ಚಿತ್ರದುರ್ಗ ನ. 13
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಯೋಗ ಎನ್ನುವುದೇ ಸ್ವದೇಶಿ ಆಗಿದ್ದೂ ಅದರ ಭಾಗವಾಗಿ ಹಲವಾರು ದೇಶಗಳು ಯೋಗವನ್ನು ಉಚ್ವಾಸ ನಿಶ್ವಾಸ ಮಾಡಿಕೊಂಡಿವೆ ಎಂದು ಶ್ವಾಸ ಯೋಗ ಗುರು ಶ್ರೀ ವಚನಾನಂದ ಸ್ವಾಮೀಜಿ ತಿಳಿಸಿದರು.

ಚಿತ್ರದುರ್ಗ ನಗರದಲ್ಲಿ ಸ್ವದೇಶಿ ಜಾಗರಣ ಮಂಚ್‍ವತಿಯಿಂದ ನಡೆಯುತ್ತಿರುವ ಎರಡನೇ ದಿನದ ಸ್ವದೇಶಿ ಮೇಳದಲ್ಲಿ ಯೋಗ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯೋಗ ಅನ್ನುವಂಥದ್ದು ಹೆಚ್ಚು ಪ್ರಯೋಗವಾಗಿದೆ ಇದು ಯಾವುದೇ ವಿಶ್ವವಿದ್ಯಾನಿಲಯಗಳಲ್ಲಿ ಒಬ್ಬ ವ್ಯಕ್ತಿಯಿಂದ ಸಂಶೋಧನೆ ಆಗಿರುವಂತದ್ದಲ್ಲ, ಹಲವಾರು ಋಷಿಮುನಿಗಳು, ಯೋಗಿಗಳು ಇವರೆಲ್ಲ ಗಿರಿ ಗುಹೆಗಳಲ್ಲಿ ಹಿಮಾಲಯಗಳ ಪರ್ವತದ ಶ್ರೇಣಿಗಳಲ್ಲಿ ಯೋಗವನ್ನು ಅನುಷ್ಠಾನ ಮಾಡುವಂತಹ ಸಂದರ್ಭಗಳಲ್ಲಿ ನಿಸರ್ಗದ ಮಧ್ಯದಲ್ಲಿ ಬಹಳ ಸೂಕ್ಷ್ಮವಾಗಿ ಪ್ರಾಣಿ ಪಕ್ಷಿಗಳ ಚಲನವಲನ ಗಮನಿಸಿ ಕಂಡುಕೊಂಡಂತಹ ಪ್ರಕ್ರಿಯೆ ಆಗಿದೆ ಎಂದರು.
ಯಾವುದೇ ಪ್ರಾಣಿಗಳು ವೈದ್ಯಕೀಯ ಚಿಕಿತ್ಸೆ ಹಾಗೂ ಔಷಧಿಗಳಿಲ್ಲದೆ ತಮ್ಮ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಂಡಿರುವುದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಹಲವಾರು ಪ್ರಾಣಿಗಳ ಉದಾಹರಣೆ ಸಹಿತ ತಿಳಿಸಿದರು. ಅದೇ ರೀತಿ ಶಟ್ಕರ್ಮ ವಿಧಿ ಇದೆ ಇವುಗಳಲ್ಲಿ ನೇತಿ, ದೌತಿ, ಬಸ್ತಿ, ತ್ರಾಟಕ,ನೌಲಿ, ಕಪಾಲಬಾತಿ ಇವುಗಳನ್ನು ಹಠಯೋಗದ ಭಾಗವಾಗಿದೆ ಎಂದರು. ಆದ್ದರಿಂದ ನಾವು ಮಾಡುವ ಪ್ರತಿಯೊಂದು ಆಸನವು ಪ್ರಾಣಿಗಳ ಪಕ್ಷಿಗಳ ಹೆಸರಿನಿಂದ ಎರವಲಾಗಿ ಪಡೆದುಕೊಂಡಿರುವುದಾಗಿ ತಿಳಿಸಿದರು. ನಂತರ ಯೋಗಾಸನ ಹಾಗೂ ಪ್ರಾಣಾಯಾಮಗಳನ್ನು ಹೇಳಿಕೊಟ್ಟರು.
ಪ್ರತಿ ವರ್ಷ ಸ್ವದೇಶಿ ಮೇಳವು ವಿವಿಧ ಜಿಲ್ಲೆಗಳಲ್ಲಿ ಒಂದೊಂದು ವರ್ಷ ಏರ್ಪಡಿಸಲಾಗುತ್ತದೆ ಈ ಬಾರಿಯ ಸ್ವದೇಶಿ ಮೇಳ ಐತಿಹಾಸಿಕ ಚಿನ್ಮೂಲಾದ್ರಿ ಕ್ಷೇತ್ರದಲ್ಲಿ ನಡೆಯುತ್ತಿರುವುದು ಸಂತೋಷದ ವಿಷಯ ವಾಗಿದೆ ಸ್ವದೇಶಿ ಜಾಗೃತಿಯೇ ಈ ಮೇಳದ ಮೂಲ ಉದ್ದೇಶ ಮತ್ತು ಸ್ವದೇಶಿ ವಸ್ತುಗಳನ್ನು ಬಳಸುವ ಹಾಗೂ ಸ್ವಾವಲಂಬನೆಯನ್ನು ಸಾಧಿಸುವಂತಹ ಅಭಿಯಾನವಾಗಿದೆ ಎಂದು ವಚನಾನಂದ ಸ್ವಾಮೀಜಿ ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಂಯೋಜಕರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್ ನವೀನ್, ಸಹ ಸಂಘಟಕರಾದ ಅನಿತ್‍ಕುಮಾರ್ ಜಿ.ಎಸ್, ಸಂಚಾಲಕರಾದ ಸೌಭಾಗ್ಯ ಬಸವರಾಜನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
Views: 22