ಚಿತ್ರದುರ್ಗ| ಮಾವಿನಹಳ್ಳಿ ಬಸವೇಶ್ವರ ಸ್ವಾಮಿಯ ರಥೋತ್ಸವಕ್ಕೆ ಸಿದ್ಧತೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜ. 25

ತಾಲ್ಲೂಕಿನ ಹಿರೇಗುಂಟನೂರು ಹೋಬಳಿಯ ಭೀಮಸಮುದ್ರ ಬಸವಾಪುರದ ಶ್ರೀ ಮಾವಿನಹಳ್ಳಿ ಬಸವೇಶ್ವರ ಸ್ವಾಮಿಯ ರಥೋತ್ಸವದ ಅಂಗವಾಗಿ ಫೆ. 22 ರಿಂದ ಫೆ. 27 ರವರೆಗೆ ವಿವಿಧ ರೀತಿಯ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಾವಿನಹಳ್ಳಿ ಬಸವೇಶ್ವರಸ್ವಾಮಿ ಟ್ರಸ್ಟ್‍ನ ಉಪಾಧ್ಯಕ್ಷರಾದ ಬಿ.ಎಸ್.ವಿಶ್ವನಾಥಪ್ಪ ಪಟೇಲ್ ತಿಳಿಸಿದ್ದಾರೆ.

ಫೆ. 22 ರಂದು ರುದ್ರಾಭಿಷೇಕ, ಕಂಕಣಧಾರಣೆ, ಪಲ್ಲಕ್ಕಿ ಉತ್ಸವ ಧ್ವಜಾರೋಹಣ,23ರಂದು ಅಶ್ವೋತ್ಸವ, ಫೆ.24 ರಂದು ವೃಷಭೋತ್ಸವ, ಫೆ.25 ರಂದು ಹೂವಿನ ಉತ್ಸವ, ಸ್ವಾಮಿಗೆ ಗಜೋತ್ಸವ ಹಾಗೂ 10 ಗಂಟೆಗೆ ಕೆಂಡದಾರ್ಚನೆ ಸೇವೆ,

ಫೆ.26 ರಂದು ಸ್ವಾಮಿಯ ಸಾನಿದ್ಯದಲ್ಲಿ ಬೆಳಿಗ್ಗೆ 11 ಗಂಟೆಗೆ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮ ನಡೆಯಲಿದ್ದು, ಈ ಸಂದರ್ಭದಲ್ಲಿ ಮಧು-ವರನಿಗೆ ಬಟ್ಟೆ, ವಧುವಿಗೆ ತಾಳಿ ಯನ್ನು ನೀಡಲಾಗುವುದು. ಈ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸುವವರು ದೇವಸ್ಥಾನದಲ್ಲಿ ಹೆಸರನ್ನು ನೊಂದಾಯಿಸಬಹುದಾಗಿದೆ.

ಸಂಜೆ 4 ಗಂಟೆಗೆ ಹೂವಿನ ಅಡ್ಡಪಲ್ಲಕ್ಕಿ ನಂತರ 5 ಗಂಟೆಗೆ ಸ್ವಾಮಿಯ ರಥೋತ್ಸವ ಕಾರ್ಯಕ್ರಮ ನಡೆಯಲಿದ್ದು, ಜಾತ್ರೆಗೆ ಆಗಮಿಸಿದ ಭಕ್ತಾಧಿಗಳಿಗೆ ಅನ್ನ ದಾಸೋಹವನ್ನು ಏರ್ಪಡಿಸಲಾಗಿದೆ ಫೆ.27 ರಂದು ಕಂಕಣ ವಿಸರ್ಜನೆ ಹಾಗೂ ಮಹಾಮಂಗಳಾರತಿ ಯೊಂದಿಗೆ ಸ್ವಾಮಿಯ ರಥೋತ್ಸವದ ಸೇವೆಗಳು ಮುಕ್ತಾಯವಾಗಲಿದೆ.

ಇದೇ ಸಂದರ್ಭದಲ್ಲಿ ದೇವಾಲಯದ ಸ್ವಾಮಿಯ ನೂತನ ದೇವಾಲಯದ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ದೇವಾಲಯ ನಿರ್ಮಾಣಕ್ಕೆ ಸಹಾಯ ಮಾಡುವುದಾಗಿ ವಾಗ್ದಾನ ಮಾಡಿದವರು ಕೂಡಲೇ ಸಹಾಯವನ್ನು ಮಾಡುವುದರ ಮೂಲಕ ಶ್ರೀಘ್ರವಾಗಿ ದೇವಾಲಯ ಕಟ್ಟಡ ಪೂರ್ಣವಾಗುವಂತೆ ಮನವಿ ಮಾಡಲಾಯಿತು. ಈ ಎಲ್ಲಾ ಕಾರ್ಯಕ್ರಮಗಳಿಗೂ ಭಕ್ತಾಧಿಗಳು ಆಗಮಿಸುವುದರ ಮೂಲಕ ಸ್ವಾಮಿ ಕೃಪೆಗೆ ಪಾತ್ರರಾಗಲು ಮನವಿ ಮಾಡಲಾಯಿತು.

ಟ್ರಸ್ಟ್‍ನ ಉಪಾಧ್ಯಕ್ಷರಾದ ಎಸ್.ಜಿ. ಪುಟ್ಟಪ್ಪ ಸ್ಥಾನಿಕ್, ಕಾರ್ಯದರ್ಶಿ ಆರ್. ಗಂಗಾಧರಪ್ಪ, ಕಾರ್ಯದರ್ಶಿ ಎಸ್.ವಿ.ಸೀದ್ದೇಶ್ ಸ್ಥಾನಿಕ್, ಸಹ ಕಾರ್ಯದರ್ಶಿ ಟಿ.ಎಸ್. ರುದ್ರಮುನಿಯಪ್ಪ, ಟಿ.ಜಿ. ಬಸವರಾಜ್ ಸ್ಥಾನಿಕ್, ವ್ಯವಸ್ಥಾಪಕರಾದ ಟಿ.ಎಂ.ಆನಂದ ಸ್ಥಾನಿಕ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *