ಚಿತ್ರದುರ್ಗ|ಡಿ.9ರಂದು ಉಚಿತ ನೇತ್ರ ತಪಾಸಣೆ ಶಿಬಿರ: ಶಂಕರ ಕಣ್ಣಿನ ಆಸ್ಪತ್ರೆ–ರೋಟರಿ ಕ್ಲಬ್ ಮುಂದಾಳತ್ವ.

ಚಿತ್ರದುರ್ಗ ಡಿ. 05

ಶಂಕರ ಕಣ್ಣಿನ ಆಸ್ಪತ್ರೆ, ಶಿವಮೊಗ್ಗ, ಶ್ರೀ ಕಂಚಿ ಕಾಮಕೋಟಿ ಮೆಡಿಕಲ್ ಟ್ರಸ್ಟ್, ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ ರೋಟರಿ ಕ್ಲಬ್ ಚಿತ್ರದುರ್ಗ ಮತ್ತು ಚಿತ್ರದುರ್ಗ ರೋಟರಿ ಟ್ರಸ್ಟ್, ಚಿತ್ರದುರ್ಗ ಹಾಗೂ ಶಂಕರ ವಿಷನ್ ಸೆಂಟರ್, ಚಳ್ಳಕೆರೆ. ಇವರ ಸಂಯುಕ್ತಾಶ್ರಯದಲ್ಲಿ ಡಿ.9ನೇ ಮಂಗಳವಾರ, ಬೆಳಿಗ್ಗೆ 10.ರಿಂದ 1.ಗಂಟೆಯವರೆಗೆ ನಗರ ಹೊರವಲಯದಲ್ಲಿ ಇರುವ ಚಳ್ಳಕೆರೆ ರಸ್ತೆಯಲ್ಲಿನ ಬಾಷ್ ಪೆಟ್ರೋಲ್ ಬಂಕ್ ಪಕ್ಕದಲ್ಲಿನ ಎಸ್.ಆರ್.ಬಿ.ಎಂ.ಎಸ್. ರೋಟರಿ ಸೇವಾ ಭವನದಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ ಅವಶ್ಯಕತೆ ಇರುವವರಿಗೆ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಿಬಿರದ ಸಂಚಾಲಕರಾದ ರೋ ಎಸ್. ವೀರೇಶ್ ತಿಳಿಸಿದ್ದಾರೆ.

ಇಲ್ಲಿ ನುರಿತ ನೇತ್ರ ತಜ್ಞರಿಂದ ಉಚಿತ ಕಣ್ಣಿನ ತಪಾಸಣೆ ನಡೆಸಿ ಅವಶ್ಯಕತೆ ಇರುವ ಕಣ್ಣಿನ ರೋಗಿಗಳಿಗೆ ಶಂಕರ ಕಣ್ಣಿನ ಆಸ್ಪತ್ರೆ, ಶಿವಮೊಗ್ಗ-ಕರೆದೊಯ್ದು ಶಸ್ತ್ರ ಚಿಕಿತ್ಸೆಯನ್ನು ನಡೆಸಿಕೊಡಲಾಗುವುದು. ಈ ಶಿಬಿರದ ಉಪಯೋಗವನ್ನು ಸ್ಥಳೀಯ ಹಾಗೂ ಸುತ್ತ- ಮುತ್ತಲ ಗ್ರಾಮಸ್ಥರು ಮತ್ತು ಕಣ್ಣಿನ ರೋಗಿಗಳು ಪಡೆದುಕೊಳ್ಳ ಬಹುದು.

ಶಿಬಿರಕ್ಕೆ ಬರುವವರು ಕಡ್ಡಾಯವಾಗಿ ಇತ್ತೀಚಿನ 2 ಫೋಟೋ ಹಾಗೂ 2 ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಮತದಾನ ಪತ್ರ ಜೆರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ತರಬೇಕು ಹಾಗೂ ದೂರವಾಣಿ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ ಗಳನ್ನು ತರಬೇಕು ಹಾಗೂ ಕಡ್ಡಾಯವಾಗಿ 20 ರಿಂದ 40 ವರ್ಷದೊಳಗಿನ ಸಂಬಂಧಿಕರನ್ನು ಕರೆದುಕೊಂಡು ಬರಬೇಕಿದೆ ಎಂದು ಸಂಘಟಕರು ಕೋರಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ 9141039290 ಈ ದೂರವಾಣಿಯನ್ನು ಸಂಪರ್ಕ ಮಾಡಬಹುದಾಗಿದೆ

Leave a Reply

Your email address will not be published. Required fields are marked *