ಉತ್ತರ ಕರ್ನಾಟಕ ಭಾಗದ ರೈಲು ಪ್ರಯಾಣಿಕರಿಗೆ ದೊಡ್ಡ ಸಂತೋಷದ ಸುದ್ದಿ. ಯಶವಂತಪುರ – ವಿಜಯಪುರ ನಡುವೆ ಸಂಚರಿಸುತ್ತಿದ್ದ ವಿಶೇಷ ರೈಲನ್ನು ರೈಲ್ವೆ ಇಲಾಖೆ ಡಿಸೆಂಬರ್ 8ರಿಂದ ಶಾಶ್ವತ (ಪರ್ಮನೆಂಟ್) ಮಾಡಿದೆ. ಇದುವರೆಗೆ ವಿಶೇಷ ರೈಲಿನ ರೂಪದಲ್ಲಿ ಸಂಚರಿಸುತ್ತಿದ್ದ ಕಾರಣ, ಟಿಕೆಟ್ ದರ ಸಾಮಾನ್ಯ ಎಕ್ಸ್‌ಪ್ರೆಸ್ ರೈಲುಗಳಿಗಿಂತ ಶೇ.25-35ರಷ್ಟು ಹೆಚ್ಚು ವಾಗಿತ್ತು. ಈಗ ಖಾಯಂ ಆಗಿರುವುದರಿಂದ ದರಗಳಲ್ಲಿ ದೊಡ್ಡ ಪ್ರಮಾಣದ ಇಳಿಕೆ ಆಗಿದೆ.
ಬೆಲೆ ಇಳಿಕೆಯಿಂದ ಪ್ರಯಾಣಿಕರಿಗೆ ದೊಡ್ಡಲಾಭ
ಬೆಂಗಳೂರು–ವಿಜಯಪುರ ರೈಲು ಸೇರಿದಂತೆ ಅರಸೀಕೆರೆ, ದಾವಣಗೆರೆ, ಹೊಸಪೇಟೆ, ಬಾಗಲಕೋಟೆ, ಆಲಮಟ್ಟಿ ಮತ್ತು ಗದಗ ಮಾರ್ಗದ ಪ್ರಯಾಣಿಕರು ಈಗ ಕಡಿಮೆ ದರದಲ್ಲಿ ಪ್ರಯಾಣಿಸಬಹುದಾಗಿದೆ.
ಸ್ಲೀಪರ್ ಟಿಕೆಟ್ ದರ: ಹೊಸದು – ಹಳೆಯದು
| ಎಲ್ಲಿಂದ – ಎಲ್ಲಿಗೆ | ಹಿಂದಿನ ದರ | ಹೊಸ ದರ |
|---|---|---|
| ಬೆಂಗಳೂರು – ವಿಜಯಪುರ | 520 ರೂ. | 405 ರೂ. |
| ಬೆಂಗಳೂರು – ಅರಸೀಕೆರೆ | 390 ರೂ. | 150 ರೂ. |
| ಬೆಂಗಳೂರು – ದಾವಣಗೆರೆ | 390 ರೂ. | 215 ರೂ. |
| ಬೆಂಗಳೂರು – ಹೊಸಪೇಟೆ | 390 ರೂ. | 285 ರೂ. |
| ಬೆಂಗಳೂರು – ಗದಗ | 425 ರೂ. | 330 ರೂ. |
| ಬೆಂಗಳೂರು – ಬಾಗಲಕೋಟೆ | 475 ರೂ. | 370 ರೂ. |
| ಬೆಂಗಳೂರು – ಆಲಮಟ್ಟಿ | 490 ರೂ. | 380 ರೂ. |
| ಬೆಂಗಳೂರು – ಬಸವನ ಬಾಗೇವಾಡಿ ರಸ್ತೆ | 495 ರೂ. | 385 ರೂ. |
ಜನರಲ್ ಟಿಕೆಟ್‌ನಲ್ಲಿ ಅಲ್ಪ ಇಳಿಕೆ
- ಬೆಂಗಳೂರು – ವಿಜಯಪುರ: 225 ರೂ. → 215 ರೂ.
- ಉಳಿದ ನಿಲ್ದಾಣಗಳಲ್ಲಿ: 10 ರಿಂದ 15 ರೂ. ಇಳಿಕೆ.
ರೈಲು ಸಂಖ್ಯೆಯಲ್ಲಿ ಬದಲಾವಣೆ
- 06545 → 16547 (ಯಶವಂತಪುರ – ವಿಜಯಪುರ) – ಡಿಸೆಂಬರ್ 8ರಿಂದ
- 06546 → 16548 (ವಿಜಯಪುರ – ಬೆಂಗಳೂರು) – ಡಿಸೆಂಬರ್ 9ರಿಂದ
ರೈಲಿನ ವೇಳಾಪಟ್ಟಿ (ಬದಲಾವಣೆ ಇಲ್ಲ)
ಯಶವಂತಪುರ → ವಿಜಯಪುರ
- ರಾತ್ರಿ 9:30 – ಯಶವಂತಪುರ
- 1:45 – ದಾವಣಗೆರೆ
- 5:50 – ಹೊಸಪೇಟೆ
- 9:08 – ಬಾಗಲಕೋಟೆ
- 9:45 – ಆಲಮಟ್ಟಿ
- 11:25 – ವಿಜಯಪುರ
ವಿಜಯಪುರ → ಬೆಂಗಳೂರು
ರೈಲಿನ ಬೋಗಿಗಳ ವಿವರ
- ಜನರಲ್ ಕೋಚ್ – 5
- ಸ್ಲೀಪರ್ ಕೋಚ್ – 4
- AC (B1) – 1
- SLR – 1