ಚಿತ್ರದುರ್ಗ: ನಗರದ ಪ್ರತಿಷ್ಠಿತ ಶಾಲೆಯಾದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೆಬೆನ್ನೂರಿನಲ್ಲಿ ನವೆಂಬರ್ 6, 7 ಮತ್ತು 8ನೇ ತಾರೀಖಿನಂದು ನಡೆದ 40ನೇ ರಾಜ್ಯಮಟ್ಟದ ಸಬ್ ಜೂನಿಯರ್ ಕೆಡಿಟ್, ಜೂನಿಯರ್ ಮತ್ತು ಸೀನಿಯರ್ ಟೇಕ್ವಾಂಡೋ ಪಂದ್ಯಾವಳಿಯಲ್ಲಿ ಈ ಕೆಳಕಂಡ ವಿದ್ಯಾರ್ಥಿಗಳು ಭಾಗವಹಿಸಿ ವಿಜೇತರಾಗಿರುತ್ತಾರೆ.
- ವಿಭಾ ಎಂ.ಬಿ 7ನೇ ತರಗತಿ,
- ಸಾನ್ವಿ ಎ 7ನೇ ತರಗತಿ,
- ಸನ್ನಿಧಿ ವೈ 6ನೇ ತರಗತಿ,
- ದೈವಿಕ್ 6ನೇ ತರಗತಿ,
- ಪೃಥ್ವಿ ಸಿ 5ನೇ ತರಗತಿ
- ಭೂಮಿಕ.ಸಿ. 3ನೇ ತರಗತಿ
- ಸನತ್ ವಿ 2ನೇ ತರಗತಿ
ಇವರಲ್ಲಿ ಬಂಗಾರ ಪದಕ ಗಳಿಸಿದ ಕೆಡಿಟ್ ಸ್ಪರ್ಧಿಗಳಾದ ವಿಭಾ ಎಂ.ಬಿ, ಸಾನ್ವಿ ವಿ, ಸನ್ನಿಧಿ ವೈ ಈ ಮೂರು ವಿದ್ಯಾರ್ಥಿಗಳು ನವೆಂಬರ್ 21, 22, 23ರಂದು ಉತ್ತರ ಪ್ರದೇಶದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಟೇಕ್ವಾಂಡೋ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.
ರಾಷ್ಟ್ರಮಟ್ಟದ ಟೇಕ್ವಾಂಡೋ ಸ್ಪರ್ಧೆಗೆ ಆಯ್ಕೆಯಾಗಿ ಶಾಲೆಗೆ ಹಾಗೂ ಚಿತ್ರದುರ್ಗ ಜಿಲ್ಲೆಗೆ ಕೀರ್ತಿ ತಂದ ಈ ಕ್ರೀಡಾಪಟುಗಳಿಗೆ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ.ಬಿ.ವಿಜಯ್ ಕುಮಾರ್, ನಿರ್ದೇಶಕರಾದ ಶ್ರೀಮತಿ ಸುನಿತಾ.ಪಿ.ಸಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ.ಎಸ್.ಎಂ.ಪೃಥ್ವಿಶ, ಹಾಗೂ ಐಸಿಎಸ್‌ಇ ಪ್ರಾಚಾರ್ಯರಾದ ಬಸವರಾಜಯ್ಯ.ಪಿ, ಮುಖ್ಯ ಶಿಕ್ಷಕರಾದ ಶ್ರೀ.ತಿಪ್ಪೇಸ್ವಾಮಿ.ಎನ್.ಜಿ ಹಾಗೂ ಎಲ್ಲಾ ಶಿಕ್ಷಕ/ಶಿಕ್ಷಕೇತರ ವೃಂದದವರು ಶ್ಲಾಘಿಸಿ ಅಭಿನಂದಿಸಿದ್ದಾರೆ.