ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಡಿ. 18
ಸರ್ಕಾರ ಜಾರಿ ತರಲು ಉದ್ದೇಶಿಸಿರುವ ಕರ್ನಾಟಕ ಅನುಸೂಚಿತ ಜಾತಿಗಳ ವಿಧೇಯಕ 2025ಕ್ಕೆ ಭೋವಿ ಸಮಾಜ ವಿರೋಧವನ್ನು ವ್ಯಕ್ತಪಡಿಸಿದೆ, ಈ ವಿಧೇಯಕವನ್ನು ಜಾರಿ ಮಾಡುವ ಮುಂಚೆ ಇದರ ಬಗ್ಗೆ ಮತ್ತೋಮ್ಮೆ ಪುನರ್ ಪರೀಶಿಲಿಸಿ ಜಾರಿ ಮಾಡುವಂತೆ ಮುಖ್ಯಮಂತ್ರಿಗಳಿಗೆ ಭೋವಿ ಗುರುಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ತಿಳಿಸಿದರು.
ಚಿತ್ರದುರ್ಗ ನಗರದ ಹೂರ ವಲಯದ ಭೋವಿ ಗುರುಪೀಠದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶ್ರೀಗಳು ಒಳಮೀಸಲಾತಿಯಲ್ಲಿ ಸರ್ಕಾರದ ಅಸಂಬದ್ದ ತೀರ್ಮಾನವನ್ನು ವಿರೋಧಿಸಿದ್ದು, ಸರ್ಕಾರ ಈ ವಿಧೇಯಕವನ್ನು ತುರಾತುರಿಯಲ್ಲಿ ಜಾರಿ ಮಾಡಲು ಹೊರಟಿದೆ ಈ ವಿದೇಯಕ ಜಾರಿಯಾದರೆ ಭೋವಿ, ಲಂಬಾಣಿ, ಕೂರಚ ಹಾಗೂ ಕೂರಮ ಸಮುದಾಯಗಳಿಗೆ ಅನ್ಯಾಯವಾಗುತ್ತಿದೆ. ಸದಾಶಿವ ಆಯೋಗ ಎಡಗೈ, ಬಲಗೈ ಸಮುದಾಯಕ್ಕೆ ತಲಾ ಶೇ,6ರಷ್ಟು ಹಾಗೂ ಅಲೆಮಾರಿಗೆ ಶೇ.1 ಉಳಿದಂತೆ ಶೇ.4ರಷ್ಟು ಮೀಸಲಾತಿಯನ್ನು ನೀಡಲಾಗಿದೆ. ಇದರಲ್ಲಿ ಭೋವಿ, ಕೂರಚ, ಲಂಬಾಣಿ ಹಾಗೂ ಕೂರಮ ಸಮುದಾಯ ಶೇ. 5ರಷ್ಟು ಮೀಸಲಾತಿಯನ್ನು ನೀಡಿ ಇದರಲ್ಲಿ ಅಲೆಮಾರಿ ಸಮುದಾಯವನ್ನು ಸಹಾ ಸೇರಿಸಲಾಗಿದೆ ಇದರಿಂದ ನಮ್ಮ ಸಮುದಾಯಕ್ಕೆ ಶೇ.4ರಷ್ಟು ಮಾತ್ರ ಮೀಸಲಾತಿ ಸಿಗುತ್ತದೆ ಇದರಿಂದ ನಮಗೆ ಅನ್ಯಾಯವಾಗುತ್ತದೆ ಎಂದು ತಿಳಿಸಿದರು.
ಕರ್ನಾಟಕ ಅಧಿಸೂಚಿತ ಜಾತಿಗಳ (ಉಪ-ವರ್ಗೀಕರಣ) ವಿಧೇಯಕ 2025 ರಲ್ಲಿ ಅಸಂಬದ್ಧವಾಗಿ ವರ್ಗಿಕರಿಸಿರುವ ಉಪ ವರ್ಗಿಕರಣವನ್ನು ಈ ಕೂಡಲೇ ಹಿಂಪಡೆಯಬೇಕು. ಒಳ ಮೀಸಲಾತಿಯನ್ನು ಕಲ್ಪಿಸುವ ಸರ್ಕಾರದ ಉದ್ದೇಶ ಈಡೇರಬೇಕಾದರೆ ಜಾತಿವಾರು ಉಪ ವರ್ಗಿಕರಣವನ್ನು ಜನಸಂಖ್ಯೆಗೆ ಅನುಗುಣವಾಗಿ ಮಾಡಬೇಕಾಗಿತ್ತು, ಆದರೆ ಜನಸಂಖ್ಯೆಗನುಗುಣವಾಗಿ ಮಾಡುವಲ್ಲಿ, ಸರ್ಕಾರದಿಂದ ಲೋಪವಾಗಿದೆ ಎಂದು ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯರವರಿಗೆ ಮನವಿ ಮೂಲಕ ತಿಳಿಸಲಾಗಿತ್ತು. ಆದರೆ, ಸರ್ಕಾರ ನಾವು ತಿಳಿಸಿದ ಲೋಪಗಳನ್ನು ಸರಿಪಡಿಸಲಿಲ್ಲ ಮತ್ತು ಕರ್ನಾಟಕ ಅನುಸೂಚಿತ ಜಾತಿಗಳ ವಿಧೇಯಕ 2025 ರಲ್ಲಿ ಮತ್ತೊಮ್ಮೆ ಅಸಂಬದ್ಧವಾಗಿ ಪ್ರವರ್ಗ-ಸಿ ಯನ್ನು ವಿಂಗಡಿಸಿರುವುದನ್ನು ಖಂಡಿಸುತ್ತೇವೆ. ವಿಧೇಯಕ 2025 ರ ಪುಟ 7 ರಲ್ಲಿ ಪರಂತು ಅನುಸೂಚಿತ ಜಾತಿಗಳ ಪ್ರವರ್ಗ-ಸಿ ಪಟ್ಟಿಯ ಸಂದರ್ಭದಲ್ಲಿ ಮೇಲಿನ ಕೋಷ್ಠಕದ ಕ್ರಮ ಸಂಖ್ಯೆ:10, 15, 36, 37 ನಮೂದಿಸಲಾದ (ಅಂದರೆ ಜಾತಿ ಸಂಕೇತ 17, 23, 53 ಮತ್ತು 54) ಇವುಗಳನ್ನು ಹೊರತುಪಡಿಸಿ 59 ಜಾತಿಗಳಿಗಾಗಿ ಪ್ರತಿ ಐದು ಹುದ್ದೆಗಳು ಅಥವಾ ಸ್ಥಾನಗಳ ಪೈಕಿ ಕನಿಷ್ಠ ಒಂದನ್ನು ಪ್ರವರ್ಗ-ಸಿ ಯೊಳಗೆ ಮೀಸಲಿರಿಸತಕ್ಕದ್ದು ಎಂದು ಅಂಗೀಕರಿಸಲಾಗಿದೆ. ಇದನ್ನು ಮಾರ್ಪಡಿಸಿ ಭೋವಿ ಸಂಬಂಧಿತ ಜಾತಿಗಳು, ಲಂಬಾಣಿ ಸಂಬಂಧಿತ ಜಾತಿಗಳು, ಕೊರಚ ಸಂಬಂಧಿತ ಜಾತಿಗಳು, ಕೊರಮ ಸಂಬಂಧಿತ ಜಾತಿಗಳಿಗೆ ನೀಡಿರುವ ಸಿ-ವರ್ಗದ 5%ರಷ್ಟು ಮೀಸಲಾತಿಯನ್ನು ಮುಂದುವರೆಸಬೇಕು ಎಂದು ಆಗ್ರಹಿಸಿದರು.
ಭೋವಿ ಬಂಜಾರ ಕೊರಮ ಕೊರಚ ಜಾತಿಗಳು ಶೇಖಡ 5% ಮತ್ತು ಅಲೆಮಾರಿಗಳು 1% ಜನಸಂಖ್ಯೆ ಇರುವುದರಿಂದ, ರಾಜ್ಯದ ಜನಸಂಖ್ಯೆಯ 6 ಕೋಟಿ ಜನಸಂಖ್ಯೆಯಲ್ಲಿ 1 ಕೋಟಿ 8 ಲಕ್ಷ ಜನಸಂಖ್ಯೆ ಅರ್ಥಾತ್ ಶೇ 18% ಪರಿಶಿಷ್ಟ ಜಾತಿ ಜನಸಂಖ್ಯೆ ಇದೆ. ಜನಸಂಖ್ಯಾ ಅನುಗುಣವಾಗಿ ಶೇಖಡ 17% ಬದಲು ಶೇಖಡ 18% ಹೆಚ್ಚಿಸಬೇಕು.ಪರಿಶಿಷ್ಟ ಜಾತಿ ಜನಸಂಖ್ಯಾವಾರು ಶೇಖಡ 18% ಹೆಚ್ಚಿಸಿ ಪರಿಶಿಷ್ಚಜಾತಿಯ ಸಿ ಗುಂಪಿನಲ್ಲಿರುವ ಭೋವಿ, ಬಂಜಾರ, ಕೋರಮ, ಕೊರಚ ಅಲೆಮಾರಿ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಬೇಕು. ಅವಶ್ಯಕತೆ ಹಾಗೂ ಬೇಡಿಕೆ ಬಂದಲ್ಲಿ ಬರುವ ದಿನಗಳಲ್ಲಿ Sಅ-ಅ ಗುಂಪಿನಲ್ಲಿ ಜನಸಂಖ್ಯಾವಾರು ಪ್ರತ್ಯೆಕ ಗುಂಪು ರಚಿಸಲು ಅವಕಾಶ ಕಲ್ಪಿಸಿ. ನ್ಯಾ.ನಾಗಮೋಹನ ದಾಸ ವರದಿಯಲ್ಲಿ ನೀಡಿರುವ ಸಮೀಕ್ಷೆ ವರದಿ ಪ್ರಕಾರ ಭೋವಿ ಸಮುದಾಯವೇ ಹೆಚ್ಚಿನ ಮೀಸಲಾತಿ ವಂಚಿತ ಸಮುದಾಯ ಎಂದು ಗುರುತಿಸಿರುವುದನ್ನು ಪರಿಗಣಿಸಿ ವಿಶೇಷ ಸೌಲಭ್ಯ ಒದಗಿಸಲು ಸರ್ಕಾರ ಕ್ರಮವಹಿಸಬೇಕು ಎಂದು ಶ್ರೀಗಳು ಸರ್ಕಾರವನ್ನು ಒತ್ತಾಯಿಸಿದರು.
ಸರ್ಕಾರ ನಾಗಮೋಹನ್‍ದಾಸ್‍ರವರ ವರದಿಯಂತೆ ಸರಿಯಾದ ರೀತಿಯಲ್ಲಿ ಮೀಸಲಾತಿಯನ್ನು ಸರ್ಕಾರ ನೀಡಲ್ಲ ಇದರ ಬದಲಿಗೆ ಅಲೆಮಾರಿ ಜನಾಂಗವನ್ನು ನಮ್ಮ ಸಮುದಾಯದಲ್ಲಿ ಸೇರಿಸಿದ್ದಾರೆ ಇದರಿಂದ ನಮಗೆ ಅನ್ಯಯವಾಗಲಿದೆ ಇದನ್ನು ಸರ್ಕಾರ ಸರಿಪಡಿಸಬೇಕಿದೆ. ಈ ಮಧ್ಯೆ ಸರ್ಕಾರ ಕರ್ನಾಟಕ ಅನುಸೂಚಿತ ಜಾತಿಗಳ ವಿಧೇಯಕ 2025ನ್ನು ತುರಾತುರಿಯಲ್ಲಿ ಜಾರಿ ಮಾಡಲು ಮುಂದಾಗಿದೆ. ಇದು ನಮ್ಮ ಸಮುದಾಯಗಳಿಗೆ ಅನ್ಯಾಯವಾಗುತ್ತಿದೆ ಈ ವಿಧೇಯಕವನ್ನು ಸರ್ಕಾರ ಜಾರಿ ಮಾಡುವ ಮುಂಚೆ ಇದರ ಬಗ್ಗೆ ಸರಿಯಾದ ರೀತಿಯಲ್ಲಿ ಪರೀಶಿಲನೆಯನ್ನು ನಡೆಸುವುದರ ಮೂಲಕ ಈ ವಿದೇಯಕ ಜಾರಿ ಮಾಡಲು ಸರ್ಕಾರ ಮುಂದಾಗಲಿ ಎಂದರು.
ಇಂದು ಮಧ್ಯಮಗಳ ಮುಂದೆ ಇದರ ಬಗ್ಗೆ ಮಾತನಾಡಲಾಗಿದೆ, ಮುಂದಿನ ದಿನದಲ್ಲಿ ಇದರ ಬಗ್ಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಈ ವಿಧೇಯಕದ ಸಾಧಕ-ಭಾದಕಗಳ ಬಗ್ಗೆ ತಿಳಿಸಲಾಗುವುದು. ಇದಕ್ಕೆ ನಮ್ಮ ಸಮುದಾಯದ ಶಾಸಕರು, ಸಚಿವರು, ಮುಖಂಡರು ಸೇರಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಾಗುವುದು ಸರ್ಕಾರ ಇದಕ್ಕೆ ಬಗ್ಗದಿದ್ದರೆ ಇದರ ವಿರುದ್ದ ಕಾನೂನು ಹೋರಾಟವನ್ನು ಮಾಡಲು ಸಹಾ ಮುಂದಾಗುವುದಾಗಿ ಶ್ರೀಗಳು ತಿಳಿಸಿದರು.
ಗೋಷ್ಟಿಯಲ್ಲಿ ರಾಜ್ಯಾಧ್ಯಕ್ಷರಾದ ಆನಂದಪ್ಪ, ಜಿಲ್ಲಾ ಭೋವಿ ಸಂಘದ ಕಾರ್ಯದರ್ಶಿ ಲಕ್ಷ್ಮಣ್, ಡಿ.ಸಿ.ಮೋಹನ್, ಹೆಚ್,ಆಂಜನೇಯ, ತಿಮ್ಮೇಶ್, ವೀರಭದ್ರಪ್ಪ, ಸೇರಿದಂತೆ ಇತರರು ಭಾಗವಹಿಸಿದ್ದರು.
ಬಾಕ್ಸ್: ಒಳಮೀಸಲಾತಿಯಲ್ಲಿ ಎಸ್.ಸಿ.-3ರಲ್ಲಿ ಮತ್ತೆ ಒಳಮೀಸಲಾತಿ ಮಾಡಿರುವುದು ಅನ್ಯಾಯ.ಮೀಸಲಾತಿ ಪ್ರಮಾಣ 17% ಬದಲು 18% ಹೆಚ್ಚಳಮಾಡಬೇಕು.ಭೋವಿ ಬಂಜಾರ ಕೊರಮ ಕೊರಚ ಸಮುದಾಯಗಳಿಗೆ ಜನಸಂಖ್ಯಾ ವಾರು ಶೇಖಡ 5% ಮೀಸಲು ನೀಡಿಬೇಕು.ಅಲೆಮಾರಿಗಳಿಗೆ ನೇರವಾಗಿ 1% ಮೀಸಲು ನೀಡಿಬೇಕು. ಭೋವಿ ಸಮುದಾಯವನ್ನು ಪ್ರತ್ಯೇಕಿಸಿ ಜನಸಂಖ್ಯಾವಾರು ಮೀಸಲು ನೀಡಬೇಕು.