ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಹೊಸ ಪದಾಧಿಕಾರಿಗಳ ಆಯ್ಕೆ – ಸಮಿತಿಯಿಂದ ಪ್ರಕಟಣೆ.

ಚಿತ್ರದುರ್ಗ: ಡಿಸೆಂಬರ್ 07, 2025 ರಂದು ನಗರದಲ್ಲಿರುವ ಪ್ರವಾಸಿ ಮಂದಿರದಲ್ಲಿ ನಮ್ಮ ಸಮಿತಿಯ ಅಧ್ಯಕ್ಷರಾದ ಶ್ರೀ ವೈ. ರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ಪ್ರಮುಖ ಪದಾಧಿಕಾರಿಗಳ ಸಭೆ ನಡೆಯಿತು. ಸಭೆಯಲ್ಲಿ ಸರ್ವಾನುಮತದಿಂದ ಹೊಸ ಜಿಲ್ಲಾ ಪದಾಧಿಕಾರಿಗಳ ಆಯ್ಕೆಯನ್ನು ನೆರವೇರಿಸಲಾಯಿತು.

ಸಭೆಯ ಅಂತ್ಯದಲ್ಲಿ ಸಮಿತಿಯು ಹೊಸದಾಗಿ ಆಯ್ಕೆಯಾದ ಕೆಳಕಂಡ ಪದಾಧಿಕಾರಿಗಳ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿದ್ದು, ಸಂಬಂಧಿಸಿದ ಎಲ್ಲಾ ಮಾಧ್ಯಮಗಳಲ್ಲಿ ಇವರ ವಿವರಗಳನ್ನು ಪ್ರಕಟಿಸುವಂತೆ ವಿನಂತಿಸಿದೆ.

ಹೊಸ ಜಿಲ್ಲಾ ಪದಾಧಿಕಾರಿಗಳು

  1. ಜಿಲ್ಲಾ ಅಧ್ಯಕ್ಷರು – ಕೋಟೇಶ್ ಬಿ., ಕವಾಡಿಗರಹಟ್ಟಿ, ಚಿತ್ರದುರ್ಗ
  2. ಜಿಲ್ಲಾ ಉಪಾಧ್ಯಕ್ಷರು – ಬಿ. ಅಣ್ಣಪ್ಪ, ಅಗಸನಕಲ್ಲು, ಚಿತ್ರದುರ್ಗ
  3. ಜಿಲ್ಲಾ ಗೌರವಾಧ್ಯಕ್ಷರು – ಈಶ್ವರಪ್ಪ ಹೆಚ್., ವಕೀಲರು, ಮೊಳಕಾಲ್ಮೂರು ತಾಲ್ಲೂಕು
  4. ಜಿಲ್ಲಾ ಪ್ರಧಾನ ಕಾರ್ಯದರ್ಶಿ – ಅಂಜಿನಪ್ಪ, ಹೊಸರಂಗಾಪುರ, ಚಿತ್ರದುರ್ಗ ತಾಲ್ಲೂಕು
  5. ಖಜಾಂಚಿ – ಸ್ವಾಮಿ, ಚಿತ್ರದುರ್ಗ

ಅಂಬೇಡ್ಕರ್ ಚಿಂತನೆಗೆ ನಿಷ್ಠೆ

ಹೊಸದಾಗಿ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳು ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವ–ಸಿದ್ಧಾಂತಗಳನ್ನು ಸ್ವೀಕರಿಸಿ, ದಲಿತ ಸಮಾಜದ ಅಭಿವೃದ್ಧಿ, ಅಸ್ಪೃಷ್ಯತಾ ನಿರ್ಮೂಲನೆ ಹಾಗೂ ವಿಶೇಷ ಘಟಕ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಭ್ರಷ್ಟಾಚಾರಮುಕ್ತ ಆಡಳಿತ ವ್ಯವಸ್ಥೆ ರೂಪಿಸುವ ದಿಟ್ಟ ನಿಲುವಿನಿಂದ ತಮ್ಮ ಹುದ್ದೆಗಳನ್ನು ಸ್ವೀಕರಿಸಿದ್ದಾರೆ.

ಪದಾಧಿಕಾರಿಗಳು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆದರ್ಶಗಳನ್ನು ಪಾಲಿಸಿ ಕಾನೂನುಬದ್ಧ ಹೋರಾಟದ ಮೂಲಕ ಸಮಾಜದ ಹಕ್ಕು–ಹಿತಗಳಿಗಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಸಮಿತಿ ತಿಳಿಸಿದೆ.

Leave a Reply

Your email address will not be published. Required fields are marked *