ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ: ಜ.28
ಭಾವಸಾರ ಕ್ಷತ್ರಿಯ ಮಹಾಮಂಡಳಿ ಚಿತ್ರದುರ್ಗ,ಭಾವಸಾರ ಮಹಿಳಾ ಮಂಡಳಿ ಹಾಗೂ ಭಾವಸಾರ ಯುವಕ ಮಂಡಳಿ ಚಿತ್ರದುರ್ಗ ಇವರುಗಳ ಸಹಯೋಗದಲ್ಲಿ ನಗರದ ಗೋಪಾಲಪುರ ರಸ್ತೆಯ ದರ್ಜಿಕಾಲೋನಿ ಎರಡನೇ ತಿರುವಿನಲ್ಲಿರುವ ಶ್ರೀದುರ್ಗಾದೇವಿ ದೇವಸ್ಥಾನದ 87 ನೇ ವರ್ಷದ ಹೊರಬೀಡು ಉತ್ಸವವನ್ನು ಚಿತ್ರದುರ್ಗದ ಚಂದ್ರವಳ್ಳಿ ತೋಟದಲ್ಲಿ ಮಂಗಳವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಕಳೆದ ದಿನಾಂಕ21ಜನವರಿ 2026ರಿಂದ 27ರವರೆಗೆ ನಡೆದ ದುರ್ಗಾದೇವಿಯ ವಿವಿಧ ಪೂಜಾ ಕೈಂಕರ್ಯಗಳಲ್ಲಿ ಶ್ರೀ ದುರ್ಗಾದೇವಿಯ ಮಧುವಣಗಿತ್ತಿಶಾಸ್ತ್ರ, ಗಂಗಪೂಜೆ, ಕಂಕಣಧಾರಣೆ, ಭಂಡಾರ ಹಂಚಿಕೆ, ಉಯ್ಯಾಲೋತ್ಸವ, ಪುರ ಪ್ರದಕ್ಷಣೆ, ಭಕ್ತಾದಿಗಳ ಮನೆಗಳಿಗೆ ಭೇಟಿ ನೀಡಿ ಭಕ್ತರಿಗೆ ಅಭಯವನ್ನಿತ್ತು ಕೊನೆಯ ದಿವಸವಾದ 27ರ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ದುರ್ಗಾದೇವಿಯ ಉತ್ಸವ ಮೂರ್ತಿಗೆ ಮಹಾಮಂಗಳಾರತಿಯನ್ನು ನೆರವೇರಿಸ ಲಾಯಿತು.
ಜಾತಿ ಭೇದವಿಲ್ಲದೆ ಭಕ್ತಾದಿಗಳಿಗೆಲ್ಲರಿಗೂ ಭರ್ಜರಿ ಬಾಡೂಟ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ಈ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತಾದಿಗಳು ಆಗಮಿಸಿ ದೇವಿ ಕೃಪೆಗೆ ಪಾತ್ರರಾದರು.
ಭಾವಸಾರ ಕ್ಷತ್ರಿಯ ಮಹಾಮಂಡಳಿ ಅಧ್ಯಕ್ಷ ಆರ್.ಎಂ.ಶ್ಯಾಮ್, ಮಹಿಳಾ ಮಂಡಳಿ ಅಧ್ಯಕ್ಷೆ ಶ್ರೀಮತಿ ಮಮತ ಪರಶುರಾಮ್ ಬೇದ್ರೇ ಹಾಗೂ ಯುವಕ ಮಂಡಳಿಯ ಉತ್ಸಾಹ ಯುವಕರು ಸೇರಿದಂತೆ ಭಾವಸಾರ ಜನಾಂಗದ ಅನೇಕ ಮುಖಂಡರು ಸೇರಿ ಉತ್ಸವವನ್ನು ಯಶಸ್ವಿಗೊಳಿಸಿದರು.