೇರಿಯ ಉಪ ಔಷಧಿ ನಿಯಂತ್ರಕರಾದ ಡಾ.ಎಂ.ಖಲಿದ್ ಆಹ್ಮದ್ ಖಾನ್ ಆಹಾರ ಸುರಕ್ಷತೆ ಮತ್ತು ಔಷಧಿ ಆಡಳಿತ ಕಚೇರಿ ಚಿತ್ರದುರ್ಗ ವೃತ್ತದ ಸಹಾಯಕ ಔಷಧಿ ನಿಯಂತ್ರಕರಾದ ಸಿ.ಹೆಚ್.ಗೀರೀಶ್ ಎಸ್.ಜೆ.ಎಂ. ಕಾಲೇಜ್ ಆಫ್ ಫಾರ್ಮಸಿಯ ಪ್ರಾಂಶುಪಾಲರಾದ ಡಾ.ಟಿ.ಎಸ್.ನಾಗರಾಜ್ ಹಾಗೂ ದಾವಣಗೆರೆಯ ಏ.ಕೆ.ಫಾರ್ಮನ ಸಚಿನ್ ಆಚಾರ್ಯರವರು ಭಾಗವಹಿಸಲಿದ್ದಾರೆ.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿತ್ರದುರ್ಗ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷರಾದ ಎಸ್.ಓಂಕಾರಮೂರ್ತಿ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಬೆಂಗಳೂರಿನ ಗ್ರೂಪ್ ಫಾರ್ಮಾಸ್ಯೂಟಿಕಲ್ಸ್‍ನ ಉಪಾಧ್ಯಕ್ಷರಾದ ಡಾ.ಸುನಿಲ್ ಎಸ್.ಚಿಪ್ಲುಂಕರ್ ರವರು ಕಲಿಕಾ ಮತ್ತು ವ್ಯಾಪಾರ ಕೌಶಲ್ಯ ಪರಿಣಿತಿಯ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.

Leave a Reply

Your email address will not be published. Required fields are marked *